ಮಂಗಳವಾರ, ಜುಲೈ 1, 2014

ಸಾರ್ಥಕ ಶಿಕ್ಷಣದಲ್ಲಿ – ವಿವಿಧ ವಿಷಯಗಳ ಪಾತ್ರ - ಕೊಟ್ರೇಶ್ ಎಸ್.ಉಪ್ಪಾರ್


ಸತ್ತ್ರಜೆಗಳ ನಿರ್ಮಾಣವೆ ಶಿಕ್ಷಣದ ಉದ್ದೇಶ ನಾನು ನನ್ನ ಮನೆ ಅದರೊಟ್ಟಿಗೆ ನನ್ನ ಜನ ನನ್ನ ದೇಶ  ಎಂಬುದನ್ನು ಬೆಳೆಸುವಲ್ಲಿ ಯಾವ ಶಿಕ್ಷಣ ಸಫಲವಾಗಿದೆಯೋ ಅದು ನಿಜವಾದ ಶಿಕ್ಷಣ. ಅಂತಹ ಶಿಕ್ಷಣಕ್ಕೆ ಶಿಕ್ಷಕ ಹಾಗೂ ಪಾಲಕ ಸಮಾಜವು ಸೂಕ್ಮ ಸಂವೇದನೆಯಂತಿರಬೇಕು. ಸಾಮಾನ್ಯವಾಗಿ ಶಿಕ್ಷಕರನ್ನು ನಾಲ್ಕು ಗುಂಪುಗಾಳಾಗಿ ವಿಂಗಡಿಸಬಹುದು. 1) ಏನೂ ಮಾಡದವರೂ - ಸಮಾಜ ದ್ರೋಹಿಗಳು 2) ಗಾರೆ ಕೆಲಸ ಮಾಡುವರಂತೆ – ಮೇಸ್ತ್ರಿ ಹೇಳಿದ ಹಾಗೆ ಇಟ್ಟಿಗೆಗಳನ್ನು ಜೋಡಿಸಿ ಸಿಮೆಂಟ್ ಬಳಿಯುವ ಕೆಲಸ, ಅದು ಸ್ನಾನ ಗೃಹವಾಗಿರಬಹುದು ಅಥವಾ ದೇವರ ಮನೆಯಾಗಿರಬಹುದು. 3) ಶಿಲ್ಪಿಯಂತಹ ಶಿಕ್ಷಕ ಇಲ್ಲಿ ಶಿಲ್ಪಿಯ ಮನಸ್ಸಿನಲ್ಲಿರುವಂತೆ ಕಲ್ಲು ರೂಪುಗೊಳ್ಳುತ್ತದೆ, ವಿನಃ ಕಲ್ಲಿಗೆ ಸ್ವಾತಂತ್ರವಿಲ್ಲ; ಚೇತನ ಶಕ್ತಿ ಇಲ್ಲ 4) ತೋಟದ ಮಾಲಿಯಂತಹ ಶಿಕ್ಷಕ - ಭೂಮಿಯನ್ನು ಹದಮಾಡಿ ಬೀಜನೆಟ್ಟು ಕಾಲಕಾಲಕ್ಕೆ ಗೊಬ್ಬರ, ನೀರು ಹಾಕಿ ಬೆಳೆಯಲು ಅಡ್ಡಲಾಗಿರುವ ಕಸವನ್ನು ಕಿತ್ತು ಬೇಲಿ ಹಾಕುತ್ತಾನೆ. ಸೂಕ್ತವಾದ ಪರಿಸರವನ್ನು ಒದಗಿಸುವುದಷ್ಷೆ ಮಾಲಿಯ ಕೆಲಸ. ಇಲ್ಲಿ ಬೆಳೆಯುವ ಪೈರು ಬೀಜದಲ್ಲಿ ಅಡಕವಾಗಿರುವ ಅದರ ಶಕ್ತಿ ಸಾಮಥ್ರ್ಯವನ್ನವಲಂಬಿಸಿದೆ. ಹೀಗೆ ಮಾಲಿಯಂತೆ ಶಿಕ್ಷಕನು ಶ್ರಮಜೀವಿಯಾಗಬೇಕು, ಅಂದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ. ಸೃಷ್ಟಿಕರ್ತನಿಗೆ ಸವಾಲೆಸಗುವ ಇಂದಿನ ಪೀಳಿಗೆಗೆ ಗುರುವಾಗುವುದು ಸುಲಭದ ಕೆಲಸವಲ್ಲ. ಶಿಕ್ಷಕನು ಜಾÐನದಾಹಿಯಾದಾಗ ಮಾತ್ರ ಅದು ಸಾಧ್ಯ. ಹಾಗೆಯೆ ಅಧಿಕಾರಿಗಳು ಶಿಕ್ಷಕರಿಗೆ ಸ್ಫೂರ್ತಿ ತುಂಬುವಲ್ಲಿ ಗೆಳೆಯರಿಗೆ ಶಿಸ್ತು ತಿಳಿಸುವಲ್ಲಿ ಅಧಿಕಾರಿಯಾಗಿ ಶಿಕ್ಷಕರನ್ನು ಓದಿನ ಕಡೆಗೆÉ ಪ್ರೇರೇಪಿಸಬೇಕು. ಹೊಸ ಜಗತ್ತನ್ನು ತಿಳಿದುಕೊಂಡು ಹೇಳುವ ಹವ್ಯಾಸ ತಿಳಿಸಿ ಬೆಳೆಸಬೇಕು. ಸಂದರ್ಭಕ್ಕೆ ಅನುಗುಣವಾಗಿ ಮಾರ್ಗದರ್ಶಕರಾದರೆ ಆದರ್ಶ ಶಿಕ್ಷಣಕ್ಕೆ ಅಡಿಪಾಯವಾಗುತ್ತದೆ. ಪಾಲಕನು ಕೂಡ ಮಗುವಿನ ಬೆಳವಣಿಗೆಯಲ್ಲಿ ಬಹುಪಾಲು ಜವಾಬ್ದಾರರಾಗುತ್ತಾರೆ. ಮಗುವಿನ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಮಗುವಿಗೆ ಪ್ರೀತಿ ಮತ್ತು ಸಂಸ್ಕøತಿಯನ್ನು ಕೊಡಬೇಕು. ಇದಲ್ಲದೆ ಮಗು ಮತ್ತು ತನ್ನ ಇಚ್ಚೆಯಂತೆ ಕಲಿಯಲು ಬಿಡಬೇಕೆ ವಿನಃ ತಮ್ಮ ಭಾವನೆ ಮತ್ತು ಮಹತ್ವಕಾಂಕ್ಷೆÉಯನ್ನು ಮಗುವಿನ ಮೇಲೆ ಹೇರಬಾರದು. ಹಿರಿಯರನ್ನು ಗೌರವಿಸುವ, ಹೊಸತನ್ನು ಸ್ವೀಕರಿಸುವ ಮನೋಭಾವನೆ ಬೆಳೆಸಬೇಕು ಹಾಗು ಮಗು ಅಹಂಕಾರಿಯಾಗದಂತೆ ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಇದು ಮನೆಯ ಕೆಲಸ. ನಾವು ಮಗುವಿನಲ್ಲಿರುವ ಸುಪ್ತ ಶಕ್ತಿಗೆ ಲಕ್ಷ್ಯ ವಹಿಸದೇ ಬರೀ ಆರು ವಿಷಯಗಳ ಮನನಕ್ಕಾಗಿ ಮಗುವನ್ನು ಯಂತ್ರದಂತೆ ದುಡಿಸುತ್ತಿದ್ದೇವೆ. ಶಾಲೆಯಲ್ಲಿ ಶಿಕ್ಷಕರು ಹೇಳಿದ್ದನ್ನು ಪಾಲಕರು ಮಾಡಿಸುವ ಗೃಹಪಾಠ ನಂತರ ಮತ್ತೇ ಟ್ಯೂಷನ್‍ನಲ್ಲಿಯೂ ಗೃಹ ಪಾಠ, ಮಗು ಬರೆದು, ಬರೆದು ಸುಸ್ತಾಗಿ ಚಿಂತನೆಗಾಗಲಿ, ಪ್ರತಿಭೆಗಾಗಲಿ ಅವಕಾಶಗಳಿರುವುದು ಕಡಿಮೆ ಎನಿಸುತ್ತದೆ. ಇದಕ್ಕಾಗಿ ವ್ಯಯ ಮಾಡುವ ವೇಳೆಯನ್ನು ಮತ್ತು ಶಕ್ತಿಯ ಪರಿಣಾಮವನ್ನು ಕಡಿಮೆಮಾಡಲು ಸಾಧ್ಯವಿಲ್ಲವೇ ? ಸಾಧ್ಯವಿದೆ, ಹೇಗೆಂದರೆ ಹಲವು ಬಾರಿ ಪದೇ ಪದೇ ಮನನ ಮಾಡಿಸುವುದಕ್ಕಿಂತ ಸ್ಮರಣ ಶಕ್ತಿ ಹೆಚ್ಚಿಸುವಂತೆ ಮಗುವಿನ ಮನವೂಲಿಸಿ ನಾನು ಏನು ಮಾಡುತ್ತಿರುವೆನು? ಎಲ್ಲಿ ನನ್ನ ಮನಸ್ಸನ್ನು ಇಡಬೇಕು ಎಂಬುದನ್ನು ಮಾರ್ಮಿಕವಾಗಿ ಹೇಳುವುದಲ್ಲದೆ ಅವನ್ನು ಮಾಡಿದಿದ್ದರೆ ಆಗುವ  ಅನಾಹುತದ ಅರಿವು ಮೂಡಿಸಬೇಕು ಅಂದರೆ ಹಲವು ಬಾರಿ ಮಾಡುವುದನ್ನು ಒಂದು ಬಾರಿ ಮಾಡಿದಾಗ ಸಮಯ ಎಳೆಯುತ್ತದೆ.  ಆ ಉಳಿದ ವೇಳೆಯಲ್ಲಿ ಮಗುವಿಗೆ ಹಿತವೆನಿಸುವ ಜೀವನಕ್ಕೆ ಉಪಯುಕ್ತವಾಗುವ ಹಲವು ಪ್ರಯೋಗಗಳನ್ನು ಮಾಡುವ ಒಂದು ಪ್ರಯತ್ನ ನಡೆಯಬೇಕು.  ಇದಕ್ಕೆ ಎಲ್ಲರ ಸಹಕಾರವು ಬೇಕು.  ಕ್ರಿಯಾಶೀಲತೆ, ಉದ್ಯಮಶೀಲತೆ, ಮಾನವೀಯತೆಯನ್ನು ಮಕ್ಕಳಿಗೆ ಬೆಳೆಸುವ ಪ್ರಯತ್ನ ಮಾಡಬೇಕು. ಬಳ್ಳಿಯಾಗುವ ಸಾಮಥ್ರ್ಯವಿರುವುದಕ್ಕೆ ಗಿಡವಾಗಿಯೂ, ಗಿಡವಾಗುವ ಸಾಮಥ್ರ್ಯವಿರುವುದಕ್ಕೆ ಬಳ್ಳಿಯಾಗುವಂತೆ ಪ್ರೇರೇಪಿಸಿದರೆ ಅದು ಋಣಾತ್ಮಕ ಫಲಿತಾಂಶ ಸಿಗುತ್ತದೆ ವಿನಃ ಧನಾತ್ಮಕವಲ್ಲ.  ವಿಷಯಕ್ಕನುಗುಣವಾಗಿ ಜೀವನ ಶಿಕ್ಷಣವನ್ನು ಈ ರೀತಿಯಾಗಿ ಅಳವಡಿಸಿಕೊಳ್ಳಬಹುದು.
ಕನ್ನಡ :  ನಡವಳಿಕೆ, ವಿಜ್ಞಾನ ಮತ್ತು ಧರ್ಮ ಸಮನ್ವಯ ಹಿಂದೂ ಕ್ರೈಸ್ತ ಮುಸ್ಲಿಂ ಧರ್ಮದಲ್ಲಿರುವ ಸಮಾನ ಅಂಶಗಳನ್ನು ತಿಳಿಸುವುದು.  ಇಂಗ್ಲಿಷ್ : ಅಂತರಾಷ್ಟ್ರೀಯ ತಿಳುವಳಿಕೆಗಾಗಿ ಇಂಗ್ಲಿಷ್ ಬೇಕು ಎಂಬುದನ್ನು 5ರಿಂದ 10ನೇ ವರ್ಗದವರೆಗೆ ಹಂತ ಹಂತವಾಗಿ ಕ್ವಿಜ್ ಕಾರ್ಯಕ್ರಮದೊಂದಿಗೆ ತಿಳುವಳಿಕೆ ಬರುವಂತೆ ಮಾಡುವುದು.
ಗಣಿತ ಹಾಗೂ ವ್ಯವಹಾರ ಜ್ಞಾನ
ಅಣಕು ವ್ಯವಹಾರವನ್ನು ಒಂದನೆಯ ತರಗತಿಯಿಂದಲೆ ಪ್ರಾರಂಭಿಸುವುದು (ವಯಸ್ಸಿಗನುಗುಣವಾದ ವ್ಯವಹಾರ) ಬ್ಯಾಂಕ್ ಪದ್ಧತಿ ಉದ್ಯಮಶೀಲತೆ ಕಸದಿಂದ ರಸ ಮಾಡುವ ಕ್ರಿಯಾಶೀಲತೆ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಮಾರಬಹುದಾದ ವಸ್ತುಗಳನ್ನು ತಯಾರಿಸಬಹುದು.  ತೆಂಗಿನ ಕಡ್ಡಿಯ ಜಾಡು (ಪೊರಕೆ) ಅಲಂಕಾರಿಕ ಬುಟ್ಟಿ, ಗ್ರೀಟಿಂಗ್ಸ್ ತಯಾರಿಕೆ, ಹೂಗಳು, ಊದುಬತ್ತಿ, ಮೇಣದಬತ್ತಿ, ಟಿಕಳೆ ಫ್ಯಾಕ್ ಇತ್ಯಾದಿ.  ವಿಜ್ಞಾನ :  1. ಆರೋಗ್ಯ - ಹಲವು ರೋಗ ಬರಲು ಕಾರಣಗಳು ಹಾಗೂ ಬರದಂತೆ ಮುಂಜಾಗ್ರತೆ ವಹಿಸುವ ಪದ್ಧತಿ ಆಯುರ್ವೇದ : ಔಷಧಿ ಉಪಯೋಗ, ಇತ್ಯಾದಿ ತಿಳಿಸುವುದು.  2 ಕೃಷಿ ರಾಸಾಯನಿಕ ಹಾಗೂ ಕೀಟ ನಾಶಕಗಳನ್ನು ಬಳಸುವುದರಿಂದ ಕೃಷಿಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಸಾವಯವ ಪದ್ಧತಿಯಲ್ಲಿ ಕಾಣುವ ಎರೆಹುಳು ಸಾಕಣೆ ಕಂಪೋಸ್ಟ್ ತಯಾರಿಕೆ, ಇತ್ಯಾದಿ ತಿಳಿಸುವುದು.  ಸಮಾಜವಿಜ್ಞಾನ :  ನನ್ನ ಜನ ನನ್ನ ದೇಶ ಎಂಬ ಭಾವನೆ ಬರಬೇಕೆಂದರೆ ಶಾಲೆಯ ಶುಚಿತ್ವ, ಶಾಲೆಯ ಪ್ರದೇಶದ ಶುಚಿತ್ವವನ್ನು ಮಕ್ಕಳೊಡನೆ ಶಿಕ್ಷಕರು ಸೇರಿ ಮಾಡಬೇಕು.  ಅಂಚೆ ಕಛೇರಿ ಆರೋಗ್ಯ ಇಲಾಖೆಯಂತಹ ಹಲವರು ಸಾರ್ವಜನಿಕ ಇಲಾಖೆಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸುವುದು.  ಅಣಕು ಕಛೇರಿಗಳನ್ನು ಏರ್ಪಡಿಸಿ ಆಡಳಿತ  ಅಣಕು ನ್ಯಾಯಾಲಯಗಳಿಂದ ನ್ಯಾಯಾಲಯ ಆಡಳಿತಾತ್ಮಕ ತಿಳುವಳಿಕೆ ಕೊಡುವುದು, ಇವೆಲ್ಲವುಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಪಾಲಕರ/ಶಿಕ್ಷಕರ ಮನವೊಲಿಸಲು ಸುದ್ದಿ ಮಾಧ್ಯಮಗಳ ಸಹಾಯ ಪಡೆದರೆ ಅನುಕೂಲವಾಗುವುದು.  ಇವುಗಳನ್ನು ಚೈತನ್ಯ ಪದ್ಧತಿಪ್ರಕಾರ ಮಾಡಲು ಅನುಕೂಲಕಾರಕವಾಗಿದೆ.  ಇಂಗ್ಲಿಷ್ ಮೋಹ ಇಂಗ್ಲಿಷ್ ಮಾತೃಭಾಷೆಯಾಗಿಲ್ಲದೆ ಯಾವ ದೇಶದಲ್ಲಿಯೂ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲಿಷ್‍ನಲ್ಲಿ ನೀಡುವುದಿಲ್ಲ.  ತಮ್ಮದೇ ಆದ ಭಾಷೆ ಲಿಪಿಗಳಿಲ್ಲದ ಕೆಲವು ದೇಶಗಳಲ್ಲಿ ಮಾತ್ರ ಇಂಗ್ಲಿಷ್ ಗೆ ಅಂಥ ಸ್ಥಾನವನ್ನು ಕಲ್ಪಿಸಲಾಗಿ ಅಲ್ಲೂ ಕೆಲವೆಡೆ ಆದೇಶದ  ಉಪಭಾಷೆಗಳನ್ನೇ ಶಿಕ್ಷಣದ ಮತ್ತು ಆಡಳಿತದ ಭಾಷೆಯನ್ನಾಗಿ ರೂಪಿಸುವ ಪ್ರಯತ್ನಗಳೂ ಬಿರುಸಿನಿಂದ ನಡೆದಿದೆ.  ಈ ದೇಶದಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಹಾಗೂ ಸಮಾಜದ ಕೆಲವರ್ಗಗಳಿಂದ ತುಳಿತಕ್ಕೆ ಒಳಗಾಗಿ ನೋವು ಅನುಭವಿಸುತ್ತಿರುವ ಕೋಟ್ಯಾಂತರ ಜನರ ಜೀವನಮಟ್ಟ ಸುಧಾರಿಸಿ ಅವರಲ್ಲಿ ಆತ್ಮವಿಶ್ವಾಸ, ಭದ್ರತೆ ಮೂಡಿಸುವ ಕಾರ್ಯ ಶಿಕ್ಷಣದಿಂದ ಆಗಬೇಕಾಗಿದೆ.  ಮೂಢನಂಬಿಕೆಗಳಿಂದ ಹೊರಬಂದು ಪರಸ್ಪರರ ನಡುವೆ ಇರುವ ಅಪನಂಬಿಕೆ ವೈಷಮ್ಯಗಳನ್ನು ತೊರೆದು ವೈಜ್ಞಾನಿಕವಾಗಿ ಚಿಂತಿಸುವ ವಾಸ್ತವಿಕತೆಯನ್ನು  ಸರಿಯಾಗಿ ಅರ್ಥೈಸಿಕೊಂಡು ನಮ್ಮೆದುರಿಗಿರುವ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸಬಲ್ಲ ಜನಾಂಗದ ನಿರ್ಮಾಣವಾಗಬೇಕಿದೆ.  ಇದು ಕೇವಲ ಪಠ್ಯಪುಸ್ತಕದಲ್ಲಿರುವ ಮಾಹಿತಿಯನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬುವುದರಿಂದ ಯಾವ ಸಾಧನೆಯೂ ಆಗುವುದಿಲ್ಲ.  ಈ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿರ್ವಹಿಸದಿದ್ದರೆ ಇಪ್ಪತ್ತೊಂದನೆಯ ಶತಮಾನ ಅತ್ಯಂತ ಭೀಕರವಾಗುವುದು.  ಹಾಗಾಗದಂತೆ ಎಚ್ಚರಿಕೆ ವಹಿಸೋಣ.  ಈ ರೀತಿಯ ಶಿಕ್ಷಣದ ಅನುಷ್ಠಾನಕ್ಕೆ ನಾವು ಏನು ಮಾಡಬಹುದು ಎಂದು ಚರ್ಚೆಯಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ