ಸೋಮವಾರ, ಜುಲೈ 21, 2014

ಪ್ರಾಚೀನ ವಿಶ್ವದ ಏಳು ಅದ್ಭುತಗಳು- ಕೊಟ್ರೇಶ್ ಎಸ್.ಉಪ್ಪಾರ್




1) ಈಜಿಪ್ಟ್‍ನ ಪಿರಾಮಿಡ್‍ಗಳು:- ಈಜಿಪ್ಟ್ ದೇಶದ ಪಿರಮಿಡ್‍ಗಳು ವಿಶ್ವದ ಏಳು ಅದ್ಭುತಗಳಲ್ಲಿ ಒಂದು ಈಜಿಪ್ಟ್‍ನ ರಾಜಧಾನಿ ಕೈರೊ ಸಮೀಪದ ಶಿಜಾದ ದಕ್ಷಿಣ ಭಾಗದ 96 ಕಿ.ಮೀ. ವ್ಯಾಪ್ತಿಯಲ್ಲಿ ನೂರಾರು ಪಿರಮಿಡ್‍ಗಳು ನಿಂತಿವೆ. ಇವುಗಳನ್ನು ಇಂದಿಗೂ ನೋಡಬಹುದು. ಇವುಗಳು ಈಜಿಪ್ಟ್ ದೇಶದ ಹಿಂದಿನ ಕಾಲದ ಅರಸರ ಸಮಾಧಿಗಳು. ಇವುಗಳ ಕಾಲಾವಧಿ ಸುಮಾರು ಕ್ರಿ.ಪೂ.2700 ಎಂದು ಹೇಳಲಾಗುತ್ತದೆ. ಈ ಪಿರಮಿಡ್‍ಗಳಲ್ಲಿ ಅತ್ಯಂತ ದೊಡ್ಡದಾದುದು ಚಿ-ಅಪ್ಟ್‍ನ ಪಿರಮಿಡ್ ಹನ್ನೆರಡು ಎಕರೆಗಳಿಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಆವರಿಸಿಕೊಂಡಿದೆ. ತಳಭಾಗ 256+756 ಅಡಿ ಅಗಲವಿದ್ದು, ಎತ್ತರ 841 ಅಡಿಗಳು.
2) ತೂಗುವ ಉದ್ಯಾನ:- ಪ್ರಾಚೀನ ಕಾಲದಲ್ಲಿ ಬೆಬಿಲೋನಿಯ ಒಂದು ಬಹುದೊಡ್ಡ ನಗರವಾಗಿತ್ತು, ಈ ನಗರವು ಇರಾಕಿನ ಈಗಿನ ರಾಜಧಾನಿ ಬಾಗ್ದಾದ್ ಪಟ್ಟಣದಿಂದ 50 ಕಿ.ಮೀ. ದೂರದಲ್ಲಿತ್ತು ಇದರ ಕಾಲಾವಧಿ ಕ್ರಿ.ಪೂ.605-560 ಪುರಾತನ ಬೆಬಿಲೋನಿನ ರಾಜನ ಬೋಪಲ್ ಸಾರ ಎನ್ನುವವ ತೂಗುವ ಉದ್ಯಾನ ನಿರ್ಮಿಸಲು ಶುರು ಮಾಡಿದ ಕೆಲಸ ಅಪೂರ್ಣವಾಗಿರುವಾಗಲೇ ಸತ್ತು ಹೋದ. ಅನಂತರ ಅವನ ಮಗ ನೆಬುಬಡ್ಯೆಜರ್ ಈ ಉದ್ಯಾನವನದ ಕೆಲಸ ಪೂರ್ಣಗೊಳಿಸಿದ. ಈ ಉದ್ಯಾನವು ನೆಲದಿಂದ 75 ರಿಂದ 200 ಅಡಿಗಳಷ್ಟು ಎತ್ತರದಲ್ಲಿ ನಿಮಾರ್ಣವಾಗಿತ್ತು. ಬೆಬಿಲೋನಿನ ಶತ್ರು ದೇಶವಾದ ಫಾರಸ್ ರಾಜರ ಆಕ್ರಮಣ ಮೇಲಿಂದ ಮೇಲೆ ನಡೆದು ಈ ಉದ್ಯಾನವು ನಾಶವಾಯಿತು.
3) ಒಲಂಪಿಯಾದ ಜಿಯಾಸ್‍ನ ಮೂರ್ತಿ:- ಒಲಂಪಿಯಾ ಪಟ್ಟಣವು ಕಲೆ ಹಾಗೂ ಸಂಸ್ಕøತಿಯ ಕೇಂದ್ರವಾಗಿತ್ತು. ಕಲಾಕಾರರು ತತ್ವಜ್ಞಾನಿಗಳು ಈ ಪಟ್ಟಣಕ್ಕೆ ಯಾತ್ರೆಗಾಗಿ ಬರುತ್ತಿದ್ದರು, ಈ ಪಟ್ಟಣದಲ್ಲಿ ಕ್ರಿ.ಪೂ.490-492ರ ಅವಧಿಯಲ್ಲಿ ಪುರಾತನ ಗ್ರೀಕ್ ಶಿಲ್ಪಿ ಫಿಡ್‍ಯಸ್ ಎಂಬುವನು ನಿರ್ಮಿಸಿದ ಮಹಾನ್ ವಿಗ್ರಹ ಜಯಾಸ್‍ನ ವಿಗ್ರಹ, ಈ ವಿಗ್ರಹವನ್ನು ನಿರ್ಮಿಸಲು ಆತನಿಗೆ 8 ವರ್ಷ ಹಿಡಿಯಿತೆನ್ನುತ್ತಾರೆ. ಈ ವಿಗ್ರಹವನ್ನು ಅನೆದಂತ, ಬಂಗಾರ, ವಜ್ರ, ವೈಧೂರ್ಯ, ಅಮೃತ ಶಿಲೆ, ಮರದ ಚೌಕಟ್ಟುಗಳನ್ನು ಬಳಸಿ ನಿರ್ಮಿಸಲಾಗಿತ್ತು. ಗ್ರೀಕ್ ಸಾಮ್ರಾಜ್ಯದ ಪತನದ ನಂತರ ಕ್ರಿ.ಪೂ.408ರಲ್ಲಿ ವಿಗ್ರಹ ಆಗ್ನಿ ದುರಂತದಲ್ಲಿ ನಾಶವಾಯಿತು.
4) ಅಲೆಗ್ಯಾಂಡ್ರಿಯಾದ ಪ್ರಕಾಶ ಸ್ತಂಭ:- ಅಲೆಗ್ಸಾಂಡರನ ಮರಣದ ನಂತರ ಅವನ ವಿಶಾಲ ಸಾಮ್ರಾಜ್ಯ ಅವನ ಸೇನಾಧಿಪತಿಗಳಲ್ಲಿ ಹಂಚಿಹೋಯ್ತು. ಈ ಜಿಪ್ಟ್ ರಾಜ ಪೆಟೋಲೆಮಿ ಅಲೆಗ್ಸಾಂಡ್ರಿಯನ ತನ್ನ ಕೈವಶ ಮಾಡಿಕೊಂಡನೆಂದು ಇತಿಹಾಸವಿದೆ. ಈ ದೊರೆಯೇ ಅಲೆಗ್ಸಾಂಡ್ರಿಯಾ ಬಂದರಿನ ಬಳಿ ಇದ್ದ. ಪಾರೋಸ್ ದ್ವೀಪದಲ್ಲಿ ಸಮುದ್ರದಲ್ಲಿ ಬರುವ ಹಡಗುಗಳ ಮಾರ್ಗದರ್ಶನಕ್ಕೆಂದು ಅಮೃತ ಶಿಲೆಯ ಪ್ರಕಾಶ ಸ್ತಂಭವನ್ನು ಕಟ್ಟಿಸಲು ಪ್ರಾರಂಭಿಸಿದ. ಆದರೆ ಅದನ್ನು ಪೂರ್ತಿಗೊಳಿಸಿದ್ದು ಅವರ ಮಗ ಫಿಲಾಕೆಲಫಸ್, ಇದರ ಕಾಲಾವಧಿ ಕ್ರಿ.ಪೂ.247. ಈ ಸ್ತಂಭವು 400-900 ಅಡಿ ಎತ್ತರವಿದ್ದು 100 ಮೈಲಿ ದೂರದವರೆಗೂ ಇದರ ಬೆಳಕು ಕಾಣಿಸುತ್ತಿತ್ತು. ಕ್ರಿ.ಶ 15ನೇ ಶತಮಾನದಲ್ಲಿ ಸಂಭವಿಸಿದ ಭಯಂಕರ ಭೂಕಂಪದಿಂದಾಗಿ ಇದು ನಾಶಗೊಂಡಿತು.
5) ರಾಜ ಮಾನೋಲಸ್‍ನ ಸಮಾಧಿ:- ಪುರಾತ ಕಾರಿಯನ್ ಸಾಮ್ರಾಜ್ಯದ ರಾಜಧಾನಿ ಹಾಲಿಕಾರ್‍ನ ಬಳಿ ಸಮ್ರಾಟ್ ಮನೋಲಸ್‍ನ ನೆನಪಿಗಾಗಿ ಅವನ ಹೆಂಡತಿ ಆರ್ಟಮಿಸಿಯಾ, ಕಟ್ಟಿಸಿದ ಸಮಾಧಿ ಇದು ಅತ್ಯಂತ ವೈಭವಯುತ ಹಾಗೂ ಸುಂದರವಾಗಿತ್ತೆಂದು ಹೇಳುತ್ತಾರೆ. 15 ಅಡಿಗಳ ತಳಪಾಯದ ಮೇಲೆ ವಿಶಾಲವಾದ ಗೋಡೆ, ಇಡೀ ಸಮಾಧಿ ಅಮೃತ ಶಿಲೆಯಿಂದ ಕೆತ್ತಲಾಗಿತ್ತು. ನಡವೆ 140 ಆಡಿ ಎತ್ತರದ ಅಮೃತ ಶಿಲೆಯ ಸ್ತಂಭ ನಿಲ್ಲಿಸಲಾಗಿತು. ಈ ಕಂಬಗಳ ಮೇಲೆ ಭಿನ್ನ ವಿಗ್ರಹಗಳನ್ನು ರೂಪಿಸಲಾಗಿತ್ತು. ಸಮಾಧಿಯ ಒಳಗಿರುವ ರಾಜ ಮಾನೋಲಸ್‍ನ ಶವ  ಒಂಭತ್ತು ಅಡಿ ಇತ್ತು ಇಂಚು ಎತ್ತರವಿದೆ. 12ನೇ ಶತಮಾನದವರೆಗೂ ಈ ಸಮಾಧಿ ಹೇಳಾಗಿರಲಿಲ್ಲ. ಕ್ರಿ.ಶ.1403ರಲ್ಲಿ ಭೂಕಂಪದಿಂದಾಗಿ ಭಿನ್ನಗೊಂಡ ಸಮಾಧಿ ಕ್ರಮೇಣ ನಾಶವಾಯಿತು.
6) ಡಯಾನಾ ದೇವಿ ಮಂದಿರ :- ಕ್ರಿ.ಪೂ.549-590ರ ಅವಧಿಯಲ್ಲಿ ಲಿಡಿಯಾದ. ರಾಜ ಕ್ರೊಸಸ್ ಡಯಾನಾ ದೇವಿಗೊಂದು ಹೊಸ ಮಂದಿರ ಕಟ್ಟಲು ನಿರ್ಧರಿಸಿದ. ಈ ಮಂದಿರ ಕಟ್ಟಲು  120 ವರ್ಷ ಹಿಡಿಯಿತು. ಕ್ರಿ.ಪೂ.265ರಲ್ಲಿ ಬೆಂಕಿ ಬಿದ್ದು ಸ್ವಲ್ಪ ಭಾಗ ನಾಶವಾಯಿತು. ಕ್ರಿ.ಪೂ 265ರಲ್ಲಿ ಹಿರೋ ಸ್ಟೇಟಸ್ ಎನ್ನುವ ಕಿಡಿಗೇಡಿಯೊಬ್ಬ ಆ ಮಂದಿರಕ್ಕೆ ಬೆಂಕಿ ಹಚ್ಚಲು ನಿರ್ಧರಿಸಿದನು. ಆದರೆ ದೇವಸ್ಥಾನಕ್ಕಾಗಲಿ, ಮೂರ್ತಿಗಾಗಲಿ ಹಾನಿ ಆಗಲಿಲ್ಲ. ಈ ದೇವಸ್ಥಾನವನ್ನು ಒಂಬತ್ತೊವರೆ ಅಡಿ ಎತ್ತರದ ಕಟ್ಟಡದ ಮೇಲೆ ನಿರ್ಮಿಸಲಾಗುತ್ತು. ಉದ್ದ 542 ಅಡಿ, ಅಗಲ 194 ಅಡಿ, ಛಾವಣಿ ನಿಲ್ಲಿಸಲು 9 ಅಡಿ ಅರ್ಧ ವ್ಯಾಸದಗೋಳಾಕಾರ ಹಾಗೂ ಚಚೌಕಾಕೃತಿಯ 127 ಕಂಬಗಳ ನಿರ್ಮಾಣವಾಗಿತ್ತು.
7) ರೋಡ್ಸ್‍ನ ಮೂರ್ತಿ :- ಕಾಲಾವಧಿ ಕ್ರಿ.ಪೂ. 280 ರೋಡ್ಸ್‍ನ ಪ್ರಸಿದ್ದ ಕಲಾವಿದ ಶಿಲ್ಪಿ ಚಾರೆಸ್ ಎನ್ನುವವ 12 ವರ್ಷಗಳ ಕಾಲ ಹಗಲಿರುಳೆನ್ನದೆ ಶ್ರಮಿಸಿ ನಿರ್ಮಿಸಿದ ಭವ್ಯ ಮೂರ್ತಿಯೇ ರೋಡ್ಬನ ಮೂರ್ತಿ, ಇದನ್ನು ಕ್ರಿ.ಪೂ 280 ಹೊತ್ತಿಗೆ  ಪೂರ್ಣಗೊಳಿಸಿದ. ಹಿತ್ತಾಳೆಯಿಂದ ಮಾಡಲಾದ ಈ ವಿಗ್ರಹ 125 ಅಡಿ ಎತ್ತರವಿತ್ತು. ಒಳಗೆ ಟೊಳ್ಳಾಗಿದ್ದ ಈ ವಿಗ್ರಹ ತಲೆಯವರೆಗೆ ಹತ್ತಲು ಸುತ್ತ ಮೆಟ್ಟಲುಗಳನ್ನು ನಿರ್ಮಿಸಲಾಗಿತ್ತು. ತಲೆಯಲ್ಲಿ ಒಂದು ರಂದ್ರವಿತ್ತು. ಇಂತಹ ಅದ್ಬುತ ಮೂರ್ತಿ ಭೂಕಂಪದ ಪ್ರಕೋಪದಿಂದಾಗಿ ಕ್ರಿ.ಪೂ. 224 ರಲ್ಲಿ ನಾಶವಾಯಿತು.




ಕೊಟ್ರೇಶ್ ಎಸ್ ಉಪ್ಪಾರ್
ಆಲೂರು




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ