ಸೋಮವಾರ, ಅಕ್ಟೋಬರ್ 27, 2014

ಕನ್ನಡದ ಕಾಯಕಯೋಗಿ - ಡಾ. ಸಾ.ಶಿ ಮರಳಯ್ಯ :: ಕೊಟ್ರೇಶ್ ಎಸ್.ಉಪ್ಪಾರ್


ವಸಂತ ವನದಲಿ ಕೂಗುವ ಕೋಗಿಲೆ
ರಾಜನ ಬಿರುದನು ಬಯಸುವುದಿಲ್ಲ
ಹೂವಿನ ಮರದಲಿ ಜೇನುಂಬುಳುಗಳು
ಮೊರೆವುದು ರಾಜನ ಭಯದಿಂದಲ್ಲ... (ಪಾಂಚಜನ್ಯ – ಕುವೆಂಪು)

ಹೀಗೆ ಯಾವ ಪದವಿ, ಪ್ರಶಸ್ತಿಗಳ ಹಿಂದರಿಸಿ ಹೋಗದೆ ಕನ್ನಡ ಸಾಹಿತ್ಯ ರಚನೆಯಲ್ಲಿ ನಿಷ್ಣಾತರಗಿ ಉತ್ಕøಷ್ಟ ಕೃತಿ ರತ್ನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡುತ್ತಾ, ಕಳೆದ ಆರೇಳು ದಶಕಗಳಿಂದ ಕಾಯ ವಾಚಾ, ಮನಸ ಸಮರ್ಪಿಸಿಕೊಂಡು ಕಾಯಕಯೋಗಿಯಂತೆ ಮಾನವೀಯ ನೆಲೆಯಲ್ಲಿ ಕೃಷಿಗೈಯುತ್ತಿರುವ ಸಾಸಲು ಶಿವರುದ್ರಯ್ಯ ಮರಳಯ್ಯ ನಾಡಿನ ಶ್ರೇಷ್ಠ ಲೇಖಕರಲ್ಲೊಬ್ಬರು.
ಶ್ರೀಯುತ ಸಾ.ಶಿ. ಮರಳಯ್ಯನವರು ಕ್ರಿ.ಶ 1931 ಜನವರಿ 28 ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದ ಶ್ರಿ ಶಿವರುದ್ರಯ್ಯ ಮತ್ತು ಶ್ರಿಮತಿ ಸಿದ್ದಮ್ಮ ದಂಪತಿಗಳ ಪುಣ್ಯ ಗರ್ಭಾಂಬುದಿಯಲ್ಲಿ ಜನಿಸಿದರು.
ಶೆಟ್ಟಿಕೆರೆಯಲ್ಲಿ ಮಾಧ್ಯಮಿಕ ಶಿಕ್ಷಣ, ತಿಪಟೂರಿನಲ್ಲಿ ಪ್ರೌಢಶಿಕ್ಷಣ, ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ಇವರು ಆರ್ಥಿಕ ದುಸ್ಥಿತಿಯಿಂದ ಮುಂದೆ ಓದಲಾಗದೆ ಮ್ಯಾಂಗನಿಸ್ ಗಣಿಯ ಕಂಟ್ರಾಕ್ಟರ್ ಬಳಿ ಗುಮಾಸ್ತ ಹುದ್ದೆ ಸೇರಿ. ಬಂದ ಪಗಾರವನ್ನು ಸಂಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಂಡರು. ಅಲ್ಲಿ ಡಿ.ಎಲ್.ಎನ್, ದೇಜಗೌ, ತ.ಸು ಶಾಮರಾಯರು, ಎಸ್.ವಿ ರಂಗಣ್ಣ, ಎಸ್.ವಿ ಪರಮೇಶ್ವರ ಭಟ್ಟರು ಮುಂತಾದ ವಿದ್ವಾಂಸರ ಮಾರ್ಗದರ್ಶನ ದೊರೆತರೂ ಪೂರ್ಣ ಮುಗಿಸಲಾಗದೇ ಪುನಃ ಚಾಮರಾಜನಗರ ಕಾಲೇಜಿನಲ್ಲಿ ಅರೆಕಾಲಿಕ ಉಪಾಧ್ಯಾಯ ವೃತ್ತಿ ಆರಂಭಿಸಿ, ವಿದ್ಯಾಭ್ಯಾಸ ಮುಂದುವರೆಸಿ 1956 ರಲ್ಲಿ ಎಂ.ಎ ಪದವಿ ಪಡೆದರು. ನಂತರ ಬೋಧನೆ ವೃತ್ತಿ ಆರಂಭಿಸಿದ ಇವರು ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನಂತರ ಬೆಂಗಳೂರಿಗೆ ವರ್ಗಾವಣೆಯಾದ ಇವರು ಅಲ್ಲಿಯೂ ಆದರ್ಶವಾಗಿಯೇ ಬದುಕು ಕಟ್ಟಿಕೊಂಡರು. ಮುಂದೆ ಬಡ್ತಿ ಹೊಂದಿ ತುಮಕೂರು ನಂತರ ಚನ್ನಪಟ್ಟಣಗಳಲ್ಲಿ ಪ್ರಾಂಶುಪಾಲರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಅಲ್ಲಿಂದ ಮಂಗಳೂರಿಗೆ ವರ್ಗವಾಗಿ ಪುನಃ ರಾಜ್ಯಭಾಷಾ ಆಯೋಗದ ಸದಸ್ಯರಾಗಿ ನೇಮಕಗೊಂಡು ಬೆಂಗಳೂರಿಗೆ ಬಂದರು.
1971 ರಲ್ಲಿ ಇವರು ಬರೆದ ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ.
ಡಾ. ಸಾ.ಶಿ. ಮರಳಯ್ಯನವರು ಉತ್ತಮ ಬೋಧಕರಾಗಿ ಖ್ಯಾತಿವೆತ್ತವರು. ಇವರು ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮಾದರಿ ಸೇವೆಗೈದಿದ್ದಾರೆ.
ಬೋಧನೆಯು ವೃತ್ತಿಯ ಜೊತೆ ಜೊತೆಗೆ ಸಾಹಿತ್ಯವೆಂಬ ಗೀಳನ್ನು ಅಂಟಿಸಿಕೊಂಡು ಡಾ. ಸಾ.ಶಿ ಮರಳಯ್ಯನವರು 1989 -90ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿಗಳಾದರು. ನಂತರ 1995 ಜೂನ್ ನಲ್ಲಿ ಅಧ್ಯಕ್ಷ ಹುದ್ದೇಗೆರಿ 1998ರವರೆಗೆ ದಕ್ಷತೆಯಿಂದ ನಾಡು ನುಡಿಯ ಹಿತಕ್ಕಾಗಿ ದುಡಿದರು.
ಹಲವಾರು ಗ್ರಂಥಗಳ ಸಂಪಾದನೆ, ಕಾವ್ಯ, ಕಾದಂಬರಿ ವಿಮರ್ಶಾ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಇವರು ಸಾಕಷ್ಟು ಕೃತಿ ರತ್ನಗಳನ್ನು ಕನ್ನಡ ಸಾರಸ್ವತ ಕಣಜಕ್ಕೆ ನೀಡಿದ್ದಾರೆ. ಬನವಾಸಿ, ಬಾದಾಮಿ, ಉಡುಪಿ ಮುಂತಾದ ವಿಷಯಗಳ ಕುರಿತ ಅತ್ಯುತ್ತಮ ನೃತ್ಯ ರೂಪಕಗಳನ್ನು ರಚಿಸಿದ್ದಾರೆ. ಇವರ ‘ಸ್ನೋವೈಟ್’ ಪ್ರಖ್ಯಾತಿ ಪಡೆದ ನೃತ್ಯ ರೂಪಕವಾಗಿದೆ.
ಬೃಂದಾವನ ಲೀಲೆ, ವಿಪರ್ಯಾಸ, ಶಿವತಾಂಡವ, ರಾಸಲೀಲೆ, ಕೆಂಗನಕಲ್ಲು ರೂಪಸಿ ಕಾವ್ಯಕೃತಿಗಳು. ಇವುಗಳಲ್ಲಿ ‘ಕೆಂಗನಕಲ್ಲು’ ಎಂಬ ಕವನ ಸಂಕಲನ ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದಿದೆ. ಇವರ ‘ಬಾರೋ ಮೈಲಾರಕ್ಕೆ’ ಸಂಕಲನದಲ್ಲಿನ ಗೀತೆಗಳನ್ನು ವರನಟ ಡಾ. ರಾಜಕುಮಾರ್ ಹಾಡಿದ್ದಾರೆ.
ಮನಿಷಾ, ಪುರುಷ ಸಿಂಹ, ಹೇಮಕೂಟ ಸಾಮರಸ್ಯದ ಶಿಲ್ಪಿ ಮುಂತಾದ ಕಾದಂಬರಿಗಳು; ವಿಜಯವಾತಾಪಿ ಎರಡು ನಾಟಕಗಳು, ಮರಿಬೇಡಿ-ಮುಂತಾದ ನಾಟಕಗಳು. ‘ನೆಲದ ಸೊಗಡು’ ಇವರ ಪ್ರಖ್ಯಾತ ಕಥಾ ಸಂಕಲನ.
‘ಬಾಸನ ಮಕ್ಕಳು’, ಮಾಸ್ತಿಯವರ ಕಾವ್ಯ ಸಮೀಕ್ಷೆ, ಅಭಿವ್ಯಕ್ತÀ, ‘ಅನುಶೀಲನ’ ಮುಂತಾದ ವಿಮರ್ಶಾ ಕೃತಿಗಳು. ಇವುಗಳಲ್ಲಿ ‘ಬಾಸನ ಮಕ್ಕಳು’ ವಿಮರ್ಶಾ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಲಭಿಸಿದೆ.
‘ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತರು’ ಇವರ ಬೃಹತ್ ಕೃತಿಯಾಗಿದೆ. ಸುಮಾರು 630 ಪುಟಗಳ ಎ 4 ಅಳತೆಯ ಈ ಕೃತಿಯು 1965 ರಿಂದ 2002ರ ವರೆಗಿನ ಭಾರತೀಯ ಜ್ಞಾನಪೀಠ ಪುರಸ್ಕøತರ ಸಕಲ ಮಾಹಿತಿಗಳನ್ನು ತಿಳಿಸಿಕೊಡುವುದರ ಜೊತೆಗೆ, ಆ ಸಂಸ್ಥೆಯ ಹಿನ್ನೆಲೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಕೃತಿ ಕುರಿತು 1994 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ. ಯು.ಆರ್. ಅನಂತಮೂರ್ತಿಯವರು ಬೆನ್ನುಡಿಯಲ್ಲಿ ಕೃತಿ ಕುರಿತು ಹೀಗೆ ಹೇಳಿದ್ದಾರೆ.-“ಗೆಳೆಯರಾದ ಡಾ. ಸಾ.ಶಿ ಮರಳಯ್ಯನವರು ಭಾರತದ ಜ್ಞಾನಪೀಠ ಪ್ರಶಸ್ತಿ ಪಡೆದವರ ಬಗ್ಗೆ ತರುತ್ತಿರುವ ಈ ಪುಸ್ತಕ ಅಗಾಧವಾದ ಪರಿಶ್ರಮ ಮತ್ತು ಪ್ರೀತಿಯಿಂದ ಹೊರಬಂದಿದೆ. ಎಲ್ಲ ಭಾಷೆಗಳ ಪ್ರಶಸ್ತಿ ವಿಜೇತರು ಆಡಿರುವ ಮಾತುಗಳನ್ನು ಓದುತ್ತಹೋದರೆ ಅವರ ಬಗ್ಗೆ ಪ್ರಶಸ್ತಿಯ ಸಂದರ್ಭದಲ್ಲಿ ಮಾಡಿರುವ ವ್ಯಾಖ್ಯಾನವನ್ನು ಗಮನಿಸಿದರೆ ಇಡೀ ಭಾರತೀಯ ಸಾಹಿತ್ಯದ ಒಂದು ರಸವತ್ತಾದ, ಸಂಕ್ಷಿಪ್ತವಾದ ಚರಿತ್ರೆ ದೊರೆತಂತೆ ಆಗುತ್ತದೆ. ಯಾವ ವಿವೇಕಶಾಲಿಯಾದ ಓದುಗನೂ ಆಯಾ ಸಾಹಿತ್ಯದ ದೊಡ್ಡ ಲೇಖಕರು ಈ ಪ್ರಶಸ್ತಿ ವಿಜೇತರಷ್ಟೇ ಎಂದು ತಿಳಿಯಲಾರರು. ಕನ್ನಡದಲ್ಲಂತೂ ಪ್ರಶಸ್ತಿ ವಿಜೇತನಾದ ನಾನೇ ಹೇಳಬಹುದಾದ ಸತ್ಯದ ಮತೊಂದಿದೆ. ನನಗಿಂತ ಹಿರಿಯರಲ್ಲೂ, ನನ್ನ ಸಮಕಾಲೀನರಲ್ಲೂ ಈ ಪ್ರಶಸ್ತಿಗೆ ಅರ್ಹರಾದ, ನಾನು ಬಹುವಾಗಿ ಮೆಚ್ಚುವ, ನನಗೆ ಬರೆಯುವುದನ್ನು ಕಲಿಸಿರುವ ದೊಡ್ಡ ಲೇಖಕರು ಇದ್ದಾರೆ. ಈ ವ್ಯಾಪಕತೆಯನ್ನು ಪ್ರತಿ ಸಾಹಿತ್ಯದಲ್ಲೂ ಕಲ್ಪಿಸಿಕೊಂಡು ಓದಿದಲ್ಲಿ ಡಾ ಮರುಳಯ್ಯನವರ ಪರಿಶ್ರಮದಿಂದಲೂ, ಪ್ರೀತಿಯಿಂದಲೂ ಹೊಮ್ಮಿರುವ ಈ ಕೃತಿ ತೌಲನಿಕ ಸಾಹಿತ್ಯ ವಿಮರ್ಶೆಗೆ ಅಗತ್ಯವಾದ ಗ್ರಂಥವಾಗಿ ಕಾಣುತ್ತದೆ. ಭಾರತದ ಸಾಹಿತ್ಯದ ಅಗಾಧಕತೆಗೂ, ವೈವಿಧ್ಯಕ್ಕೂ ಕನ್ನಡಿಯಾಗುತ್ತದೆ’.
ಈ ಕೃತಿ ರಚನೆಯಲ್ಲಿ ಡಾ. ಸಾ. ಶಿ ಮರುಳಯ್ಯನವರು ವಹಿಸಿದ ಪರಿಶ್ರಮ ಅಗಾಧವಾದದ್ದು. ನಿಜಕ್ಕೂ ಹತ್ತಾರು ಕೃತಿಗಳಿಗೆ ಇದೊಂದು ಸಮವಾಗಿ ನಿಲ್ಲಬಲ್ಲುದು. ನನಗೆ ಮೊದಲು ಇವರ ಕೃತಿಗಳಲ್ಲಿ ಓದಲು ದೊರಕಿದ್ದೇ ಈ ಕೃತಿ. ತದನಂತರ ಇವರ ಇತÀರ ಕೃತಿಗಳೆಡೆ ನನ್ನ ಗಮನ ಹರಿದದ್ದು. ಇವರ ಭಾರತೀಯ ಜ್ಞಾನ ಪೀಠ ಪುರಸ್ಕøತಿಯ ಕೃತಿಯನ್ನು ಸುಮಾರು ನಾಲ್ಕೈದು ಬಾರಿ ತಿರುವಿಹಾಕಿದ್ದೇನೆ. ಇನ್ನು ಓದಬೇಕೆನಿಸುತ್ತದೆ. ಅಷ್ಟೊಂದು ಅಗಾಧ ಜ್ಞಾನ ತುಂಬಿರುವ ಕೃತಿ ರತ್ನವಿದು. ಪ್ರತಿಯೊಬ್ಬ ಸಾಹಿತಿ ಓದಲೇಬೇಕಾದ ಕೃತಿ ಇದು ಎಂದರೆ ಅತಿಶಯೋಕ್ತಿಯಾಗಲಾರದು. ನನ್ನ ಗಮನ ಸೆಳೆದ ಕೆಲವೇ ಕೆಲವು ಕನ್ನಡ ಕೃತಿಗಳಲ್ಲಿ ಇದೂ ಒಂದು.
ಇವರ ಅನುಪಮ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಎಚ್. ನರಸಿಂಹಯ್ಯ ಪ್ರಶಸ್ತಿ ಪ್ರಮುಖವಾವುಗಳು, ಇವರ ಹಿತೈಷಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಇವರಿಗೆ ‘ಇಷಾಂಶು ಮತ್ತು ಅಭಿಜ್ಞ’ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಹಂಪಿನಗರದಲ್ಲಿರುವ ‘ರಾಗಿಣಿ’ ನಿಲಯದಲ್ಲಿ ವೃತ್ತಿಯಿಂದ ನಿವೃತ್ತಿ ಜೀವನ ಸಾಗಿಸುತ್ತಿರುವ ಇವರು ಪ್ರವೃತ್ತಿಯಲ್ಲಿ ಸದಾ ನಿರತರಾಗಿರುವುದು ಶ್ಲಾಘನೀಯ. 84 ರ ವಯೋಮಾನದ ಈ ಹಿರಿಯ ದಿಗ್ಗಜ ಸಾಹಿತಿ ಕನ್ನಡವೇ ನಮ್ಮ ಶಕ್ತಿ, ಕನ್ನಡದಿಂದಲೇ ಮುಕ್ತಿ, ಕನ್ನಡವೇ ನಮ್ಮ ನಾಡಿ, ನಮ್ಮ ಹೃದಯ ಧಮನಿ ದುಡಿ ಎಂದು ನಿತ್ಯ ಪಲ್ಲವಿಸುವಂತೆ ಪ್ರೇರೇಪಿಸುತ್ತಾ, ಕಿರಿಯರಿಗೆ ಮಾರ್ಗ ದೀವಿಗೆಯಾಗಿ, ಸಮಕಾಲೀನರಿಗೆ ಆದರ್ಶಮಯವಾಗಿ, ಹಿರಿಯರಿಗೆ ಕೃತಜ್ಞಾ ಚೇತನದ ಚಿಲುಮೆಯಾಗಿರುವ ಇವರು ಕನ್ನಡ ಸಾಹಿತ್ಯ ಲೋಕದಲ್ಲಿ ಅಜಾತಶತೃವಾಗಿ ನಿಲ್ಲುತ್ತಾರೆ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಭಾನುವಾರ, ಅಕ್ಟೋಬರ್ 26, 2014

ಶೂದ್ರ ಸಂಜೀವಿನಿ- ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’

(ಕನ್ನಡ ನಾಡಿನ ಸುಪ್ರಸಿದ್ಧ ಸಾಹಿತಿ ಪ್ರೊ. ಕೆ. ಎಸ್. ಭಗವಾನ್‍ರವರ ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’  ಕೃತಿ ಕುರಿತು ಒಂದು ವಿಶ್ಲೇಷಣೆ ,)
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಶೂದ್ರ ಸಂಜೀವಿನಿ- ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’
      ‘ Iಣ shಚಿಟಟ be ಣhe ಜuಣಥಿ oಜಿ eveಡಿಥಿ ಛಿiಣizeಟಿ oಜಿ iಟಿಜiಚಿ ಣo ಜeveಟoಠಿ ಣhe sಛಿieಟಿಣiಜಿiಛಿ ಣemಠಿeಡಿ, humಚಿಟಿism ಚಿಟಿಜ ಣhe sಠಿiಡಿiಣ oಜಿ eಟಿquiಡಿಥಿ ಚಿಟಿಜ ಡಿeಜಿoಡಿm.’
(ಣhe ಛಿoಟಿsಣiಣuಣioಟಿ oಜಿ iಟಿಜiಚಿ, ಠಿಚಿಡಿಣ 4ಚಿ ಜಿuಟಿಜಚಿmeಟಿಣಚಿಟ ಜuಣies, 51ಚಿ/h)
     ವೈಜ್ಞಾನಿಕ ಮನೋಭಾವ, ಮಾನವತಾವಾದ, ಶೋಧನಾತ್ಮಕ ಚೈತನ್ಯ ಮತ್ತು ಸುಧಾರಣೆ ಇವುಗಳನ್ನು ಬೆಳೆಸುವುದು ಪ್ರತಿ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ’ ಎಂದು ಸಂವಿಧಾನವೇ ನಿರ್ದೇಶಿಸುತ್ತದೆ.
     ಪ್ರತಿಭಟನೆ ಮನುಷ್ಯನ ಜೀವಂತಿಕೆಯ ಸಂಕೇತ. ಜಾತಿ ವ್ಯವಸ್ಥೆ, ಶೋಷಣೆ, ಬಂಡವಾಳ ಶಾಹಿ, ಜಮಿನ್ದಾರ ಪದ್ದತಿ, ಜೀತ ಪದ್ದತಿ, ಭ್ರಷ್ಟ ರಾಜಕೀಯ ವ್ಯವಸ್ಥೆಗಳಂತಹ ಸಾಮಾಜಿಕ ಅನಿಷ್ಟಗಳ ವಿರುದ್ದ ಪ್ರತಿಭಟಿಸುವುದು ಪ್ರತಿಯೊಬ್ಬ ಮಾನವ ಜೀವಿಯ ಆದ್ಯ ಕರ್ತವ್ಯ.
    ಶತ-ಶತಮಾನಗಳಿಂದ ಅಟ್ಟಹಾಸ ಮೆರೆಯುತ್ತಾ ಬಂದಿರುವ ಪುರೋಹಿತಶಾಹಿ ಮನಸ್ಸುಗಳು, ಹಾಗೆಯೇ ಅವರು ಸೃಷ್ಟಿಸಿದ ಸಾಹಿತ್ಯಗಳ ಬಗ್ಗೆ ಆಧಾರ ಸಹಿತವಾಗಿ ವಿಮರ್ಶೆಗೈದು ಓದುಗರ ಮುಂದಿಟ್ಟು, ಶೂದ್ರರ ಕಣ್ತೆರೆಸಿದವರು ವೈಜ್ಞಾನಿಕ ಪರಂಪರೆಯ ಮಾನವೀಯ ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್‍ರವರೆಂದರೆ ಅತಿಶಯೋಕ್ತಿಯಾಗಲಾರದು.
    ನಾನು ಮೂಲತಃ ಕೆಲವು ಮಠದ ವ್ಯವಸ್ಥೆಗಳಡಿಯಲ್ಲಿಯೇ ಶಿಕ್ಷಣ ಪಡೆದವನು. ಅಲ್ಲಿನ ಎಷ್ಟೋ ಸಂದರ್ಭಗಳನ್ನು ವೈಚಾರಿಕವಾಗಿ ಆಲೋಚಿಸಿ, ಪ್ರಶ್ನಿಸಿ ಶಿಕ್ಷೆಗೂ ಗುರಿಯಾಗಿದ್ದೆನೆ. ಮಠ ಎಂದರೆ ಶೂದ್ರರೊಳಗೇ ಬರುವ ಮೇಲ್ಪಂಕ್ತಿಯ ಪಂಗಡದ್ದು!
    ಇನ್ನೂ ಶತಮಾನಗಳುದ್ದಕ್ಕೂ ಈ ಶೂದ್ರ ಪಂಗಡದ ಹೆಣಗಳ ರಾಶಿಯ ಮೇಲೆ ಸುಪ್ಪತ್ತಿಗೆಯರಮನೆ ನಿರ್ಮಿಸಿಕೊಂಡು ಭೋಗ ಜೀವನಗೈದ ವರ್ಣ ವ್ಯವಸ್ಥೆಯ ಮೇಲುಸ್ತರದವರ ಮನೋಸ್ಥಿತಿಯನ್ನು ಊಹಿಸಲು ಸಾಧ್ಯವೇ?
    ಶಂಕರಾಚಾರ್ಯರಂತಹ ಸ್ವಯಂ ಘೋಷಿತ ಯುಗಾವತಾರಿಗಳು ಆಚಾರ್ಯರೆಂದು, ಸಮಾಜ ಸುಧಾರಕರೆಂದು ಬಿಂಬಿತಗೊಂಡು ತಮ್ಮ ಭಾಷ್ಯಗಳಲ್ಲಿ ಜಾತಿ ವ್ಯವಸ್ಥೆಯನ್ನು ಅದ್ಹೇಗೆ ಗಟ್ಟಿಗೊಳಿಸುತ್ತಾ ಸಂಕುಚಿತಮತಿಗಳಾದರು ಎಂಬುದನ್ನು ಸಾಕಷ್ಟು ಪಾರಾಯಣ ಮಾಡಿ, ಸಾಕ್ಷ್ಯಾಧಾರ ಸಮೇತ ಎಳೆ ಎಳೆಯಾಗಿ ವ್ಯಾಘ್ರ ಮುಖವಾಡಗಳನ್ನು ಭಗವಾನ್ ರವರು ಈ ಕೃತಿಯಲ್ಲಿ ಕಳಚಿದ್ದಾರೆ.
     ಸಮಾಜಕ್ಕೂ ನಮಗೂ ಸಂಬಂಧವೇ ಇಲ್ಲ. ಸಮಾಜ ಪರಿವರ್ತನೆ ನಮಗ್ಯಾಕೆ ಎಂದುಕೊಂಡು ಎಲ್ಲೋ ಕಳೆದುಹೋಗಿದ್ದ ಶೂದ್ರ ಮನಸ್ಸುಗಳಲ್ಲಿ ಹೊಸ ಚಿಂತನೆ, ಹೊಸ ಸ್ಫೂರ್ತಿ ತುಂಬಿ ಗೊಡ್ಡು ಸಂಪ್ರದಾಯದ ವಿರುದ್ದ ಸಿಡಿದೇಳಲು ಆತ್ಮವಿಶ್ವಾಸ ನೀಡಿದ ಪ್ರೊ. ಕೆ.ಎಸ್ ಭಗವಾನ್‍ರವರಿಗೆ ಗೌರವಪೂರ್ವಕವಾದ ಸಲಾಂ. ಇತಿಹಾಸದ ಪುಟಗಳಲ್ಲಿ ಹುಡುಕಿ ಹೆಕ್ಕಿ, ಆವಿಷ್ಕರಿಸಿ, ಸಂಗ್ರಹಿಸಿ, ಶೂದ್ರರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಜಾಲಾಡಿ ಸಾಕ್ಷಿ ಸಮೇತವಾಗಿ ಪೌರೋಹಿತ್ಯ ಸಂಚು ಸಾಹಿತ್ಯವನ್ನು ಅನಾವರಣಗೊಳಿಸಿ ಪ್ರಬುದ್ದ ಪ್ರಬಂಧಗಳನ್ನು ಕಟ್ಟಿಕೊಡುವುದರ ಮೂಲಕ ಕೃತಿರೂಪದಲ್ಲಿ ಹೊರತಂದು ಶಂಕರಾಚಾರ್ಯರ ಗೂಂಡಾಗಿರಿ ಪ್ರವೃತ್ತಿಯ ಮುಖವಾಡ ಕಳಚಿ ಬೀಳಿಸುವುದರ ಮೂಲಕ ನವ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ.
    ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಕೃತಿಯ 1982 ರಲ್ಲಿ ಪ್ರಥಮ ಮುದ್ರಣ ಕಂಡ ಈ ವೈಜ್ಞಾನಿಕ ಕನ್ನಡಿ 2014ರ ಹೊತ್ತಿಗೆ 17 ಮುದ್ರಣಗಳನ್ನು ಕಂಡಿರುವುದು ಇದರ ಶ್ರೇಷ್ಟತೆಯನ್ನು ಸಾರಿ ಹೇಳುತ್ತದೆ. ಈ ಕೃತಿ ಮೊದಲ ಮುದ್ರಣಗೊಂಡಾಗ ಬಹುಷಃ ನಾನು ಎರಡು ವರ್ಷದ ಹಸುಳೆ.
     ಆದಿ ಶಂಕರಾಚಾರ್ಯನ ಜನವಿರೋಧಿ ತತ್ವಜ್ಞಾನ, ಶಂಕರಾಚಾರ್ಯನ ಗೂಂಡಾಗಿರಿ ಮತ್ತು ಹಿಂದೂ ಸಂಸ್ಕøತಿ, ಶಂಕರಾಚಾರ್ಯನ ಬಗ್ಗೆ ವಿವೇಕಾನಂದರ ಟೀಕೆ, ದೋಷಯುಕ್ತ ದೃಷ್ಟಿಕೋನ, ಹಿಂದೂ ಧರ್ಮ-ಹಾಗೆಂದರೇನು?, ಮೀಸಲಾತಿ ಮತ್ತು ಜಾತಿ ವಿನಾಶ ಶಾಸನ, ಭಾರತೀಯ ಬದುಕಿನ ಮೇಲೆ ಬ್ರಾಹ್ಮಣರ ಬಿಗಿ ಹಿಡಿತ, ಬ್ರಾಹ್ಮಣರ ಬಲ, ನ್ಯಾಯಾಲಯದಲ್ಲೇ ಅನ್ಯಾಯ! ಮದುವೆಯಲ್ಲಿ ಹೇಳುವ ಅನಿಷ್ಟ ಮಂತ್ರಗಳು, ಸಪ್ತಪದಿ ಎಂದರೇನು?, ವಿವಾಹ ಒಂದು ಮಾದರಿ, ಸರಳ ಮದುವೆಯ ಸೂತ್ರಗಳು, ಪಂಚಾಂಗ ಕೇಳಬೇಡಿ, ಎಚ್ಚರ! ಮಾದರಿ ಸಾಮಾಜಿಕ ಮದುವೆ ಮುಂತಾದ 18 ವಿಚಾರಪೂರಿತ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
     ಪ್ರತಿಯೊಂದು ಲೇಖನದ ಹಿಂದೆ ಲೇಖಕರ ಪರಿಶ್ರಮ, ಅವರು ನೀಡುವ ಅಡಿಟಿಪ್ಪಣಿಗಳು, ಮೂಲಗಳು, ಸಾಕ್ಷ್ಯಗಳು ಓದುಗನನ್ನು ದಿಗ್ಬ್ರಮೆಗೊಳಿಸುತ್ತವೆ.
     ತನು, ಮನ ಚಿಂತನೆಗಳಲ್ಲಿ ಬುದ್ದ, ಬಸವ, ಪುಲೆ, ವಿವೇಕಾನಂದರನ್ನು ಆವಿರ್ಭವಿಸಿಕೊಂಡು ವೈಚಾರಿಕ ನೆಲೆಗಟ್ಟಿನಲ್ಲಿ ವಿವೇಚಿಸಿ, ಚಿಂತಿಸಿ, ಮಂಥಿಸಿ ಈ ಅಮೂಲ್ಯ ಕೃತಿಯನ್ನು ಹೊರತಂದಾಗ ಅನೇಕ ಪುರೋಹಿತಶಾಹಿಗಳಿಗೆ ಪ್ರೊ. ಕೆ. ಎಸ್ ಭಗವಾನರು ಒಬ್ಬ, ಧರ್ಮವಿರೋಧಿಯಾಗಿ, ಬಂಡಾಯಗಾರನಾಗಿ ಕಂಡುದುದೇ ಅಧಿಕ, ಆದರೆ ಅವರೊಳಗಿನ ಸರ್ವಸಮಾನತೆಯ ಮಾನವೀಯ ತುಮುಲಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದದ್ದು ಮಾತ್ರ ದುರಂತ.
     ಇಷ್ಟು ವರ್ಷಗಳುದ್ದಕ್ಕೂ ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ, ಶೋಷಣೆ ದಿಕ್ಕುತಪ್ಪಿದ ಅಲೆದಾಟ, ಹಸಿವು, ಹಾಹಾಕಾರ ಇವುಗಳಡಿಯಲ್ಲೇ ಹೇಗೆ ತೊಳಲಾಡಿದೆವು. ಹೀಗಿರಲು ಮೇಲ್ವರ್ಗದಿಂದಾದ ಸಂಚುಕಾರಗಳೇನೆಂಬುದನ್ನು ಲೇಖಕರು ಮನಮುಟ್ಟುವಂತೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅಥರ್ವಣವೇದ 12.4.2 ರಲ್ಲಿ ಹೇಳಿರುವಂತೆ “ಪರಮ ಋಷಿಯಾದ ಪರಮಾತ್ಮನ ಮಕ್ಕಳಾದ ಮಾನವರು ಜ್ಞಾನ ಭಿಕ್ಷೆ ಬೇಡುವಾಗ ಅವರಿಗೆ ವೇದವಾಣಿಯನ್ನು ಕೊಡಲು ಯವಾತ ಅಪೇಕ್ಷಿಸುವುದಿಲ್ಲವೋ ಅವನು ಮಕ್ಕಳು ಮರಿಗಳೊಂದಿಗೆ ಪತಿತನಾಗುತ್ತಾನೆ, ಸಕಲ ಭೋಗಭಾಗ್ಯಗಳನ್ನು ಕಳೆದುಕೊಳ್ಳುತ್ತಾನೆ”. ಹೀಗೆ ಮೂಲವೇದಗಳು ಸಾವ್ರರ್ತಿಕವಾಗಿ ಬೆಳಕು ಚೆಲ್ಲಿದರೆ.. ನಂತರದಲ್ಲಿ ಅವು ಹೇಗೆ ತಿರುಚಿಸಲ್ಪಟ್ಟವು ಎಂಬುದನ್ನು ಲೇಖಕರು ಮಾರ್ಮಿಕವಾಗಿ ವಿವರಿಸಿದ್ದಾರೆ.
       ಕೃತಿಯ 20ನೆಯ ಪುಟದಲ್ಲಿ ಲೇಖಕರೇ ಈ ರೀತಿ ಹೇಳುತ್ತಾರೆ-‘ಅದ್ವೈತಿಯಾದ ಶಂಕರಾಚಾರ್ಯ ಶೂದ್ರರಿಗೆ ವೇದಾಧ್ಯಯನಕ್ಕೆ ಅಧಿಕಾರವಿಲ್ಲ ಎಂದು ತನ್ನ ಹೊಲಸು ಬುದ್ಧಿಯನ್ನೆಲ್ಲ ಖರ್ಚು ಮಾಡಿ ವಾದಿಸಿದ್ದಾನೆ! ಸನ್ಯಾಸಿಯಾದ ತನಗೆ ಯಾವ ನಷ್ಟವೂ ಆಗುವುದಿಲ್ಲವೆಂದು ತಿಳಿದು ಶಂಕರ ಧೂರ್ತನಾಗಿ ಈ ಮಾತನ್ನು ದಿಕ್ಕರಿಸಿರಬೇಕು. ಅವನು ವೇದ ಪ್ರಾಮಾಣ್ಯವನ್ನು ತಿರಸ್ಕರಿಸಿದ ವೇದ ವಿರೋಧಿ! ಆದರೆ ಅಂಥವರನ್ನೇಕೆ ಬ್ರಾಹ್ಮಣಧರ್ಮ ಖಂಡಿಸಲಿಲ್ಲ ಎಂದರೆ ಅವನು ಬ್ರಾಹ್ಮಣರ ಸರ್ವ ಸಾಮ್ಯತೆಗಾಗಿ ಹೋರಾಡಿದ್ದರಿಂದ, ಇಷ್ಟೇ ಅಲ್ಲದೇ ಅವನು ‘ಭಾವದಲ್ಲಿ ಅದ್ವೈತವಿರಬೇಕು. ಕ್ರಿಯೆಯಲ್ಲಿ ಅಲ್ಲ’ ಎಂದು ಹೇಳಿರುವುದು ಘೋರ ಪಾತಕವಾಗಿದೆ. ನಿಜವಾಗಿ ಸಂತನಾದ ಆಚಾರ್ಯ ಈ ರೀತಿ ಬೇಧಭಾವ ಎಣಿಸುವುದಿಲ್ಲ. ಸ್ಮøತಿಗಿಂತ ಶ್ರುತಿ ಶ್ರೇಷ್ಠ ಎಂಬುದನ್ನು ಅವನು ಬೇಕೆಂದೇ ಮರೆಮಾಚಿ ಬೌದ್ದಿಕ ಅಪ್ರಾಮಾಣಿಕತೆಯನ್ನು ಮೆರೆದಿದ್ದಾನೆ. ಅವನು ಶ್ರುತಿಯನ್ನು ಬೆಂಬಲಿಸುವುದಕ್ಕೆ ಬದಲಾಗಿ ಸ್ಮøತಿಯನ್ನು ಬೆಂಬಲಿಸುವುದು ನಿಜಕ್ಕೂ ದುರಂತಕಾರಿ. ಶೂದ್ರರು ವಿದ್ಯಾವಂತರಾದರೆ ತಮಗೆ ದುಡಿದು ಅನ್ನ ಹಾಕುವವರಿಲ್ಲದೆ, ಅಡ್ಡ ಪಲ್ಲಕ್ಕಿ ಹೊತ್ತು ತಮ್ಮ ಸೇವೆ ಮಾಡುವವರು ಸಿಗದೆ ಹೊಗುತ್ತಾರೆಂಬ ಭಾರೀ ದಿಗಿಲಿನಿಂದ ಸ್ವಾರ್ಥಪರವಾದ ಪಟ್ಟಭದ್ರ ಹಿತಾಸಕ್ತಿಯಿಂದ ಶೂದ್ರರಿಗೆ ವಿದ್ಯಾದಾನ ಮಾಡಲು ಅವನು ಇಷ್ಟ ಪಡಲಿಲ್ಲ. ಹಾಗೂ ತಾನು ಸನ್ಯಾಸಿಯಾದುದರಿಂದ ತನ್ನ ವಂಶ ಎಕ್ಹುಟ್ಟಿ ಹೋಗುವುದಿಲ್ಲವೆಂದೂ ಅವನು ಭಾವಿಸಿರಬೇಕು!”
     ತಮ್ಮ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಇತಿಹಾಸ ತಿರುಚಿದವರೆಷ್ಟೋ ಭ್ರಷ್ಟ ಸಂತರು, ಆಚಾರ್ಯರು, ಸಾಹಿತಿಗಳು ಇದ್ದಾರೆ. ಇವುಗಳೆಲ್ಲವನ್ನವಲೋಕಿಸಿದ ಡಾ. ಬಾಬಾ ಸಾಹೆಬ್ ಅಂಬೇಡ್ಕರರು ತಮ್ಮ ‘ಬರಹಗಳು ಮತ್ತು ಭಾಷಣಗಳು’ ಮೂರನೇ ಸಂಪುಟದ ಪುಟ ಸಂಖ್ಯೆ 151 ರಲ್ಲಿ ಈ ರೀತಿ ಹೇಳಿದ್ದಾರೆ-“ಭಾರತದ ಪ್ರಾಚೀನ ಇತಿಹಾಸದ ಬಹುಭಾಗವು ಇತಿಹಾಸವೇ ಅಲ್ಲ. ಇದರ ಅರ್ಥ ಪ್ರಾಚೀನ ಭಾರತಕ್ಕೆ ಇತಿಹಾಸವಿಲ್ಲ ಎಂಬುದಲ್ಲ. ಬ್ರಾಹ್ಮಣ ಲೇಖಕರು ಉದ್ದೇಶಪೂರ್ವಕವಾಗಿಯೇ ಪ್ರಾಚೀನ ಭಾರತದ ಇತಿಹಾಸವನ್ನು ವಿರೂಪಗೊಳಿಸಿ, ಅದನ್ನು ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವ ಪುರಾಣ ಕಥೆಗಳನ್ನಾಗಿ ಮಾಡಿದ್ದಾರೆ.
     ಮೂಲ ವೇದವನ್ನು ತಿರುಚಿ ಬಂದ ‘ಮನುಸ್ಮøತಿ’ಯು ಬ್ರಾಹ್ಮಣರಿಗೆ ವಿದ್ಯೆ, ಆಸ್ತಿ ಮತ್ತು ಅಧಿಕಾರಿಗಳ ಮೇಲೆ ನೂರಕ್ಕೆ ನೂರರಷ್ಟು ಮಿಸಲಾತಿಯನ್ನು ನೀಡಿತು. ಶೂದ್ರರಿಗೆ ವಿದ್ಯೆ, ಆಸ್ತಿ ಮತ್ತು ಅಧಿಕಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಮಾತ್ರ ಮಹಾಜಾತಿವಾದಿ ಕೃತಿಯಾಗಿ ಹೊರಹೊಮ್ಮುತ್ತದೆ.
ಶೂದ್ರನಿಗೆ ವಿದ್ಯೆಯನ್ನು ಅರ್ಜಿಸಬಾರದು ಎಂಬ ಕಟ್ಟಳೆ ಮನುಸ್ಮøತಿಯಲ್ಲಿದೆ. ವೇದವನ್ನು ನೆನಪಿಟ್ಟುಕೊಳ್ಳಲು ಶೂದ್ರನು ಕೇಳಿದ್ದೇ ಆದರೆ ಅವನ ಕಿವಿಗಳಿಗೆ ಸೀಸವನ್ನು, ಅರಗನ್ನು ಕರಗಿಸಿ ಹುಯ್ಯಬೇಕು. ಅವನು ವೇದವನ್ನು ಉಚ್ಛರಿಸಿದರೆ ಅವನ ನಾಲಿಗೆಯನ್ನು ಕತ್ತರಿಸಬೇಕು.
      ಶೂದ್ರನು ಸೇವೆಯಲ್ಲದೇ ಬೇರೆ ಏನನ್ನೂ ಮಾಡಕೂಡದು. ದೇವರು ಶೂದ್ರನಿಗೆ ವಹಿಸಿದ ಒಂದೇ ಕರ್ತವ್ಯವೆಂದರೆ, ಅತ್ಯಂತ ವಿನಯದಿಂದ ಇತರ ಮೂರು ವರ್ಣಗಳಿಗೆ ಸೇವೆ ಮಾಡುವುದು. ಶೂದ್ರನು ಸೇವೆ ಮಾಡಲು ತಿರಸ್ಕರಿಸಿದರೆ ಅವನನ್ನು ಬಲಾತ್ಕರಿಸಬೇಕೆಂದು ಮನುಸ್ಮøತಿ ಕಟ್ಟಾಜ್ಞೆ ಮಾಡಿದೆ. ಬ್ರಾಹ್ಮಣನು ಅವಿದ್ಯಾವಂತನಾಗಿದ್ದರೂ ಅವನು ಇಷ್ಟಪಟ್ಟರೆ ನ್ಯಾಯಾಧಿಪತಿಯೂ ಆಗಬಹುದೆಂದು ಸ್ವಘೋಷಿತ ನಿಯಮಾವಳಿಗಳು ಜಾರಿಯಾದವು”.
      ಪ್ರೊ. ಕೆ.ಎಸ್ ಭಗವಾನರು ತಮ್ಮ ಈ ಸಂಶೋಧನಾತ್ಮಕ ವೈಚಾರಿಕ ಕೃತಿಯಲ್ಲಿ ರಾಷ್ಟ್ರಕಂಟಕರೂ, ಸಮಾಜದ್ರೋಹಿಗಳು, ಮಹಾಜಾತಿವಾದಿಗಳೂ ಆದ ಗೌತಮ, ಮನು, ಶಂಕರ, ರಾಮಾನುಜ, ಮಧ್ವ ಮುಂತಾದ ಸ್ಮøತಿಕಾರರ ಅವಿವೇಕದ ಅತಿರೇಕಗಳನ್ನು ಬಿಡಿಸಿಟ್ಟಿದ್ದಾರೆ. ಶಂಕರರ ಉದ್ದಟತನವನ್ನು ‘ಬ್ರಹ್ಮ ಸೂತ್ರ ಭಾಷ್ಯ’ ದಲ್ಲಿರುವ ಮಾನವ ವಿರೋಧಿ ಸಂಹಿತೆ ಸೂತ್ರಗಳನ್ನು ವಿಶ್ಲೇಷಿಸಿದ್ದಾರೆ.
      ಲೇಖಕರೇ ಪು.ಸಂ. 23, 24 ರಲ್ಲಿ ಉಲ್ಲೇಖಿಸಿರುವಂತೆ “ಶೂದ್ರರಿಗೆ ಜ್ಞಾನ ಪಡೆಯಲು ಹಕ್ಕಿಲ್ಲವೆಂದು ವಾದಿಸಿರುವುದು ಅವನ ಅದ್ವೈತ ತತ್ವಕ್ಕೆ ವಿರುದ್ದವಾಗಿದೆ. ಆದ್ದರಿಂದ ಅವನು ಬಹಳ ಪೊಳ್ಳು ತತ್ವಜ್ಞಾನಿಯಾಗಿ ಕಾಣಿಸುತ್ತಾನೆ. ಅವನದು ಜನವಿರೋಧಿ ತತ್ವಜ್ಞಾನ. ತನಗೆ ಮಾನವೀಯತೆ ಇಲ್ಲವೆಂಬುದನ್ನು ಅವನೇ ಪ್ರಸ್ಥಾಪಿಸಿದ್ದಾನೆ. ಹಿಂದೂ ಧರ್ಮ ಶಾಸ್ತ್ರವಲ್ಲ. ಒಂದು ದೃಷ್ಟಿಯಲ್ಲಿ, ಕ್ರೂರ ಕೋಮುವಾದ ಮತ್ತು ಉಪಯೋಗವಿಲ್ಲದ ವೇದಾಂತ. ಬ್ರಾಹ್ಮಣ ಧರ್ಮ ದೃಷ್ಟಿಗೋಚರವಾದ ಸಾಮಾಜಿಕ ಅಸಮಾನತೆಯನ್ನು ಆಚರಿಸುತ್ತದೆ; ವೇದಾಂತ ಕಣ್ಣಿಗೆ ಕಾಣದ ಆಧ್ಯಾತ್ಮಿಕ ಸಮಾನತೆಯನ್ನು ನಂಬುತ್ತದೆ. ಬ್ರಾಹ್ಮಣ ಧರ್ಮ ಜಾತಿ ಪಾರಮ್ಯವನ್ನು ಹೇಳಿದರೆ ವೇದಾಂತ ದರ್ಶನ ಅಹಂಕಾರ ಮರ್ದನವನ್ನು ತಿಳಿಸುತ್ತದೆ. ಜಾತಿ ವ್ಯವಸ್ಥೆ ಎಂದರೆ ಗುಲಾಮಗಿರಿ. ಇಂಥ ಗುಲಾಮಗಿರಿಯನ್ನು ಒಂದು ಪ್ರತ್ಯಕ್ಷವಾಗಿ ವಿಧಿಸಿದರೆ, ಇನ್ನೊಂದು ಪರೋಕ್ಷವಾಗಿ ಬೋಧಿಸುತ್ತದೆ, ಒಟ್ಟಿನಲ್ಲಿ ಎರಡೂ ಸಾಮಾಜಿಕವಾಗಿ ವ್ಯಕ್ತಿಯನ್ನು ದಮನ ಮಾಡುವ ಸಾಧನಗಳಾಗಿವೆ.”
      ಈ ಜಾತಿ ಶೋಷಣೆ ಇಂದು ನಿನ್ನೆಯದಲ್ಲ. ಸನಾತನವಾಗಿ ಬಂದ ಕ್ರೂರ ಪರಂಪರೆ! ಆರ್ಯರ ದುರಾಡಳಿತದಿಂದಾಗಿ ನೀತಿಗೆಟ್ಟು, ಮತಿಗೆಟ್ಟಿದ್ದ ಸಮಾಜಕ್ಕೆ ಚಿಕಿತ್ಸೆ ನೀಡಲು ಒಳಗಿನಿಂದ ಗೌತಮಬುದ್ದ ಉದಿಸಿದನು. ಮನುಷ್ಯ-ಮನುಷ್ಯರ ನಡುವೆ ಭೇದವನ್ನು ಸೃಷ್ಟಿ ಮಾಡಿ, ಅನೀತಿ ಅಧರ್ಮ, ಮೂಢ ನಂಬಿಕೆ, ಯಜ್ಞ-ಯಾಗಾದಿಗಳನ್ನೊಳಗೊಂಡ ಆರ್ಯರ ವೈದಿಕ ವ್ಯವಸ್ಥೆಯ ವಿರುದ್ದ ಪ್ರಥಮ ಬಾರಿಗೆ ಕ್ರಿ.ಪೂ 500 ರಲ್ಲಿ ಗೌತಮ ಬುದ್ಧ ಬಂಡಾಯ ಹೂಡಿದರು.
      “ವೈದಿಕ ವ್ಯವಸ್ಥೆಯ ಶೋಷಣೆಯ ಮಾರ್ಗವಾದ ದೇವರು, ಆತ್ಮ, ಪುರೋಹಿತರನ್ನು ದಿಕ್ಕರಿಸಿ” ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ಬ್ರಾಹ್ಮಣ ಶಾಹಿ ಸಾಮಾಜಿಕ ವ್ಯವಸ್ಥೆಗೆ ಸಿಲುಕಿ ಜರ್ಜರಿತವಾಗಿದ್ದ ಜನತೆ, ಆರ್ಯರ ಅನೀತಿಯುತ ವ್ಯವಸ್ಥೆಯನ್ನು ಸಾರಾಸಗಟವಾಗಿ ತಿರಸ್ಕರಿಸಿ, ಬೌದ್ದ ಧರ್ಮದ ಅನುಯಾಯಿಗಳಾಗಿ ನೆಮ್ಮದಿ ಹಾಗೂ ಸಂತಸದ ಬದುಕನ್ನು ಕಂಡುಕೊಂಡರು. ಈ ಬೌದ್ದ ಕ್ರಾಂತಿಯ ಪರಿಣಾಮವಾಗಿ ಬ್ರಾಹ್ಮಣಶಾಹಿ ವ್ಯವಸ್ಥೆಯು ಬುಡಮೇಲಾಯಿತು. ಮೌರ್ಯರ ಆಳ್ವಿಕೆಯಲ್ಲಿನ ಯಜ್ಞ-ಯಾಗಗಳ ನಿಷೇಧದಿಂದಾಗಿ ಅದನ್ನೇ ಕಸುಬಾಗಿಸಿಕೊಂಡಿದ್ದ ಬ್ರಾಹ್ಮಣರು ದಿವಾಳಿತನದತ್ತ ಸಾಗಿದರು. ತದನಂತರ ಪುನಃ ತಮ್ಮ ಅಸ್ತಿತ್ವ ಕಂಡುಕೊಳ್ಳುವಲ್ಲಿ ಚಾಣಾಕ್ಷ ಬುದ್ದಿಯನ್ನುಪಯೋಗಿಸಿಕೊಂಡು ಸಫಲರಾಗಿ 6,7,8 ನೆಯ ಶತಮಾನದ ಹೊತ್ತಿಗೆ ಮತ್ತೆ ವಿಜೃಂಭಿಸಿ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವುದನ್ನು ಗಮನಿಸಿದ್ದೇವೆ.
     ಲೇಖಕರು ತಮ್ಮ ಕೃತಿಯ 33 ನೆಯ ಪುಟದಲ್ಲಿ ಪ್ರಾಚ್ಯಶಾಸ್ತ್ರ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಎ.ಎಚ್ ಲಾಂಗ್‍ಹಸ್ಟ್‍ರ ಒಂದು ಸಂಶೋಧನಾ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಇದು ಲೇಖಕರೇ ಹೇಳುವಂತೆ ಶಂಕರಾಚಾರ್ಯರ ಗುಂಡಾಗಿರಿ ವರ್ತನೆಯನ್ನು ಸಾಬೀತುಪಡಿಸುತ್ತದೆ. ಆ ಹೇಳಿಕೆ ಈ ಕೆಳಗಿನಂತಿದೆ-“ನಾಗಾರ್ಜುನಕೊಂಡದಲ್ಲಿ ಎಲ್ಲಾ ಕಟ್ಟಡಗಳೂ ಕ್ರೂರ ರೀತಿಯಲ್ಲಿ ಧ್ವಂಸವಾಗಿರುವುದನ್ನು ನೋಡಿದರೆ ಎದೆ ನಡುಗುತ್ತದೆ. ಅದು ಕೇವಲ ನಿಧಿ ಅನ್ವೇಷಕರ ಕೆಲಸವೆಂದು ಹೇಳುವಂತಿಲ್ಲ; ಏಕೆಂದರೆ ಬಹುಪಾಲು ಸ್ತಂಭಗಳು, ವಿಗ್ರಹಗಳು ಮತ್ತು ಶಿಲ್ಪಿಗಳನ್ನು ಮನಸೇಚ್ಛೆ ಒಡೆದು ಚೂರು ಚೂರು ಮಾಡಿದ್ದಾರೆ. ಅಮರಾವತಿಯಲ್ಲಿ ಇರುವಂತೆ ಅದರ ಸನಿಹದಲ್ಲಿ ಪಟ್ಟಣ ಇದ್ದಿದ್ದರೆ ಆಧುನಿಕ ನಿರ್ಮಾಪಕರು ಈ ಜಾಗವನ್ನು, ಭಾರತದಲ್ಲಿ ಬಹುತೇಕ ಆಗಿರುವಂತೆ, ಲೂಟಿ ಮಾಡಿದ್ದರೆಂದು ಭಾವಿಸಬಹುದಿತ್ತು. ಆದರೆ ಇದು ನಾಗಾರ್ಜುನಕೊಂಡದಲ್ಲಿ ಎಂದೂ ನಡೆಯಲಿಲ್ಲ; ಏಕೆಂದರೆ, ಅದರ ಆಜುಬಾಜಿನಲ್ಲಿ ಯಾವ ಪಟ್ಟಣಗಳಿಲ್ಲ. ಆ ಕಣಿವೆಯೊಳಕ್ಕೆ  ಹೋಗಿ ಬರಲು ಗಾಡಿ ದಾರಿಗಳಿರಲಿಲ್ಲ. ಮಧ್ಯಯುಗದ ಮಹಾ ಹಿಂದೂ ತತ್ವಜ್ಞಾನಿ ಗುರು ಶಂಕರಾಚಾರ್ಯ ತನ್ನ ಹಿಂಬಾಲಕರ ಹಿಂಡಿನೊಡನೆ ಬಂದು ಬೌದ್ಧ ಸ್ಮಾರಕಗಳನ್ನು ನಾಶಪಡಿಸಿದನೆಂದು ಸ್ಥಳೀಯ ಐಹಿತ್ಯ ಹೇಳುತ್ತದೆ. ಇದು ಹಾಗಿರಲಿ; ಹಾಳಾದ ಕಟ್ಟಡಗಳಿರುವ ಈ ಕಣಿವೆಯ ಸಾಗುವಳಿ ಜಮೀನನ್ನು ಶಂಕರಾಚಾರ್ಯನಿಗೆ ಉಂಬಳಿಯಾಗಿ ಕೊಟ್ಟ ವಾಸ್ತವ ಸಂಗತಿ ಇಂದಿಗೂ ಉಳಿದಿದೆ. ಆ ಮಹಾ ಗುರುವಿನ ಅನುಯಾಯಿಗಳ ಧಾರ್ಮಿಕ ಮುಖಂಡನ ಅನುಮತಿಯಿಂದ ನಾನು ಇಲ್ಲಿ ಭೂಶೋಧನೆಗಳನ್ನು ಮಾಡಲು ಸಾಧ್ಯವಾಯಿತು. ಗುಂಟೂರು ಜಿಲ್ಲೆ ಪುಷ್ಪಗಿರಿಯಲ್ಲಿ ವಾಸಿಸುವ ಬ್ರಾಹ್ಮಣ ಜಗದ್ಗುರು ನಲ್ಲಮಲೈನಲ್ಲಿರುವ ಶ್ರೀಶೈಲಂ ದೇವಾಲಯದ ವಾರಸುದಾರನಾಗಿದ್ದಾನೆ. ಮೂಲತಃ ಒಂದು ಬೌದ್ಧ ತಾಣವಾಗಿದ್ದಂತೆ ಕಾಣುವ ಈ ದೇವಸ್ಥಾನವನ್ನು ಅದೇ ರೀತಿಯಲ್ಲಿ ನಿಸ್ಸಂದೇಹವಾಗಿ ವಶಪಡಿಸಿಕೊಳ್ಳಲಾಯಿತು”.
      ಈ ಉಲ್ಲೇಖವನ್ನು ವಿಶ್ಲೇಷಿಸಿ ಮಾಡುವ ಅಗತ್ಯವೇಯಿಲ್ಲ. ತಮಗಿಂತ ಯಾರೇ ಪ್ರಬಲರಾದರೂ ಅವರನ್ನೂ ಹೇಗೆ ದಮನಿಸಬೇಕೆಂದು ಪುರೋಹಿತ ಕೊಳಕು ಮನಸ್ಸುಗಳು ಸದಾ ಸಂಚಿನ ಗುಂಗಿನಲ್ಲೇ ತೇಲಾಡಿ ಅದ್ಯಾವುದೇ ಮಾರ್ಗವಾದರೂ ಸರಿ ಸಾಧಿಸಿಬಿಡುತ್ತವೆಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿ ನಿಲ್ಲುತ್ತದೆ. ಇಂತಹ ಅದೆಷ್ಟೋ ಸಾಕ್ಷಾಧಾರಗಳನ್ನು ಪ್ರೊ. ಕೆ.ಎಸ್ ಭಗವಾನ್ ಅವರು ಈ ಕೃತಿಯಲ್ಲಿ ನೀಡಿದ್ದಾರೆ.
ಇದರಲ್ಲಿ ಬರುವ ಮೂರನೆಯ ಅಧ್ಯಾಯ ‘ಶಂಕರಾಚಾರ್ಯನ ಬಗ್ಗೆ ವಿವೇಕಾನಂದರ ಟೀಕೆ’. ಸ್ವಾಮಿ ವಿವೇಕಾನಂದ ದಿವ್ಯ ವಾಣಿ ಕುರಿತು ರಾಷ್ಟ್ರ ಕವಿ ಕುವೆಂಪುರವರು ಹೀಗೆ ಹೇಳಿದ್ದಾರೆ. “.. ಅದು ಒಂದು ವ್ಯಕ್ತಿಯ ವಾಣಿಯಲ್ಲ; ಒಂದು ಕಣ್ಣಿನ ಕಾಂತಿಯಲ್ಲ. ಅನೇಕ ಮಹಾಪುರುಷರ ಜೀವಜ್ಯೋತಿಗಳ ಸೂತ್ರ ಸಮಷ್ಟಿಯಾಗಿದೆ; ಬಹುಜೀವನಗಳ ದರ್ಶನಗಳ ಗೋಷ್ಠಿಯಾಗಿದೆ. ಅದರಲ್ಲಿ ಪ್ರಾಚ್ಯ, ಪಾಶ್ಚಾತ್ಯ, ಹಿಂದೂ, ಕ್ರೈಸ್ತ, ಇಸ್ಲಾಂ, ಬೌದ್ಧ, ಮತ, ತತ್ತ್ವ, ವಿಜ್ಞಾನ, ಕಲಾ, ಇಹ, ಪರ, ದೇಹ, ಆತ್ಮ, ನೂತನ, ಪುರಾತನ ಎಲ್ಲವೂ ಸಮನ್ವಯಗೊಂಡಿದೆ. ಅದು ಯಾವುದೊಂದು ಮತಕ್ಕಾಗಲಿ, ಪಥಕ್ಕಾಗಲಿ ಸೇರಿಲ್ಲ. ಅದು ಒಂದು ಜನಾಂಗದ್ದಲ್ಲ; ಸರ್ವಕಾಲ ದೇಶಗತವಾದುದು.
ಆ ದಿವ್ಯದರ್ಶನದ ಕಾಮನಬಿಲ್ಲಿನಲ್ಲಿ ಉಪನಿಷತ್ತುಗಳಂತೆಯೆ ಯವನ ದಾರ್ಶನಿಕರ ತತ್ತ್ವಜ್ಞಾನವೂ ಒಂದು ಬಣ್ಣವಾಗಿ ಸೇರಿ ರಂಜಿಸುತ್ತಿದೆ. ವೇದದಂತೆಯೆ ಬೈಬಲ್ಲೂ, ಪ್ರಾಚೀನ ಶ್ರದ್ಧೆಯಂತೆಯೆ ಅರ್ವಾಚೀನ ವಿಜ್ಞಾನ ಬುದ್ಧಿಯೂ, ಅದರ ಮನೋಹರತೆಗಳಿಗೆ ಅಂಗಗಳಾಗಿವೆ. ರಾಮಮೋಹನರಾಯ ಮತ್ತು ಕೇಶವಚಂದ್ರಸೇನರ ವ್ಯಕ್ತಿತ್ತ್ವಗಳಂತೆಯೆ ನಾರಾಯಣ ಗುರು ಮತ್ತು ದಯಾನಂದ ಸರಸ್ವತಿಯರ ವ್ಯಕ್ತಿತ್ತ್ವಗಳೂ ವರ್ಣಜಾಲದಲ್ಲಿ ಹಾಸು ಹೊಕ್ಕಾಗಿವೆ. ನ್ಯೂಟನ್, ಡಾರ್ವಿನ್, ಫ್ರಾಯ್ಡ್, ಐನ್‍ಸ್ಟೈನರುಗಳಂತೆಯೆ ಲೆನಿನ್, ಗಾಂಧಿ, ಟಾಲ್ ಸ್ಟಾಯ್, ಠಾಕೂರರೂ ಅಲ್ಲಿ ಮನೆ ಮಾಡಿದ್ದಾರೆ. ಆ ದರ್ಶನ ನಿರಂಕುಶ ಮತಿಗಳನ್ನು ಸರ್ವದಾ ಆಹ್ವಾನಿಸುತ್ತದೆ. ದಾಸ್ಯ ಬುದ್ಧಿಯಿಂದ ಪಾರಾಗುವ ಮುಕ್ತ ಮತಿಗಳಿಗೆ ಅಲ್ಲಿ ಮಹಾಲಿಂಗನ ಸೌಖ್ಯವಿದೆ. ಅದು ಸ್ವತಂತ್ರಮತಿಗಳ ಧೀರ ಸಾಮ್ರಾಜ್ಯ. ಅಲ್ಲಿ ಸಾಕ್ಷಾತ್ಕಾರವಲ್ಲದೆ ಬಲತ್ಕಾರವಿಲ್ಲ. ಅಲ್ಲಿಯ ಹಾದಿ ಬುದ್ಧಿ; ಅಲ್ಲಿಯ ಗುರಿ ಸಿದ್ಧಿ”
- [ ಸ್ವಾಮಿ ವಿವೇಕಾನಂದ-ಕುವೆಂಪು; ಪು.ಸಂ.243-244]
ಈ ರೀತಿ ಮಹಾನವಮಿಯ ಮೌಲ್ಯಗಳ ಆಗರವಾಗಿರುವ ವಿವೇಕಾನಂದರು ಧರ್ಮಗುರುವೆಂದು ಬಿಂಬಿತವಾಗಿದ್ದ ಶಂಕರಾಚಾರ್ಯರ ತತ್ತ್ವಗಳನ್ನು ದಿಕ್ಕರಿಸಿದ್ದು ಮಾತ್ರ ದಿಗ್ಭ್ರಮೆಯುಂಟುಮಾಡಿದರೂ ಆಶ್ಚರ್ಯವಿಲ್ಲ. ಕುಶಲಮತಿಯಾದ ವಿವೇಕಾನಂದರು ಕಪಟಮತಿಯಾದ ಶಂಕರಾಚಾರ್ಯರ ತತ್ತ್ವಗಳ ಅಧ್ಯಾಯನಗೈದು, ಮಾನವ ವಿರೋಧಿ ನೀತಿಗಳನ್ನು ಹೇಗೆ ಎತ್ತಿ ಹಿಡಿದರೆಂಬುದನ್ನು ಫ್ರೊ.ಕೆ.ಎಸ್.ಭಗವಾನರು ಸಾಕ್ಷಾಧಾರಗಳ ಮೂಲಕ ತೆರೆದಿಟ್ಟಿದ್ದಾರೆ.
ಲೇಖಕರೇ ತಮ್ಮ ಕೃತಿಯ ಪು.ಸಂ.51 ಮತ್ತು 52 ರಲ್ಲಿ ಉಲ್ಲೇಖಿಸಿದಂತೆ-“ಶಂಕರನಿಗೆ ಕ್ಷೌರದ ಕತ್ತಿಯಂತಹ ನಿಶಿತಮತಿಯಿತ್ತು. ಅವನು ಒಳ್ಳೆಯ ವಾದಪಟು ಮತ್ತು ವದ್ವಾಂಸ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವನಿಗೆ ಔದಾರ್ಯವಿರಲಿಲ್ಲ; ಅವನ ಹೃದಯವೂ ಹಾಗೆಯೇ ಇದ್ದಂತೆ ಕಾಣುತ್ತದೆ. ಜೊತೆಗೆ ಅವನು ತನ್ನ ಬ್ರಾಹ್ಮಣ್ಯದ ಬಗ್ಗೆ ಭಾರಿ ಹೆಮ್ಮೆ ಪಡುತ್ತಿದ್ದನು. ದಕ್ಷಿಣ ಭಾರತದ ಪುರೋಹಿತವರ್ಗದ ಹಾರುವನ ಹಾಗೆ ತುಂಬಾ ಗರ್ವ ಪಡುತ್ತಿದ್ದನು”.-[ ಒಔಓIಇಖ WIಐಐIಂಒS : ಊIಓಆUSIಒ, P-96 ]
ಮುಂದುವರೆದು... “ಬ್ರಾಹ್ಮಣೇತರ ಜಾತಿಯವರಿಗೆ ಬ್ರಹ್ಮಜ್ಞಾನ ಸಿದ್ದಿಸುವುದಿಲ್ಲ ಎಂದು “ವೇದಾಂತ ಸೂತ್ರಗಳ ಭಾಷ್ಯ”ದಲ್ಲಿ ಹೇಗೆ ಸಮರ್ಥಿಸಿಬಿಟ್ಟಿದ್ದಾನೆ! ಎಂಥ ಡಾಂಭಿಕ ವಾದಸರಣಿ! ಹಿಂದಿನ ಜನ್ಮದಲ್ಲಿ ವಿದುರ ಬ್ರಾಹ್ಮಣ ದೇಹವನ್ನು ಧರಿಸಿದ್ದರಿಂದ ಅವನಿಗೆ ಬ್ರಹ್ಮಜ್ಞಾನ ಸಿದ್ದಿಸಿದರೆ, ಅವನು ಹಿಂದೆ ಹಾರುವನಾಗಿ ಹುಟ್ಟಿದ್ದರಿಂದ ಬ್ರಹ್ಮಜ್ಞಾನ ಸಿದ್ದಿಸಿತೆಂಬ ನಿಮ್ಮ ಶಂಕರನವಾದವನ್ನು ನಾವು ಒಪ್ಪಬೇಕಲ್ಲವೇ? ತ್ರೈವರ್ಣಿಕರಲ್ಲಿ ಪ್ರತಿಯೊಬ್ಬನಿಗೂ ವೇದಾಧ್ಯಯನ ಮತ್ತು ಬ್ರಹ್ಮ ಸಾಕ್ಷಾತ್ಕಾರದ ಹಕ್ಕುಂಟು ಎಂದು ವೇದಗಳೇ ಹೇಳುವುದಿಲ್ಲವೇ? ಆದ್ದರಿಂದ ವೇದಕ್ಕೆ ವಿರುದ್ದವಾದ ಈ ವಿಷಯದ ಬಗ್ಗೆ ಶಂಕರ ತನ್ನ ಪಾಂಡಿತ್ಯದ ಒಂದು ವಿಚಿತ್ರ ತುಣುಕನ್ನು ಪ್ರದರ್ಶಿಸುವ ಅಗತ್ಯವೇ ಇರಲಿಲ್ಲ. ಆತನ ಹೃದಯ ಎಂಥಾದ್ದು ಎಂದರೆ ಅಸಂಖ್ಯಾತ ಬೌದ್ಧ ಭಿಕ್ಷುಗಳನ್ನು ಬೆಂಕಿಗೆ ಹಾಕಿ ಸುಟ್ಟುಬಿಟ್ಟನು, ಅವರನ್ನು ವಾದದಲ್ಲಿ ಸೋಲಿಸಿ! ಆ ಬೌದ್ಧರು ಕೂಡ ತಮ್ಮನ್ನೆ ಸುಟ್ಟುಕೊಂಡು ಸಾಯುವಷ್ಟು ಮೂರ್ಖರಾಗಿದ್ದರು, ತಾವು ವಾದದಲ್ಲಿ ಸುಮ್ಮನೆ ಸೋತಿದ್ದರಿಂದ! ಶಂಕರನ ಇಂಥ ಕೆಲಸವನ್ನು ಮತಾಂಧತೆ (ಜಿಚಿಟಿಚಿಣiಛಿism) ಎನ್ನದೇ ಬೇರೇನೆಂದು ಕರೆಯುವುದು?”
sತಿಚಿmi ಗಿiveಞಚಿಟಿಚಿಟಿಜಚಿ: ಣhe ಛಿomಠಿಟeಣe ತಿoಡಿಞs ಸಂ.7 ಪು.116-8
ಲೇಖಕರಾದ ಪ್ರೊ. ಭಗವಾನರು ವಿವೇಕಾನಂದ ಈ ಹೇಳಿಕೆಯನ್ನು ಉದ್ಧರಿಸುವುದರ ಜೊತೆಗೆ ವಿವೇಕಾನಂದರು ಬಳಸಿದ ‘ತ್ರೈವರ್ಣಿಕ’ ಎಂಬ ಶಬ್ದಕ್ಕೆ ಬದಲಾಗಿ ‘ಪ್ರತಿಯೊಂದು ಮಾನವ ಜೀವಿಗೂ ಉಂಟು, ಎಂದು ವಿವೇಕಾನಂದ ಸ್ವಾಮಿಗಳು ಹೇಳಬೇಕಿತ್ತು’ ಎಂದು ವಿವೇಚನೆಯುಕ್ತವಾಗಿ ದಾರ್ಶನಿಕರನ್ನೇ ಪ್ರಶ್ನಿಸಿರುವದು ಲೇಖಕರ ಅಂತಃಪ್ರಜ್ಞೆಯ ದ್ಯೋತಕವಾಗಿದೆ.
ಖ್ಯಾತ ವೈಚಾರಿಕ ಚಿಂತಕರಾದ ಜ.ಹೊ ನಾರಾಯಣ ಸ್ವಾಮಿಯವರು ಒಂದು ಕಡೆ ಹೀಗೆ ಉಲ್ಲೇಖಿಸಿದ್ದಾರೆ- “ನೀಚರು ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲಿ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ನೂರಾರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನು ನೋಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನ ಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ದ ಜನರನ್ನು ಆ ದೇವರೇ ಕಾಪಾಡಬೇಕು”. (‘ಸಂಪ್ರದಾಯದ ನೇಣುಗಂಬ’ –ಜಹೊನಾ ಪು. ಸಂ. 149, 150)
ವೈಚಾರಿಕ ಚಿಂತಕಿಯಾದ ಶ್ರೀಮತಿ ವಿಜಯ ಮಹೇಶ್‍ರವರು ಒಂದು ಕಡೆ ಶಂಕರನ ಸಂಕುಲದ ಮನೋಸ್ಥಿತಿಯ ಬಗ್ಗೆ ಹೀಗೆ ಉಲ್ಲೇಖಿಸಿದ್ದಾರೆ. “ಮಹಾನ್ ಮಾನವತಾವಾದಿ, ಬೌದ್ಧಿಕ ಭಿಕ್ಷು ಶಾಂತಿಧೂತ, ಸಂಗೀತ ಚಕ್ರವರ್ತಿ ಸಾಮ್ರಾಟ್ ರಾವಣಾಸುರನನ್ನು, ಧ್ಯಾನಿ ಬುದ್ದ ಕುಂಭಕರ್ಣನನ್ನು, ರಾವಣನ ಮಗನಾದ (ಇಂದ್ರಜೀತ್) ಅವರುಗಳ ‘ಪ್ರಕೃತಿಗಳನ್ನು ಸುಟ್ಟು ರಾಮಲೀಲಾವೆಂಬ ಅನಾಗರಿಕ, ಅಸಹ್ಯ, ಕೀಳು ಅಭಿರುಚಿಯನ್ನು ಜಗಜ್ಜಾಹಿರು ಮಾಡಿಕೊಂಡು ಕುಣಿದಾಡಿದ ಸನಾತನಿಗಳು ಮತ್ತು ಅವರ ಜೊತೆ ಇತಿಹಾಸದ ಪ್ರಜ್ಞೆಯಿಲ್ಲದ ಹಿಂದೂಗಳ ಇತರೆ ಜಾತಿ ಜನಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ಆಟಗಳನ್ನು ಆಡುತ್ತಾರೋ ಅದು ಬೇರೆಯದೇ ಮಾತು. ಆದರೆ ಹೀಗೆ ಮಾಡುವ ಮೂಲಕ ಈ ಘನಂದಾರಿಗಳು ಅದೆಂತಹ ಸತ್ಯ, ಎಲ್ಲೆಲ್ಲೂ ತುಂಬಿ ತುಳುಕಾಡುವವಂತಹ ಸಮಾಜ ನಿರ್ಮಾಣ ಮಾಡಿದ್ದಾರೋ ಗೊತ್ತಿಲ್ಲ! ಅದ್ಯಾವ ಊರುಗಳಲ್ಲಿ, ರಾಜ್ಯಗಳಲ್ಲಿ ಹೆಂಗಸರ ಮೇಲಿನ ಅತ್ಯಾಚಾರಗಳು ನಿಂತಿದ್ದಾವೋ ಗೊತ್ತಿಲ್ಲ! ಆದರೆ ರಾವಣ, ಕುಂಭಕರ್ಣ, ಇಂದ್ರಜಿತ್‍ರ ಪ್ರಕೃತಿಗಳನ್ನು ವರ್ಷ ವರ್ಷವೂ ಸುಟ್ಟು ಬೂದಿ ಮಾಡಿ ವಿಕೃತಿ ಆನಂದ ಪಡೆಯುವ ತೀಟೆಗಳು ಮಾತ್ರ ನಿಂತಿಲ್ಲ! ದುಷ್ಟ ಶಿಕ್ಷಣೆ ಶಿಷ್ಟರಕ್ಷಣೆ ಎಂದು ಹೇಳಿಕೊಂಡು ತಾವೊಬ್ಬರೆ ಶಿಷ್ಟಾಚಾರದ ಪೇಟೆಂಟ್‍ಗಳನ್ನು ಪಡೆದಿರುವವರು ಎಂದು ಭಾವಿಸಿಕೊಂಡು ರಾವಣ, ಕುಂಭಕರ್ಣ, ಇಂದ್ರಜಿತ್‍ರನ್ನು ಸುಡುವುದೇ ಜಗತ್ತಿನನಲ್ಲಿ ಮಾಡಬಹುದಾದ ಮಾಹಾನ್ ಕಾರ್ಯ ಎನ್ನುವ ಸನಾತಿಗಳು ಇದಕ್ಕಿಂತ ಕಪಟನಾಟಕ ಢೋಂಗಿ ವೇಷಗಳನ್ನು ಹಾಕಲುಂಟೆ? ಆಡಲುಂಟೆ? ಇವರ ಮೂರ್ಖತನಕ್ಕೆ ಮಿತಿ ಬೇಡವೆ? ಅಸಲು ಸೀತಾ ಅಪಹರಣ ಎಂಬುದೇ ಸುಳ್ಳಿನ ಮೂಟೆ ಆಗಿರುವಾಗ ರಾವಣನನ್ನು ಕೊಲ್ಲುವ ಮಾತು ಎಲ್ಲಿಯದು ಅಂತ? ಬಹುಶಃ ರಾವಣನ ಪ್ರಖರ ಪ್ರತಿಭೆ ದಿವ್ಯ ತೇಜಸ್ಸು ರಾಜಗಾಂಭಿರ್ಯ, ಅವನ ಗುಣ ವಿಶೇಷಗಳು ಆರ್ಯರಿಗೆ ತಡೆಯಲು ಅಸಾಧ್ಯವಾದ ಈರ್ಷೆಯನ್ನು ತುಂಬಿಸಿರÀಬೇಕು! ಈ ಕಾರಣಕ್ಕೇನೆ ಇವರಿಗೆ ರಾವಣನನ್ನು ಮರೆಯಲು ಸಾಧ್ಯವಾಗುತ್ತಿಲ್ಲ! ರಾವಣ ಚಕ್ರವರ್ತಿ ಕೇವಲ ತನ್ನ ತುಟಿಯಂಚಿನ ನಗುವಿನಿಂದಲೇ ಇವರನ್ನು ತಿರಸ್ಕರಿಸಿರÀಬೇಕು! ಈ ಅವಮಾನವನ್ನು ತಡೆಲಾಗದೆಯೇ ರಾವಣನನ್ನು ಚಚ್ಚಿ ಹಾಕುವಂತೆಯೇ, ಸುಟ್ಟುಹಾಕುವಂತಲೋ ಒಟ್ಟಿನಲ್ಲಿ ತಮ್ಮ ಇಂದ್ರಿಯಗಳನ್ನು ತಣಿಸಿಕೊಳ್ಳುತ್ತಿರಬೇಕು! ಇಲ್ಲದಿದ್ದರೆ ಇವರುಗಳು ಅದ್ಯಾಕೆ ರಾವಣ, ಕುಂಭಕರ್ಣರನ್ನು ಮರೆಯಲು ಸಾಧ್ಯವಾಗುತ್ತಿಲ್ಲ? ರಾವಣನೊಬ್ಬನೇ ಅಲ್ಲ, ಇತರ ಅಸುರ ಚಕ್ರವರ್ತಿಗಳಾದ ಬಲಿ, ನರಕಾಸುರ, ಮಹಿಷಾಸುರ, ಗಜಾಸುರ, ಮೂಕಾಸುರ, ಹಿರಣ್ಯ ಕಶಿಪು ಮುಂತಾದವರು ಆರ್ಯರಿಗೆ ಸರಿಯಾದ (!) ಪ್ರತಿರೋಧವನ್ನೇ ಒಡ್ಡಿರಬೇಕು! ಆದ್ದರಿಂದಲೇ ಇವರುಗಳು ಅವರನ್ನು ಸಂಹಾರ ಮಾಡಿದ್ದೇವೆಂದು ಹಬ್ಬದೂಟಗಳನ್ನು ಜಡೆಯುತ್ತಿರಬೇಕು! ಸೇಡನ್ನು ತೀರಿಸಿಕೊಳ್ಳುತ್ತಿರುವ ಪರಿಯಿದು! ಆದರೆ ಇಲ್ಲಿ ನನ್ನ ಪ್ರಶ್ನೆ ಏನೆಂದರೆ ಅದ್ಹೇಗೆ ಅಷ್ಟೊಂದು ಸಿಟ್ಟಿನಿಂದ ರೋಷದಿಂದ ರಾವಣನನ್ನು ಸುಟ್ಟು ಬೂದಿ ಮಾಡಿ ತಮ್ಮ ತಮ್ಮ ಮನೆಗಳಿಗೆ ಇಂತಿರುಗುವಷ್ಟರಲ್ಲಿ ಮತ್ತೆ ರಾವಣ, ಕುಂಭಕರ್ಣ, ಇಂದ್ರಜಿತ್‍ರುಗಳು ಹುಟ್ಟಿಬಿಡುತ್ತಾರೆ? ಅಂದಮೇಲೆ ವರ್ಷ ವರ್ಷವೂ ರಾವಣ ಸೀತೆಯನ್ನು ಅಪಹರಿಸುತ್ತಾನೆ! ವರ್ಷ ವರ್ಷವೂ ರಾಮನ ಗ್ಯಾಂಗು ಲಂಕಾದೇಶವನ್ನು ಸುಡುತ್ತದೆ!
(ಬಹುಜನ ವಿಚಾರ ಲಹರಿ ಸಂ- ಡಾ. ಕೃಷ್ಣಮೂರ್ತಿ ಚಮರಂ; ಪು.ಸಂ. 106)…
“... ಉಪನಿಷತ್ತಿನ ಮೇಲೆಯೆ ಬೌದ್ಧ ಧರ್ಮ ಬೆಳೆದಿದೆ; ಶಂಕರನ ತತ್ವಶಾಸ್ತ್ರಕ್ಕೂ ಅದೇ ಮೂಲ, ಬುದ್ದನ ಮಹಾದ್ಬುತ ಅನುಕಂಪ ಹೃದಯದ ತಿಲಾಂಶವೂ ಶಂಕರನಿಗೆ ಇರಲಿಲ್ಲ; ಅವನದು ಬರಿಯ ಬುದ್ದಿಯ ಒಣ ಪಾಂಡಿತ್ಯ. ತಂತ್ರಗಳಿಗೆ ಹೆದರಿ, ಜನ ಸಮುದಾಯಕ್ಕೆ ಹೆದರಿ, ಒಂದು ಕುರವನ್ನು ವಾಸಿ ಮಾಡಲು ಹೋಗಿ ಅದಿದ್ದ ತೋಳನ್ನೆ ಕತ್ತರಿಸಿ ಹಾಕಿದನು. ಅವುಗಳನ್ನೆಲ್ಲ ಬರೆಯಲು ಒಂದು ದೊಡ್ಡ ಪುಸ್ತಕವೆ ಬೇಕಾಗುತ್ತದೆ. ಆದರೆ ಅದನ್ನು ಬರೆಯಲು ಬೇಕಾದ ಪಾಂಡಿತ್ಯವಾಗಲೀ ಸಮಯವಾಗಲೀ ನನಗೆ ಇಲ್ಲ”.
(Sತಿಚಿmi viveಞಚಿಟಿಚಿಟಿಜ: ಣhe ಛಿomಠಿಟeಣe ತಿoಡಿಞs ಸಂ -6, ಪು. 223)
ಪ್ರಸ್ತುತ ಲೇಖನದಲ್ಲಿ ಲೇಖಕರು ವಿವೇಕಾನಂದ ವಿಚಾರಧಾರೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಶಂಕರಾಚಾರ್ಯರನ್ನು ವಿಮರ್ಶಿಸಿದ್ದಾರೆ.
ಇದಕ್ಕೆ ಪೂರಕವಾದ ಇತರೆ ಲೇಖಕರ, ವಿಚಾರವಂತರ ಅಭಿಪ್ರಾಯಗಳನ್ನು ನಾನಿಲ್ಲಿ ಉಲ್ಲೇಖಿಸಿದ್ದೇನೆ.
ಇದರಲ್ಲಿನ ನಾಲ್ಕನೇ ಅಧ್ಯಾಯ ‘ದೋಷಯುಕ್ತ ದೃಷ್ಟಿಕೋನ’ ಇಲ್ಲಿ ಪ್ರೊ. ಕೆ.ಎಸ್.ಭಗವಾನ್‍ರವರ ಲೇಖನಗಳಿಗೆ ಕೆಲ ವಿದ್ವಾಂಸರು ಒಡ್ಡಿದ ಆಕ್ಷೇಪಣೆಗಳಿಗೆ ಸ್ವಾಮಿ ವಿವೇಕಾನಂದರ ಹೆಳಿಕೆಗಳನ್ನೇ ಉಲ್ಲೇಖಿಸುತ್ತಾ ಜವಾಬು ನೀಡಿದ ಪರಿ ಪ್ರಶಂಶನೀಯ. ಇದಕ್ಕೆಲ್ಲ ಕಾರಣವಾದದ್ದು ಇವರು ಬರೆದ ಜಾತಿ, ಭಾಷೆ ಮತ್ತು ಉನ್ನತಿ’ ಎಂಬ ಲೇಖನ.
ಇದಕ್ಕೆ ಪೂರಕವಾದ ಬಾಬಾ ಸಾಹೇಬರ ಒಂದು ಹೇಳಿಕೆ ನೆನಪಿಗೆ ಬರುತ್ತದೆ. “ಇತಿಹಾಸವನ್ನು ಮರೆಯಬೇಡಿ.. ಇತಿಹಾಸವನ್ನು ಮರೆತರೆ ಇತಿಹಾಸವನ್ನು ಸೃಷ್ಟಿಸಲಾಗುವುದಿಲ್ಲ” ಅದರರ್ಥ ಇತಿಹಾಸದೊಳಗೆ ಕಣ್ಣಾಡಿಸಿ.. ಅಲ್ಲೇನೋ ಮಹತ್ಸಂಗತಿ ಅಡಗಿದೆ. ಅಲ್ಲಿ ನನ್ನ ಹೋರಾಟದ ಹೆಜ್ಜೆಗಳಿವೆ.. ಅಲ್ಲಿ ನಮ್ಮ ಪೂರ್ವಿಕರ ಶ್ರಮದ, ತ್ಯಾಗದ, ಬಲಿದಾನದ ನೂರಾರು ಘಟನೆಗಳಿವೆ. ಅವುಗಳಿಂದ ಪಾಠ ಕಲಿಯಿರಿ. ಅದುವೇ ನಿಮ್ಮ ಮುಂದಿನ ಹೆಜ್ಜೆಗೆ ದಾರಿದೀಪ ಎನ್ನುವುದೇ ಆಗಿದೆ. ಯಾವುದೇ ಓರ್ವ ಪ್ರಗತಿಪರನಿಗೆ .. ಸ್ಪಷ್ಟವಾದ ಭೂತ.. ನಿಖರವಾದ ವರ್ತಮಾನ.. ನಿರ್ದಿಷ್ಟ ಭವಿಷ್ಯದ ಗುರಿ ಇರಲೇಬೇಕು. ಹಾಗಿದ್ದಾಗ ಮಾತ್ರ ವ್ಯಕ್ತಿ ಒಂದು ಶಕ್ತಿಯಾಗಲು ಸಾಧ್ಯ”.
ಈ ಬಾಬಾ ಸಾಹೇಬರ ವಾಣಿ ದಮನಿತರಿಗೆ, ಶೋಷಿತರಿಗೆ ಸ್ಪೂರ್ತಿದಾಯಕವಾದರೂ ಬಿಗಿಯಾದ ಜಾತಿ ವ್ಯವಸ್ಥೆ, ರಾಜ್ಯಶಾಹಿ ಅಡ್ಡಿಯಾಗುವುದು ತಪ್ಪುವುದಿಲ್ಲ.
ಲೇಖಕರು ಪ್ರಸ್ತುತ ಲೇಖನದಲ್ಲಿ ಪು.ಸಂ-55ರಲ್ಲಿ ಉಲ್ಲೇಖಿಸಿರುವಂತೆ “ಹಿಂದೂ ಧರ್ಮದಲ್ಲಿ ಸಮಾನತೆಯಿಲ್ಲ, ಅದು ಅಸಮಾನತೆಯ ಮೇಲೆ ನಿಂತಿದೆ. ಜಾತಿ ವ್ಯವಸ್ಥೆಯೇ ಅದರ ತಳಹದಿ. ಈ ವ್ಯವಸ್ಥೆಯಲ್ಲ್ಲಿ ಮನುಷ್ಯನಿಗೆ ಬೆಲೆಯಿಲ್ಲ. ಅವನ ಜಾತಿಯಿಂದ ಅವನ ವ್ಯಕ್ತಿತ್ವ ನಿರ್ಧಾರವಾಗುವ ಪರಿಸ್ಥಿತಿ ಇದೆ”
ಜಾತಿ ಎಂದಾಕ್ಷಣ ಉಚ್ಛ ಕುಲಜರು, ಹೀನ ಕುಲಜರು; ಮಾಂಸಾಹಾರಿ, ಸಸ್ಯಾಹಾರಿಗಳೆಂಬ ಮನೋಧೋರಣೆಗಳು ಸುಳಿದಾಡಿಬಿಡುತ್ತವೆ. ಜಾತಿ ಮತ್ತು ಆಹಾರ ವಿಷಯದಲ್ಲಿ ವಿವೇಕಾನಂದರು ಹೀಗೆ ಹೇಳಿದ್ದಾರೆ.
“ಭಾರತದಲ್ಲಿ ಹಿಂದೆ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನಾಗಿ ಉಳಿಯುತ್ತಿರಲಿಲ್ಲ. ಸನ್ಯಾಸಿ, ರಾಜ, ಮಹಾತ್ಮರು ಮನೆಗೆ ಬಂದರೆ ಗೌರವಾರ್ಥವಾಗಿ ಅತ್ಯುತ್ತಮ ಗೂಳಿಯನ್ನು ಕೊಂದು ಅಡುಗೆ ಮಾಡುತ್ತಿದ್ದರು. ಹಿಂದೂ ಧರ್ಮದಲ್ಲಿರುವ ಎಲ್ಲ ಉಚ್ಚವಾದ ಮತ್ತು ಅತ್ಯಂತ ಶ್ಲಾಘನೀಯವಾದ ಮಹದಾಲೋಚನೆಗಳ ಮೂಲ ಕ್ಷತ್ರಿಯರು. ಉಪನಿಷತ್ತುಗಳನ್ನು ಬರೆದವರು ಕ್ರತ್ರೀಯರು. ರಾಮಯಾರು? ಕೃಷ್ಣಯಾರು? ಬುದ್ಧ ಯಾರು? ಜೈನ ಧರ್ಮದ ತೀರ್ಥಂಕರರು ಯಾರು? ಕ್ಷತ್ರಿಯರು!.”
(ಸಂಪ್ರದಾಯದ ನೇಣುಗಂಬ-ಜಹೊನಾ, ಪು.ಸಂ 117)
ಈ ಲೇಖನದಲ್ಲಿ ಪ್ರೊ ಭಗವಾನರು ಕೊಡುವ ಸ್ವಾಮಿ ವಿವೇಕಾಂದರ ಎರಡು ಹೇಳಿಕೆಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. 1. “ಧೂರ್ತರೂ ಠಕ್ಕರೂ ಆದ ಪುರೋಹಿತರು ಎಲ್ಲಾ ಬಗೆಯ ಮೂಢನಂಬಿಕೆಗಳನ್ನೂ ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಜನರಿಗೆ ಬೋಧಿಸುತ್ತಾರೆ.
ಈ ಖದೀಮ ಪುರೋಹಿತರಾಗಲಿ ಅವರ ತಾತ ಮುತ್ತಾತಂದಿರಾಗಲೀ ಕಳೆದ ನೂರಾರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ಕೂಡ ನೋಡಿಲ್ಲ. ಅವರು ಮೂಢಾಚಾರಗಳನ್ನು ಅನುಸರಿಸಿ ತಮ್ಮನ್ನೇ ಹೀನ ಸ್ಥಿತಿಗೆ ತಂದು ಕೊಳ್ಳುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣರ ವೇಷದಲ್ಲಿ ಇರುವ  ಈ ರಾಕ್ಷಸರಿಂದ ಜನರನ್ನು ಆ ದೇವರೇ ಕಾಪಾಡಬೇಕು”.
2. “ಬನ್ನಿ, ಮನುಷ್ಯರಾಗಿ. ಪುರೋಹಿತರನ್ನು ಒದ್ದೋಡಿಸಿ. ಅವರು ಎಲ್ಲ ಪ್ರಗತಿಗೂ ವಿರೋಧವಾಗಿದ್ದಾರೆ. ಅವರೆಂದೂ ಬದಲಾಗುವುದಿಲ್ಲ. ಅವರ ಹೃದಯವೆಂದೂ ವಿಶಾಲವಾಗುವುದಿಲ್ಲ. ಅವರು ಶತ ಶತಮಾನಗಳ ಮೂಢನಂಬಿಕೆಯ ದಬ್ಬಾಳಿಕೆಯ ಸಂತಾನ. ಮೊದಲು ಪುರೋಹಿತ ಶಾಹಿಯನ್ನು ಮೂಲೋತ್ಪಾಟನೆ ಮಾಡಿ. ಬನ್ನಿ, ಮನುಷ್ಯರಾಗಿ!”
1. (ಖಿhe ಛಿomಟeಣe ತಿoಡಿಞs ಠಿಚಿge ಟಿo-290)
2. (ಖಿhe ಛಿomಠಿಟeಣe ತಿoಡಿಞs ಠಿಚಿge ಟಿo- 11)
ಲೇಖಕರು ಇಲ್ಲಿ ಪ್ರಸ್ತಾಪಿಸಿರುವ ವಿವೇಕಾನಂದರ ಈ ಎರಡು ಹೇಳಿಕೆಗಳೇ ಸಾಕು ಹಾರುವರಿಂದ ಜಾತಿ ವ್ಯವಸ್ಥೆ ಅದೆಷ್ಟು ಬಲಿಷ್ಟಗೊಂಡಿತ್ತೆಂದು ತಿಳಿದುಕೊಳ್ಳಲು ಹೀಗೆ ಹಲವಾರು ನಿದರ್ಶನಗಳ ಮೂಲಕ ಪ್ರೊ. ಭಗವಾನರು ನಮ್ಮಗಳ ಕಣ್ ತೆರೆಸುತ್ತಾರೆ. ಅಧ್ಯಯನಕ್ಕೆ ಸಜ್ಜಾಗುವಂತೆ ಪ್ರೇರೆಪಿಸುತ್ತಾರೆ.
ಇದಕ್ಕೆ ಪೂರಕವಾಗುವಂತೆ ಖ್ಯಾತ ವಿಚಾರವಾದಿ ಜಹೊನಾರವರ ಹೇಳಿಕೆ ನೆನಪಿಗೆ ಬರುತ್ತದೆ. “ಶಂಕರನಿಗೆ ಶ್ವಪಚನ ಮೂಲಕ ಬ್ರಹ್ಮಜ್ಞಾನವಾಯತು ಎಂದು ಹೇಳುವುದು, ಈಶ್ವರ ಶ್ವಪಚನ ರೂಪದಲ್ಲಿ ಬಂದು ಜ್ಞಾನವನ್ನು ಬೋಧಿಸಿದ ಎನ್ನುವುದು ಕಟ್ಟುಕಥೆ. ಒಂದು ಪಕ್ಷ ಶ್ವಪಚನ ಮೂಲಕ ಬ್ರಹ್ಮಜ್ಞಾನವಾದುದೇ ನಿಜವಾದರೆ ಆನಂತರ ಶಂಕರರು ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದು ವೇದ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕು , ಉಚ್ಚರಿಸಿದರೆ ನಾಲಿಗೆಯನ್ನು ಕತ್ತರಿಸಬೇಕು( ಬ್ರಹ್ಮಸೂತ್ರ ಭಾಷ್ಯ: ಅಧ್ಯಾಯ 1, ಸೂತ್ರ38) ಮುಂತಾದ ಮಾನವ ವಿರೋಧಿಯಾದ ಮಾತುಗಳಿಂದ ಜಾತಿಪ್ರೇಮವನ್ನು ಏಕೆ ಮೆರೆದರು?”
(ಆವರಣ ಅನಾವರಣ-ಜ.ಹೊ. ನಾರಾಯಣಸ್ವಾಮಿ, ಪು.ಸಂ. 72 )
ಹೀಗೆ ಪ್ರೊ.ಕೆ.ಎಸ್.ಭಗವಾನರು ಮಾನವನ ಸರ್ವತೋಮುಖ ಏಳಿಗೆಗಾಗಿ ಚಿಂತಿಸಿ ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸಿ, ಪರಾಮರ್ಶಿಸಿ, ಅಧ್ಯಾಯನಗೈದು ಕೊಟ್ಟ ಈ ವಿಚಾರಪೂರಿತ ವೈಚಾರಿಕ ಕೃತಿ ಶೂದ್ರರಿಗೆ ಸಂಜೀವಿನಿಯಾಗಿದೆ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197

ಶನಿವಾರ, ಅಕ್ಟೋಬರ್ 25, 2014

ಬಹುಮುಖ ಪ್ರತಿಭೆಯ ಬರಹಗಾರ- ಡಿ.ಆರ್. ಚನ್ನೇಗೌಡರು - ಕೊಟ್ರೇಶ್ ಎಸ್.ಉಪ್ಪಾರ್


    ‘ದೊರೆ ಚೆನ್ನಿಗರಾಯ’ ಎಂಬ ಕಾವ್ಯನಾಮದಲ್ಲಿ ನೂರಾರು ಉತ್ಕøಷ್ಟ ಕವಿತೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೀರ್ತಿ ಡಿ.ಆರ್.ಚನ್ನೇಗೌಡರದು. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಪಾಂಡಿತ್ಯ ಪಡೆದಿದ್ದ ಇವರು ಜೀವನ ಚರಿತ್ರೆÉ, ಇತಿಹಾಸ, ಕಾವ್ಯ, ಸಂಪಾದನೆ, ನಿಬಂಧ, ಲೇಖನಗಳು, ಸಂಶೋಧನೆ ಮುಂತಾದ ಸಾಹಿತ್ಯ ವಿಭಾಗಗಳಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸಿರುವ ಶ್ರೀಯುತ ಡಿ.ಆರ್. ಚನ್ನೇಗೌಡರು ಕ್ರಿ.ಶ 1906 ಜೂನ್ 16 ಹಾಸನ ಜಿಲ್ಲಾ ಬೂವನಹಳ್ಳಿಯ ದೊಂದೇಗೌಡರ ಜೇಷ್ಠ ಪುತ್ರರಾಗಿ ಜನಿಸಿದರು.
     ಚಿಕ್ಕ ವಯಸ್ಸಿನಿಂದಲೇ ಬಹುಮುಖ ಪ್ರತಿಭೆಯ ಗಣಿಯಾಗಿದ್ದ ಚನ್ನೇಗೌಡರು ಸಾಹಿತ್ಯ, ಕಲೆ, ಸಂಶೋಧನೆ ಮುಂತಾದ ಕ್ಷೇತ್ರಗಳತ್ತ ಆಕರ್ಷಣೆಗೊಂಡರು. ಸ್ಥಳಪುರಾಣ, ಇತಿಹಾಸಗಳ ಹಿಂದೆ ಬೆನ್ನಟ್ಟಿದ ಇವರು ಆ ದಿಸೆಯಲ್ಲಿ ಅನೇಕ ಕೃತಿಗಳನ್ನು ನೀಡಿದ್ದಾರೆ. ಆಗಿನ ಮೈಸೂರು ಸರ್ಕಾರದ ಸೆಕ್ರೆಟರಿಯೇಟ್ ನಲ್ಲಿ ರಿಕಾರ್ಡ್‍ಸ್ ಸೂಪರಿಟೆಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ.
   ಇವರ ಸಾಹಿತ್ಯ ದೀವಿಗೆಗೆ ಇವರ ಸತಿಯಾದ ಶ್ರೀಮತಿ ಕೌಸಲ್ಯಾದೇವಿ ಯವರು ತೈಲವಾಗಿ ಸದಾ ಸ್ಫೂರ್ತಿ ನೀಡಿದವರು. ಡಿ.ಆರ್.ಸಿ ಯವರು ಕನ್ನಡ ಸಹಿತ್ಯ ರಾಶಿಗೆ ಹಲವಾರು ಗ್ರಂಥಾರ್ಪಣೆ ಮಾಡಿದ್ದಾರೆ. ಅವುಗಳಲ್ಲಿ ಯುವಕರ ಶಕ್ತಿ, ಜೋಸೆÀಫ್ ಆಡಿಸÀನ್, ಅಶೋಕ ಚಕ್ರವರ್ತಿ, ದಿನಚರಿ ಧ್ಯಾನ, ನಮ್ಮ ಮಹಾರಾಜರು, ಕೆಲವು ಪ್ರಬಂಧಗಳು, ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ ದೇವ, ಕಾಡು ಕುಸುಮಗಳು, ಗೋಪಾಲಕೃಷ್ಣ ಗೋಖಲೆ, ವಲ್ಲಭಬಾಯಿ ಪಟೇಲ್, ಜೀವನದ ಹಾಳೆಗಳು, ಶಿವಾಜಿ ಮಹಾರಾಜ, ವೀರ ಹನುಮಂತ, ಶ್ರೀಗುರು ವಚನಗಳು, ನೀತಿಕೋಶ, ಕೆ.ಎಚ್. ರಾಮಯ್ಯನವರ ಭಾಷಣ ಮುಂತಾದ ಕೃತಿಗಳು ಪ್ರಮುಖವಾಗಿವೆ. ಇವುಗಳಲ್ಲಿ ‘ದಿನಚರಿ ಧ್ಯಾನ’ ಬಹಳ ಹೆಸರು ಮಾಡಿದ ಕೃತಿಯಾಗಿದೆ. ಇದೊಂದು ಪ್ರಾರ್ಥನಾ ಗೀತೆಗಳ ಸಂಗ್ರಹವಾಗಿದ್ದು. ಜನವರಿ ಒಂದರಿಂದ ಡಿಸೆಂಬರ್ ಮೂವತ್ತೊಂದರವರೆಗೆ ದಿನಕ್ಕೊಂದು ಪ್ರಾರ್ಥನೆಯಂತೆ 366 ದಿನಗಳಿಗೂ ಸಂಬಂಧಿಸಿದವುಗಳಾಗಿವೆ.
     ಈ ಗ್ರಂಥದ ಪ್ರಸ್ತಾವನೆಯಲ್ಲಿ ಲೇಖಕರೇ ಹೇಳುವಂತೆ ‘ಈ ಗ್ರಂಥದಲ್ಲಿರುವ ಭಾವನೆಗಳು ನಾನಾ ದೇಶದ ನಾನಾ ಭಾಷೆಗಳಿಂದ ಸಂಗ್ರಹಿಸಲ್ಪಟ್ಟಿದೆ. ಮಹಾಪುರುಷರು ಯಾವದೇಶದವರೇ ಆಗಿರಲಿ ಅವರು ಯಾವ ಕಾಲಕ್ಕೆ ಸೇರಿದವರೇ ಆಗಿರಲಿ ಅಂತಹರ ಪ್ರೇರಣೆಯಿಂದ ಅವರು ನುಡಿದಿರತಕ್ಕ ವಾಣಿಯು ಕಾಲ ದೇಶಗಳ ಪರಿಮಿತಿಗೆ  ಒಳಪಡೆದೆ ಅಮರತ್ವವನ್ನು ಪಡೆದಿರುವುದು. ಭಾವಾವೇಶದ ಆನಂದ ಲಹರಿಯು ಅದು. ಈ ಗ್ರಂಥದಲ್ಲಿ ವೇದಾಂತದ ಜೊತೆಗೆ ಲೌಕಿಕ ವಿಚಾರಗಳ ವಾಣಿಯೂ ಅಲ್ಲಲ್ಲಿ ಇದೆ.... ಅಮೃತ ವಾಣಿಗಳೆಂಬ ಈ ಆಣಿಮುತ್ತುಗಳಲ್ಲಿ ಕರ್ನಾಟಕ ಬಂಧುಗಳಿಗೆ ಒಂದೆರಡು ನಲ್ನುಡಿಗಳು ದೊರೆತು ಅವರ ಜೀವೀತದ ಒಂದು ಅರೆಗಳಿಗೆಯಾದರೂ ಉಲ್ಲಾಸವಾಗುವುದಾದರೆ ಇದರ ಮನನದಿಂದ ನಮ್ಮೆಲ್ಲರಿಗೂ ನಮ್ಮ ಜನನಿ, ಜನ್ಮಭೂಮಿ, ಜನಾರ್ಧನ ಇವರ ಸೇವೆಯಲ್ಲಿ ಮಮತೆ ಮಾಡುವುದಾದರೆ ಈ ಅಳಿಲ ಮಳಲ ಸೇವೆಯು ಸಾರ್ಥಕವಾಯಿತೆಂದು ನಾನು ಹರ್ಷಿಸುವೆನು. ಈ ಉತ್ತಮ ಗ್ರಂಥವನ್ನು ನಮ್ಮೆಲ್ಲರ ತಾಯಿ ತಂದೆಯಾದ ಜಗದೀಶ್ವರನಿಗೆ ಸಮರ್ಪಣೆ ಮಾಡಿದ್ದೇನೆ’ ಎಂದಿದ್ದಾರೆ.
     ಪಂಡಿತ್ ಸ್ವಾಮಿಗೌಡರು ತಮ್ಮ ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ’ ಎಂಬ ಗ್ರಂಥದ ಪು.ಸಂ.90 ರಲ್ಲಿ ಡಿ.ಆರ್. ಚನ್ನೇಗೌಡರ ದಂಪತಿಗಳ ಬಗ್ಗೆ ಈ ರೀತಿ ಉಲ್ಲೇಖಿಸಿದ್ದಾರೆ- ‘ಶ್ರೀಮತಿ ಮತ್ತು ಶ್ರೀಯುತ ಚನ್ನೇಗೌಡರವರು ತಮ್ಮದೇ ಆದ ‘ಜ್ಞಾನವೇ ಜೀವನದ ಜ್ಯೋತಿ’ (ಞಟಿoತಿಟeಜge is ಟiಜಿe’s ಟighಣ) ಎಂಬ ದಿವ್ಯ ಲಾಂಛನನಿಂದ ತಮ್ಮ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ‘ಶ್ರೀ ರಾಮಕೃಷ್ಣ ಪುಸ್ತಕ ಭಂಡಾರ’ ಎಂಬ ತಮ್ಮ ಪ್ರಕಾಶನದಲ್ಲಿಯೇ ಎಲ್ಲಾ ಗ್ರಂಥಗಳನ್ನೂ ಬೆಳಕಿಗೆ ತಂದು ಯಶೋಮತಿಗಳಾದಿದ್ದಾರೆ. ಈ ದಂಪತಿಗಳಿಂದ ಕನ್ನಡ ಸಾಹಿತ್ಯಶ್ರೀಗೆ ನಾನಾ ಬಗೆಯ ಕಾವ್ಯ ಕುಸುಮಗಳು ಸಮರ್ಪಿಸಲ್ಪಟ್ಟಿವೆ.’
   ‘ನೀತಿಕೋಶ’ ಎಂಬ ಕೃತಿಯನ್ನು ದಂಪತಿಗಳಿಬ್ಬರೂ ಸೇರಿ ಹೊರತಂದಿದ್ದಾರೆ. ಈ ಕೃತಿಯ ಮುನ್ನುಡಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಮಾಸ್ತಿ ವೆಂಕಟೇಶ್ ಅಯ್ಯಂಗರ್ ಅವರು ‘ಈ ಪುಸ್ತಕದ ಲೇಖಕರಾದ ದಂಪತಿಗಳು ಕನ್ನಡಕ್ಕಾಗಿ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಈಸೋಪನ ಇತರ ಕಥೆಗಳನ್ನು ಇವರು ಮಕ್ಕಳಿಗಾಗಿ ಮುದ್ರಿಸುವರೆಂದು ನನ್ನ ಆಶೆ, ಹಾಗೆಯೇ ಅವರು ಮಕ್ಕಳಲ್ಲದವರಿಗಾಗಿಯೂ ಪ್ರಕಟಿಸಲೆಂದು ಆಶಿಸುತ್ತೇನೆ’ ಎಂದು ಮನದುಂಬಿ ಹಾರೈಸಿದ್ದಾರೆ.
   ಇವÀರ ‘ಅಶೋಕ ಚಕ್ರವರ್ತಿ’ ಎಂಬ ಕೃತಿಯು ಆಗಿನ ಕಾಲದಲ್ಲಿಯೇ ಉದ್ರಾಸಿನ ಎಸ್.ಎಸ್.ಎಲ್.ಸಿ ಗೆ, ಬೊಂಬಾಯಿ ಹೈಸ್ಕೂಲ್ ತರಗತಿಗೆ ಪಠ್ಯ ವಸ್ತುವಾಗಿ ಆಯ್ಕೆಗೊಂಡದ್ದು ಚನ್ನೇಗೌಡರ ಗಟ್ಟಿತನ ಬರವಣಿಗೆಗೆ ಹಿಡಿದ ಕನ್ನಡಿಯಾಗಿದೆ.
   ಇನ್ನು ಯುವಕರಿಗಾಗಿಯೇ ಜಾಗೃತೆಯ ದೃಷ್ಠಿಕೋನವಿಟ್ಟು ಬರೆದ ಗ್ರಂಥ ‘ಯುವಕರ ಶಕ್ತಿ’ ವಿವೇಕಾನಂದÀರ ದಿಟ್ಟ ಹೆಜ್ಜೆ, ಗಟ್ಟಿ ನಿರ್ಧಾರಗಳು ಈ ಕೃತಿಯಲ್ಲಿ ಪಲ್ಲವಿಸಿವೆ. ಗಾಂಧೀಜಿಯವರ ತತ್ತ್ವ್ವಾದರ್ಶಗಳು, ಕವಿ ರವೀಂದ್ರರ ಕಾವ್ಯ ದೀಮಂತಿಕೆಗಳು ಅರಳಿನಿಂತಿವೆ. ತಾರುಣ್ಯ ಜೀವನದ ಹಲವಾರು ಮಗ್ಗಲುಗಳಿಗೆ ನಿದರ್ಶನವಾಗಿರುವ ಈ ಕೃತಿಯು ಯುವಕರ ಜೀವನ ಸಾಕ್ಷತ್ಕಾರ್ಯಕ್ಕೆ ದಾರಿದೀಪದಂತಿದೆ.
   ಹೀಗೆ ಡಿ.ಆರ್. ಚನ್ನೇಗೌಡರ ಪ್ರತಿಯೊಂದು ಕೃತಿಗಳು ಸಹ ತಮ್ಮದೇಯಾದ ಮೌಲ್ಯಗಳನ್ನೊಳಗೊಂಡಿವೆÉ. ವ್ಯಕ್ತಿಚಿತ್ರಣ, ಕಾವ್ಯ, ಚರಿತ್ರೆ, ಸಂಶೋಧನೆ, ಸಂಪಾದನೆ ಹೀಗೆ ವಿಭಿನ್ನ ರೀತಿಯ ಸಾಹಿತ್ಯ ಕೃಷಿಗೈದು ಧೀಮಂತ ಸಾಹಿತಿ ಚನ್ನೇಗೌಡರು.
   ಇವಲ್ಲದೆ shivಚಿರಿi mಚಿhಚಿಡಿಚಿರಿಚಿ ಮತ್ತು sಡಿi ಟಿಚಿಟಿರಿuಟಿಜಚಿ shಚಿಣಚಿಞಚಿ ಎಂಬ ಆಂಗ್ಲ ಗ್ರಂಥಗಳನ್ನು ನೀಡಿದ್ದಾರೆ. ಪ್ರಬುದ್ದ ಭಾಷಣಕಾರರೂ ಆಗಿದ್ದ ಚನ್ನೇಗೌಡರು ಸಾಹಿತ್ಯವನ್ನು, ಸಮಾಜವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದವರು. ಅಂದುಕೊಂಡಂತೆ ಬಾಳಿ ಬದುಕಿದವರು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794,9739878197

ಗುರುವಾರ, ಅಕ್ಟೋಬರ್ 23, 2014

ಸಾತ್ವಿಕ ಸತ್ವದ ಮೌಲಿಕ ಕೃತಿ- 'ಕಚ ಸಂಜೀವಿನಿ'- ಕೊಟ್ರೇಶ್ ಎಸ್. ಉಪ್ಪಾರ್


      ಡಾ|| ಮಳಲಿ ವಸಂತಕುಮಾರ್ ರವರ ಸಮಗ್ರ ಸಾಹಿತ್ಯವನ್ನು ಅವಲೋಕಿಸಿದಾಗ ಅವರು ನಾಟಕ ಸಾಹಿತ್ಯಕ್ಕೆ ವಿಶೇಷ ಒಲವು ತೋರಿರುವುದು ಮನನವಾಗುತ್ತದೆ, ಕನ್ನಡ ನಾಟಕ  ಪರಂಪರೆಯನ್ನು ಕುರಿತು ಚರ್ಚಿಸುವಾಗಲೂ ಮಳಲಿಯವರ ನಾಟಕಗಳು ಮಹತ್ವವನ್ನು ಪಡೆದು ಕೊಳ್ಳುತ್ತವೆ.
      ಡಾ|| ಮಳಲಿಯವರು ಈಗಾಗಲೇ ‘ಯಮಧರ್ಮ’, ‘ಲಂಕೇಶ್ವರ’, ‘ಶರ್ಮಿಷ್ಠೆ’ ಯಂತಹ ಉತ್ಕøಷ್ಟ ನಾಟಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಶ್ರೀಮಂತಗೊಳಿಸಿದ್ದಾರೆ. ಇವರ ‘ಲಂಕೇಶ್ವರ’ ಹಾಗೂ ‘ಶರ್ಮಿಷ್ಠೆ’ ನಾಟಕಗಳ ರಂಗ ಪ್ರಯೋಗಗಳನ್ನು ವಿಶ್ಲೇಷಿಸಿದ್ದೇನೆ. ಅವುಗಳಲ್ಲಿ ‘ಶರ್ಮಿಷ್ಠೆ’ ನಾಟಕದ ಕುರಿತು ವಿಶ್ಲೇಷಣೆಯನ್ನೂ ಮಧ್ಯಮಗಳಿಗೆ ಮಾಡಿದ್ದೆ. ಇವರ ನಾಟಕಗಳು ಪುರಾಣ ಮತ್ತು ಇತಿಹಾಸಗಳನ್ನೊಳಗೊಂಡ ವೈಚಾರಿಕ ನೆಲೆಗಟ್ಟಿನಲ್ಲಿ ರಚಿತವಾದವುಗಳೆಂದು ಹೇಳಬಹುದು, ಇತ್ತೀಚೆಗೆ ಬಿಡುಗಡೆಯಾದ ಇವರ ಇನ್ನೊಂದು ನಾಟಕ ‘ಕಚ ಸಂಜೀವಿನಿ’.
      ‘ಶರ್ಮಿಷ್ಠೆ’ ಹಾಗೂ ‘ಕಚ ಸಂಜೀವಿನಿ’ ನಾಟಕಗಳು ಒಂದೇ ಕಥಾ ಹಂದರವನ್ನು ಒಳಗೊಂಡರೂ ಪಾತ್ರಗಳ ವೈಶಿಷ್ಟವು ಭಿನ್ನವಾಗಿವೆ. ರನ್ನನ ‘ಸಾಹಸಭೀಮ ವಿಜಯ’ ಹಾಗೂ ಪಂಪನ ‘ವಿಕ್ರಮಾರ್ಜುನ ವಿಜಯ’ ಕೃತಿಗಳ ಕಥಾ ಹಂದರ ಮಹಾಭಾರತವೇ ಆದರೂ ರನ್ನನಿಗೆ “ಭೀಮ’ ನಾಯಕನಾಗಿ ಕಂಡರೆ, ಪಂಪನಿಗೆ ‘ಅರ್ಜುನ’ ನಾಯಕನಾಗಿ ಗೋಚರಿಸುತ್ತಾನೆ. ಅಲ್ಲಿ ಲೇಖಕರೂ ಭಿನ್ನ, ದೃಷ್ಠಿಕೋನವೂ ಭಿನ್ನವಾಗಿತ್ತು. ಆದರೆ ಇಲ್ಲಿ ಲೇಖಕರೊಬ್ಬರೆ ದೃಷ್ಟಿಕೋನಗಳು ಮಾತ್ರ ಭಿನ್ನವಾಗಿರುವುದನ್ನು ಕಾಣುತ್ತೇವೆ. ಇದೇ ಕಥೆಯನ್ನು  ಆಯ್ದುಕೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ|| ಗಿರೀಶ್ ಕಾರ್ನಾಡರಿಗೆ ‘ಯಯಾತಿ’ ನಾಯಕರಾಗಿ ಕಾಣುವುದು ವಿಶೇಷ. ಆದರೆ ಡಾ. ಮಳಲಿಯವರು ಪ್ರತಿ ಪಾತ್ರಗಳಲ್ಲೂ ಒಳಗಿಳಿದು ಭಿನ್ನತೆ ಕಾಣುವ ವೈಶಿಷ್ಟ್ಯತೆ ಹಾಗೂ ಆ ಪಾತ್ರಗಳನ್ನು ಮೇರುಸ್ತರದಲ್ಲಿ ನಿಲ್ಲಿಸುವ ಪರಿ ಅಮೋಘವಾದುದು. ಆದ್ದರಿಂದಲೆ ಅವರ ನಾಟಕಗಳಿಗೆ ಕನ್ನಡ ನಾಟಕ ಚರಿತ್ರೆಯಲ್ಲಿ ಒಂದು ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ಮಳಲಿಯವರ ಪ್ರಗತಿಪರ ವೈಚಾರಿಕ ಪ್ರಜ್ಞೆ ದಟ್ಟವಾಗಿ ಗೋಚರಿಸುತ್ತದೆ. ಅದರಲ್ಲೂ ‘ಶರ್ಮಿಷ್ಠೆ’ ಹಾಗೂ ‘ಕಚ ಸಂಜೀವಿನಿಯಲ್ಲಿ’ ವೈದಿಕ ಧರ್ಮದ ಪುರೋಹಿತಶಾಹಿ ಹಾಗೂ ಶೂದ್ರರ ನಡುವಿನ ಪ್ರಾಸಂಗಿಕತೆಗಳನ್ನು ಲೇಖಕರು ಸೊಗಸಾಗಿ ರೂಪುಗೊಳಿಸಿದ್ದಾರೆ.
84 ಪುಟಗಳ, 70 ರೂಪಾಯಿ ಮುಖ ಬೆಲೆಯ ಈ ಕೃತಿಯನ್ನು ಮೈಸೂರಿನ ‘ವಿದ್ಯುತ್ ಪ್ರಕಾಶನ’ ಹೊರತಂದಿದ್ದು ಮುಖ ಪುಟ ಸುಂದರವಾಗಿ ಮೂಡಿಬಂದಿದೆ.
ದೇವದಾನವ ರಣರಂಗ ಮಾನವಹೃದಯ|
ಭಾವರಾಗ ಹಟಂಗಳವರ ಸೇನೆಗಳು||
ಭೂಮಿಭವಜಯಗಳ ಬ್ರಾಂತಿಯಲಿ ಮರೆಯುವರು|
ಜೀವನಾಮೃತವನವರು ಮಂಕುತಿಮ್ಮ||
ಅಂದರೆ ಮಾನವ ಹೃದಯ ದೇವದಾನವ ರಣರಂಗವಗಿದೆ. ಭಾವ ಹಗೆ ಛಲಗಳೇ ಅವರ ಸೇನೆಯಾಗಿವೆ; ಭೂಮಿ, ಭವಜಯಗಳ ಬ್ರಾಂತಿಯಲ್ಲಿ ಜೀವನಕ್ಕೆ ಅಗತ್ಯವಾದ ಅಮೃತವನ್ನೇ ಮರೆಯುವರು ಎನ್ನುವಂತೆ ಈ ನಾಟಕವೂ ಸಹ ಸಾಕ್ಷಿಯಾಗಿ ನಿಲ್ಲುತ್ತದೆ.
    ಲೇಖಕರೇ ಹೇಳುವಂತೆ “ಮಹಾಭಾರತದ ಉಪಖ್ಯಾನದಲ್ಲಿ ಕಚನದು ಮಹತ್ವದ ಪಾತ್ರ. ಯಾಯಾತಿ, ದೇವಯಾನಿ, ಶರ್ಮಿಷ್ಠೆ, ಶುಕ್ರಾಚಾರ್ಯ, ವೃಷಪರ್ವ, ಬೃಹಸ್ಪತಿ ಮುಂತಾದವು ಪರಸ್ವರ ಆವೃತ ಪಾತ್ರಗಳು” ಹೌದು ಮೂಲ ಮಹಾಭಾರತದಲ್ಲಿ ಪಾಂಡವರ ಹಾಗೂ ಕೌರವರ ನಡುವೆ  ಶ್ರೀಕೃಷ್ಣನ ಪಾತ್ರ ಮಹತ್ವ ಪಡೆಯುವಂತೆ ಪ್ರಸ್ತುತ ‘ಕಚ’ ಸಂಜೀವಿನಿಯಲ್ಲಿ ‘ಕಚ’ ಮಹತ್ವ ಪಡೆಯುತ್ತಾನೆ. ದೇವಗುರು ಬೃಹಸ್ಪತಿಯ ಮಗನಾದ ‘ಕಚ’ ವಿಧ್ಯೆಗಾಗಿ ರಾಕ್ಷಸ ಗುರು ಶುಕ್ರಾಚಾರ್ಯರಲ್ಲಿ ವಿಧ್ಯೆ ಕಲಿಯುವ ಪ್ರಸಂಗವೆ ಪ್ರಧಾನವಾದ ಅಂಶವಾಗಿ ಪರಿಣಮಿಸುವ ಈ ನಾಟಕದಲ್ಲಿ ಗುರುವಿನ ಮಗಳಾದ ದೇವಯಾನಿಯ ಮನಸ್ಸು ಪ್ರೇಮ ಪಾಶದಲ್ಲಿ ಸಿಲುಕಿ ‘ಕಚ’ ನ ಮೇಲೆ ಮೋಹಗೊಳ್ಳುವ ಪರಿಯನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ದಾನವರ ಕೃತ್ಯಕ್ಕೆ ಸಿಲುಕಿ ‘ಕಚ’ ಮೃತ್ಯುಹೊಂದಿದರೂ ದೇವಯಾನಿಯ ಒತ್ತಾಸೆಯಿಂದಲೇ ಶುಕ್ರಾಚಾರ್ಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ಮೃತ ಸಂಜೀವಿನಿ ವಿಧ್ಯೆಯಿಂದ ಬದುಕಿಸುವರು. ಕಚನ ವಿಷಯದಲ್ಲಿ ದೇವಯಾನಿ ಕಾಮುಕವಾಗಿಯೇ ವರ್ತಿಸಿದ್ದೆ ಅಧಿಕ ಆದರೆ ಗುರಿವಿನ ಪುತ್ರಿ ಸ್ವಂತ ಸಹೋದರಿಯ ಸಮಾನವೆಂದರಿತ ‘ಕಚ’ ನೈತಿಕ ಬುದ್ದಿ ಹೇಳಿ ನಯವಾಗಿಯೇ ತಳ್ಳಿಹಾಕುತ್ತಾನೆ.
    ಶುಕ್ರಾಚಾರ್ಯರೆ ಹೇಳುವಂತೆ “ನೇರ ನಡೆ-ನುಡಿಯೇ ಕಚನ ವಿಶೇಷ! ಆದರೆ ಕಚ ಸ್ವಹಿತ ಸಾಧಕನಲ್ಲ. ದೇವದಾನವ-ಮಾನವರೆಲ್ಲರಿಗೂ ಒಳಿತಾಗಬೇಕೆಂಬುದು ಅವನ ಬಯಕೆ! ಅವನು ಸರ್ವಹಿತಕರ ಮನೋಧರ್ಮಿ”.
    ‘ಶರ್ಮಿಷ್ಠೆ’ ನಾಟಕದಲ್ಲಿ ಶರ್ಮಿಷ್ಠೆ ಹಾಗೂ ದೇವಯಾನಿಯರು ಸಂಧಿಸುವ ಪ್ರಸಂಗಗಳು ಪ್ರಧಾನವಾಗಿ ಬರುವುದರೊಂದಿಗೆ ರಾಜಕುಮಾರಿಯಾದ ‘ಶರ್ಮಿಷ್ಠೆ’ ಕಾಲಸನ್ನಿವೇಶಕ್ಕೆ ತುತ್ತಾಗಿ ದೇವಯಾನಿಯ ದಾಸಿಯಾಗಿ ಪರಿತಪಿಸಿ, ಮಾನವಿಯ ಮೌಲ್ಯಗಳಲ್ಲರಳಿ ನಾಯಕಿಯಾದರೆ, ಇಲ್ಲಿ ಅವರೀರ್ವರ ಪ್ರಸಂಗಗಳು ಗೌಣವಾಗಿ ಗುರು-ಶಿಷ್ಯರ ಹಾಗೂ ದೇವಯಾನಿಯನ್ನು ಸರಿದಾರಿಗೆ ತರುವಲ್ಲಿ ಹೋರಾಡುವುದರ ಜೊತೆಗೆ, ‘ಶರ್ಮಿಷ್ಠೆಗೆ ಸುಂದರ ಬದುಕನ್ನು ದೊರಕಿಸಿಕೊಡುವ ಹೊಣೆಗಾರಿಕೆಯನ್ನು ನಿರ್ವಹಿಸುವ ‘ಕಚ’ ನೇ ನಾಯಕನಾಗಿ ನಿಲ್ಲುತ್ತಾನೆ.
‘ಶರ್ಮಿಷ್ಠೆ’ ಹಾಗೂ ‘ದೇವಯಾನಿ’ ಗೆ ‘ಯಯಾತಿ’ ಒಬ್ಬನೇ ಪತಿಯಾದರೂ ರಕ್ಕಸಮನಸ್ಸಿನ ‘ದೇವಯಾನಿ’, ರಾಜಗುಣದ ‘ಶರ್ಮಿಷ್ಠೆ’ ನಡುವೆ ಬಾಳದೋಣಿಯನ್ನು ಸಾಗಿಸುವ ಪರಿಯನ್ನು ಲೇಖಕರು ಸೊಗಸಾಗಿ ಚಿತ್ರಿಸಿದ್ದಾರೆ.

     ಡಾ.ಮಳಲಿಯವರೇ ತಮ್ಮ ಪ್ರಸ್ತಾವನೆಯಲ್ಲಿ ಹೇಳಿರುವಂತೆ- “ವಸ್ತು ಸ್ಥಿತಿಯಲ್ಲಿ ಕಚನ ವ್ಯಕ್ತಿತ್ವ ಇಲ್ಲಿನ ಎಲ್ಲಾ ಪಾತ್ರಗಳಿಗಿಂತ ಉನ್ನತವಾದುದು; ಆವನೊಬ್ಬ ಸಮದರ್ಶಿ; ದೂರದರ್ಶಿತ್ವವುಳ್ಳ ದಿವ್ಯಜ್ಞಾನಿ ಹೃದಯವಂತಿಕೆ, ಮಾನವೀಯತೆ, ಪ್ರೀತಿ, ಅನುಕಂಪಗಳುಳ್ಳ ಅವನು ನೊಂದವರ ಬಗ್ಗೆ ಕರುಣಾಮೂರ್ತಿ ಅಸಾಧಾರಣ ಬ್ರಹ್ಮಚಾರಿ. ಸಕಲ ಸದ್ಗುಣಶೀಲ ಸಂಪನ್ನ, ಅನುಪಮ ತ್ಯಾಗಿ, ಅವನು ಮಹಾನ್ ತಪಸ್ವಿಯೂ ಹೌದು ಮೇಲಾಗಿ ಲೌಕಿಕ ಚಿಂತಕನೂ ಹೌದು. ಅವನು ಸದಾ ಜಾಗೃತ ಮನಸ್ಸು, ಪಾವಿತ್ರ್ಯದ ತೇಜಸ್ಸು”.
      ಈ ಮಾತನ್ನು ಬಹುಶ: ಇವರ ‘ಶರ್ಮಿಷ್ಠೆ’ನಾಟಕ ರಚನೆಯ ನಂತರ ಹೇಳಿದ್ದು ಅನ್ನಿಸುತ್ತದೆ. ಕರ್ನಾಡರ ‘ಯಯಾತಿ’ಯಲ್ಲಿ ಅಷ್ಟೇನೂ ಪ್ರಮುಖವಾಗದ ‘ಕಚ’ ಮಳಲಿಯವರ ‘ಶರ್ಮಿಷ್ಠೆ’ಯಲ್ಲಿ ಗೋಚರಿಸುತ್ತಾರೆ. ಅವರ ವ್ಯಕ್ತಿತ್ವಕ್ಕೆ ಮಾರುಹೋದ ಲೇಖಕರು ‘ಕಚ’ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ- “ಇಷ್ಟಾದರೂ ನಮ್ಮ ಲೇಖಕರು ಸಾಹಿತ್ಯ ರಚನೆಯಲ್ಲಿ ಯಯಾತಿ, ದೇವಯಾನಿ ಮತ್ತು ಶರ್ಮಿಷ್ಠೆಯರನ್ನು ಕೇಂದ್ರೀಕರಿಸಿ ವಿಜೃಂಭಣೆಗೊಳಿಸಿದಷ್ಟು ಕಚನನ್ನು ವೈಭವೀಕರಿಸಲಿಲ್ಲ. ಇದು ಏಕೆಂದು ಅರ್ಥವಾಗಲಿಲ್ಲ. ನಾನು ಶರ್ಮಿಷ್ಠೆ ನಾಟಕದ ರಚನೆಯಲ್ಲಿ ತೊಡಗಿದಾಗ ಈ ವಿಷಯ ಸ್ಪಷ್ಠವಾಯಿತು. ನಾನೂ ಸಹ ಕಚನನ್ನು ಒಂದು ಉಪಪಾತ್ರವಾಗಿ ಚಿತ್ರಿಸುವ ತಪ್ಪು ಮಾಡುತ್ತಿದ್ದೇನಲ್ಲ ಎನಿಸಿತು”.
      ಈ ಆಲೋಚನೆಯೇ ಇಲ್ಲಿನ ‘ಕಚಸಂಜೀವಿನಿ’ ಹುಟ್ಟಿಗೆ ಕಾರಣವಾಯಿತೆನ್ನಬಹುದು ಮುನ್ನುಡಿಕಾರರಾದ ಡಾ. ಲೀಲಾಪ್ರಕಾಶ್ ರವರು ಹೇಳುವಂತೆ – “ಡಾ. ವಸಂತಕುಮಾರರು ಈ ಪುಟ್ಟನಾಟಕದಲ್ಲಿ ಅತ್ಯಂತ ಎಲ್ಲ ಭಾವಗಳನ್ನು ಮೂಡಿಸಿದ್ದಾರೆ. ಈ ನಾಟಕವು ಸಾರ್ವಕಾಲಿಕವಾಗಿಯೂ ಮೆಚ್ಚಾಗುವಂತೆ ರಚಿಸಿರುವುದು ಅವರ ನಾಟಕ ರಚನೆಯ ಪ್ರೌಢಿಮೆಯನ್ನು ನಿರೂಪಿಸುತ್ತದೆ. ಕೇವಲ ಎಂಟು ಪಾತ್ರಗಳಿಂದ ಅತ್ಯಂತ ಚಿತ್ತಾಕರ್ಷಕವಾಗಿ ಮಾನವರೆಲ್ಲರೂ ತಮ್ಮ ಅಂತರಂಗಶುದ್ದಿಯನ್ನು ಅವಲೋಕನ ಮಾಡಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ”.
     ಒಟ್ಟಾರೆ ಹೇಳುವುದಾದರೆ ಡಾ. ಮಳಲಿ ವಸಂತಕುಮಾರ್ ರವರು ವಿಚಾರ ಹಾಗೂ ಹೃದಯ ಶ್ರೀಮಂತಿಕೆಯನ್ನು ಪ್ರಸ್ತುತ ನಾಟಕದಲ್ಲಿ ಪಲ್ಲವಿಸಿದ್ದಾರೆ. ಶರ್ಮಿಷ್ಠೆ ಹೃದಯ ವಿಸ್ತಾರದ ಗುಣೊತ್ಕಾರ್ಷದಿಂದ ಪ್ರಜ್ವಲಿಸಿದರೆ, ದೇವಯಾನಿ ಗರ್ವ, ದುರಭಿಮಾನದ ವಿಪ್ರಕನ್ಯೆಯಾಗಿ ಬಿಂಬಿತವಾಗುತ್ತಾಳೆ. ಇನ್ನು ‘ಕಚ’ ದೇವದಾನವರನ್ನೆಲ್ಲ ಮೀರಿ ಸಕಲ ಜೀವಸಂಕುಲಗಳ ಹಿತೈಷಿಯಾಗಿ, ಸದ್ವಿನಯ ಸಂಪನ್ನನಾಗಿ, ಸಕಲ ಪಾರಂಗತನಾಗಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಮಾನವೀಯ ಮೌಲ್ಯಾಧಾರಕನಾಗಿ ಕಂಗೊಳಿಸುತ್ತಾನೆ.
      ಪ್ರಗತಿಪರ ಹಾಗೂ ವೈಚಾರಿಕ ಚಿಂತಕರಾದ ಡಾ. ಮಳಲಿ ವಸಂತಕುಮಾರ್‍ರವರು ಹಳೆಯ ಕಥಾ ಹಂದರವನ್ನೆ ಆಯ್ದುಕೊಂಡು ಪುರಾಣೇತಿಹಾಸಗಳ ಸಮ್ಮಿಲನಗೊಳಿಸಿ, ನಾವಿನ್ಯತೆಯ ಮೂಸೆಯಲ್ಲಿ ‘ಕಚ’ನನ್ನು ನಾಯಕನನ್ನಾಗಿ ಬಿಂಬಿತಗೊಳಿಸಿ ಹೊಸ ಆಲೋಚನೆಗಳತ್ತ ಕನ್ನಡ ಸಾಹಿತ್ಯದ ನಾಟಕಕಾರರು ಹಾಗೂ ಓದುಗ, ವಿಮರ್ಶಕರ ಮನಸ್ಸನ್ನು ಹರಿಸಿದ್ದಾರೆ. ಅವರು ಪಾತ್ರಗಳೊಂದಿಗೆ ಲೀಲಾಜಾಲವಾಗಿ ವ್ಯವಹರಿಸುವ ಪರಿ, ಆಧುನಿಕ ಭಾವ-ಭವ್ಯತೆಗಳೊಂದಿಗೆ ಸಮೀಕರಿಸುವ ಚಕ್ಯತೆ ಅಗಮ್ಯ.
      ಈ ಕೃತಿಯ ಬೆನ್ನುಡಿಯಲ್ಲಿ ಖ್ಯಾತ ಅಷ್ಟಾವಧಾನಿಗಳಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಉಲ್ಲೇಖಿಸಿದಂತೆ- “ಜಗದಗಲ ವೈರವೆಂಬ ವೈರಾಣುವೇ ತುಂಬಿಕೊಂಡು ಪ್ರಕ್ಷುಬ್ಧಗೊಳ್ಳುತ್ತಿರುವ ಸಮಕಾಲೀನ ಸಂದರ್ಭಕ್ಕೂ ಈ ಸಂಜೀವಿನಿಯ ಸಂಪ್ರೋಷಣೆಯಾಗಬೇಕಾಗಿದೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ‘ಕಚನ’ಕಾಂಕ್ಷೆ ಮತ್ತೆ ನಮ್ಮಲ್ಲಿ ಮೊಳಕೆಯೊಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಉತ್ತಮ ನಾಟಕ ಕೃತಿ. ಮತ್ತೆ ಮತ್ತೆ ಓದಿಸಿಕೊಂಡು ಅಂತರಂಗದಲ್ಲಿ ಅಭಿನೀತಗೊಳ್ಳುವ ಆರ್ಷೇಯ ಮೌಲ್ಯದ ಆಚಾರ್ಯಕೃತಿ”.
ಅಂತೆಯೇ ಇವರ ಲೇಖನಿಯಿಂದ ಇನ್ನೂ ಉತ್ತಮೊತ್ತಮ ನಾಟಕರತ್ನಗಳನ್ನು ಕನ್ನಡ ಸಾಹಿತ್ಯ ಕಣಜಕ್ಕೆ ಹರಿದುಬರಲೆಂದು ಆಶಿಸುತ್ತೇನೆ.

ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ,
 ಹಾಸನ-573201
ಮೊ-9483470794,9739878197

ಶನಿವಾರ, ಅಕ್ಟೋಬರ್ 18, 2014

ಹೆತ್ತೂರು ನಾಗರಾಜರ “ಕಪ್ಪು ಕವಿತೆಗಳು”- ಕೊಟ್ರೇಶ್ ಎಸ್.ಉಪ್ಪಾರ್


       ಕನ್ನಡ ಸಾಹಿತ್ಯದಲ್ಲಿ ಬಂಡಾಯದ ಧ್ವನಿ ಪಂಪನಿಂದ ಆರಂಭವಾಯಿತು. ನಂತರ ಮೌನವಾಗಿಯೇ ಬೆಳೆದು ಅಮೂರ್ತದಲ್ಲಿದ್ದ ಬಂಡಾಯವು ಮೂರ್ತರೂಪಕ್ಕೆ ಬಂದು ಒಂದು ವುಕ್ತಿತ್ವವನ್ನು ಬೆಳೆಸಿಕೊಂಡು ಸಾಹಿತ್ಯ ಘಟ್ಟವಾಗಿ ಬೆಳೆದು ನಿಲ್ಲಲು 1970ರ ತನಕ ಹಿಂಸೆ, ನೋವು, ದುಃಖ, ಕ್ರೌರ್ಯ, ಅವಮಾನ, ಸಿಟ್ಟುಗಳನೆಲ್ಲವನ್ನು ನುಂಗಿಕೊಂಡು ತಾಳ್ಮೆಯಿಂದ ತಪಸ್ಸು ಮಾಡುತ್ತಲೇ ಇತ್ತು. ಕಣ್ಣಿಬಿಟ್ಟು ಲೋಕವನ್ನು ನೋಡಿದ್ದು ಈ ಶತಮಾನದ ಕೊನೆಭಾಗದಲ್ಲಿ ಎನ್ನಬಹುದು. ತನ್ನ ಹೊಟ್ಟೆಯಲ್ಲಿ ಅಡಗಿಸಿಟ್ಟ ಸಿಟ್ಟನ್ನು ಒಮ್ಮೆಯೇ ಸ್ಪೋಟಿಸಿದಾಗ ಮೇಲು ವರ್ಗ ಬೆಚ್ಚಿ ಬಿದ್ದಿದ್ದು ಉಂಟು. ಈ ಬಂಡಾಯ ಸಾಹಿತ್ಯವು ನವ್ಯದ ನಂತರ ಬೆಳೆದು ಬಂದ ಸಾಹಿತ್ಯದ ನಾಲ್ಕ್ಕನೆಯ ಘಟ್ಟವಾಗಿದೆ. ಈ ಘಟ್ಟದ ಮೂಲಕವೇ ಮತ್ತೊಂದು ದಾರಿ ಹಿಡಿದು ಹೊರಟದ್ದು ದಲಿತ ಸಾಹಿತ್ಯ.
ಶೋಷಣೆ ಮತ್ತು ಕ್ರೌರ್ಯದ ವಿರುದ್ದ ಬಂಡೆದ್ದು ಹೋರಾಡುವುದೇ ಇಲ್ಲಿಯ ಪ್ರಮುಖ ಲಕ್ಷಣ. ಮನುಷ್ಯ-ಮನುಷ್ಯರ ನಡುವೆ ಕಲ್ಲಿನಕೋಟೆ ಕಟ್ಟಿದÀ, ಅಮಾನವೀಯ ಬದುಕನ್ನು ಹಸನುಗೊಳಿಸುವ ಆಕಾಂಕ್ಷೆ ಇಲ್ಲಿ ಕಂಡು ಬರುತ್ತದೆ.
ಈ ದಿಶೆಯಲ್ಲಿ ಅನೇಕ ಯುವ ಬರಹಗಾಗರರು ತಮ್ಮ ಒಡಲಾಳದ ತುಮುಲಗಳನ್ನು ನೇರ ದಿಟ್ಟವಾಗಿ ಹೊರಹಾಕುತ್ತಿರುವುದು ಶ್ಲಾಘನೀಯ. ಅಂತಹ ಯುವ ಲೇಖಕರಲ್ಲಿ ನಾಗರಾಜ್ ಹೆತ್ತೂರು, ಬಿ.ಆರ್.ಭಾಸ್ಕರ್ ಪ್ರಸಾದ್ ಹಾಗೂ ಅಪ್ಪಗೆರೆ ಡಿ.ಟಿ.¯ಂಕೇಶ್‍ರವರು ಪ್ರಮುಖರು. ಈ ಮೂರು ಯುವ ಕವಿಗಳು ತಮ್ಮ ತಮ್ಮ ಫೇಸ್‍ಬುಕ್‍ನಲ್ಲಿ ಬರೆಯುವ ಹವ್ಯಾಸದಿಂದ ಪರಿಚಿತರಾಗಿ, ಸ್ನೇಹ ಆತ್ಮೀಯತೆಗೆ ತಿರುಗಿ ಇವರೆಲ್ಲಾ ಕವಿತೆಗಳು ‘ಬೆವರ ದನಿಗಳು’ ಎಂಬ ಸಂಯುಕ್ತ ಕವನ ಸಂಕಲನದಲ್ಲಿ ಪ್ರಕಟಗೊಂಡಿವೆ.
ಸಿರಿವರ ಪ್ರಕಾಶನ ಹೊರತಂದಿರುವ 96 ಪುಟಗಳ 70 ರೂಪಾಯಿ ಮುಖಬೆಲೆ ಹೊಂದಿರುವ ಈ ಕೃತಿಗೆ ಯೋಗೇಶ್ ಮಾಸ್ಟರ್‍ರವರ ಮುನ್ನುಡಿ ಕಳೆಕಟ್ಟಿದಂತಿದೆ. ಇದರಲ್ಲಿ ನಾನು ಇಲ್ಲಿ ಚರ್ಚಿಸ ಹೊರಟಿರುವುದು ನಾಗರಾಜ್ ಹೆತ್ತೂರರ ಕವಿತೆಗಳನ್ನು ಮಾತ್ರ. ಆದ್ದರಿಂದ ಭಾಸ್ಕರ್ ಪ್ರಸಾದ್ ಹಾಗೂ ಅಪ್ಪಗೆರೆ ಲಂಕೇಶ್ ಕವಿತೆಗಳನ್ನು ಬದಿಗಿಡುತ್ತಿದ್ದೇನೆ. ‘ಕಪ್ಪು ಕವಿತೆಗಳು’ ಎಂಬ ಶೀರ್ಷಿಕೆಯಡಿ ‘ನಾ ಹೊಲೆದ ಜೋಡಿ ಚಪ್ಪಲಿಗಳು’ ಕವಿತೆಯಿಂದ ‘ಬಿಡಿ ಪದ್ಯಗಳು’ ಕವಿತೆಗಳ ವರೆಗೆ ಪುಟ ಸಂಖ್ಯೆ 25 ರಿಂದ 64 ರ ವರೆಗೆ 19 ಕವಿತೆಗಳಿವೆ.
ಇಲ್ಲಿನ ಎಲ್ಲಾ ಕವಿತೆಗಳಲ್ಲಿ ನಾಗರಾಜ್‍ರವರು ಸಹಜವಾಗಿಯೇ ಬಂಡಾಯದ ಧ್ವನಿಯನ್ನು ಪ್ರತಿಧ್ವನಿಸಿದ್ದಾರೆ. ಬಂಡಾಯ ಹಾಗೂ ದಲಿತ ಕಾವ್ಯಗಳ ಮುಗ್ಗುಲುಗಳನ್ನು ಅರಿತ ಸ್ನೇಹಿತ ನಾಗರಾಜ್ ಹೆತ್ತೂರು ಶೋಷಣೆಯ ವಿರುದ್ದ, ಅನ್ಯಾಯ, ಅನಾಚಾರ, ಭ್ರಷ್ಟಾಚಾರ, ಸಾಮಾಜಿಕ ಪಿಡುಗುಗಳು ಹೀಗೆ ಹಲವಾರು ವಿಷಯಗಳ ಸುತ್ತಲೇ ಕಾವ್ಯ ಕಟ್ಟುತ್ತಾ ಹೋಗಿದ್ದಾರೆ.
ವ್ಯಾಕರಣ, ಛಂದಸ್ಸುಗಳಿಂದ ಮುಕ್ತತೆ ಪಡೆದ ಇವರ ಕವಿತೆಗಳು ನೇರ ನುಡಿಗಳಿಂದ, ಸರಳ ಪದಗುಚ್ಚಗಳಿಂದ ಹೆಣೆದ ಮಾನವೀಯ ಮೌಲ್ಯಗಳು


ನಾ ಬರೆದ
ಕಪ್ಪು ಕವಿತೆಗಳು
ಚರಂಡಿಗಿಳಿಯುತ್ತವೆ, ಪೊರಕೆಗಳಲ್ಲಿ ಚಿತ್ತಾರ ಬಿಡಿಸುತ್ತವೆ
ಸ್ಮಶಾನವ ಕಾಯುತ್ತವೆ, ದಲಿತ ಕೇರಿಗಳಲ್ಲಿ ಬೀದಿ ದೀಪವಾಗುತ್ತವೆ.
[ಕಪ್ಪು ಕವಿತೆಗಳು]
ಅವರೇ ಹೇಳುವಂತೆ ಸಮಾಜದ ನೀಚ ಸ್ತರ ಎಂದು ಕರೆಯಿಸಿಕೊಳ್ಳುವ ಮನಗಳ, ದಮನಿತ ಸ್ಥಿತಿಗಳ ಧ್ವನಿಗಳಾಗಿವೆ. ಶೋಷಣೆಯಿಂದ ಹೊಮ್ಮಿಬಂದ ಆಶಾಕಿರಣವಾಗುವುದನ್ನು ಉಲ್ಲೇಖಿಸುತ್ತಾರೆ.
ಸ್ವತಃ ಶೋಷಣೆಯಲ್ಲಿ ಸಿಲುಕಿ ಬೆಳೆದ ನಾಗರಾಜ್ ಹೋರಾಟಗಾರ. ಆದ್ದರಿಂದಲೇ ಅವರ ಲೇಖನಿಯಿಂದ ಶತಮಾನಗಳಿಂದಲೂ ಮಡುಗಟ್ಟಿದ್ದ ಭಾವನೆಗಳು ಜೀವ ಪಡೆದುಕೊಂಡಿವೆ.
ಸಹೋದರ ಕಬೀರ್
ಎದೆಗೆ ಹೊಡೆದವನು ರಾಮನ ಭಕ್ತನಾದರೂ
ಅಲ್ಲಾಹುವಿನ ಪ್ರಾರ್ಥನೆ ಸುಮ್ಮನೆ ಬಿಡದು
ನಮ್ಮವ್ವ ಚೌಡಿಗೂ ಹರಕೆ ಹೊತ್ತಿದ್ದಾಳೆ
ಕಬೀರನ ಕೊಂದವನ ರಕ್ತ ಕಾರಿಸು ಎಂದು
ಆಕೆಯ ಶಾಪಕ್ಕೆ ತಪ್ಪಿಸಿಕೊಂಡವರಿಲ್ಲ ....
[ಕ್ಷಮಿಸು ಕಬೀರ್ ನಮ್ಮವ್ವ ಚೌಡಿಗೆ ಹರಕೆ ಹೊತ್ತದ್ದಾಳೆ]
ಅಸಮಾನತೆ ಮತ್ತು ಅನ್ಯಾಯಗಳನ್ನು ಪ್ರತಿಭಟಿಸುವುದೇ ಬಂಡಾಯವೆಂದು ಕರೆದರೂ, ಶತಶತಮಾನಗಳಿಂದ ಮೇಲ್ವರ್ಗಗಳ ದಬ್ಬಾಳಿಕೆಯ ನಾಲಿಗೆ ಎಂಬ ಕತ್ತಿಗೆ ಹೆದರಿ ಕಾಲಗರ್ಭದಡಿಯಲ್ಲಿ ಹೂತು ಹೋಗುತ್ತಿರುವ ಜನತೆಯನ್ನು ಮೇಲೆತ್ತಿ ನಾಲಿಗೆ, ಮಾತು, ಧೈರ್ಯ ತುಂಬಿ ಪ್ರತಿಭಟಿಸಲು ಹೊರಟ ಸಾಹಿತ್ಯ ಮಾರ್ಗದಲ್ಲಿ ಸಾಗುತ್ತಿರುವ ನಾಗರಾಜ್ ಸ್ನೇಹಿತ ಕಬೀರನು ನಕ್ಸಲನೆಂದೋ ಎಂಬ ಅನುಮಾನದಿಂದ ಗುಂಡಿಗೆ ಬಲಿಯಾದಾಗ ತಮ್ಮೊಡಲಲ್ಲಿ ಎದ್ದ ಬಾವನಾ ತರಂಗಗಳನ್ನು ಕಾವ್ಯದ ರೂಪದಲ್ಲಿ ಪಡಿಮೂಡಿವೆ. ನಾವು ಮಾನವರು ನಮ್ಮೆಲ್ಲಾ ಧಮನಿಗಳಲ್ಲಿ ಹರಿಯುವ ರಕ್ತದ್ವರ್ಣ ಒಂದೇ. ಆದರೆ ಜಾತಿ, ಉಪಜಾತಿ, ಧರ್ಮ ಗೋಡೆಗಳ ಕಂದಕಗಳನ್ನು ಸೃಷ್ಟಿಸಿಕೊಂಡು ವೈಷಮ್ಯದ ಉಸಿರಾಡುತ್ತಿದ್ದೇವೆ. ಆದರಿಲ್ಲಿ ಕಬೀರ, ನಾಗರಾಜ್ ಪರಧರ್ಮಿಯರೆಂಬ ಭಾವ ಮೂಡುವುದಿಲ್ಲ, ಮಾನವೀಯತೆ ಅರಳುವುದನ್ನು ಕಾಣುತ್ತೇವೆ. ಇನ್ನೊಬ್ಬರ ಒಳಿತಿಗಾಗಿ ತಮ್ಮ ತಾಯಿಗೆ ಚೌಡಿಗೆ ಹರಕೆ ಹೊರುವುದರ ಮೂಲಕ ಹೃದಯ ವೈಶಾಲ್ಯತೆ ಮೆರೆಯುವುದನ್ನು ಕಾಣುತ್ತೇವೆ.
ಆಸ್ಪತ್ರೆಯ ಹೆರಿಗೆ ಕೋಣೆಯ
ಪ್ರತಿ ಅವ್ವಂದಿರ ಚೀರಾಟ ಕೇಳಿದಾಗ ನನ್ನವ್ವ ನೆನಪಾಗುತ್ತಾಳೆ....
[ಅವ್ವ ಎಂದರೆ ಜೀವ ಜಲ]
ಈ ಕವಿತೆಯನ್ನು ನಾಗರಾಜ್‍ರವರು ತಾಯಿಯ ಮಾತೃವಾತ್ಸಲ್ಯವನ್ನು ನೆನೆಯುವ ರೀತಿ ಅಮೋಘವಾದುದು. ಒಬ್ಬ ತಾಯಿ ಹೆರಿಗೆ ಸಂದರ್ಭದಲ್ಲಿ ಪಡುವ ಯಾತನೆ, ಸಂಕಟಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ವರ್ಣಭೇದ ನೀತಿಯ ಬಗ್ಗೆ ಹೋರಾಟ ನಡೆಸಿ, ಸಾಧಿಸಿ ತೋರಿಸಿದ ಛಲಗಾರ ನೆಲ್ಸನ್ ಮಂಡೇಲಾ ಕುರಿತು ಬರೆಯುವಾಗ ಅವರ ಆದರ್ಶಗಳನ್ನು ಹೊಳಪಾಗಿಸುತ್ತಾ
ನನ್ನ ಜನಗಳಿಗೀಗ
ಬಣ್ಣದ ಭಯವಿಲ್ಲ
ಕಪ್ಪು ಈಗ ಗಟ್ಟಿತನದ ಸಂಕೇತ
ಎಂದು ದಮನಿತರ ಪರವಾಗಿ ನಿಲ್ಲುವ ಭಾವ ಪ್ರತಿಧ್ವನಿಸಿದೆ.
ನೀವು ನಿದ್ರೆಗೆ ಜಾರಿದ್ದೀರಿ
ನಮ್ಮಗಳ ಮುಖ ಕಪ್ಪುಗಟ್ಟುತ್ತಿದೆ..
[ಮುಖ ಕಪ್ಪುಗಟ್ಟುತ್ತಿದೆ ಮಂಡೇಲಾ]
ಅಂತಹ ಒಬ್ಬ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡ ನಾವೀಗ ಕಪ್ಪಾಗಿದ್ದೇವೆ ಎನ್ನುವಲ್ಲಿ ಬಾಹ್ಯ ಬಣ್ಣಕ್ಕಿಂತಲೂ ಆಂತರಿಕ ವರ್ಣಕ್ಕೆ, ಮಾನವೀಯ ಮೌಲ್ಯಗಳಿಗೆ ಜೀವತುಂಬಿರುವುದನ್ನು ಕಾಣುತ್ತೇವೆ.
ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ವೈಚಾರಿಕತೆ ಎಷ್ಟೇ ಬೆಳೆದಿದ್ದರೂ ಜಾತಿ-ವ್ಯವಸ್ಥೆ ಮಾತ್ರ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು ದುರಂತ. ಜಾತಿಪದ್ದತಿಯಿಂದ ಸಾಮಾಜಿಕ ಅಸಮಾನತೆ ಏರ್ಪಟ್ಟು ಮನಸ್ಸುಗಳು ಹೇಗೆ ಛಿದ್ರಗೊಳ್ಳುತ್ತವೆ ಎಂಬುದು ಅರಿವಾಗದಿರದು.
ಅಂದು ಅಗ್ರಹಾರದ ಬೀದಿ, ದೀಪಗಳು ಬೆಳಗಿದ್ದವು
ಶ್ಲೋಕಗಳು ಶುರುವಾಗಿದ್ದವು
ಬ್ರಾಹ್ಮಣನೊಬ್ಬ
ಸ್ನಾನ ಮುಗಿಸಿ ಪಠಿಸುತ್ತಾ ಹೊರಬಂದ
ನನ್ನ ನೋಡಿದವನೇ
ಬೆಳ್ಳಂಬೆಳಗ್ಗೆ ಪ್ರಾರಬ್ದ, ಸಿಂಡರಿಸಿದ
ಮುಖ ತಗ್ಗಿಸಿಕೊಂಡು ನಿಂತೆ
ಆತ ಇಟ್ಟಿದ್ದ ಕಸದ
ಬುಟ್ಟಿಯನ್ನು ಟ್ರ್ಯಾಕ್ಟರ್ಗೆ ಎಸೆದೆ
ಕಸದ ಮಧ್ಯೆ ಹೆಂಡದ ಖಾಲಿ ಬಾಟಲಿಗಳು ಬಿದ್ದಿದ್ದವು.
[ನಾನು ಜಗದ ಜಾಡಮಾಲಿ]
ಇಲ್ಲಿನ ಪದ್ಯಗಳು ಸಹಜವಾಗಿ ಎಲ್ಲರಿಗೂ ಸರಳವಾಗಿ ಅರ್ಥವಾಗಿಬಿಡುತ್ತವೆ. ಮೇಲ್ಜಾತಿ ಒಬ್ಬ ಬ್ರಾಹ್ಮಣ ಒಬ್ಬ ಕೆಳಜಾತಿಯವನನ್ನು ಕಂಡಾಗ ಸಿಂಡರಿಸುವನು ಆದರೆ ರಾತ್ರಿಯಿಡೀ ಕುಡಿದು ತೂರಾಡಿ, ಬೆಳಗ್ಗೆ ಬಾಟಲಿ ಬಿಸಾಡುವ ಸನ್ನಿವೇಶ ಬಿಂದಿಗೆಯಲ್ಲಿ ಶರಾಬು ತುಂಬಿ ಮೇಲೆ ಉಜ್ಜಿ ಉಜ್ಜಿ ತೊಳೆದು ಹೊಳೆಯುವಂತೆ ಮಾಡುವ ಘಟನೆ ನೆನಪಿಗೆ ತಂತು. ಒಳಗೆ ಕೊಳಕು ತುಂಬಿದ್ದರೂ ಮೇಲ್ವರ್ಗದವರ ಬಡಿವಾರ ಈ ಪಂಕ್ತಿಯಲ್ಲಿ ಅರಿವಾಗದಿರದು.
ದೇವರು ನಮ್ಮ ಹುಟ್ಟಿಸಿರುವನು ಎಂಬ ಮಿಥ್ಯಕ್ಕಿಂತಲೂ ನಾವೇ ದೇವರುಗಳನ್ನು ಸೃಷ್ಠಿಸಿದ್ದೇವೆ. ಗುಡಿ, ಚರ್ಚ್, ಮಸೀದಿಗಳನ್ನು ಕಟ್ಟಿದ್ದೇವೆ, ಮೂರ್ತಿಗಳನ್ನು ಕೆತ್ತ್ಟಿದ್ದೇವೆ, ಸ್ಥಾಪಿಸಿ ಪೂಜಿಸಿದ್ದೇವೆ. ಆದರೆ ಅಂತಹ ದೇವರ ಗುಡಿಗೆ ಪ್ರವೇಶ ನಿರ್ಬಂಧವಾದಾಗ..
ಇದೇ ಕಲ್ಲಿನ ದೇವರಿಗೆ ಅಲ್ಲವಾ
ತೋರಣ ಕಟ್ಟಿದ್ದು
ಅದೆಷ್ಟು ಮಣ್ಣು ಹೊತ್ತೆವು, ಇಟ್ಟಿಗೆ ಕೂಯ್ದೆವು
ಗುಡಿ ಕಟ್ಟಲು....
ಆ ದಿನ ಗುಡಿಗೆ ಕಾಲಿಟ್ಟ ಘಳಿಗೆ
ಜೀವಂತ ಸತ್ತು ಹೋದೆವು ದೇವರೆ
ಊರಿನ ಅದೆಷ್ಟು ಜನ ಕಣ್ಣೀರಿಟ್ಟರು ನಿನ್ನ ಮುಂದೆ!
ನಮ್ಮವರು ಸತ್ತಾಗಲೂ, ಅಷ್ಟು ಕಣ್ಣೀರು ಸುರಿಸಿದ್ದು ನಾ ನೋಡಿಲ್ಲ....
[ಜಗತ್ತೇ ಕೊಚ್ಚಿಕೊಂಡು ಹೋಗುವ ಕಣ್ಣೀರು ಬರಿಸು ದೇವರೆ?]
ನಾಗರಾಜ್‍ರವರು ಈ ಕಾವ್ಯವನ್ನು ಬರೆದದ್ದು ಬಹುಶಃ ಹಾಸನದ ಗಂಗೂರಿನಲ್ಲಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರ್ಬಂಧ ಹೇರಿದಾಗ. ಈ ಅಮಾನವೀಯ ಘಟನೆಯನ್ನು ಖಂಡಿಸಿ, ಅದೇ ಗುಡಿಯನ್ನು ನಿರ್ಮಿಸಲು ಬೇಕಾದ ಇಟ್ಟಿಗೆ ಕೂಯ್ದಿದ್ದು, ಕಟ್ಟಡ ನಿರ್ಮಿಸಿದ್ದು, ಶ್ರಮಿಸಿದ ವ್ಯಕ್ತಿಗಳಿಗೆ ಮೂರ್ತಿ ಸ್ಥಾಪನೆಯ ನಂತರ ಅದೇ ದಲಿತರಿಗೆ ನಿರ್ಬಂಧ ಹೇರುವುದು ಎಷ್ಟು ಸರಿ?. ಇಡೀ ಊರಿಗೆ ಅಪವಿತ್ರವಾದಂತೆ ಭಾಸವಾಗಿ ಶೋಷಣೆ ಸ್ಪೋಟಗೊಂಡಿರುವುದನ್ನು ದೇವರಲ್ಲಿಯೇ ಪ್ರಶ್ನಿಸುವ ಕವಿಯ ಭಾವ ಸೊಗಸಾಗಿದೆ.
ನಾಗರಾಜ್‍ರವರು ಸಮಾಜವನ್ನು ಶೋಷಣಾ ರಹಿತವಾಗಿ ಕಾಣಲು ಬಯಸುತ್ತಾರೆ. ಇವರ ಕವಿತೆಗಳಲ್ಲಿ ಜೀತ ಪದ್ದತಿಯೂ ವ್ಯಕ್ತವಾಗಿರುವುದನ್ನು ಕಾಣುತ್ತೇವೆ.
ನಮ್ಮಜ್ಜ ದನ ಕಾಯುತ್ತಿದ್ದರಂತೆ
ಗೋವು ದೇವರೆಂದಲ್ಲ
ಅವರಜ್ಜ ಮಾಡಿದ ಕುಲುವಾಡಿಕೆÀಯಿಂದ
ನಮ್ಮಜ್ಜಿÀ ಸಗಣಿ ಬಾಚುತ್ತಿದ್ದಳಂತೆ
ಗೋವಿನ ಸಗಣಿ ಪವಿತ್ರ ಎಂದಲ್ಲ
ಅವರಜ್ಜಿ ಸಗಣಿ ಬಾಚಿದ ನೆನಪಾಗಿ
ಎರಡು ರೊಟ್ಟಿ, ಹಿಡಿ ಅನ್ನಕ್ಕಾಗಿ....
[ನಾವು ಹುಲ್ಲು ಮೇಯುತ್ತೇವೆ ರಕ್ತವನ್ನಲ್ಲ]
ಇಲ್ಲಿನ ಎಲ್ಲಾ ಕವಿತೆಗಳಲ್ಲಿ ಬಂಡಾಯದ ಧ್ವನಿ ಮೊಳೆದಿರುವುದನ್ನು ಕಾಣುತ್ತೇವೆ. ನಾಗರಾಜ್‍ರವರು ಸಾಮಾಜಿಕ ತಲ್ಲಣಗಳನ್ನು, ಶೋಷಣೆಗಳನ್ನು ನೇರಮಾತುಗಳಲ್ಲಿ ಒಡಮೂಡಿಸಿದ್ದಾರೆ. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜ್‍ರವರು ದಮನಿತರ, ತುಳಿತಕ್ಕೊಳಗಾದವರ ಧ್ವನಿಯಾಗಿ ಕಾವ್ಯ ಕುಂಚದಲ್ಲರಳಿದ್ದಾರೆ. ಇವರ ಕವಿತೆಗಳಲ್ಲಿ ಮಾನವೀಯ ಮೌಲ್ಯಗಳ ಝೇಂಕಾರವಿದೆ. ಉಳ್ಳವರ ದರ್ಪಕ್ಕೆ ದಿಕ್ಕಾರವಿದೆ. ಶೋಷಿತರಿಗೆ ಸಾಂತ್ವಾನವಿದೆ. ಇಲ್ಲಿನ ಬಹುತೇಕ ಪದ್ಯಗಳು ಗದ್ಯದ ತೆರನಾಗಿವೆ. ಭಾಷೆಯ ಬಳಕೆ, ಪದ ಬಳಕೆ ಇನ್ನೂ ಸ್ವಲ್ಪ ಪುಷ್ಠಿದಾಯಕವಾದರೆ ಕಾವ್ಯ ಮನೋಹರವಾಗುತ್ತದೆ. ಗೆಳೆಯ ನಾಗರಾಜ್ ನೇರನುಡಿಯ ವ್ಯಕ್ತಿ ಅನ್ನಿಸಿದಂತೆಯೇ ಬರೆದಿದ್ದಾರೆ. ಆದರೆ ಕಾವ್ಯದ ಶೀರ್ಷಿಕೆಗಳು ಸ್ವಲ್ಪ ಉದ್ದವಾದವೇನೋ ಅನ್ನಿಸಿತು. ಅವುಗಳನ್ನು ಸಂಕ್ಷೀಪ್ತಗೊಳಿಸಬಹುದಿತ್ತು. ಒಟ್ಟಾರೆ ಹೇಳುವುದಾದರೆ ಪ್ರಸ್ತುತ ಸಮಾಜದ ಕನ್ನಡಿಯಂತೆ ಇಲ್ಲಿನ ಕವಿತೆಗಳು ಕಾಣುತ್ತವೆ. ಇವರ ಅನೇಕ ಕವಿತೆಗಳನ್ನು ನಾನು ಫೇಸ್‍ಬುಕ್‍ನಲ್ಲಯೇ ಓದಿದ್ದೇನೆ, ಪ್ರತಿಕ್ರಿಯಿಸಿದ್ದೇನೆ. ಅವುಗಳೀಗ ಪುಸ್ತಕದ ರೂಪದಲ್ಲಿ ಬಂರಿರುವುದು ಸ್ವಾಗತಾರ್ಹ. ಬಂಡಾಯದ ಧ್ವನಿಗಳು ಕ್ಷೀಣಿಸಿದವೇನೋ ಅನ್ನುವ ಸಂದರ್ಭದಲ್ಲಿ ನಾಗರಾಜ್‍ರವರು ನಮ್ಮೆದುರಿಗೆ ಭರವಸೆಯ ಬೆಳಕಿನಂತೆ ನಿಂತಿದ್ದಾರೆ. ಅವರ ಮನೋವಾಂಛಲ್ಯ ಇನ್ನಷ್ಟು ಸಧೃಡಗೊಳ್ಳಲಿ, ಉತ್ತಮೋತ್ತಮ ಕವಿತೆಗಳು ಅವರ ಲೇಖನಿಯಿಂದ ಮೂಡಿಬರಲಿ, ಧೀನ ದಲಿತರ, ದಮನಿತರ ಬಾಳಿಗೆ ಬೆಳಕಾಗಲಿ ಎಂದು ಮನಸಾರೆ ಆಶಿಸುತ್ತೇನೆ.


                 ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ 
ಹಾಸನ- 573201
ಮೋ: 9483470794, 9739878197 

ಸಂಶೋಧನಾ ಸಾಹಿತಿ- ‘ಪಂಡಿತ್ ಸ್ವಾಮಿಗೌಡ”-ಕೊಟ್ರೇಶ್ ಎಸ್.ಉಪ್ಪಾರ್


ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಭವ್ಯಾವಾದ ಶಿಲ್ಪಕಲೆಗೆ ಎಷ್ಟು ಖ್ಯಾತಿವೆತ್ತಿದೆಯೋ ಅಷ್ಟÉ್ಟೀ ಇನ್ನೂ ಹೆಚ್ಚಾಗಿ ಕನ್ನಡ ಸಾರಸ್ವತ ಲೋಕಕ್ಕೆ ಬಹುಮುಖವಾಗಿ ಸಲ್ಲಿಸಿರುವ ಖ್ಯಾತಿ ಸಂಪಾದನೆಯಿಂದ ಘನತೆ ಹೆಚ್ಚಿಸಿಕೊಂಡಿದೆ. ಇದಕ್ಕೆ ಪುಂಖಾನುಪುಂಖವಾದ ಆಧಾರಗಳು ನಮಗೆ ದೊರಕುವುದರಲ್ಲಿ ಎರಡು ಮಾತಿಲ್ಲ.
ಕನ್ನಡ ಸಾಹಿತ್ಯಾಕ್ಕೆ ಹಾಸನ ಜಿಲ್ಲೆಯ ಕೊಡುಗೆಯನ್ನು ಸಂಶೋಧನಾತ್ಮಕವಾಗಿ, ವಿವರಣಾತ್ಮಾಕವಾಗಿ ಇಲ್ಲಿನ ಸಾಹಿತ್ಯ ದಿಗ್ಗಜರನ್ನು, ಅವರ ಸಾಹಿತ್ಯ ಸಿರಿಯನ್ನು ಒಂದೆಡೆ ಕಟ್ಟಿ ಕೊಟ್ಟವರೆಂದರೆ ಆಲೂರಿನ ಪಂಡಿತ್ ಸ್ವಾಮಿಗೌಡರು.
ಸ್ವಾಮಿಗೌಡರು ಆಲೂರು ತಾಲ್ಲೂಕಿನ ಕುಂದೂರು ಹೋಬಳಿಯ ದಾಸೇಗೌಡನಕೊಪ್ಪಲಿನಲ್ಲಿ 1926 ಮೇ3 ರಂದು ಜನಿಸಿದರು. ವಿದ್ಯಾರ್ಥಿದೇಸೆಯಿಂದಲೇ ಜನಪದ ಗೀತೆಗಳ ಸ್ವಾರಸ್ಯವÀರಿತ ಸ್ವಾಮಿಗೌಡರ ಮನಸ್ಸು ಸಾಹಿತ್ಯ ಹಾಗೂ ಸಂಸ್ಕøತಿಯತ್ತ ಆಕರ್ಷಣೆಗೊಂಡಿತು, ಕನ್ನಡ ಸಾಹಿತ್ಯ ಸೇವೆ ಮಾಡಬೇಕೆಂಬ ಹಿರಿದಾಸೆ ಹೊಂದಿದ್ದ ಸ್ವಾಮಿಗೌಡರು ಮಾಧ್ಯಮಿಕ ಶಾಲಾ ಉಪಧ್ಯಾಯರಾಗಿ ವೃತ್ತಿ ಆರಂಭಿಸಿದರು. ಶಿಕ್ಷಕ ವೃತ್ತಿಯ ಜೊತೆ ಜೊತೆಗೆ 1949 ರಿಂದ 1952 ರ ವರೆಗೆ ಜನಪದ ಗೀತೆಗಳನ್ನು ಸಂಗ್ರಹಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ಅಗಾಧ ಜನಪದ ಸಂಪತ್ತನ್ನು ಕ್ರೂಢೀಕರಿಸಿದರು.
ಆಗ ‘ಬೆಳಕು' ಪತ್ರಿಕೆ, ಒಕ್ಕಲಿಗರ ಪತ್ರಿಕೆ ಮತ್ತು ಶಾಲಾ ಕಾಲೇಜು ವಾರ್ಷಿಕ ಸಂಚಿಕೆಗಳಲ್ಲಿ ಪ್ರಕಟವಾದವು. 'ಮೈದುನ ರಾಮಯ್ಯನ ಸುಟ್ಟಿ' ಮತ್ತು 'ಶಂಕರ ಲಿಂಗನ ಸೋದರ ಪ್ರೇಮ' ಎಂಬೆರಡು ಜಾನಪದ ಲೇಖನಗಳು ಪ್ರಸಿದ್ಧಿ ಪಡೆದವು. ಅಲ್ಲದೇ ‘ತರೀಕೆರೆ ರಂಗಪ್ಪ ನಾಯಕ' ಹಾಗೂ ‘ಕುಣಿಗಲು ಕೆರೆ' ಎಂಬೆರಡು ಜಾನಪದ ಕಥನ ಗೀತೆಗಳು ಅನೇಕ ವಿದ್ವಾಂಸರ ಪ್ರಶಂಸೆಗೆ ಪಾತ್ರವಾದವು.
ಶ್ರೀಯುತ ಸ್ವಾಮಿಗೌಡರು ಶಾಂತಿಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುವಾಗಲೇ ಸಾಹಿತ್ಯ ಸಂಶೋಧನೆಯಲ್ಲಿ ಆಸ್ಥೆ ತಾಳಿ ಕಾರ್ಯೋನ್ನುಖರಾದರು.
ಶ್ರೀಯುತ ಸ್ವಾಮಿಗೌಡರು ‘ಕತ್ತರಿಘಟ್ಟ ಮತ್ತು ಹರಿಸೇವೆ', ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ', ಜನಪದ ಸಾಹಿತ್ಯ ಸುಧೆ, ‘ವೈಷ್ಣವ ಶಿರೋಮಣಿ ಚಂದ್ರಹಾಸ' ಕೃತಿಗಳು ಸೇರಿದಂತೆ ಅನೇಕ ಕವಿತೆಗಳು ಹಾಗೂ ಸಣ್ಣ ಕಥೆಗಳನ್ನು ಬರೆಯುವುದರ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇಯಾದ ಅಮೂಲ್ಯ ಕೊಡುಗೆ ನೀಡಿದ್ದಾರೆ.
1960 ರಲ್ಲಿ ಬಂದ ‘28 ಹಳ್ಳಿಯ ಕತ್ತರಿಘಟ್ಟ ಮತ್ತು ಹರಿಸೇವೆ' ಕೃತಿ ಸ್ವಾಮಿ ಗೌಡರಿಗೆ ಬಹಳವೇ ಹೆಸರು ತಂದುಕೊಟ್ಟಿತೆನ್ನಬಹುದು. ಇದು ಆಲೂರು ತಾಲ್ಲೂಕಿನ ಸಾಂಸ್ಕøತಿಕ ಬದುಕಿನ ಮೇಲೆ, ಪುರಾತನ ಸಾಂಸ್ಕøತಿಕ ಮಜಲುಗಳ ಮೇಲೆ ಬೆಳಕು ಚಲ್ಲುತ್ತದೆ. ಈ ಕೃತಿಯ ಬಗ್ಗೆ ಹಾಸನದ ಹೆಸರಾಂತ ಪತ್ರಿಕೆಯಾಗಿದ್ದ ‘ಪ್ರತಿನಿಧಿ' ಪತ್ರಿಕೆಯಲ್ಲಿ 1966 ಜನವರಿ 29 ರಂದು ಸಂಪಾದಕರಾಗಿದ್ದ ಎಸ್.ಎಸ್. ಅಯ್ಯಂಗಾರ್ ರವರು ಹೀಗೆ ಬರೆದಿದ್ದಾರೆ...
‘ಈ ಕಿರು ಹೊತ್ತಿಗೆಯಲ್ಲಿ ಶ್ರೀಯುತರು ಆಲೂರು ತಾಲ್ಲೂಕಿನ ಇಪ್ಪತ್ತೆಂಟು ಹಳ್ಳಿಗಳ ಜನರು ತಿರುಪತಿ ವೆಂಕಟರಮಣ ಸ್ವಾಮಿಯ ನಾಮಾಂಕಿತದಲ್ಲಿ ನಡೆಸುವ ಪೂಜೆ, ಸಲ್ಲಿಸುವ ಸೇವೆ, ಮಾಡುವ ಪ್ರಾರ್ಥನೆ ಇವುಗಳನ್ನು ಹೃದಯಂಗಮವಾಗಿ ಉಲ್ಲೇಖಿಸಿ ಗ್ರಾಮಾಂತರಗಳ ನಾಡಿಯಲ್ಲಡಗಿರುವ ಧರ್ಮಶ್ರದ್ಧೆ ಮತ್ತು ದೈವಭಕ್ತಿಗಳನ್ನು ತೋರಿಸಿದ್ದಾರೆ'.
1969 ರಲ್ಲಿ ಹೊರಬಂದ ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ' ಎಂಬ ಗ್ರಂಥವು ಸಂಶೋಧನಾತ್ಮಾಕದಿಂದ ಕೂಡಿದ ಒಂದು ಅತ್ಯಮೂಲ್ಯ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು, 190 ಪುಟಗಳಿರುವ ಈ ಕೃತಿಯು ಹಾಸನ ಜಿಲ್ಲೆಯ ಪಾಲಿಗೆ ಒಂದು ರೀತಿಯ ಸಾಹಿತ್ಯ ಚರಿತ್ರೆಯೆಂದೇ ಹೇಳಬಹುದು.
ಐದು ಪ್ರಮುಖ ಅಧ್ಯಾಯಗಳನ್ನು ಒಳಗೊಂಡ ಈ ಕೃತಿಯು ಮೊದಲನೇ ಅಧ್ಯಾಯದಲ್ಲಿ ‘ಶಾಸನಾಧಾರ' ಎಂಬ ಶೀರ್ಷಿಕೆಯಡಿಯಲ್ಲಿ ಹಲ್ಮಿಡಿ ಶಾಸನ, ಬೇಲೂರಿನ 202 ನೆಯ ಶಾಸನ, ಶ್ರವಣ ಬೆಳಗೊಳದ 344 ನೆಯ ಶಾಸನ, ಭರತೂರು ಶಾಸನ, ಶಾಂತಿ ಗ್ರಾಮದ ಶಾಸನ, ಹಾಸನದ 58 ನೆಯ ಶಾಸನ, ಬೇಲೂರಿನ 72 ನೆಯ ಶಾಸನ, ಚನ್ನರಾಯಪಟ್ಟಣದ 205 ನೆಯ ವೀರಗಲ್ಲು ಮುಂತಾದವುಗಳ ವಿವರಣೆ, ಪ್ರಾಮುಖ್ಯತೆ ಹಾಗೂ ಐತಿಹಾಸಗಳ ಬಗ್ಗೆ ಕೂಲಂಕುಷವಾಗಿ ವಿಶ್ಲೇಷಿಸಿದ್ದಾರೆ.
ಅಧ್ಯಾಯ-2 ರಲ್ಲಿ ಕೆಲವು ಶಾಸನ ಕವಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಇದು ಸಾಹಿತ್ಯ ಚರಿತ್ರೆ ಅಧ್ಯಯನಕಾರರಿಗೆ ಮಾರ್ಗದೀವಿಗೆಯಾಗಿದೆ. ದೇವ ಪಾರ್ಯ, ಬಾಚಣ್ಣ, ಬೊಪ್ಪಣ್ಣ ಪಂಡಿತ, ತ್ರಿವಿಕ್ರಮ ಪಂಡಿತ, ಸೋಮರಾಜ, ಪೋಲಾಳ್ವ-ದಂಡನಾಥ ರವರುಗಳ ಸಾಹಿತ್ಯ, ಕೊಡುಗೆಗಳ ಬಗ್ಗೆ ವಿಶ್ಲೇಷಿಸಿದ್ದಾರೆ.
ಮೂರನೆಯ ಅಧ್ಯಾಯದಲ್ಲಿ ರಾಜಾಶ್ರಯಗಳಲ್ಲಿ ಬೆಳೆದ ಸಾಹಿತ್ಯದ ಬಗ್ಗೆ ತಿಳಿಸುತ್ತಾ ಗಂಗರ ಆಶ್ರಯದಲ್ಲಿ- ಚಾವುಂಡರಾಯ, ಮೊದಲನೆಯ ನಾಗವರ್ಮ; ಹೊಯ್ಸಳರ ಆಶ್ರಯದಲ್ಲಿ ಅಭಿನವ ಪಂಪ, ಕಂತಿ, ರಾಜಾದಿತ್ಯಾ, ಸುಮನೋಬಾಣ, ಕವಿ ಚಕ್ರವರ್ತಿ ಜನ್ನ, ಮಲ್ಲಿಕಾರ್ಜುನ, ದರ್ಪಣಕಾರ ಕೇಶಿರಾಜ; ವೀರಶೈವ ಕವಿಗಳಾದ- ಕ್ರಾಂತಿಕಾರ ಹರಿಹರ, ಷಟ್ಟದಿಯ ಜನಕ ರಾಘವಾಂಕ, ಕೆರೆಯ ಪದ್ಮರಸ, ಕುಮಾರ ಪದ್ಮರಸ; ಹಾಗೆಯೇ ಇತರ ಕವಿಗಳ ವರ್ಗದಲ್ಲಿ ಎರಡನೆಯ ನಾಗವರ್ಮ, ನೇಮಿಚಂದ್ರ, ರುದ್ರಭಟ್ಟ, ಪದ್ಮಣಾಂಕ, ನರಹರಿ ಮುಂತಾದ ಕವಿವರ್ಯರ ಸಾಹಿತ್ಯ ಕೊಡುಗೆಗಳನ್ನು ಉಲ್ಲೇಖಿಸಿದ್ದಾರೆ, ವ್ಯಕ್ತಿತ್ವಗಳನ್ನು ಪರಿಚಯಿಸಿದ್ದಾರೆ.
ಅಧ್ಯಾಯ ನಾಲ್ಕರಲ್ಲಿ ಹತ್ತೊಂಬತ್ತನೆಯ ಶತಮಾನದ ಕೊಡುಗೆ ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀನಿವಾಸ, ಗೊರೂರು ನರಸಿಂಹಾಚಾರ್ಯ, ನಂಜುಂಡಾಚಾರ್ಯ, ಶಿವನಂಜೇಗೌಡ, ಯಜಮಾನ ಸಿದ್ದಲಿಂಗಪ್ಪ ಅವರ ಸಾಹಿತ್ಯ ಹಾಗೂ ಸಾಂಸ್ಕøತಿಕ ಕೊಡುಗೆಗಳ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ.
ಇದರಲ್ಲಿ ಕೊನೆಯ ಅಧ್ಯಾಯ ಇಪ್ಪತ್ತನೆಯ ಶತಮಾನದ ಕೊಡುಗೆ ಎಂಬ ಶೀರ್ಷಿಕೆಯಡಿಯಲ್ಲಿ ಬೇಲೂರು ಕೇಶವದಾಸರಿಂದ ಶ್ರೀ ಎಚ್.ಆರ್. ಷಣ್ಮುಖಯ್ಯ ನವರವರೆಗೆ ಸುಮಾರು 63 ವಿವಿಧ ಸಾಹಿತ್ಯ ದಿಗ್ಗಜರನ್ನು, ಅವರ ಸಾಹಿತ್ಯಿಕ ಮೌಲ್ಯಗಳನ್ನು ಪರಿಚಯಿಸಿದ್ದಾರೆ.
ಹೀಗೆ ಪಂಡಿತ್ ಸ್ವಾಮಿಗೌಡರು ಕನ್ನಡ ಸಾಹಿತ್ಯಕ್ಕೆ ಮರೆಯಲಾಗದ ಕೊಡುಗೆ ನೀಡಿದ್ದಾರೆ. ಇವರು ಆಲೂರು ತಾಲ್ಲೂಕಿನ ಹಿರಿಯ ತಲೆಮಾರಿನ ಕವಿಗಳೂ ಹೌದು. ಸಂಶೋಧಕರು ಹೌದು. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿಯಾಗಿ ಬದುಕಿ ಬಾಳಿದ್ದ ಧೀಮಂತ ವ್ಯಕ್ತಿ ಸ್ವಾಮಿಗೌಡರು.

,
ಕೊಟ್ರೇಶ್ ಎಸ್.ಉಪ್ಪಾರ್

 ಆಲೂರು




ಶನಿವಾರ, ಅಕ್ಟೋಬರ್ 11, 2014

ರೂಪಕಗಳಿಂದ ಕಂಗೊಳಿಸುವ ವಚನ ಲಾವಣ್ಯ – ಡಾ. ಚನ್ನಣ್ಣ ವಾಲೀಕಾರ


ಕನ್ನಡ ಕಾವ್ಯದಲ್ಲಿ ಜನಪರವಾದ ಕಾವ್ಯವೆಂದರೆ ವಚನ ಸಾಹಿತ್ಯವು ಹನ್ನೆರಡನೆ ಶತಮಾನದಿಂದ ಇಪ್ಪತ್ತನೆ ಶತಮಾನದವರೆಗೆ ಹುಟ್ಟಿಕೊಂಡು ಬಂದ ವಚನ ಸಾಹಿತ್ಯ ಅತ್ಯಂತ ಸರ್ವರ ಜೀವಕ್ಕೆ ಜೀವಂತವಾದುದ್ದು. ಇಂತಹ ಜೀವಂತ ಸಾಹಿತ್ಯವನ್ನು ಇಪ್ಪತ್ತೊಂದನೆ ಶತಮಾನದಲ್ಲಿ ವಚನ ಲಾವಣ್ಯ ಎಂಬ ಹೆಸರಿನಲ್ಲಿ ರಚಿಸಿರುವ ಕೊಟ್ರೇಶ್ ಎಸ್. ಉಪ್ಪಾರ್ ರ ಈ ಕೃತಿ ಕರ್ನಾಟಕದ ಸರ್ವ ಜನ ಓದುವಂತದ್ದಾಗಿದೆ. ಅದರಲ್ಲೂ ಅಲಂಕಾರದಲ್ಲಿ ಅತ್ಯಂತ ಮಹತ್ವದಾಗಿರುವ ರೂಪಕದ ಮೂಲಕ ಈ ಕೃತಿ ಓದುಗರ ಮನಸ್ಸನ್ನು ಸೆಳೆದಿರುವುದು ಗಮನಿಸುವಂತಾದಾಗಿದೆ. ನೂರಾ ಒಂದು ವಚನದಿಂದ ತುಂಬಿರುವ ಈ ಕೃತಿಯಲ್ಲಿ ಕೆಲವು ಮುಖ್ಯವಾದ ವಚನಗಳ ಕುರಿತು.

ಹಾಲು ಹುಣ್ಣಿಮೆ ಇರುಳಿನಲ್ಲಿ ಕೋಟಿ ಕೋಟಿ ತಾರೆಗಳು
ಮಿನು ಮಿನುಗಿ ಜಗಕೆ ಅಚ್ಚರಿಯ ಉಂಟುಮಾಡಿರುವೆವಯ್ಯ
ನೀ ಸೃಷ್ಟಿಸದ ಸ್ವಭಾವ ಅರಿಯದೆ ದಿಗ್ಬ್ರಮೆಯಾಗಿ
ನಿನ್ನ ಚಮತ್ಕಾರಕ್ಕೆ ಸೋತಿಹೆನಯ್ಯ ಶ್ರೀ ಗುರುಕೊಟ್ಟುರೇಶ
ಕಾಣದಾ ಕಂದ ಕಾರ್ಯವ ವರ್ಣಿಸಲು ಸಾಧ್ಯವೆ ಪ್ರಭುವೆ

ಪ್ರಕೃತಿಯ ಸತ್ವ ಶಕ್ತ ಸೊಬಗು ಎಲ್ಲವುಗಳಿಗಿಂತ ಮೀರಿ ನಿಂತಿರುವುದೆಂಬುವುದು ಈ ವಚನ ಮನಂಬುಗುವಂತೆ ಚಿತ್ರಿಸಿರುವುದು ಇಲ್ಲಿ ಬಂದಿದೆ. ಹಾಗೆಯೆ ಈ ಕೆಳಗಿರುವ ವಚನ ಇನ್ನೊಂದು ಪ್ರಕೃತಿಯ ವೈಚಿತ್ರ್ಯವನ್ನು ಕುರಿತು ಹೇಳಿದ್ದು ಇಲ್ಲಿ ಒಳ್ಳೆಯ ಕಾವ್ಯ ಆಗುವುದರ ಕಡೆಗೆ ಇದರ ದಾರಿ ಸಾಗಿರುವುದು ಕಾಣುತ್ತೇವೆ.

ಮೋಡದಿಂದ ಅಗಲಿದ ಮಳೆ ಹನಿ ಚಿಪ್ಪು ಸೇರಿದರೆ ಮುತ್ತಾಗುವುದಯ್ಯ
ನೀರು ಸೇರಿದರೆ ಅದು ಜಲವಾಗುವುದಯ್ಯ
ಮರುಭೂಮಿ ಸೇರಿದರೆ ವ್ಯಯವಾಗುವುದಯ್ಯ ಶ್ರೀಗುರು ಕೊಟ್ಟೂರೇಶ
ಅದರ ವ್ಯಕ್ತಿತ್ವ ನಿರ್ಮಾಣ ತಾವಿದ್ದ ಸ್ಥಳಾವಲಂಬಿತ ನೋಡಾ ಪ್ರಭುವೆ

ಹೀಗೆ ಪ್ರಕೃತಿ ಶಕ್ತಿ ಸಾಮಥ್ರ್ಯದಿಂದ ಆರಂಭಗೊಂಡ ವಚನಗಳು ಮುಂದೆ ಸಾಮಾಜಿಕದೆಡೆಗೆ ಸಾಗಿದ್ದು ಅಷ್ಟೆ ಮಹತ್ವದಿಂದ ಕೂಡಿವೆ.

ಮೆಟ್ಟಿನೊಳಗಿರುವ ಕಲ್ಲು ಪಾದವ ಚುಚ್ಚುವುದಯ್ಯ
ಕಿವಿಯೊಳಗಿನ ಕೀಟ ಜೀವ ಹಿಂಡುವುದಯ್ಯ
ಕಣ್ಣಿನೊಳಗಿನ ಕಸವು ಗಾಸಿಗೊಳಿಸುವುದಯ್ಯ
ಶ್ರೀ ಗುರು ಕೊಟ್ಟೂರೇಶ ಮನೆಯೊಳಗಿನ ಜಗಳ
ಮನವ ಕೊರೆಯುವುದು ಪ್ರಭುವೆ
ಹೀಗೆ ಸಾಗುತ್ತ ಕವಿ ಸಮಾಜಕ್ಕೆ ಜೀವಕ್ಕೆ ಕಂಠಕವಾಗಿದ್ದ ಜಾತಿ ಭೂತವನ್ನು ಕುರಿತು ಬರೆದದ್ದು ಅತೀ ಮಹತ್ವದಾಗಿದೆ.

ಗಲ್ಲಿಗಲ್ಲಿಗೂ ಜಾತಿಯ ಸೃಷ್ಟಿ ಮಾಡಿಹರಯ್ಯ
ಜಾತಿ ಹಾತಿಗೂ ಮತ್ತೊಬ್ಬ ಸ್ವಾಮಿ ಬಂದಿಹನಯ್ಯ
ಮತಕ್ಕೊಂದು ಮಠವಯ್ಯ ಪಥಕ್ಕೊಂದು ಪುರಾಣವಯ್ಯ
ಶ್ರೀಗುರು ಕೊಟ್ಟೂರೇಶ ಮಠಗಳು ಮಾನವ ಕುಲವ
ವಿಘಟಿಸುತ್ತಿವೆ ಪ್ರಭುವೆ.

ಹೀಗೆ ಸಾಗುವ ವಚನ ಬದುಕಿನ ಬೇರೆ ಬೇರೆ ವಿಷಗಳನ್ನು ಬಳಸಿಕೊಂಡು ಹೊಸ ಆಲೋಚನೆಗಳ ಕಡೆಗೆ ಆಲೋಚಿಸಲಿಕ್ಕೆ ಜನತೆಗೆ ಬಿಟ್ಟಿದ್ದ ಮತ್ತೆ ಮತ್ತೆ ಯೋಚಿಸುವ ಸಂಗತಿಯಾಗಿದೆ.

ಕೆಸರಲ್ಲೇ ಜನಿಸಿ ಕೆಸರ ಮೆತ್ತಿಕೊಳ್ಳದ
ನೀರಲ್ಲೇ ನಿಂತು ತಲೆ ನೆನೆಯದ
ತವರೆಯಂತಿರುವುದು ಎನ್ನ ಈ ಜಗವು
ಶ್ರೀಗುರು ಕೊಟ್ಟೂರೇಶ

ಈ ವಚನಗಳಿಗೆ ವಚನ ಲಾವಣ್ಯ ಎಂಬ ಹೆಸರಿಟ್ಟಂತೆ ಇಲ್ಲಿಯ ಹೆಚ್ಚಿನ ವಚನಗಳು ಲಾವಣ್ಯದಿಂದ ಕೂಡಿವೆ. ಹಾಗೆಯೆ ಅಲಂಕಾರದ ಗುರುವಾಗಿರುವ ರೂಪಕದಿಂದ ಕೂಡಿವೆ. ಆದರೆ ಕೊಟ್ರೇಶ್ ಎಸ್.ಉಪ್ಪಾರ್ ರವರು ಇಲ್ಲಿನ ಹೆಚ್ಚಿನ ವಚನಗಳು ಆಧುನಿಕ ಪದ್ಯದಂತೆ ಬರೆಯದೆ ಹನ್ನೆರಡನೆ ಶತಮಾನದ ವಚನದ ರೂಪದಲ್ಲಿ ಮೂರು ನಾಲ್ಕು ಸಾಲಿನಲ್ಲಿ ಬರೆದಿದ್ದರೆ ಈ ಕೃತಿಯ ಸೊಗಸು ಇನ್ನಷ್ಟು ಹೆಚ್ಚಾಗುತ್ತಿತ್ತು.

ಡಾ| ಚೆನ್ನಣ್ಣ ವಾಲಿಕಾರ
                                                                ಗುಲಬರ್ಗಾ