ಸೋಮವಾರ, ಜುಲೈ 21, 2014

ಪರಿಸರ ಪ್ರಜ್ಞೆಯ ದಿಟ್ಟ ಮಹಿಳೆಯರು- ಕೊಟ್ರೇಶ್ ಎಸ್.ಉಪ್ಪಾರ್


ಕಾಲಚಕ್ರ ಉರುಳುತ್ತ  ನಾಗರಿಕತೆ ಬೆಳೆದಂತೆಲ್ಲ ಮಹಿಳೆಯ ತನ್ನ 
ಳಿಜವಾಬ್ದಾರಿಯನ್ನು ಹೆಚ್ಚಿಸಿ ಕೊಂಡಿದ್ದಾಳೆ . ತನ್ನ ಪರಿಸರ , ತನ್ನ ಕುಟುಂಬದಪ್ರಗತಿಯತ್ತ  ತೀವ್ರತರ ಗಮನ ಹರಿಸಿದ್ದಾಳೆ.  ಹೀಗೆ ಪ್ರತಿಯೋರ್ವ ಮಹಿಳೆಯೂ ತನ್ನ ಸುತ್ತಮುತ್ತಲಿನ ಪರಿಸರ, ತನ್ನ ಕುಟುಂಬವನ್ನು ಎತ್ತಿಹಿಡಿಯಲು ಪರಿಸರ ಮಾಲಿನ್ಯಕ್ಕೆ ಪ್ರತಿರೋಧವನ್ನು ಒಡ್ಡುತ್ತಿದ್ದಾಳೆ . 
ಡಾ|| ಕುಸುಮ ಸೊರಬ
    ಕನ್ನಡಾಂಬೆಯ ಹೆಮ್ಮೆಯ ಕುವರಿ,  ತವರುನಾಡಿನ ಮಣ್ಣಿನ ಸಂರಕ್ಷಕಿ , ಪವನ ಪ್ರಶಸ್ತಿ ವಿಜೇತೆ, ಪರಿಸರ ಪ್ರೇಮಿ,  ಕನ್ನಡ ನೆಲದ ಪುಣ್ಯಕೋಟಿ , ಹುಟ್ಟಾ ಹೋರಾಟಗಾರ್ತಿ ಹಾಗೂ ಖ್ಯಾತ ಪರಿಸರವಾದಿ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದ ಕುಸುಮಕ್ಕ 1937ರಲ್ಲಿ ಜನಿಸಿದರು. ಮೂಲತಃ ಹೊನ್ನಾವರದ ಕರವಳ್ಳಿಯವರಾದ ಕುಸುಮಾ ಬಾಲ್ಯದಲ್ಲಿಯೇ ನಿಜವಾದ ಬದುಕು ಏನು ಎಂಬುದನ್ನು ಅರಿತಿದ್ದರು.  ಸದಾ ಪರಿಸರದ ಆರಾಧಕರಾಗಿ ಪರಿಸರದ ಉಳಿವಿಗಾಗಿ ಹೋರಾಟದ ಬದುಕನ್ನು ತಮ್ಮ ಬಾಲ್ಯದಿಂದಲೇ ಅಳವಡಿಸಿಕೊಂಡಿದ್ದರೆಂದರೆ,   ಅವರ ಪರಿಸರ ಪ್ರಜ್ಞೆಯ ತೀವ್ರತೆ ಎಷ್ಠಿತ್ತೆಂಬುದನ್ನು ಸುಲಭವಾಗಿ ಊಹಿಸಬಹುದು.  
    ಪವನ ಪ್ರಶಸ್ತಿಯ ಈ ಪರಿಮಳ (ಕುಸುಮಾ) ತಮ್ಮ ಬಾಲ್ಯಜೀವನದ ವಿದ್ಯಾಭ್ಯಾಸದ ಕೊನೆಯ ಘಟ್ಟವೆನಿಸಿದ್ದ ಎಸ್. ಎಸ್. ಎಲ್. ಸಿ. ಯನ್ನು ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ಪೂರೈಸಿದರು. ನಂತರ ಗೋಲಗುಮ್ಮಟ ಖ್ಯಾತಿಯ ವಿಜಾಪುರದಲ್ಲಿ, ನರ್ಸರಿಪ್ರಸೂತಿ  ತರಬೇತಿಯನ್ನು ಪಡೆದುಕೊಂಡು, ಮುಂಬೈನ ಒಂದು ಆಸ್ಪತ್ರೆಯಲ್ಲಿ  “ರೋಗಿಗಳ ಸೇವೆಯೇ ದೇವರ ಸೇವೆ” ಎಂದು ಭಾವಿಸಿ ನರ್ಸವೃತ್ತಿಯಲ್ಲಿ ದುಡಿಯ ತೊಡಗಿದರು. ಅದರ ಜೊತೆಗೆಯೇ ತಮ್ಮ ವಿಧ್ಯಾಭ್ಯಾಸವನ್ನು ಮುಂದುವರೆಸಿದ ಈ ಛಲಗಾರ್ತಿಗೆ ಎಂ. ಬಿ. ಬಿ. ಎಸ್. ಹಾಗೂ ಎಂ. ಎಸ್. ಪದವಿಗಳನ್ನು ಯಶಸ್ವಿಯಾಗಿಪಡೆದುಕೊಳ್ಳಲು  ಹೆಚ್ಛಿನ ವೇಳೆ ಹಿಡಿಯಲಿಲ್ಲ.
    ವೈದ್ಯಕೀಯ ಕ್ಷೇತ್ರದಲ್ಲಿ ಎಂ. ಎಸ್. ಪದವಿಯನ್ನೇ ಸಂಪಾದಿಸಿದ್ಧ ಕುಸುಮಾಗೆ ಸರಳ ಹಾಗೂ ಉನ್ನತ ವಿಚಾರದ ಜೀವನವೆಂದರೆ ತುಂಬಾಇಷ್ಟ.  ಅಲಂಕಾರಿಕ ಜಿವನವನ್ನು ಎಂದೂ ಬಯಸದ  ಕುಸುಮಕ್ಕ ಅಪ್ಪಟ ಗಾಂಧಿವಾದಿನಿ.  ಅವಿವಾಹಿತೆ ಆದ ಅವರು ಸದಾ ಪರಿಸರ ಚಿಂತಕಿಯಾಗಿದ್ದರು.  ಪರಿಸರಕ್ಕಾಗಿ ಏನಾದರೂ ಕೊಡುಗೆ ಕೊಡಬೇಕೆಂಬ ಅದಮ್ಯ ಬಯಕೆಯನ್ನು ಹೊಂದಿದ್ದ.  ಕುಸುಮುಕ್ಕ ಸದಾ ಲವಲವಿಕೆಯ ಗಣಿಯಾಗಿದ್ದರು.  1976ರಲ್ಲಿ ಹೊನ್ನಾವರಕ್ಕೆ ಮರಳಿದರು. ಕಾಸರಗೋಡಿನ “ಸ್ನೇಹ ಕುಂಜ’’ ವೆಂಬಟ್ರಸ್ಟನ್ನು ಸ್ಥಾಪಿಸಿ “ವಿವೇಕಾನಂದ ಆರೋಗ್ಯಧಾಮ’’ ಎಂಬ ನಿಸರ್ಗ ಚಿಕಿತ್ಸಾ ಕೇಂದ್ರವನ್ನುಹಾಗೂ ಜಾನಪದ ವೈದ್ಯಕೀಯ ಆಸ್ಪತ್ರೆಯನ್ನು  ಪ್ರಾರಂಭಿಸಿದರು. ಪರಿಸರದ ಕಡೆಗೆ  ಹೆಚ್ಚಿನ  ಒಲವನ್ನು ಹೊಂದಿದ್ದ ಕುಸುಮಕ್ಕ ಕಾಲಾನುಸಾರವಾಗಿ ಆ ಕೇಂದ್ರಗಳನ್ನು ವಿಸ್ತಾರಗೊಳಿಸುತ್ತಾ,  ಗುಡಿಗಾರಿಕೆ , ಗೃಹೋದ್ಯಮ ಹಾಗೂ ಪರಿಸರ ಚಳುವಳಿಗಳಲ್ಲಿ ಇನ್ನೂ ಹೆಚ್ಚಾಗಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು .
      ಸದಾ ಖಾದಿಧಾರಿಯಾಗಿರುತ್ತಿದ್ದ ಈ ಗಾಂಧಿ ವಾದಿನಿ ಪರ್ವತಾರೋಹಣದಂತಹ ಕಠಿಣ ಕಾರ್ಯದಲ್ಲಿಯೂ ಹಿಂದೆಬಿದ್ದಿರಲಿಲ್ಲ. 1975ರಲ್ಲಿ ಒರ್ವ ಮಹಿಳೆಯಾಗಿ ಇವರು 21,200 ಅಡಿ ಹಿಮಾಲಯ ಪರ್ವತ ಏರಿದ್ದರೆಂದರೆ ಇವರ ದಿಟ್ಟ ತನವನ್ನು ನಿಜವಾಗಿಯೂ ಮೆಚ್ಚಿಕೊಳ್ಳಲೇಬೇಕು.ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ .ಕುಸುಮಾ  ಓರ್ವ ಉತ್ತಮ ಕವಿಯಿತ್ರಿ ಹಾಗೂ ನಾಟಕಗಾರ್ತಿಯಾಗಿದ್ಧರು .  ಅಲ್ಲದೇ ಇವರು ಸಂಗೀತದ ರಾಗ ತಾಳಗಳನ್ನು ಸಹ ಅಭ್ಯಾಸ ಮಾಡಿದ್ದರು. ಸಂಶೋಧನಾ ಪ್ರವೃತ್ತಿಯ ಆಗರವೇ ಆಗಿದ್ದ ಕುಸುಮಾ ಸೊರಬರು ಯೋಗ ಮತ್ತು ಜಾನಪದ ವೈದ್ಯಕೀಯ ಪದ್ಧತಿಗಳನ್ನು  ಅಧ್ಯಯನ ಮಾಡಿ ತಮ್ಮ ಆಸ್ಪತ್ರೆಯಲ್ಲಿ ಅವನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತಂದಿದ್ಧರು.
ನ್ಯಾಯಾಕ್ಕಾಗಿ ಜೈಲುವಾಸಕ್ಕೂ ಸೈ ಎನ್ನುತ್ತಿದ್ದ ಇವರು ಸಾರಾಯಿ ಅಂದೋಲನವೊಂದರಲ್ಲಿ ಸಕ್ರೀಯವಾಗಿ  ಪಾಲ್ಗೊಂಡು ಹಾಲಕ್ಕಿ ಒಕ್ಕಲಿಗ ಮಹಿಳೆಯರ ಪರನಿಂತು ಜೈಲುವಾಸವನ್ನು ಸಹ ಅನುಭವಿಸಿದ್ದರು. ಉತ್ತರ ಕನ್ನಡದ ಪರಿಸರ  ಸಂರಕ್ಷಣೆಯ ಹೋರಾಟದ ಕೇಂದ್ರ ಬಿಂದು ಎಂದೇ ಪರಿಗಣಿಸಲ್ಪಟ್ಟಿದ್ದ ಡಾ|| ಕುಸುಮಾ ಸೊರವರು ಪರಿಸರ ಮಾಲಿನ್ಯದಿಂದಾಗಿ ಜನರ ಬದುಕನ್ನು ಬರ್ಬರವನ್ನಾಗಿಸುವ ಕೈಗಾ, ಬೇಡ್ತಿ, ತಾಜ್ ಹಾಗೂ ಶರಾವತಿ ಟೇಲ್ ರೇಸ್ ಅರಣ್ಯ ನಾಶಗಳ ವಿರುದ್ದ ಮಂಚೂಣಿಯಲ್ಲಿ ನಿಂತು ಉಗ್ರ ಹೋರಾಟ ಗೈದಿದ್ದರು ಹಾಗೂ ರಾಷ್ಟ್ರದ ಗಮನವನ್ನೂ ಸಹ ಸೆಳೆದಿದ್ದರು.
ಗ್ರಾಮೋದ್ದಾರದ ಕಾರ್ಯದಲ್ಲೂ ಹಿಂದೆ ಬೀಳದ ಡಾ|| ಸೊರಬರು ಗ್ರಾಮೀಣ ಔಷಧಿಗಳ ಪ್ರಯೋಗಾಲಯ, ಗ್ರಾಮಾಭಿವೃದ್ಧಿ ಸಂಘ, ಬಾಲವಾಡಿ, ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಂತಹ ಹತ್ತು ಹಲವಾರು ಸಂಸ್ಥೆಗಳನ್ನು ಸುಮಾರು 50 ಹಳ್ಳಿಗಳಲ್ಲಿ ಸ್ಥಾಪಿಸಿದರು.
“ಪವನ ಪರಿಸರ ಪ್ರಶಸ್ತಿ”, “ಬನವಾಸಿ ಕದಂಬೋತ್ಸವ ಪ್ರಶಸ್ತಿ”ಗಳನ್ನು ಪಡೆದಿದ್ದ ಡಾ|| ಕುಸುಮಾ ಸೊರಬರು ಎಂದೂ ಪ್ರಶಸ್ತಿಗಾಗಿ ಆಸೆಪಟ್ಟವರಲ್ಲ.
ಸದಾ ಪರಿಸರ ಸಂರಕ್ಷಣಾ ಕಾರ್ಯದಲ್ಲಿಯೇ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿ ಕೊಂಡಿದ್ದ ಈ ದಿಟ್ಟ, ಧೀರ, ಧೀಮಂತ, ಪಶ್ಚಿಮ ಘಟ್ಟದ ದಿವಿಜ ಹಾಗೂ ಪ್ರಖ್ಯಾತ ಪರಿಸರವಾದಿ ದಿನಾಂಕ14/3/1998 ರಂದು ಪರಿಸರ ವಿನಾಶ ಮಾಡುವ ಯೋಜನೆಯೊಂದರ ವಿರುದ್ಧ ತಡೆಯಾಜ್ಞೆ ತರಲು ಶ್ರೇಷ್ಠ ನ್ಯಾಯಾಲಯಕ್ಕೆ ಹೊರಟಾಗ ಅಪಘಾತದಲ್ಲಿ ನಿಧನ ಹೊಂದಿದರು.
ವೃಕ್ಷಮಾತೆ ತಿಮ್ಮಕ್ಕ
“ಮಹಿಳೆ ಮನಸ್ಸು ಮಾಡಿದರೆ ಭುವಿಯನ್ನೇ ಮಂದಿರವಾಗಿಸಬಲ್ಲಳು” ಎಂಬ ಜಾಣ್ನುಡಿಯನ್ನು ನಿಜಗೊಳಿಸಿ ವೃಕ್ಷ ಪ್ರೇಮಿ, ವೃಕ್ಷ ಮಾತೆ, ವನಮಿತ್ರೆ, ನಿಸರ್ಗರತ್ನ, ಭೂಮಿಯ ಹಸಿರು ಕಳಶ, ಸಾಲು ಮರದ ಪೋಷಕಿ ಎಂಬ ಹಲವಾರು ಹೆಸರುಗಳಿಂದ ಖ್ಯಾತಿಯನ್ನು ಪಡೆದ ತಿಮ್ಮಕ್ಕಳ ಪರಿಸರ ಪ್ರಜ್ಞೆಯನ್ನು ನಿಜವಾಗಿಯೂ ಮೆಚ್ಚಲೇಬೇಕು. 
ಸತತ ಪರಿಶ್ರಮ, ತ್ಯಾಗ, ಪರೋಪಕಾರ ಕಾಯಕವೇ ಕೈಲಾಸ ಮುಂತಾದ ಜೀವನ ಮೌಲ್ಯಗಳಲ್ಲಿ ಬಲವಾದ ನಂಬಿಕೆ ಇರಿಸಿದ 80ವರ್ಷದ ಈ ವೃದ್ದೆ ಇದುವರೆಗೂ ಸುಮಾರು 284 ಮರಗಳನ್ನು ನೆಟ್ಟು, ಪೋಷಣೆ ಮಾಡಿ ತನ್ನ ಪರಿಸರ ಪ್ರಜ್ಞೆಯನ್ನು ಮೆರೆದಿದ್ದಾಳೆ.
ತನ್ನ 20ನೇ ವಯಸ್ಸಿನಲ್ಲಿಯೇ ವೈವಾಹಿಕ ಜೀವನವನ್ನಾರಂಭಿಸಿದ ಮಕ್ಕಳಿಲ್ಲದ ತಿಮ್ಮಕ್ಕ ಮರಗಳನ್ನೇ ತನ್ನ ಮಕ್ಕಳೆಂದು ತಿಳಿದು ಅವುಗಳ ಪಾಲನೆ ಪೋಷಣೆ ಮಾಡಿ ಪರಿಸರ ಸಂರಕ್ಷಣೆಯ ಕುರಿತು ತನ್ನ ದೈತ್ಯ ವ್ಯಕ್ತಿತ್ವವನ್ನೇ ನಮಗೆ ಪರಿಚಯಿಸಿದ್ದಾಳೆ.
ಮೂಲತಃ ಬಡತನ ಕುಟುಂಬದಿಂದ ಬಂದ ತಿಮ್ಮಕ್ಕಗೆ ಬಾಲ್ಯದಲ್ಲಿಯೇ ಶಾಲೆ ಕಲಿಯ ಬೇಕೆಂಬ ಅzಮ್ಯ ಅಸೆ ಇದ್ದಿತು. ಅದರೆ ಕೇವಲ ಬಡತನವೊಂದರ ಕಾರಣದಿಂದಲೇ ಆಕೆ ತನ್ನ ಆಸೆಯನ್ನು ಅದುಮಿ ಹಿಡಿದು ನಂತರದ ದಿನಗಳಲ್ಲಿ ‘  ಗುಕ್ಕಲ ಚಿಕ್ಕಯ್ಯ’ ಎಂಬುವವರ ಜೊತೆ ವಿವಾಹವಾದಳು . ತಿಮ್ಮಕ್ಕಳ ತಂದೆಯ ಹೆಸರು ‘ಚಿಕ್ಕ ರಂಗಯ್ಯ’ ತಾಯಿಯ ಹೆಸರು ‘ವಿಜಯಮ್ಮ’ ಈಗತನ್ನ ವೃದ್ಧಾಪ್ಯ ಜೀವನವನ್ನು ಸಾಗಿಸುತ್ತಿರುವ ಇವಳು ಕಡೂರು ಹುಲಿಕಲ್ಲ (ಬೆಂಗಳೂರು ಗ್ರಾಮಾಂತರ) ಎಂಬ ಗ್ರಾಮದಲ್ಲಿ  ವಾಸವಾಗಿದ್ದಾಳೆ.
ಕ್ರ.ಸಂ ಮರದ ಉಪಯೋಗಗಳು ಅಂದಾಜು ಬೆಲೆÀ
1 ತನ್ನ ಜೀವಿತಾವಧಿಯಲ್ಲಿ ಉತ್ಪಾಧಿಸುವ ಅಮ್ಲಜನಕದ ಮೌಲ್ಯ 2,50,00-00
2 ಮಣ್ಣು ಸವೆತದ ನಿಯಂತ್ರಣ ಮತ್ತು ಭೂ ಫಲವತ್ತತೆಯ ಹೆಚ್ಚಳದ ಮೌಲ್ಯ 2,50,00-00
3 ಪ್ರಾಣಿ- ಪಕ್ಷಿಗಳ ಸಂರಕ್ಷಣೆ ಮತ್ತು ಆಶ್ರಯದ ಮೌಲ್ಯ 2,50,00-00
4 ವಾಯುಮಾಲಿನ್ಯ ನಿಯಂತ್ರಣದ ಮೌಲ್ಯ 5,00,000,-00
5 ತೇವಾಂಶ ನಿಯಂತ್ರಣ ಹಾಗೂ ನೀರಿನ ಪುನರ್ಬಳಕೆಯ ಮೌಲ್ಯ 3,00,000-00
6 ಪ್ರೋಟಿನ್ ಉತ್ಪಾದನೆಯ ಮೌಲ್ಯ 20,000-00
ಒಟ್ಟು ಒಂದು ಮರದ ಜೀವಿತಾವಧಿಯ ಮೌಲ್ಯ 15,70,000-00

     ಸಾಲುಮರದ ತಿಮ್ಮಕ್ಕನೆಂದೇ ಪ್ರಸಿದ್ದಿಯನ್ನು ಪಡೆದಿರುವ ತಿಮ್ಮಕ್ಕ ತನ್ನ ಗ್ರಾಮವಾದ ಹುಲಿಕಲ್‍ನಿಂದ ಹಿಡಿದು ಕಡೂರವರೆಗೂ ಸುಮಾರು 400 ಸಸಿಗಳನ್ನು ನೆಟ್ಟಿದ್ದಳು. ಅವುಗಳಲ್ಲಿ ಕೆಲವು ನಿಸರ್ಗ ಕೋಪಕ್ಕೆ ಗುರಿಯಾಗಿ ನಾಶವಾದರೆ ಮತ್ತೆ ಕೆಲವನ್ನು ಹಾದಿ ಹೋಕರು (ಪರಿಸರವನ್ನರಿಯದ ದಡ್ಡರು)ಚಿವುಟಿ ಹೊಸಕಿ ಹಾಕಿ ಹೋಗಿದ್ದರಂತೆ . ಅಂತೂ ಇಂತು ಈ ಎಲ್ಲ ಪ್ರಕೋಪಗಳನ್ನು ಸಹಿಸಿಕೊಂಡು 284 ಸಾಲು ಮರಗಳು ತಿಮ್ಮಕ್ಕಳ ಕೃಪಾಕಟಾಕ್ಷದಿಂದ ಬಲಾಢ್ಯವಾಗಿ ಬೆಳೆದು ನಿಂತಿವೆ .
    ಗೌರವಗಳು / ಪ್ರಶಸ್ತಿಗಳು
1) “ವನಮಿಶ್ರ’’ ಪ್ರಶಸ್ತಿ (1991 ರಲ್ಲಿ)
2) “ರಾಷ್ಟೀಯ ಉತ್ತಮ ನಾಗರಿಕ” ಪ್ರಶಸ್ತಿ 1995ರಲ್ಲಿ
3) “ವನ್ಯಶ್ರೀ” ಪ್ರಶಸ್ತಿ(1996 ರಲ್ಲಿ)
4) “ ರಾಜ್ಯೋತ್ಸವ ಪುರಸ್ಕಾರ”(1997 ರಲ್ಲಿ)
5) “ ನಿಸರ್ಗರತ್ನ” ಬಿಂದು (1997 ರಲ್ಲಿ)
6) “ಪರಿಸರ ಪ್ರಜ್ಞೆ” ಪ್ರಶಸ್ತಿ(1997 ರಲ್ಲಿ)
7) “ವೃಕ್ಷಶ್ರೀ” ಪ್ರಶಸ್ತಿ (1997 ರಲ್ಲಿ)
8) “ವೃಕ್ಷ ಮ್ರೇಮಿ” ಬಿರುದು (1997 ರಲ್ಲಿ)
9) “ ಕೃಷಿ ನಿರತ ಮಹಿಳೆ” ಬಿರುದು(1998 ರಲ್ಲಿ)
10) “ವನಮಿತ್ರ” ಪ್ರಶಸ್ತಿ (1997 ರಲ್ಲಿ)
11) “ ವೃಕ್ಷ ಮಾತೆ” ಪ್ರಶಸ್ತಿ 
12) “ ಕಲ್ಪಶ್ರೀ” ಪ್ರಶಸ್ತಿ
13) “ ನಾಡ ಚೇತನ” ಪುರಸ್ಕಾರ 
14) “ ಮಾಗಡಿ ವ್ಯಕ್ತಿ” ಗೌರವ
ಹೀಗೆ ಇನ್ನೂ ಹಲವಾರು ‘ ಪರಿಸರ’ ಪ್ರಶಸ್ತಿಗಳನ್ನು ಪಡೆದು ತನ್ನ ಪರಿಸರ ಪ್ರಜ್ಞೆಯನ್ನು ಜೀವಂತವಾಗಿರಿಸಿ ಇತರಿರಗೆ ಮಾದರಿಯಾದ ಈ ವ್ಯಕ್ವಮಾತೆಗೆ ನೂರು ಕೋಟಿ ನಮನಗಳು.
ಮೇಧಾ ಪಾಟ್ಕರ್ 
“ಜಲವಿಲ್ಲದೆ ಜೀವವಿಲ್ಲ; ಜೀವನವೂ ಇಲ್ಲ” ಎಂಬ ವಾಕ್ಯದ ತಿರುಳನ್ನರಿತ ಈ ಧೀಮಂತ ಮಹಿಳೆ ಕಳೆದ ಒಂದೂವರೆ ದಶಕದಿಂದಲೂ ನವಿರಾಗಿ ಹರಿಯುವ ನರ್ಮದಾ ನದಿಯ ಉಳುವಿಗಾಗಿ ಹೋರಾಡುತ್ತಲೇ ಬಂದಿದ್ದಾಳೆ. ‘ ನರ್ಮದಾ ಕಣಿವೆ ಯೋಜನೆ’ಯ ಪ್ರಮುಖ ಅಣೆಕಟ್ಟು ಸರದಾರ ಸೋರವರ, ಮೈದುಂಬಿ ಹರಿಯುವ ಈ ನರ್ಮದಾ ನದಿಗೆ ಅಡ್ಡಲಾಗಿ “ 30 ದೊÀಡ್ಡ; 115 ಮಧ್ಯಮ; 3000 ಸಣ್ಣ ಅಣೆಕಟ್ಟುಗಳನ್ನು” ಕಟ್ಟಬೇಕೆಂಬ ಯೋಜನಾಕಾರರ ನಿರ್ಧಾರವನ್ನು ಹಲವಾರು ಪರಿಸರವಾದಿಗಳು ಅದರಲ್ಲೂ ಪ್ರಮುಖವಾಗಿ ‘ ಮೇಧಾ ಪಾಟ್ಕರ್” ರಂತಹ ಕ್ಯಾತ ಪರಿಸರವಾದಿಗಳು ವಿರೋಧಿಸಿದರು ಹಾಗೂ ವಿರೋಧಿಸುತ್ತಲೇ ಬಂದಿದ್ದಾರೆ. ಈ ಅಣೆಕಟ್ಟು ನಿಂದ ಪರಿಸರಕ್ಕೆ ಧಕ್ಕೆ ಉಂಟಾಗಿ ಜನಜೀವನಕ್ಕೆ ತೊಂದರೆ ಕಾಯ್ದಿಟ್ಟ ಬುತ್ತಿ ಎಂದು ಅಣೆಕಟ್ಟು ವಿರೋಧದ ಅಲೆಯನ್ನು ಪ್ರಥಮ ಬಾರಿಗೆ ಹುಟ್ಟುಹಾಕಿದವರು ಈ ಖ್ಯಾತ ಪರಿಸರವಾದಿನಿ 1985ರಲ್ಲಿ ಇವರ ನೇತೃತ್ವದಲ್ಲಿ “ ನರ್ಮದಾ ಬಚಾವೋ ಅಂದೋಲನ ಸಮಿತಿ” ಹುಟ್ಟಿ ಕೊಂಡಿತು, ಮುಂದೆ 1989 ರಲ್ಲಿ ಈ ಅಣೆಕಟ್ಟು ಕಟ್ಟುವ ಕಾರ್ಯವನ್ನು ಪ್ರಬಲವಾಗಿ ವಿರೋಧಿಸುವ ಎಲ್ಲ ಸಂಘಟನೆಗಳು ನರ್ಮದಾ ಬಚಾವೋ ಆಂದೋಲನದಲ್ಲಿ ಸೇರ್ಪಡೆಯಾದವು.
ಸುಮಾರು ಒಂದೂವರೆ ದಶಕದಿಂದ ವಿವಾದದ ಕೇಂದ್ರ ಬಿಂದುವಾದ ಈ ಅಣ್ಣೆಕಟ್ಟಿನ ನಿರ್ಮಾಣ ಕಾರ್ಯಕ್ಕೆ ಸುಪ್ರೀಂ ಕೋರ್ಟು ಹಸಿರು ನಿಶಾನೆ ತೋರಿಸಿದೆ. ಮೇಧಾ ಪಾಟ್ಕರ್‍ರ ಸುದೀರ್ಘ ಹೋರಾಟಕ್ಕೆ ತೆರೆಬಿದ್ದಿದೆ. ಇತ್ತೀಚಿಗೆ ಇದರ ಹೋರಾಟದಿಂದ ಅಂತರಾಷ್ರ್ತೀಯÀ ಖ್ಯಾತಿಯ ಭಾರತೀಯ ಬರಹಗಾರ್ತಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ‘ ಆರುಂಧತಿ ರಾಯ್’ ರು ಸಹ ಆಕರ್ಷಿತರಾಗಿ ನರ್ಮದೆಯ ಉಳುವಿಗಾಗಿ ಹೋರಾಡುತ್ತಿದ್ದಾರೆ

ಕೊಟ್ರೇಶ್ ಎಸ್.ಉಪ್ಪಾರ್,ಆಲೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ