ಮಂಗಳವಾರ, ಜುಲೈ 1, 2014

ಮಕ್ಕಳ ಶಿಕ್ಷಣ ಹಕ್ಕು ಅಧಿನಿಯಮ 2009ರ ಸಾಧಕ, ಬಾಧಕಗಳು . .

.
ಮಕ್ಕಳ ಹಕ್ಕು ಅಧಿನಿಯಮ 2009-ಒಂದು ಪ್ರಾಥಮಿಕ ಶಿಕ್ಷಣ ಇತಿಹಾಸದಲ್ಲಿ ಸತ್ವಯುತ ಹಾಗೂ ಸಾರ್ವತ್ರಿಕ ಶಿಕ್ಷಣ ನೀಡುವುದರ ಮೂಲಕ ದೇಶದ ಪ್ರಗತಿಗೆ ನಾಂದಿಯಾಗಲು ಒಂದು ಮಹತ್ವದ ಹೆಜ್ಜೆ.
ಪ್ರತಿಯೊಂದು ಯಶಸ್ವೀ ಯೋಜನೆಗಳಿಗೂ ಉತ್ಪಾದನಾಂಗಗಳು ಅತ್ಯವಶ್ಯಕ. ಭೌತಿಕ ಸಂಪನ್ಮೂಲಗಳು, ಬಂಡವಾಳ ಸಂಪನ್ಮೂಲಗಳು ಹಾಗೂ ಮಾನವ ಸಂಪನ್ಮೂಲಗಳು ಉತ್ಪಾದನಾಂಗಗÀಳಾಗಿದ್ದು, ಅವೆಲ್ಲವೂ ಯೋಜನೆಯ ಸಫಲತೆಗೆ ಕಾರಣಿಭೂತವಾಗುತ್ತವೆ. ಆದರೆ ಇವುಗಳಲ್ಲಿ ಅತ್ಯಂತ ಮಹತ್ವ, ಶ್ರೇಷ್ಠ, ಸಜೀವ ಚೈತನ್ಯಮಯ ಹಾಗೆÉಯೇ ಕಾರ್ಯಶೀಲವೆಂದರೆ  ಮಾನವ ಸಂಪನ್ಮೂಲ ಮಾತ್ರ.
ವರ್ತಮಾನ ಹಾಗೂ ಭವಿಷ್ಯದ ಭಲಿಷ್ಠ ಭಾರತದ ಸಧೃಡವಾದ ಸಮಸಮಾಜ ನಿರ್ಮಾಣ ಮಾಡುವಲ್ಲಿ ಮಾನವ ಸಂಪನ್ಮೂಲದ ಚೇತನ ಪÀÅಂಜಗಳಾದ ಇಂದಿನ ಮಕ್ಕಳಿಗೆ, ಅವರ ಮನೋವಿಕಾಸಕ್ಕೆ , ವ್ಯಕ್ತಿತ್ವ ನಿರ್ಮಾಣಕ್ಕೆ  ಯಾವ ರೀತಿಯ ಭದ್ರ ಬುನಾದಿಹಾಕಬೇಕಿದೆ ಎಂದು ಚರ್ಚಿಸುವ, ಚಿಂತಿಸುವ, ತೀರ್ಮಾನಿಸುವ, ಅನ್ವಯಿಸುವ, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳು, ಶಿಕ್ಷಣತಜ್ಞರು, ಶಿಕ್ಷಣ ಆಸಕ್ತರು ಗಂಭೀರ ಚಿಂತನೆ-ಮಂಥನ ಮಾಡಬೇಕಾದ ಅನಿವಾರ್ಯತೆ, ತುರ್ತು ಎದುರಾಗಿದೆ.
ಒಂದು ಸುಸಂಘಟಿತ ಮಾನವ ಸಂಪನ್ಮೂಲವು ಸಮಾಜದಲ್ಲಿ ವ್ಯಕ್ತಿಗಳ ಜ್ಞಾನ, ಕಾರ್ಯದಕ್ಷತೆ, ವ್ಯಕ್ತಿ ನೈಪÀÅಣ್ಯ, ಸಾಮಾಜಿಕ ಹೊಂದಾಣಿಕೆ ಮುಂತಾದ ಸಕಾರಾತ್ಮಕ ಬಲವನ್ನು ಮೂಡಿಸುತ್ತದೆ. ಮೂಲಭೂತವಾಗಿ ಶಿಕ್ಷಣದಿಂಧ ಮಾತ್ರ ಇಂತಹ ವ್ಯಕ್ತಿತ್ವದ ನಿರ್ಮಾಣ ಸಾಧ್ಯವೆಂಬುದು ವಾಸ್ತವ ಸತ್ಯ. ಈ ದಿಸೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ಶಿಕ್ಷಣಕ್ಕಾಗಿ ನಡೆದ ಹೋರಾಟಗಳು ಹಲವಾರು. 1966ರ ಕೊಥಾರಿ ಆಯೋಗ, 1976ರ ಮಹಿಳಾ ಆಯೋಗ, 1986ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಮಹತ್ವದ ಘಟ್ಟಗಳು.
ವಿಶ್ವದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಏಕೆಂದರೆ ಜಗತ್ತು ಮುನ್ನೆಡೆಯುವುದು ಮಕ್ಕಳ ಹೆಜ್ಜೆಗಳ ಮೇಲೆ. ಅವರಿಗೆ ಅಗತ್ಯವಾದ ಅಕ್ಕರೆ, ಅನ್ನ ಮತ್ತು ಅಕ್ಷರ ಈ ಮೂರನ್ನೂ ನೀಡುವುದು ಸಮಾಜದ ಜವಾಬ್ದಾರಿ.
ಈ ಎಲ್ಲಾ ಹೋರಾಟ, ವಿವೇಚನೆ, ಚಿಂತನ-ಮಂಥನಗಳಿಂದ, ಪ್ರಜ್ಞಾ ಸುಪ್ತ ಪ್ರಜ್ಞೆ ಸಿಡಿದು ಜ್ವಾಲೆಯಾದುದರ ಪರಿಣಾಮದಿಂದ ವರ್ಣ, ಜಾತಿ, ಧರ್ಮ, ಲಿಂಗ, ಭಾಷೆ, ರಾಜಕೀಯ ಅಥವಾ ಬೇರೆ ಯಾವುದೇ ತಾರತಮ್ಯವಿಲ್ಲದಂತೆÉ ಮಗುವಿಗೆ  ವಿದ್ಯಾಭ್ಯಾಸವನ್ನು ಗುಣಾತ್ಮಕ ರೂಪದಲ್ಲಿ ಒದಗಿಸಬೇಕೆಂಬ ಮಹಾದಾಸೆಯಿಂದ ಜಾರಿಯಾದುದೇ 2009ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ. ಹಾಗಾದರೆ ಇದರ ಸಾಧಕ-ಬಾಧಕಗಳೇನು ಎಂಬುದನ್ನು ಚರ್ಚಿಸೋಣ.
ಉತ್ತಮಾಂಶಗಳು
ಯಾವುದೇ ಮಗು ಶಾಲೆ ದೂರ ಅಥವಾ ತಮ್ಮ ವಾಸಸ್ಥಳದ ನೆರೆಹೊರೆಯಲ್ಲಿ ಶಾಲೆ ಲಭ್ಯವಿಲ್ಲವೆಂಬ ಕಾಣರಕ್ಕೆ ಪ್ರಾಥಮಿಕ ಶಿಕ್ಷಣದಿಂದ ವಂಚಿತವಾಗದಂತೆ ಮಾಡುವುದು.
ದಾಖಲಾತಿಗೆ ವಯಸ್ಸಿನ ಪ್ರಮಾಣ ಪತ್ರವಾಗಲಿ ಅಥವಾ ಜನನ ಪ್ರಮಾಣ ಪತ್ರವಾಗಲಿ ಇಲ್ಲವೆಂಬ ಕಾರಣಕ್ಕೆ ದಾಖಲಾತಿಯನ್ನು ನಿರಾಕರಿಸದಿರುವುದು ಮತ್ತು ಮಗುವಿನ ವರ್ಗಾವಣೆಯನ್ನು ವಿಳಂಬ ಮಾಡದಿರುವುದು ಅಥವಾ ತಡೆಹಿಡಿಯದಿರುವುದು.
ಕ್ಯಾಪಿಟೇಷನ್ ಶುಲ್ಕ ಅಥವಾ ಯಾವುದೇ ರೀತಿಯ ವಂತಿಗೆಯ ನಿಷೇಧ,
ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಆರ್ಥಿಕ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಶೇ 25 ರಷ್ಟು ಸೀಟುಗಳ ಮೀಸಲಾತಿ. ಇದರಿಂದ ಉಳ್ಳವರ ಮಕ್ಕಳ ಕಂಡು ಮನ ಖಿನ್ನವಾಗಿಸಿಕೊಳ್ಳುತ್ತಿದ್ದ, ಖಾಸಗಿ ಶಾಲೆಯಲ್ಲಿ ಓದಿಸುವುದು ಗಗನಕುಸುಮವೆಂದು ಭಾವಿಸುತ್ತಿದ್ದ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪೋಷಕ ಹಾಗೂ ಮಕ್ಕಳಿಗೆ ಈ ಕಾಯ್ದೆ ಆಶಾಕಿರಣವಾಗಿದೆ. 
ಮಕ್ಕಳ ದಾಖಲಾತಿಯನ್ನು ಮಾಡಿಕೊಳ್ಳುವಾಗ ಮಗುವಿಗಾಗಲೀ, ಪೋಷಕರಿಗಾಗಲೀ ಯಾವುದೇ ರೀತಿಯ ಪ್ರವೇಶ ಪರೀಕ್ಷೆ ಅಥವಾ ಸಂದರ್ಶನ ಮಾಡುವಂತಿಲ್ಲ.
1 : 30 ಶಿಕ್ಷಕ – ಮಕ್ಕಳ ಅನುಪಾತ.
ಕಾಯ್ದೆ ಜಾರಿಗೆ ಬಂದ ಮೂರು ವರ್ಷದೊಳಗೆ ಎಲ್ಲಾ ಜನವಸತಿ ಪ್ರದೇಶಗಳಲ್ಲಿ ಶಾಲೆಗಳನ್ನು ಕಡ್ಡಾಯವಾಗಿ ಪ್ರಾರಂಭಿಸುವುದು.
ಶಿಕ್ಷಕರಲ್ಲಿ ಬೋಧನಾ ಬದ್ಧತೆ ಹೆಚ್ಚಿಸುವ ನಿಟ್ಟಿನಲ್ಲಿ 6 ರಿಂದ 8 ನೆಯ ತರಗತಿಗಳ ಹಿರಿಯ ಪ್ರಾಥಮಿಕ ಹಂತಕ್ಕೆ  ಬಿ.ಇಡಿ ಪಡೆದ ವಿಷಯಾಧಾರಿತ ಶಿಕ್ಷಕರ ನೇಮಕ. ಇದರಿಂದ ಮಕ್ಕಳ ನಿರ್ಧಿಷ್ಟ ಕೌಶಲ್ಯಗಳು ವಿಕಾಸಹೊಂದಲಿಕ್ಕೆ ಸಹಕಾರಿ.
ಎಲ್ಲಾ ಮೂಲ ಸೌಲಭ್ಯಗಳನ್ನು ಹೊಂದಿದಂತೆ, ಕ್ಲಸ್ಟರ್ ಅಥವಾ ಪಂಚಾಯಿತಿ ಅಥವಾ ಹೋಬಳಿವಾರು ಕೇಂದ್ರೀಯ ಶಾಲಾ ಪ್ರಾರಂಭ.
ಜನವಸತಿ ಪ್ರದೇಶದ ಒಂದು ಕಿ.ಮೀ ವ್ಯಪ್ತಿಯಲ್ಲಿ 1 ರಿಂದ 5ನೆಯ ತರಗತಿವರೆಗೆ, ಮೂರು ಕಿ.ಮೀ ವ್ಯಾಪ್ತಿಯಲ್ಲಿ 6 ರಿಂದ 8ನೆಯ ತರಗತಿವರೆಗೆ ಶಾಲೆ ಕಡ್ಡಾಯ.

ಇವುಗಳು ಈ ಕಾಯ್ದೆಯಡಿ ಬರುವ ಕೆಲವು ಉತ್ತಮಾಂಶಗಳು ಹಾಗೆಯೇ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ಪರವಾದ ಕಾನೂನುಗಳನ್ನು ರೂಪಿಸಬೇಕೆಂದು ಒತ್ತಾಯಿಸುವುದು / ನಿರೀಕ್ಷಿಸುವುದು ಹಾಗೂ ಇವುಗಳನ್ನು ಜಾರಿ ಮಾಡಲು ಉತ್ತಮ ವ್ಯವಸ್ಥೆಗಳಿಗಾಗಿ ಒತ್ತಾಯಿಸುವುದು ಎಲ್ಲರ ಕರ್ತವ್ಯ. ಜೊತೆಗೆ ಅನುಷ್ಠಾನವಾದ ಪ್ರತಿಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸುವುದೂ ಸಹ ಅನಿವಾರ್ಯ. ಇಲ್ಲಿಯವರೆಗೆ ಸಾಧಕಗಳನ್ನು ಚರ್ಚಿಸಿದ್ದೇವೆ. ಅದೇ ರೀತಿ ಈ ಕಾಯ್ದೆಯಿಂದ ಕೆಲವೊಂದು ವ್ಯತಿರಿಕ್ತ ಪರಿಣಾಮಗಳು ಸಹಾ ಉಂಟಾಗಬಹುದು. 
ಮಕ್ಕಳ ಸಂಖ್ಯೆಯ ಕೊರತೆಯನ್ನು ಅನುಭವಿಸುವ ಕೆಲವೊಂದು ಖಾಸಗಿ ಶಾಲೆಗಳಿಗೆ ಖಖಿಇ ಕಾಯ್ದೆ-2009 ವರದಾನವಾಗಿ ಪರಿಣಮಿಸಿದರೆ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಈ ಕಾಯ್ದೆಯಡಿ ನಷ್ಟವನ್ನು ಅನುಭವಿಸುತ್ತಿವೆ. ಏಕೆಂದರೆ ಇಂದು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಬಡತನ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳೇಯಾದ್ದರಿಂದ ಶೇ 25ರಷ್ಟು ಖಾಸಗಿ ಶಾಲೆಗಳಿಗೆ ನೇರವಾಗಿ ಆಯ್ಕೆಯಾಗುವುದರಿಂದ ಸರ್ಕಾರಿ ಶಾಲೆಗಳಿಗಿದು ಕೊಡಲಿಪೆಟ್ಟಾಗಿ ಪರಿಣಮಿಸಲಿದೆ.
ಶೈಕ್ಷಣಿಕ ಬದ್ಧತೆಯಡಿಯಲ್ಲಿ ಜಾರಿ ತಂದಿರುವ ಶಿಕ್ಷಕರ ಶೈಕ್ಷಣಿಕ ಸ್ಥಿತಿಯ ಪರಿಣಾಮದಿಂದ ಖಿಅಊ ಹಾಗೂ ಆ.ಇಜ ಮಾಡಿದವರು 1 ರಿಂದ 5 ರವರೆಗೆ ಮಾತ್ರ ಬೋಧನೆ ಮಾಡಬೇಕು. ಃ.ಂ.ಃeಜ, ಃSಛಿ, ಃಇಜ ಮಾಡಿದವರು 6 ರಿಂದ 8 ನೆಯ ತರಗತಿಯವರೆಗೆ ಬೋಧನೆ ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ ಈಗಾಗಲೇ ಮಕ್ಕಳ ಸಂಖ್ಯೆಯನ್ನು ಎದುರಿಸುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಪ್ರಮಾಣವೇ ಹೆಚ್ಚಾಗಿದ್ದು, ಈ ಕಾಯ್ದೆ ಜಾರಿಯಿಂದ 1 ರಿಂದ 5ನೆಯ ತರಗತಿಯ ಶಿಕ್ಷಕರು ರಾಜ್ಯಾದ್ಯಾಂತ ಸಹಸ್ರಾರು ಶಿಕ್ಷಕರು ಹೆಚ್ಚುವರಿಯಾಗಲಿದ್ದು, ಅವರ ನಿಯೋಜನೆ ಸಮಸ್ಯೆಯಾಗಿ ಪರಿಣಮಿಸಬಹುದು.
ಖಖಿಇ ಕಾಯ್ದೆಯಡಿ ರೂಪಿತವಾಗಿರುವ ಹೊಸ ಕೇಂದ್ರಿಯ ಪಠ್ಯ ಕ್ರಮಕ್ಕೆ ಶಿಕ್ಷಕರು ಹೊಂದಿಕೊಳ್ಳುವುದು ಕಷ್ಟಸಾಧ್ಯವಾಗಬಹುದು. ಏಕೆಂದರೆ ಇಲ್ಲಿನ ಎಲ್ಲಾ ಶಿಕ್ಷಕರು ರಾಜ್ಯ ಪಠ್ಯದ ಕಲ್ಪನೆಯಲ್ಲೇ ಓದಿಬಂದವರು.
ಖಖಿಇ ಕಾಯ್ದೆಯಡಿ ಜಾರಿಬಂದ ಅಅಇ ಯ ಹೆಚ್ಚಿನ ಒತ್ತಡದಿಂದ ಶಿಕ್ಷಕನ ಬೋಧನಾ ಸಾಮಥ್ರ್ಯ ಕುಸಿಯಬಹುದು. ಹಾಗೆÉಯೇ ಮಾನಸಿಕವಾಗಿ ತೊಳಲಬಹುದು.
ಹೀಗೆ ಏನೆಲ್ಲಾ ಕೆಲವು ದೋಷಗಳನ್ನು ಹೊಂದಿದ್ದರೂ, ಸ್ವಾತಂತ್ರ್ಯಪೂರ್ವದಿಂದಲೂ ಶಿಕ್ಷಣದ ಪರವಾಗಿ ಮಾಡುತ್ತಾ ಬಂದ ಹೋರಾಟಕ್ಕೆ 2009ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಒಂದು ದಿಕ್ಸೂಚಿ ಪರಿಹಾರವೆನ್ನಬಹುದು. ಇದು ನಾನು ಮೊದಲೇ ಹೇಳಿದಂತೆ ಸರ್ಕಾರದಿಂದಲೇ ಮಾತ್ರ ಅಸಾಧ್ಯ. ಆದ್ದರಿಂದಲೇ ಮಗು ಮತ್ತು ಭಾಗೀದಾರ ಎಂಬ ಪರಿಕಲ್ಪನೆಯಲ್ಲಿ ಕಾಯ್ದೆ ಮೂಡಿ ಬಂದಿದೆ.
ಮಕ್ಕಳು ಮನುಕುಲದ ಆಶಾ ಕುಸುಮಗಳು
ಮನೆಯಂಗಳ ಬೆಳಗುವ ಮಂಗಳ ದೀಪಗಳು
ಭಾವೀರಾಷ್ಟ್ರದ ಭಾಗ್ಯೋದಯ ಶಿಲ್ಪಿಗಳು
ಈ ನಿಟ್ಟಿನಲ್ಲಿ ಮಕ್ಕಳಿಗಾಗಿ, ಮಕ್ಕಳ ಸಾರ್ವತ್ರೀಕರಣಕ್ಕಾಗಿ, ಅವರ ಗುಣಾತ್ಮಕ ಶಿಕ್ಷಣಕ್ಕಾಗಿ ಮೂಡಿಬಂದ ಈ ಕಾಯ್ದೆ ಸಾಧಕ-ಬಾಧಕಗಳೇನೇಯಿರಲಿ, ಧನಾತ್ಮಕ ದಿಸೆಯಲ್ಲಿ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಆದ್ದರಿಂದ ಚರ್ಚೆಗಳ ಮೂಲಕ, ವಿಷಯ ಮನನದ ಮೂಲಕ, ಚಿಂತನ-ಮಂಥನಗಳ ಮೂಲಕ ಎನ್.ಜಿ.ಓಗಳು, ಸುದ್ದಿ ಮಾಧ್ಯಮಗಳು, ಪ್ರಾಜ್ಞರು, ಶಿಕ್ಷಣ ಆಸಕ್ತರು, ಪೋಷಕರು ಇತ್ತ ಗಮನಹರಿಸಿ, ಉತ್ತಮಾಂಶಗಳನ್ನು ಪುಷ್ಠಿಗೊಳಿಸುತ್ತಾ, ಋಣಾತ್ಮಕ ಅಂಶಗಳನ್ನು ಇಲ್ಲವಾಗಿಸುತ್ತಾ ಸಾಗಿದಾಗ, ಕಾರ್ಯತತ್ಪರವಾದಾಗ ಮಾತ್ರ ಶಿಕ್ಷಣ ಗುಣಾತ್ಮಕತೆ ಸಾಧ್ಯ. ಏಕೆಂದರೆ ನೆಲ್ಸನ್ ಮಂಡೇಲಾ ಒಂದು ಕಡೆ ಹೀಗೆಳಿದ್ದಾರೆ- ಜಗತ್ತನ್ನು ಬದಲಿಸಲು ನಾವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದರೆ ಶಿಕ್ಷಣ”.

ಕೊಟ್ರೇಶ್ ಎಸ್. ಉಪ್ಪಾರ್

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ