ಮಂಗಳವಾರ, ಜುಲೈ 1, 2014

ಮಹಿಳಾ ಹಕ್ಕುಗಳನ್ನು ಸಂರಕ್ಷಿಸುವ ಕಾಯ್ದೆಗಳು


ಮಾರ್ಚಿ 8 ಮಹಿಳಾ ದಿನಾಚರಣೆಯ ಪ್ರಯುಕ್ತವಾಗಿ ಸಿದ್ಧಪಡಿಸಿರುವ ಲೇಖನ

ಒಬ್ಬ ಗೃಹಿಣಿಯ ಸ್ಥಾನಮಾನಗಳು ಹಾಗೂ ಕರ್ತವ್ಯಗಳ ಬಗ್ಗೆ ಭಾರತದ ಷೇಕ್ಸ್‍ಪಿಯರ್ ಎಂದೇ ಖ್ಯಾತಿಯಾದ ಮಹಾಕವಿ ಕಾಳಿದಾಸರು ತಮ್ಮ ಕಾವ್ಯದಲ್ಲಿ ಒಂದು ಹೆಣ್ಣಿಗೆ, ಅದರಲ್ಲೂ ಗೃಹಿಣಿಗೆ ನೀಡಿದ ಕಾಳಜಿಗಳು ಉದಾತ್ತÀವಾದ ಚಿಂತನೆಗಳನ್ನು ಪ್ರತಿಯೊಬ್ಬ ನಾರಿ ಹಾಗೂ ಪತಿರಾಯರೂ ಸಹ ಅರಿತುಕೊಳ್ಳಬೇಕಾದೆ.
ಗೃಹಿಣೀ ಸಚಿವಂ ಸುಖಿ ಮಿಥಃ
ಪ್ರಿಯಶಿಷ್ಯಾ ಲಲಿತೇ ಕಲಾವಿದೆ ||
ಮನೆಯೊಂದನ್ನು ಉತ್ತಮ ಕುಟುಂಬವನ್ನಾಗಿಸುವ ಸಾಮಥ್ರ್ಯವುಳ್ಳ ಗೃಹಿಣಿ ಕೇವಲ ಪಾಕÀಶಾಸ್ತ್ರ ಪಾರಂಗತಳಲ್ಲ. ಆಕೆ ಗಂಡನಿಗೆ ಯೋಗ್ಯಮಾರ್ಗವನ್ನು ಸೂಚಿಸಬಲ್ಲ ಸಚಿವೆ ! ಸ್ನೇಹದ ಸಂಗಾತಿ-ಸಂಸಾರದ ರಥವನ್ನು ನಡೆಸಿಕೊಂಡು ಹೋಗುವಲ್ಲಿ ಸರಿಸಮಾನಳು, ಸಮರತಿಯನ್ನು ಸಾಧಿಸುವ ಹಾಗೂ  ಲಲಿತಕಲೆಗಳನ್ನು ಕಲಿಯಲು ಉತ್ಸುಕಳಿರುವ ಪ್ರಿಯ ಶಿಷ್ಯೆ.
ಸಹಜವಾಗಿಯೇ ಇವೆಲ್ಲವುಗಳನ್ನು ತಿಳಿದುಕೊಳ್ಳುವ ಸಹನೆ, ತಾಳ್ಮೆ ಅದರಲ್ಲೂ ಮುಖ್ಯವಾಗಿ ವ್ಯವಧಾನ ಇವು ನಮ್ಮ ಭಾರತೀಯ ಸಾಮಾನ್ಯ ಮಹಿಳಾ ವರ್ಗಕ್ಕೆ  ಮಧ್ಯಮ ವರ್ಗದ ಮಹಿಳೆಯರಿಗೆ ಇರಲು ಸಾಧ್ಯವೇ ? “ಅಯ್ಯೋ ನಮಗ್ಯಾಕೆ ಬಿಡು ಅದೆಲ್ಲ” ಎಂಬ ನೀರಸ ಭಾವನೆಯನ್ನು ಜೀರ್ಣಿಸಿಕೊಂಡುಬಿಟ್ಟಿರುತ್ತಾರೆ. ಆದರೆ ಲೇಖಕರ ಧರ್ಮ ಹಾಗಲ್ಲವಲ್ಲ, ನಾಗರೀಕರಿಗೆ ತಿಳಿಯದಿರುವುದನ್ನು ತಿಳಿಸುವುದು ಸಮಾಜದ ಲೋಪದೋಶಗಳನ್ನು ಎತ್ತಿ ತೋರಿಸುವುದು, ನ್ಯೂನತೆಗಳನ್ನು ಸರಿಪಡಿಸುವುದು ಮುಂತಾದ ಸಾಮಾಜಿಕ  ಜವಾಬ್ದಾರಿಗಳಿರುತ್ತವೆ. ಅದರಲ್ಲಿ ಒಂದು ಭಾಗÀವಾಗಿ ‘ಮಹಿಳೆಯರ ಹಕ್ಕನ್ನು ಸಂರಕ್ಷಿಸುವ ಕಾಯ್ದೆಗಳ’ ಬಗ್ಗೆ ನಿಮ್ಮ ಗಮನಕ್ಕೆ ತರುವ ಸಣ್ಣ ಪ್ರಯತ್ನ ಇದು.
ಅಂತರಾಷ್ಟ್ರೀಯ ಕಾನೂನು ಕಾಯ್ದೆಗಳಾಗಲಿ, ದೇಶ, ಪ್ರಾದೇಶಿಕ, ಪ್ರಾಂತೀಯ ಕಾಯ್ದೆಗಳಾಗಲಿ ಹೇಳುವುದೊಂದೆ - ಹೆಣ್ಣು ಗಂಡಿನಂತೆ ಸಮಾನಳು, ಎಲ್ಲದರಲ್ಲೂ ಅವಳಿಗೆ ಸಮಾನ ಹಕ್ಕುಗಳಿವೆ. ಯಾವುದೇ ದೇಶದಲ್ಲಾಗಲಿ ಮಹಿಳೆಯರಿಗೆ ವಿರುದ್ಧವಾದ ಯಾವುದೇ ಕಾಯ್ದೆಗಳನ್ನು ಜಾರಿಗೆ ತರಬಾರದೆಂದು ಸಂವಿಧಾನ ಹೇಳುತ್ತದೆ. ಯಾವುದೇ ರಂಗದಲ್ಲಿ ಮಹಿಳೆಯರ ಬಗ್ಗೆ ತಾರತಮ್ಯ  ತೋರಬಾರದೆಂಬುದೇ ಪ್ರಜಾಪ್ರಭುತ್ವ ಸರ್ಕಾರಗಳ ಆಜ್ಞೆ ! ಅಷ್ಟೆ ಅಲ್ಲದೆ ಸ್ತ್ರೀಯರಿಗೆ ಅನುಕೂಲವಾಗುವಂತಹ ಕಾಯ್ದೆಗಳನ್ನು ರೂಪಿಸಬಹುದೆಂದಿದೆ. ಮಹಿಳೆಯರಿಗೆ ವಿಶೇಷ ಮೀಸಲಾತಿ, ವಿಶೇಷ ಸೌಲಭ್ಯ ರೂಪುಗೊಂಡಿವೆ.
ಅಪರಾಧ ಸಂಹಿತೆಯಲ್ಲೂ ಹೆಣ್ಣು-ಗಂಡು ಎಂಬ ಬೇಧವಿಲ್ಲ. ಹದಿನಾಲ್ಕು ವರ್ಷದೊಳಗಿನ ಹುಡುಗರನ್ನು ಅಥವಾ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಸಾಕ್ಷಿಗಳಾಗಿ ಪೋಲೀಸ್ ಠಾಣೆಗೆ ಕರೆಸುವಂತಿಲ್ಲ ! ಈ ವಯಸ್ಸಿನ ಬಾಲಕ, ಬಾಲಕಿಯರು ಅಪರಾಧಿಗಳಾಗಿದ್ದರೆ ಅವರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಬಹುದು. ಆದರೆ ಬಾಲಕಿಯರನ್ನು ಸಂಜೆಯಾಗುತ್ತಿದ್ದಂತೆ ಮಹಿಳಾ ಪೋಲಿಸರಿಲ್ಲದ ಠಾಣೆಗಳಲ್ಲಿ ಇಟ್ಟುಕೊಳ್ಳುವಂತಿಲ್ಲ.
ಸಿವಿಲ್ ಕಾಯ್ದೆಗಳನುಸಾರವಾಗಿ ಮದುವೆ, ವಿಚ್ಛೇದನ, ಜೀವನಾಂಶ, ಮಕ್ಕಳ ಸಂರಕ್ಷಣೆ, ಸ್ವÀತ್ತಿನ ಹಕ್ಕು ಮುಂತಾದ ಸ್ತ್ರೀ ಹಕ್ಕುಗಳಿಗೆ ಸಂಬಂಧಪಟ್ಟಂತಹ ಎಲ್ಲಾ ವಿಷಯಗಳು ಧರ್ಮಾಧಾರಿತ, ಜಾತಿಯಾಧಾರಿತ ಕಾಯ್ದೆಗಳಿಂದಲೇ ನಿಭಾಯಿಸಲ್ಪಡುತ್ತವೆ. ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಈ ಕಾನೂನುಗಳ ಬಗ್ಗೆ, ಮದುವೆಯ ಕಾಯ್ದೆಗಳ ಬಗ್ಗೆ ಅತ್ಯವಶ್ಯಕವಾಗಿ  ತಿಳಿದುಕೊಳ್ಳಲೇಬೇಕು ! ಅಪ್ರಾಪ್ತ ವಯಸ್ಸಿನ ಯಾವುದೇ ಒಂದು ಹೆಣ್ಣು ಯಾರನ್ನಾದರೂ ಪ್ರೀತಿಸಿ, ಮನೆಬಿಟ್ಟು ಓಡಿಹೋಗಿ ದೇವಸ್ಥಾನದಲ್ಲಿ ಅಥವಾ ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಮಾಡಿಕೊಂಡÀರೆ ಅದು ಕಾನೂನಿನ ಪ್ರಕಾರ ಊರ್ಜಿತಗೊಳ್ಳುವುದಿಲ್ಲ. ಕೆಲವರು ಮತಾಂತರಗೊಂಡೋ ಅಥವಾ ಮದುವೆಗೆ ಮುಂಚೆ ಗರ್ಭಧರಿಸಿ ನಂತರ ಪೋಲೀಸ್ ಸ್ಟೇಷನ್‍ಗೆ ಹೋಗಿ ದೂರುಕೊಟ್ಟು ಅಲ್ಲಿ ಮದುವೆಯಾಗುತ್ತಾರೆ. ಇದು ಸಹ ಕೆಲ ಸಮಯದಲ್ಲಿ ಕಾನೂನಿನ ಚೌಕಟ್ಟಿಗೆ ಬರುವುದಿಲ್ಲ.
ಹಾಗಾದರೆ ಯಾವ ರೀತಿಯ ಮದುವೆಗಳು ಊರ್ಜಿತವಾಗುತ್ತವೆ. ಅಥವಾ ಕಾನೂನು ಚೌಕಟ್ಟಿಗೆ ಒಳಪಡುತ್ತವೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಹಿಂದೂ ಧರ್ಮದವರಾಗಿರಬೇಕು. ಇವರಿಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ನಡೆದರೆ ಮಾತ್ರ ಅದು ಕಾನೂನಿನೊಳಗೆ ಇರುತ್ತದೆ ! ಇಲ್ಲದಿದ್ದರೆ ಅದು ಕಾನೂನು ಬಾಹಿರವಾಗುತ್ತದೆ. ಸಂಪ್ರದಾಯಿಕವಲ್ಲದ ಕಾನೂನು ಬಾಹಿರ ಮದುವೆಯಿಂದಾಗಿ ಹುಟ್ಟಿದ ಮಕ್ಕಳು ವಾರಸದಾರಿಕೆಯಾಗಿ ತಮಗೆ ಬರಬೇಕಾದ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ.
ಕ್ರೈಸ್ತ ವಿವಾಹ ಪದ್ಧತಿ ಪ್ರಕಾರ ಪ್ರೇಮಿಗಳಿಬ್ಬರ ಪೈಕಿ. ಯಾರಾದರೊಬ್ಬರು ಕ್ರೈಸ್ತ ಧರ್ಮಿಯರಾಗಿದ್ದರೆ ಸಾಕು. ಅವರ ಮದುವೆ ಕಾನೂನಿನ ರೀತಿಯಲ್ಲಿ ಸರಿ ಎನಿಸಿಕೊಳ್ಳುತ್ತದೆ. ಯಾವುದೇ  ಜತಿ, ಧರ್ಮಕ್ಕೆ ಸೇರಿದವರಾಗಲಿ  ವಿಶೇಷ ವಿವಾಹ  ಕಾಯ್ದೆಯ ಪ್ರಕರ ರಿಜಿಸ್ಟರ್ ಆಫೀಸಿನಲ್ಲಿ  ಒಂದು ತಿಂಗಳ ಮುಂಚಿತವಾಗಿ  ಅರ್ಜಿಯನ್ನು ಸಲ್ಲಿಸಿ ನೋಂದಣಾಧಿಕಾರಿಗಳು ನಿಮಗೆ ತಿಳಿಸುವ ನಿಗದಿತ  ದಿನಾಂಕದಂದು, ಸಾಕ್ಷಿಗಳ ಸಮೇತ ಸಹಿ ಮಾಡುವುದರೊಂದಿಗೆ  ನೋಂದಣಿಯಾಗುವ  ಮದುವೆ ಕಾನೂನಿನ ಚೌಕಟ್ಟಿಗೊಳಪಟ್ಟಿರುತ್ತದೆ. ಅಂತರ್ಜಾತಿ ಪ್ರೇಮಿಗಳು ಈ ರೀತಿಯ ಮದುವೆ ಮಾಡಿಕೊಳ್ಳುವುದೇ ಒಳ್ಳೆಯದು. ಪ್ರಸ್ತುತ ಅಂತರ್ಜಾತಿ ವಿವಾಹಕ್ಕೆ ಸರಕಾರದ ಬೆಂಬಲ ಹಾಗೂ ಪ್ರೋತ್ಸಾಹವಿರುವುದು ಹೆಮ್ಮೆಯ ವಿಷಯವಾಗಿದೆ.
ಇಸ್ಲಾಂ ಧರ್ಮದ ಪ್ರಕಾರ ಮದುವೆಯೆಂಬುದು ಒಂದು ಒಪ್ಪಂದದಂತೆ ! ಇವರಲ್ಲೂ ಸಹ ಪ್ರೇಮವಿವಾಹ ಪದ್ಧತಿಗಳು ಕ್ರ್ಥಸ್ತ ಧರ್ಮವನ್ನೇ ಹೋಲುತ್ತವೆ ಮದುವೆಯಾಗುವವರ ಪೈಕಿ ಇಬ್ಬರಲ್ಲಿ ಒಬ್ಬರು ಇಸ್ಲಾಂ ಧರ್ಮದವರಾಗಿರಬೇಕು. ಮದುವೆ ಮಾಡಿಕೊಳ್ಳುವ ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ತುಂಬಿರಬೇಕು. ಇವರಿಬ್ಬರ ಮಾನಸಿಕ ಸ್ಥಿತಿ ಸರಿಯಾಗಿರಬೇಕು. ಇಸ್ಲಾಂ ಧರ್ಮದಲ್ಲಿ ನಾಲ್ಕು ಬಾರಿ ಮದುವೆ ಮಾಡಿಕೊಳ್ಳಲು ಅನುಮತಿಸಲಾಗಿದೆ.
ಮದುವೆಯಾದವರು ಯಾರ ಮನೆಯಲ್ಲಿ ಅಂದರೆ ಗಂಡನ ಅಥವಾ ಹೆಂಡತಿಯ ಮನೆಯಲ್ಲಿ ಸಂಸಾರ  ಹೂಡಬೇಕು. ಎಲ್ಲಿರಬೇಕು ಎಂಬುದರ ಬಗ್ಗೆ ಕಾನೂನಿನಲ್ಲಿ ಯಾವುದೇ ನಿಬಂಧನೆಗಳಿಲ್ಲ.
ಹೆಂಗಸರು ಈ ವಿಷಯದಲ್ಲಿ ಮದುವೆಯಾಗುವ ಮುಂಚೆಯೇ ಸ್ವಲ್ಪ ಬುದ್ಧಿ ಉಪಯೋಗಿಸಿ, ಮುಂದಿನ ವಿದ್ಯಾಮಾನಗಳ ಬಗ್ಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು. ತಮ್ಮ ಮನೆಯ ವಾತಾವರಣ, ಪರಿಸ್ಥಿತಿಗೆ ತಕ್ಕಂತೆ ಅದನ್ನು ಏರ್ಪಡಿಸಿಕೊಳ್ಳಬಹುದು.
ಕೆಲವು ಮಹತ್ವದ ಕಾಯ್ದೆಗಳನ್ನು ಈ ರೀತಿಯಾಗಿ ಪಟ್ಟಿಮಾಡಬಹುದು. 
1. ವಿಚ್ಛೇದನ ಕಾಯ್ದೆ
2. ಮಕ್ಕಳ ಪೋಷಣಾ ಕಾಯ್ದೆ
3. ಜೀವನಾಂಶ ಕಾಯ್ದೆ
4. ವರದಕ್ಷಿಣೆ ತಡೆಕಾಯ್ದೆ
5. ಆಸ್ತಿ ಮೇಲೆ  ಹಕ್ಕುದಾರಿಕೆ
6. ಬಾಲ್ಯವಿವಾಹ  ತಡೆಕಾಯ್ದೆ
7. ದುರ್ವರ್ತನೆ
8. ಲೈಂಗಿಕ ಕಿರುಕುಳ ತಡೆಕಾಯ್ದೆ
1. ವಿಚ್ಛೇದನ ಕಾಯ್ದೆ :-
ಪರಸ್ಪರ ಗಂಡ-ಹೆಂಡಿರಲ್ಲಿ ಒಂದಾಗಿ ಬಾಳುವ ಇಷ್ಟವಿಲ್ಲದಿದ್ದರೆ, ಭಿನ್ನಾಭಿಪ್ರಾಯಗಳಿದ್ದರೆ ಈ ವಿವಾಹ ಬಂಧನದಿಂದ ಹೊರಬರಬಹುದು. ನಿರಂತರವಾಗಿ ಎರಡು ವರ್ಷಗಳ ಕಾಲ ಪರಸ್ಪರ  ಒಬ್ಬರನ್ನಾಗಲಿ ಮತ್ತೊಬ್ಬರು ದೂರವಿರುವುದು ಅಥವಾ ಗಂಡನು ಹೆಂಡತಿಯ ಮೇಲೆ ಹಿಂಸೆ ಅನಾವಶ್ಯಕ ದಬ್ಬಾಳಿಕೆ ಮಾಡುವುದು ಮುಂತಾದ ಕಾರಣಗಳಿಂದಾಗಿ, ವಿವಾಹ ಕಾನೂನಿನ ಪ್ರಕಾರ ವಿಚ್ಛೇದನ ಪಡೆದುಕೊಳ್ಳಬಹುದು. ಇತ್ತೀಚೆಗೆ ಮಾಡಿದ ತಿದ್ದುಪಡಿಯನುಸಾರವಾಗಿ ಕ್ರೈಸ್ತ ಧರ್ಮ ಪದ್ಧತಿಯ ಪ್ರಕಾರವೂ ವಿಚ್ಛೇದನ ಪಡೆದುಕೊಳ್ಳಬಹುದು.
2. ಮಕ್ಕಳ ಪೋಷಣೆಯ ಕಾಯ್ದೆ :-
ಮಕ್ಕಳ ಪೋಷಣೆಯ ವಿಷಯದಲ್ಲಿ ಕಾನೂನು ಏನು ಹೇಳುತ್ತದೆ ಎಂಬುದರ ಹೊರತಾಗಿಯೂ ತಂದೆ, ತಾಯಿಯರ ಪೈಕಿ ಯಾರು ಮಕ್ಕಳನ್ನು ಚೆನ್ನಾಗಿ ಪೋಷಿಸುತ್ತಾರೆ ಎಂಬುದರ ಬಗ್ಗೆ ಮಕ್ಕಳ  ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ಅದರಂತೆಯೇ ಮಕ್ಕಳು ಬಯಸಿದವರ ವಶಕ್ಕೆ ವಹಿಸುವಂತೆ ನ್ಯಾಯಶಾಸ್ತ್ರ ಸೂಚಿಸುತ್ತದೆ. ವಿಶೇಷ ಸಂದರ್ಭಗಳಲ್ಲಿ ತಾತ, ಅಜ್ಜಿಯರ ವಶಕ್ಕೂ ಮಕ್ಕಳನ್ನು ಒಪ್ಪಿಸಲಾಗುತ್ತಿದೆ.
3. ಜೀವನಾಂಶ :-
ಹೆಂಡತಿ ಗಂಡನಿಂದ, ಗಂಡನು ಹೆಂಡತಿಯಿಂದ, ವೃದ್ಧ ತಾಯಿ, ತಂದೆಯರು ತಮ್ಮ ಮಕ್ಕಳಿಂದ, ಅಪ್ರಾಪ್ತ ವಯಸ್ಸಿನ ಮಕ್ಕಳು ತಂದೆ-ತಾಯಿಯರಿಂದಲೂ ಕಾನೂನಿನ ಪ್ರಕಾರ ಜೀವನಾಂಶವನ್ನು  ಪಡೆಯಬಹುದು.
4. ವರದಕ್ಷಿಣೆ ತಡೆಕಾಯ್ದೆ :-
ಕಾನೂನಿನ ದೃಷ್ಠಿಯಲ್ಲಿ ವರದಕ್ಷಿಣೆ ಕೊಡವುದು ಹಾಗೂ ತೆಗೆದುಕೊಳ್ಳುವುದು ಅಪರಾಧ. ನಗದು ಅಥವಾ ಒಡವೆ ವಸ್ತುಗಳು ಯಾವುದೇ ಕೊಟ್ಟಿದ್ದರೂ ಅದರ ಮೇಲೆ ಹೆಣ್ಣಿಗೆ ಸಂಪೂರ್ಣ ಹಕ್ಕಿರುತ್ತದೆ. ಗಂಡನ ಜೊತೆ ಬಾಳ್ವೆ ನಡೆಸಲು ಇಷ್ಟವಿಲ್ಲದವಳು ತವರಿನವರು ಕೊಟ್ಟ ಹಣ, ಒಡವೆ ವಸ್ತುಗಳನ್ನು ವಾಪಸ್ ಕೇಳಿದರೆ  ಗಂಡನಾದವನು ಅದನ್ನು ಹಿಂತಿರುಗಿಸಲೇಬೇಕು. ಒಂದು ವೇಳೆ  ಕೊಡಲು ನಿರಾಕರಿಸಿದರೆ ‘ಕ್ರಿಮಿನಲ್ ಪ್ರಸ್ ಆಫ್ ಟ್ರಸ್ಟ್’ ಕಾಯ್ದೆಯ ಪ್ರಕಾರ ಅಪರಾಧ ! ಮದುವೆಯಾದ ಏಳು ವರ್ಷದೊಳಗೆ ಹೆಂಡತಿ ಬಯಸಿದರೆ ವರದಕ್ಷಿಣೆ ಮುಕದ್ದಮೆಯನ್ನು ಪರಿಗಣಿಸಲಾಗುತ್ತದೆ. ಗಂಡ ಮತ್ತು ಕುಟುಂಬದ ಇತರೆ ಸದಸ್ಯರ ವಿರುದ್ಧ ಮೊಕದ್ದಮೆ ಹೂಡಿ ಅಪರಾಧವನ್ನು ಸಾಬೀತುಪಡಿಸಿ ಅವರನ್ನು ಶಿಕ್ಷೆಗೊಳಪಡಿಸÀಬಹುದು. ಮದುವೆಯಾದ ಏಳು ವರ್ಷದ ನಂತರ ವರದಕ್ಷಿಣೆ ಮೊಕದ್ದಮೆಯನ್ನು ಹೂಡಲಾಗುವುದಿಲ್ಲ. ಹೆಂಡತಿಯನ್ನು ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುವ ಗಂಡನ ಮೇಲೆ ಮೊಕದ್ದಮೆ ಹೂಡಬಹುದು ಅದು ಪ್ರೂವ್‍ವಾಗುವಂತಿರಬೇಕು.
5. ಆಸ್ತಿ ಮೇಲೆ ಹಕ್ಕುದಾರಿಕೆ :-
ವಿಚ್ಛೇದನ ಪಡೆದ ಮಹಿಳೆಗೆ ಆಸ್ತಿ ಹಕ್ಕುದಾರಿಕೆಯನ್ನು ಆಯಾ ಧರ್ಮಗಳಿಗನುಸಾರಿವಾಗಿಯೇ ವಿಂಗಡಿಸಲಾಗುತ್ತದೆ. ಕ್ರೈಸ್ತರಿಗೆ ಭಾರತೀಯ ಆಸ್ತಿಕಾಯ್ದೆ ಪ್ರಕಾರ, ಹಿಂದೂಗಳಿಗೆ ಹಿಂದೂ ಧರ್ಮ ಹಕ್ಕು ಕಾಯ್ದೆ ಪ್ರಕಾರ ವಿಂಗಡಿಸಲಾಗುತ್ತಿದೆ. ವಿಶೇಷ ವಿವಾಹ ಕಾಯ್ದೆಯನುಸಾರ ಮದುವೆ ಮಾಡಿಕೊಂಡವರಿಗೆ ಭಾರತೀಯ ಹಕ್ಕುದಾರಿಕೆ ಕಾಯ್ದೆ ಅನ್ವಯಿಸುತ್ತದೆ. ಕ್ರೈಸ್ತ ಮತ್ತು ಹಿಂದೂ ಧರ್ಮದ ಕಾನೂನಿನ ಪ್ರಕಾರ ಸ್ತ್ರೀಯರಿಗೆ ಸಮಾನ ಆಸ್ತಿಪಾಲಿನ ಹಕ್ಕಿದೆ. ಆದರೆ ಇಸ್ಲಾಂ ಧರ್ಮದ ಪ್ರಕಾರ ಹೆಂಗಸರಿಗೆ ಮೂರನೇ ಒಂದು ಪಾಲು ಮಾತ್ರ ಆಸ್ತಿ ಹಕ್ಕುದಾರಿಕೆ ಬರುತ್ತದೆ. ಉಳಿದ ಎರಡು ಪಾಲು ಗಂಡಸರಿಗೆ ಸೇರುತ್ತದೆ.
ಒಬ್ಬ ಹೆಣ್ಣು ತಂದೆ ತಾಯಿಯರಿಗೆ ಮಗಳಾಗಿ, ಗಂಡನಿಗೆ ಹೆಂಡತಿಯಾಗಿ, ಎರಡೂ ಕಡೆಯಿಂದ ಆಸ್ತಿಪಾಲನ್ನು ಪಡೆಯುವ ಹಕ್ಕಿದೆ ಎಂದು ಕಾನೂನು ಹೇಳುತ್ತದೆ. ಇಸ್ಲಾಂ ಧರ್ಮದ ಕಾನೂನಿನ ಪ್ರಕಾರ ಮದುವೆಯಾದವರು. ವಿಶೇಷ ವಿವಾಹ ಕಾಯ್ದೆಯಡಿ ರಿಜಿಸ್ಟರ್ ಮದುವೆಯಾದರೆ ಅವರು ಮತ್ತೆ ಇತರೆ ಹೆಣ್ಣುಗಳನ್ನು ಮದುವೆಯಾಗದಂತೆ ತಡೆಯಬಹುದು ! ರಿಜಿಸ್ಟರ್ ಮದುವೆಯಾದ ನಂತರ ಧರ್ಮದ ಕಾನೂನು ಇದಕ್ಕೆ ಅನ್ವಯವಾಗುವುದಿಲ್ಲ.
6. ಬಾಲ್ಯ ವಿವಾಹ ತಡೆಕಾಯ್ದೆ :-
ಹದಿನೆಂಟು ವರ್ಷದ ಪ್ರಾಯಕ್ಕಿಂತ ಕಡಿಮೆಯಿರುವ ಹೆಣ್ಣನ್ನು ಮದುವೆಯಾದರೆ ಅದು ಬಾಲ್ಯವಿವಾಹ ಕಾಯ್ದೆಯಡಿ ಅಪರಾಧವಾಗುತ್ತಿದೆ. ಆದರೆ ಇದರಲ್ಲಿ ಶಿಕ್ಷೆ ಅತಿ ಕಡಿಮೆ ಪ್ರಮಾಣದ್ದು. ಕೇವಲ 15 ದಿನಗಳಿಂದ ಮೂರು ತಿಂಗಳ ತನಕ ಮಾತ್ರ ಸೆರಮನೆ ವಾಸದ ಶಿಕ್ಷೆಯನ್ನು ನೀಡಬಹುದಾಗಿದೆ. ಈ ಕಾನೂನು ಪುಸ್ತಕದಲ್ಲಡಗಿದೆಯೇ ಹೊರತು ಸರಿಯಾದ ರೀತಿಯಲ್ಲಿ ಜಾರಿಗಂತೂ ಬಂದಿಲ್ಲ. ಏಕೆಂದರೆ ಎಷ್ಟೋ ಸಾರಿ ದೊಡ್ಡ ದೊಡ್ಡ ಮಠಾಧೀಶರೋ, ರಾಜಕಾರಣಿಗಳೋ ಮಾಡುವ ಸಾಮೂಹಿಕ ಮದುವೆಗಳಲ್ಲಿ ಅದೆಷ್ಟೋ ಕಂದಮ್ಮಗಳು ತಾಳಿಗೆ ಕತ್ತೊಡ್ಡಿರುತ್ತಾರೆ ! ಆದರೆ ಸರ್ಕಾರ, ಕಾನೂನು ಏನು ಮಾಡಲು ಸಾಧ್ಯ ! ಇದರ ಬಗ್ಗೆ ಚಕಾರ ಎತ್ತಿದರೆ ಜಾರಿ ಮಾಡಲು ಸರಿಯಾದ ಆಧಾರಗಳು ಸಿಗಬೇಕು ಎಂಬ ಉತ್ತರ ! ಇವುಗಳು ಇನ್ನು ಉತ್ತರ ಕರ್ನಾಟಕದಲ್ಲಿ ಸರ್ವೇಸಾಮಾನ್ಯವಾಗಿ ನಡೆಯುತ್ತಿವೆ.
7. ದುರ್ವರ್ತನೆ :-
ವ್ಯಭಿಚಾರ ಎನ್ನಲಾಗುವ ಅನೈತಿಕ ನಡೆತೆಗಾಗಿ ಒಬ್ಬ ಹೆಣ್ಣು ತನ್ನ ಗಂಡನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಲಿ ಅಥವಾ ಮೊಕದ್ದಮೆ ಹೂಡುವುದಾಗಲಿ ಮಾಡಲಾಗುವುದಿಲ್ಲ. ಆದರೆ ನಿಮ್ಮ ಗಂಡ ಬೇರೆ ವಿವಾಹಿತ ಹೆಣ್ಣಿನೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡಿದ್ದರೆ, ಅವಳ ಗಂಡ ನಿಮ್ಮ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬಹುದು. ಈ ಅನೈತಿಕ ಕಾರ್ಯದಲ್ಲಿ ಕೇವಲ ಗಂಡಸರು ಮಾತ್ರ ಶಿಕ್ಷೆಗೆ ಒಳಗಾಗುವುದರಿಂದ ಈ ವಿಷಯದಲ್ಲಿ ಹೆಂಗಸರ ದೂರು ಅಥವಾ ಮೊಕದ್ದಮೆಯನ್ನು ಕಾನೂನು ಪರಿಶೀಲಿಸಿ ಸ್ವೀಕರಿಸುತ್ತದೆ.
8. ಲೈಂಗಿಕ ಕಿರುಕುಳ ತಡೆಯಾಜ್ಞೆ ಕಾಯ್ದೆ :-
ಲೈಂಗಿಕ ಕಿರುಕುಳ, ಇದು ಹೆಣ್ಣಿನ ಪಾಲಿಗೆ ಮಾನಸಿಕ ಹಿಂಸೆಯ ಪರಾಕಾಷ್ಠೆ ಎಂಧರೆ ತಪ್ಪಾಗಲಾರದು. ಇದು ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಡುವ ಸಂಸ್ಥೆ, ಕಛೇರಿಗಳಲ್ಲಿ ಹೆಣ್ಣು ಲೈಂಗಿಕ ಕಿರುಕುಳಕ್ಕೊಳಗಾದದ್ದು ಸಾಬೀತಾದರೆ, ಕಿರುಕುಳ ನೀಡಿದ ವ್ಯಕ್ತಿಗೆ ಕನಿಷ್ಠ ಮೂರು ವರ್ಷಗಳ ತನಕ ಶಿಕ್ಷೆಯುಂಟು. ಆದರೆ ಕೆಲವೊಂದು ನುಸುಳಿ ಹೋಗಲು ಸಾಧ್ಯವಾಗುವಂತಹ ಕಾನೂನುಗಳಿರುವುದರಿಂದ ಇದರಲ್ಲಿ ಶಿಕ್ಷೆ ಕಡಿಮೆಯಾಗುವ ಸಾಧ್ಯತೆಗಳೂ ಇವೆ. ಹಾಗೆಯೇ ಬಲಾತ್ಕಾರ, ಅತ್ಯಾಚಾರದಂತಹ ಮೊಕದ್ದಮೆಗಳಲ್ಲಿ ಅಪರಾಧಿ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಹೊಸ ಕಾನೂನು ಕಾಯ್ದೆ ಏನೂಬೇಕಾಗಿಲ್ಲ. ಈಗಿರುವ ಹಳೆಯ ಕಾಯ್ದೆಯಲ್ಲೇ ಅಪರಾಧಿ ಸಾಕಷ್ಟು ಶಿಕ್ಷೆ ಅನುಭವಿಸಬಹುದು.
ಇಷ್ಟೆಲ್ಲಾ ಕಾಯ್ದೆಗಳು ಮಹಿಳೆಯರ ಪರವಾಗಿದ್ದರೂ ಸಹ ಅವರು ಹಿಂಸೆ ಅಥವಾ ಇನ್ನಾವುದೇ ರೀತಿಯ ನೋವು ಸಂಕಷ್ಟಗಳಿಗೆ ಒಳಗಾದ ತಕ್ಷಣ ದೂರು ಕೊಡದೆ ಇರುವುದರಿಂದ, ಅವರಿಗೆ ಅರ್ಥವಾಗುವ ರೀತಿಯಲ್ಲಿ ಕೆಲವುತಡೆಗಳನ್ನು ನಿವಾರಿಸಿಕೊಡುವುÀದರಿಂದ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಆದ್ದರಿಂದ ಮಹಿಳೆಯರು ತಮಗೆ ಯಾವುದೇ ರೀತಿಯ ತೊಂದರೆಗಳಾದರೂ, ಹತ್ತಿರದಲ್ಲಿರುವ ಮಹಿಳಾ ಸಂಘ, ಉಚಿತ ಕಾನೂನು ಸೇವಾ ಕೇಂದ್ರಗಳಿಗೆ ದೂರು ಸಲ್ಲಿಸಿದರೆ ಅವರು ಉಚಿತವಾಗಿ ವಕೀಲರನ್ನು ನೇಮಿಸಿಕೊಟ್ಟು ಅವರ ಮೂಲಕ ಕಾನೂನು ರೀತ್ಯಾ ಕ್ರಮಕೈಗೊಂಡು ಅಪರಾಧಿಗಳನ್ನು ಶಿಕ್ಷೆಗೊಳಪಡಿಸುತ್ತಾರೆ. ಪ್ರತಿಯೊಬ್ಬ ಮಹಿಳೆ ತಮ್ಮ ಹಕ್ಕುಗಳು ಮತ್ತು ಕಾನೂನಿನ ಕಾಯ್ದೆಗಳನ್ನು ಅರಿತುಕೊಳ್ಳುವುದರ ಮೂಲಕ ಸಕಾರಾತ್ಮಕವಾಗಿ ಸ್ವೀಕರಿಸಿ, ಸರಿದಾರಿಯಲ್ಲಿ  ಉಪಯೋಗಿಸಿಕೊಂಡÀರೆ ಖಂಡಿತಾ ಮಹಿಳೆ ಏನನ್ನಾದರೂ, ಸ್ವತಂತ್ರವಾಗಿ ಸಾಧಿಸಬಲ್ಲಳು.

ಕೊಟ್ರೇಶ್ ಎಸ್.ಉಪ್ಪಾರ್
ಲೇಖಕರು, ಹಲಸಿನ ಮರದ ಹತ್ತಿರ
ತೇಜೂರು ರಸ್ತೆ, ಶಾಂತಿನಗರ
ಹಾಸನ. ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ