ಗುರುವಾರ, ಮೇ 29, 2014
ಮಂಗಳವಾರ, ಮೇ 27, 2014
ಜಾನಪದ ಖಣಜ ಡಾ|| ಹಂಪನಹಳ್ಳಿ ತಿಮ್ಮೇಗೌಡರು
ಒಂದು ಕಡೆ ಇಂಗ್ಲೀಷ್, ಒಂದು ಕಡೆ ಕನ್ನಡ ಹಾಗೇ ಇನ್ನಿತರ ಭಾಷೆಗಳ ರಮ್ಯ ಸಾಹಿತಿಗಳು ಕಲಾವಿದರು ಒಪ್ಪುವಂತೆ, ಕಲೆ ಜನಸಾಮಾನ್ಯನ ಬಗ್ಗೆ ಇರಬೇಕು. ಮತ್ತೆ ಕಲೆ ಜನ ಸಾಮಾನ್ಯನಿಗೆ ತಿಳಿಯಬೇಕು. ನಿಜ ಅದಕ್ಕೆ ತಕ್ಕಂತೆ ಜನ ಸಾಮಾನ್ಯರೂ ಸಹ ಸ್ಪಂದಿಸಬೇಕು. ಇದು ಕೇವಲ ಆಸ್ಥಾನ ಪಂಡಿತರಿಗೆ ಎನ್ನುವಂತೆ ಮಾತ್ರ ಆಗಬಾರದು. ಆದರೆ ಇನ್ನೊಂದು ಕಡೆ ಕಲೆಯಲ್ಲಿ ನಾವಿನ್ಯತೆ ಇರಬೇಕು. ಈ ನಾವಿನ್ಯತೆ ಕಾರಣವಾಗಿ ಕಲೆ ಕೇವಲ ಪ್ರತಿಷ್ಠಿತರ ಸೊತ್ತಾದರೆ ಅದನ್ನು ಜನ ಸಾಮಾನ್ಯರ ಬಳಿಗೆ ಒಯ್ಯತಕ್ಕಂತ ಆ ಒಂದು ಉದ್ದೇಶ ಎಲ್ಲಿ ಸಾರ್ಥಕವಾಗುತ್ತೆ ? ಇದೇ ಪ್ರಶ್ನೆ ಕಾಡಿದ್ದು ಹಾಸನ ಜಿಲ್ಲೆಯ ಅತ್ಯಂತ ವಿಶಿಷ್ಟವಾದ ಹಾಗೂ ಅತ್ಯಂತ ಶ್ರೇಷ್ಠ ಕೆಲಸ ಮಾಡುತ್ತಿರುವ ಡಾ|| ಹಂಪನಹಳ್ಳಿ ತಿಮ್ಮೇಗೌಡರಿಗೆ.
ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪಾರಂಪರಗತವಾದ ಜ್ಞಾನಿ-ಅಜ್ಞಾನಿಗಳು, ಅಕ್ಷರಸ್ಥರು-ನಿರಕ್ಷರಕುಕ್ಷಿಗಳೂ ಕೂಡ ಸ್ಪಂದಿಸತಕ್ಕಂತಹ ಜಾನಪದ ಕಲೆಯನ್ನು ಸುಧಾರಿಸಿ, ಅದರ ಬಗ್ಗೆ ಒಂದು ಅದ್ಭುತ ಕಲ್ಪನೆ ಮಾಡಿಸಿದ್ದು ತಿಮ್ಮೇಗೌಡರು. ಪ್ರಾಯಶಃ ನನಗೆ ತಿಳಿದ ಹಾಗೆ ಜಿಲ್ಲೆಯಲ್ಲಿ ಮೊಟ್ಟ ಮೊದಲು ಜನಪದ ಕ್ಷೇತ್ರದಲ್ಲಿ ಗ್ರಂಥ ರಚಿಸಿದವರೆಂದರೆ ಜಾನಪದ ಜಂಗಮ ಡಾ|| ಎಸ್.ಕೆ ಕರೀಂಖಾನ್ ಹಾಗೂ ಡಾ|| ರಾಜೇಗೌಡ ಹೊಸಳ್ಳಿ ಇವರ ನಂತರ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಾ ಜೊತೆ ಜೊತೆಗೆ ಜಾನಪದದ ಸೊಗಡನ್ನ ಉಣಬಡಿಸುವಂತ ಕೃತಿಗಳನ್ನು ರಚಿಸಿದವರೆಂದರೆ ತಿಮ್ಮೇಗೌಡರು. ಇವರು ಜನಿಸಿದ್ದು ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಹಂಪನಹಳ್ಳಿಯಲ್ಲಿ, 1957 ಮೇ-18 ರಂದು. ಇವರ ತಂದೆ ಮೂಡಲಗಿರಿಗೌಡ, ತಾಯಿ ಶ್ರೀಮತಿ ಚನ್ನಮ್ಮ. ನಿರಕ್ಷರ ಕುಟುಂಬದಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೇ ಹೋರಾಟದ ಬದುಕಿನೊಂದಿಗೆ ಬೆಳೆದು ಬಂದವರು. ಹುಟ್ಟೂರಾದ ಹಂಪನಹಳ್ಳಿಯಲ್ಲಿ ಕಿರಿಯ ಪ್ರಾಥಮಿಕ, ಹೆರಗುನಲ್ಲಿ ಹಿರಿಯ ಪ್ರಾಥಮಿಕ ಹಾಗೂ 12 ಕಿ.ಮೀ ದೂರದಲ್ಲಿದ್ದ ಶಾಂತಿಗ್ರಾಮಕ್ಕೆ ದಿನಾಲೂ ಕಾಲುನಡಿಗೆಯಲ್ಲೇ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಹಾಸನದ ಕಲಾ ಕಾಲೇಜಿನಲ್ಲಿ ಪಿ.ಯು.ಸಿ ಯಿಂದ ಬಿ.ಎ ಪದವಿ ಪಡೆದು ಮೈಸೂರು ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಪಿ.ಹೆಚ್.ಡಿ ಪದವಿ ಪಡೆದರು. ನಂತರ ತಾವು ಓದಿದ ಕಾಲೇಜಿನಲ್ಲೇ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. ಇಷ್ಟೇ ಅಲ್ಲದೇ ಜಾನಪದ ಸಾಹಿತ್ಯ, ಸಾಹಿತ್ಯ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.
ಹಾಸನ ಜಿಲ್ಲಾ ಸಾಂಸ್ಕೃತಿಕ ವೇದಿಕೆ ಪ್ರಾರಂಭ ಮಾಡಿದವರಲ್ಲಿ ಅಗ್ರಮಾನ್ಯರಾಗಿದ್ದಾರೆ. ಜೊತೆಗೆ ಈ ಸಂಸ್ಥೆಯ ಪ್ರಧಾನ ಕಾರ್ಯದಶರ್ಿಯಾಗಿ ಎರಡು ವರ್ಷ ಕಾಯರ್ೊನ್ಮುಖಗೊಂಡು ಸುಮಾರು 36 ಅದ್ದೂರಿ ಹಾಗೂ ಅರ್ಥಗಭರ್ಿತ ಸಮಾರಂಭಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ. ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಜಾನಪದ ಅಕಾಡೆಮಿಯಿದೆಯೆಂದು ಇಡೀ ಜಿಲ್ಲೆಗೆ ತೋರಿಸಿ ಕೊಟ್ಟವರೆಂದರೆ ತಿಮ್ಮೇಗೌಡರು. ಮೂಲ ಜಾನಪದ ಸೊಗಡನ್ನು ಬಿಂಬಿಸುವಂತಹ ತಂಬೂರಿ ಕಲಾವಿದರಾದ ಲಕ್ಷ್ಮಯ್ಯ, ಕೀಲು ಕುದುರೆ ಬಂಗಾರಿ, ಅರಸೀಕೆರೆ ಕೊಮಾರಯ್ಯ, ಇಬ್ಬೀಡು ಚನ್ನಪ್ಪ ಇವರುಗಳಿಗೆ ಅಕಾಡೆಮಿಯ ಬೆಳ್ಳಿಹಬ್ಬ ಸಂದರ್ಭದಲ್ಲಿ ಅಕಾಡೆಮಿ ರಾಜ್ಯ ಪ್ರಶಸ್ತಿ ಬರುವಲ್ಲಿ ಶ್ರಮಿಸಿದರು. ಇದೇ ಸಂದರ್ಭದಲ್ಲಿ ಪ್ರತಿ ಜಿಲ್ಲೆಗೆ ಒಬ್ಬ ಕಲಾವಿದ ಮತ್ತು ಒಬ್ಬ ವಿದ್ವಾಂಸರನ್ನು ಗೌರವಿಸುವ ಅವಕಾಶವಿದ್ದಾಗ ಹಾಸನ ಜಿಲ್ಲೆಗೆ ಬೆಳ್ಳಿಹಬ್ಬದ ಪ್ರಶಸ್ತಿಯನ್ನು ಹೆಚ್.ಜೆ. ಲಕ್ಕಪ್ಪಗೌಡ, ಹಿ.ಶಿ ರಾಮಚಂದ್ರೇಗೌಡ, ಡಾ|| ರಾಜೇಗೌಡ ಹೊಸಹಳ್ಳಿ, ಮೇಟಿಕೆರೆ ಹಿರಿಯಣ್ಣ, ಕಬ್ಬಳಿ ವೆಂಕಟರಾಮು ಹಾಗೂ ಶಿವನಗೌಡ ಪಾಟೀಲ್ ಹೀಗೆ ಆರು ಜನರಿಗೆ ಸಂದಲು ಇವರೇ ಕಾರಣಕರ್ತರೆನ್ನುವುದು ಹೆಮ್ಮೆಯ ಸಂಗತಿ.
ದೇಶದಾದ್ಯಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿದರ್ೇಶಕರಾಗಿ ದುಡಿದಿದ್ದಾರೆ. ಜಾನಪದ ಸಾಹಿತ್ಯ ಅಕಾಡೆಮಿಯ ಸಹ ಯೋಗದಲ್ಲಿ ಜಾನಪದ ಶಿಬಿರ ಏರ್ಪಡಿಸಿ, ಅದರ ನಿದರ್ೇಶಕರಾಗಿಯೂ ಕೆಲಸ ಮಾಡಿದರು. ನಿಜಕ್ಕೂ ವಿವಿಧ ಅನ್ನಿಸುವ ವಿಷಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ, ಭಿನ್ನ ಮಗ್ಗಲುಗಳಿಂದ ವಿವೇಚಿಸಿ, ವಿಶ್ಲೇಷಿಸಿ, ವಿಮಶರ್ಿಸಿ ಸಾರಭೂತವಾಗಿ ಅಡಕಗೊಳಿಸಿ ಬರೆದ ಜಾನಪದ ಸೊಗಡಿನ ಬರಹಗಳು ಸಂಕ್ಷೇಪ ಅನ್ನಿಸಿದರೂ ನಿಕ್ಷೇಪದಂಥವು. ಅದರಲ್ಲಿಯೂ ಅವರ ಗದ್ಯ ಬರವಣಿಗೆ ಶೈಲಿ ಅದ್ಭುತ. ನಿಷ್ಠ್ಟುರ ವ್ಯಕ್ತಿತ್ವ ಹೊಂದಿದ ತಿಮ್ಮೇಗೌಡರು ಒಬ್ಬ ನೇರವಾದಿ. ತಮ್ಮದೇ ಸಿದ್ಧಾಂತ, ತತ್ವಗಳಿಗೆ ಬದ್ಧರಾಗಿ ಬಾಳಿದವರು, ಹಾಗೆಯೇ ಬಾಳುವವರೂ ಸಹ. ಜಾತಿ ವ್ಯವಸ್ಥೆಯ ಬಗ್ಗೆ ಸಿಡಿದೆದ್ದವರು. ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹಗಲಿರುಳು ದುಡಿದವರೆಂದರೆ ಅತಿಶಯೋಕ್ತಿಯಾಗಲಾರದು.
ಸದಾ ವೈಚಾರಿಕ ಚಿಂತನೆ ನಡೆಸುವ ಇವರು ಅದೆಷ್ಟೋ ಎಲೆ-ಮರೆ ಕಾಯಿಗಳನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಸಹಸ್ರಾರು ಶಿಷ್ಯ ವೃಂದವನ್ನು ಹೊಂದಿರುವ ಇವರು ಸಾಂಸ್ಕೃತಿಕ ಪರವಾದ ಚಿಂತಕರು. ನೂರಾರು ಕಲಾವಿದರನ್ನು ಮುಂಬೈ, ದೆಹಲಿ ಮುಂತಾದ ಅನೇಕ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಅವಕಾಶಗಳನ್ನು ಕೊಡಿಸುವುದರ ಮೂಲಕ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಜೊತೆ ಜೊತೆಗೆ ನನ್ನಂತಹ ಅನೇಕ ಯುವ ಸಾಹಿತಿಗಳಿಗೂ ಮಾರ್ಗದರ್ಶನ ಕೊಟ್ಟು ಮುನ್ನಡೆಸಿದ್ದಾರೆ. ದೇಶದ ವಿವಿಧೆೆಡೆಯಲ್ಲಿ ಅಂದರೆ ದೆಹಲಿ, ಇಂಧೂರ್, ಮುಂಬೈಯಲ್ಲಿ ನಡೆದ ಅನೇಕ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಕೀತರ್ಿ ಇವರದು. ಕನರ್ಾಟಕದ ಬಹುಶಃ ಎಲ್ಲಾ ಜಿಲ್ಲೆಗಳಲ್ಲೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇವರದು. ಇವರ ಲೇಖನಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಹಾಗೂ ಅನೇಕ ಸಂಚಿಕೆಗಳಲ್ಲಿಯೂ ಪ್ರಕಟಗೊಂಡಿವೆ.
್ಡ ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾನೂನು ಗೋಷ್ಠ್ಟಿಯಲ್ಲಿ ಪಾಲ್ಗೊಂಡಿದ್ದರು.
್ಡ ಬೀದರ್ನಲ್ಲಿ ನಡೆದ ಅಖಿಲ ಭಾರತ ಪ್ರಥಮ ಜಾನಪದ ಸಮ್ಮೇಳನದ ಆಹ್ವಾನಿತರಾಗಿ ಹಾಗೂ 'ಲೋಕಸಿರಿ' ನೆನಪಿನ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ.
್ಡ ಬೆಳಗಾವಿಯಲ್ಲಿ ನಡೆದ 3ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಜೀವನಾವರ್ತನ ಗೀತೆಗಳು' ಎನ್ನುವ ಇವರ ಕೃತಿ ಬಿಡುಗಡೆಯಾಗಿದೆ.
್ಡ ಸಿರಿಗೆರೆಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸ್ವಾಮೀಜಿಯವರಿಂದ ಸನ್ಮಾನಗೊಂಡಿದ್ದಾರೆ.
ಇವರ ಪ್ರಕಟಿತ ಕೃತಿಗಳು
ಗದ್ಯ ಕೃತಿಗಳು :-
ಮನನ, ಗುರುಮುಖ, ಹಿರಿಮೆಯ ಹಾಸನ, ಹಾಸನ ಜಿಲ್ಲೆಯ ಜಾನಪದ ಕಲಾವಿದರು, ಕದಿರು
ವ್ಯಕ್ತಿ ಪರಿಚಯಗಳು :-
ಮತಿಘಟ್ಟ ಕೃಷ್ಣಮೂತರ್ಿ, ಡಾ|| ಹೆಚ್.ಜೆ ಲಕ್ಕಪ್ಪಗೌಡ, ಡಾ|| ರಾಜೇಗೌಡ ಹೊಸಳ್ಳಿ.
ಸಂಪಾದಿತ ಕೃತಿಗಳು :-
ಜಾನಪದ ತಲೆಮಾರು -4, ಜಾನಪದ ಅಡುಗೆ ಉದ್ಯಮೀಕರಣ, ಜಾನಪದ ಜೀವನಾವರ್ತನ ಗೀತೆಗಳು.
ಇತರರೊಂದಿಗೆ ಸಂಪಾದಿತ ಕೃತಿಗಳು :-
ಜಾನಪದ ಸಮಾಚಾರ, ವಜ್ರಮುಖಿ. ಸಾಹಿತ್ಯ ಮಾರ್ಗ-1, ಸಾಹಿತ್ಯ ಮಾರ್ಗ-2, ಕಾವ್ಯ ಸಂಚಯ-5, ಕಾವ್ಯ ಸಂಚಯ-6, ಆಯ್ದ ಕವನಗಳು, ಸಾಹಿತ್ಯ ಸಂಪದ-1, ಸಾಹಿತ್ಯ ಸಂಪದ-2.
ಸಂಪಾದಿತ ಸಂಚಿಕೆಗಳು :- ಹೇಮಸಿರಿ, ಬೆಳ್ಳಿಬೆಳಕು, ಕಲಾಶ್ರೀ.
ಒಟ್ಟಾರೆ ಹೇಳುವುದಾದರೆ ಸೃಜನಶೀಲವಾದುದರಲ್ಲೆ ಶೋಧವೂ ನಿಹಿತವಿರುತ್ತದೆ-ಅರ್ಥದ ಶೋಧ, ತತ್ವದ ಶೋಧ, ಸತ್ಯದ ಶೋಧ, ಶಾಸ್ತ್ರೀಯ ನೆಲೆಯ ಸಂಶೋಧನೆಗೂ ಇವೇ ಗಮ್ಯವಾಗಿವೆ. ಹುಡುಕುವುದು, ಕಂಡುಹಿಡಿಯುವುದು, ಸೋಸುವುದು, ಶುದ್ಧಿ ಮಾಡುವುದು ಶೋಧನೆಯ ಪ್ರಕ್ರಿಯೆಗಳು. ಸಾಹಿತ್ಯದಲ್ಲಿ ಸಂಸ್ಕೃತಿಯ ಶೋಧನೆಯೂ ನಡೆಯುತ್ತದೆ. ಸಾಹಿತ್ಯ ಮತ್ತು ಸಂಶೋಧನೆ ಭಿನ್ನ ಶಿಸ್ತಿನ ವಿಷಯವಾಗಬಹುದಾಗಿಯೂ ಪರಸ್ಪರವಾದವು, ಸೃಜನಶೀಲ ಲೇಖಕರಾದ ಡಾ|| ಹಂಪನಹಳ್ಳಿ ತಿಮ್ಮೇಗೌಡರಲ್ಲಿ ಇವು ಮೇಳೈಸಿವೆ. ಅಭ್ಯಾಸ ಎನ್ನುವುದು ಸವಿನಯ ಅಧ್ಯಯನ, ಶ್ರದ್ಧೆಯ ಮಾತು. ಸತ್ಯಮುಖಿಯಾದವರಿಗೆ ಇಂಥ ವಿನಯ ಅಧ್ಯಯನದಲ್ಲಿ ಸಹಜವಾಗಿರುತ್ತದೆ. ವಿಷಯ, ವಿಶೇಷತೆಗಳನ್ನು ಪರಿಚಯಿಸಿಕೊಳ್ಳುವ ಪರಿಯನ್ನು ಇವರ ಗ್ರಂಥಗಳಲ್ಲಿ ಗಮನಿಸಬಹುದಾಗಿದೆ. ಇವರ ಸಾಹಿತ್ಯ ಸೇವೆ ಹಾಸನಕ್ಕೆ ಮಾತ್ರ ಮೀಸಲಾಗಿರದೆ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೂ ಹರಡಿ ಧೀಮಂತವಾಗಲಿ ಎಂದು ಆಶಿಸುತ್ತೇನೆ.

ಕನ್ನಡ ಸಾಹಿತ್ಯದ ಪಾಂಡಿತ್ಯ ಪ್ರತಿಭೆ- ಡಾ|| ಮಳಲಿ ವಸಂತ್ ಕುಮಾರ್
ವಿಶ್ವ ಕವಿ ಕುವೆಂಪು ಪರಂಪರೆಯಲ್ಲಿ ಸಾಗಿ ಬಂದಿರುವ ಮಳಲಿಯವರು ಮೌಢ್ಯ ವಿರೋದಿಯೂ ಹೌದು, ವಿಚಾರಪರ ಸಾಧಕರೂ ಹೌದು.- ನಾಡೋಜ ಡಾ|| ದೇ.ಜ.ಗೌ
ಅಕ್ಷರಶ: ದೇ.ಜ.ಗೌ ಅವರ ಮನದಾಳದ ನಲ್ನುಡಿ ಡಾ|| ಮಳಲಿಯವರ ವ್ಯಕ್ತಿತ್ವಕ್ಕಿಡಿದ ಕನ್ನಡಿಯಾಗಿದೆ.ಆಧುನಿಕ ಕನ್ನಡ ಸಾಹಿತ್ಯದ ಆಳ ಪರಂಪರೆ, ಅಧ್ಯಾಯನ ಶೀಲತೆ ಜೊತೆ ಜೊತೆಗೆ ವಾಗ್ಪ್ರೌಢಿಮೆಯನ್ನು, ಪಾಂಡಿತ್ಯ ಸಂಪನ್ನತೆ ಗಳಿಸಿದ, ನಿಭರ್ಿಡತೆಯಿಂದ ಒಳ ಹೊರವುಗಳನ್ನು ಪಠಿಸಬಲ್ಲ ಬೆರಳೆಣಿಕೆಯ ಕಂಚಿನ ಕಂಠಗಳಲ್ಲಿ ಡಾ|| ಮಳಲಿಯವರೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು.
1983 ರಲ್ಲಿ ಪ್ರಕಟವಾದ ಮಳಲಿಯವರ ಈಡು ಕಥಾ ಸಂಕಲನ ಓದಿದ ರಾಷ್ಟ್ರಕವಿ ಕುವೆಂಪುರವರು ಈ ರೀತಿ ಹೇಳಿದ್ದಾರೆ ಅಪಥ್ಯ, ಸ್ಥಿತ್ಯಂತರ, ರಿಕ್ತ ಮತ್ತು ಈಡು ಕಥೆಗಳು ನನ್ನ ಮೇಲೆ ತೀವ್ರ ಪರಿಣಾಮ ಉಂಟುಮಾಡಿದವು. ಅದು ಎಷ್ಟರ ಮಟ್ಟಿಗೆಂದರೆ ನಾನೂ ಸಹ ಎರಡು ದಿನ ನಿದ್ರೆ ಮಾಡಲಾಗಲಿಲ್ಲ.
ಕನ್ನಡ ಸಾಹಿತ್ಯದ ಭವ್ಯೋಜ್ವಲ ಇತಿಹಾಸದಲ್ಲಿ ಡಾ|| ಮಳಲಿಯವರಿಗೆ ವಿಶಿಷ್ಟ ಸ್ಥಾನವಿದೆ, ಅವರ ಭಾಷಾ ಪ್ರೌಢಿಮೆ ಅನನ್ಯ ಹಾಗೂ ಅದ್ವಿತೀಯವಾದದ್ದು.
20.04.2013 ರ ಶನಿವಾರ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆಯ ರತ್ನ ಮುಕುಟ ಡಾ|| ಮಳಲಿಯವರ ವ್ಯಕ್ತಿತ್ವದ ಹೊಳಪನ್ನು ಇಮ್ಮಡಿಗೊಳಿಸಿದೆ.
ಹಾಸನ ಜಿಲ್ಲೆಯ ಮಳಲಿ ಗ್ರಾಮದ ಶ್ರೀಮತಿ ದೇವಮ್ಮ ಮತ್ತು ಶ್ರೀ ಪಟೇಲ್ ಚಿಕ್ಕೇಗೌಡ ದಂಪತಿಗಳ ಸುಪುತ್ರರಾಗಿ 1945 ಆಗಸ್ಟ್ 6 ರಂದು ಜನಿಸಿದ ವಸಂತ್ ಕುಮಾರ್ರವರು ಹುಟ್ಟೂರಲ್ಲೇ ಪ್ರಾಥಮಿಕ ಹಾಗೂ ಪೌಡ ಶಿಕ್ಷಣವನ್ನು ಮುಗಿಸಿದ ನಂತರ ಇವರ ಮುಂದಿನ ವಿಧ್ಯಭ್ಯಾಸ [ಕುವೆಂಪುರವರು ಕುಪ್ಪಳ್ಳಿಯಿಂದ ಮೈಸೂರಿಗೆ ಬಂದಂತೆ] ಮೈಸೂರಿನಲ್ಲಾಯಿತು. ಬಲ್ಯದಿಂದಲೂ ಕುವೆಂಪುರವರ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಳಲಿಯವರು ಡಾ|| ಹೆಚ್.ತಿಪ್ಪೆರುದ್ರಸ್ವಾಮಿಯವರ ಮಾರ್ಗದರ್ಶನದಲ್ಲಿ ಕುವೆಂಪುರವರ ನಾಟಕ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ನಂತರ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ, ಮೈಸೂರು ವಿ ವಿ ನಿಲಯದ ಸ್ನಾತಕೋತ್ತರ ಕೇಂದ್ರಗಳಾದ ಮಂಡ್ಯ ಹಾಗೂ ಹಾಸನದಲ್ಲಿ ಪ್ರಾಧ್ಯಪಕರಾಗಿ ಸೇವೆಸಲ್ಲಿಸಿದ್ದಾರೆ.
ಡಾ||ಮಳಲಿಯವರು ಪ್ರಾಧ್ಯಪಕರಾಗಿ, ಮುಖ್ಯ ಸಂಯೋಜಕರಾಗಿ, ಸಂಘಟಕರಾಗಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರಜ್ವಲಗೊಳಿಸಿದ್ದಾರೆ. ಈಗಾಗಲೇ ಮುವತ್ತೈದಕ್ಕೂ ಹೆಚ್ಚು ಕೃತಿಗಳನ್ನು ನೀಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕಾವ್ಯ, ಕಥೆ, ನಾಟಕ, ವಿಮಶರ್ೆ, ಜಾನಪದ, ಪ್ರಬಂಧ, ಸಂಗ್ರಹ, ವಚನ ಸಾಹಿತ್ಯ ಹೀಗೆ ಹತ್ತಾರು ಪ್ರಕಾರಗಳಲ್ಲಿ ಆಳ-ನಿರಾಳತೆಯನ್ನು ಕಂಡುಂಡವರು, ಯಶಕಂಡವರು. ಕನ್ನಡ ಸಾಹಿತ್ಯದ ಅಪ್ರತಿಮ ವಾಗ್ಮಿಗಳು.
ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ತಿ.ರಾ.ಕೃ ರವರ ಪತ್ರಿಕಾ ಹೇಳಿಕೆ ನೋಡಿ , ತಟ್ಟನೇ ಫೋನಾಯಿಸಿ ಡಾ|| ಮಳಲಿಯವರಿಗೆ ಅಭಿನಂದನೆ ಸಲ್ಲಿಸಿದೆ. ಒಂದೆರಡು ದಿನಗಳ ನಂತರ ಶ್ರೀಯುತರ ಸಂದರ್ಶನ ಮಾಡಲೆಂದು ಕರೆಮಾಡಿದಾಗ ನಾಡೋಜ ಡಾ|| ದೇ.ಜ.ಗೌರವರ ಮನೆಯಲ್ಲಿರುವುದಾಗಿ ಅಲ್ಲಿಗೆ ಬರುವಂತೆ ಹೇಳಿದಾಗ ನಿಜಕ್ಕೂ ಹರ್ಷಗೊಂಡು ತೆರಳಿದೆ. ದೇ.ಜ.ಗೌ ವೃತ್ತದಲ್ಲಿಳಿದು ನೇರವಾಗಿ ಅವರ ಕುಟೀರಕ್ಕೆ ಪ್ರವೇಶಿಸಿದೆ. ಅಷ್ಟೊತ್ತಿಗೆ ಯಾವುದೋ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದ ಅವರನ್ನು ನನ್ನ ಪ್ರವೇಶ ಮೊಟುಕುಗೊಳಿಸಿರಬೇಕು ! 97ರ ಹರೆಯದಲ್ಲೂ ಹಸನ್ಮುಖಿಯಾಗಿ ದೇ.ಜ.ಗೌ ಸ್ವಾಗತಿಸಿದುದ ಕಂಡು ಉಲ್ಲಾಸಗೊಂಡೆ ಹಾಗೆಯೇ ಕನ್ನಡ ಸಾಹಿತ್ಯದ ಈರ್ವ ದಿಗ್ಗಜರ ದರ್ಶನ ಮಾಡಿ ಪಾವನಗೊಂಡೆ, ನಂತರ ಆಧುನಿಕ ಸಾಹಿತ್ಯದ ಒಳ-ಹೊರಗಳ ಸ್ಥಿತ್ಯಂತರದ ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ಚಚರ್ಿಸಿದೆವು. ಅವರು ಹೆಚ್ಚಾಗಿ ವೈಚಾರಿಕತೆಯನ್ನೇ ಅಪ್ಪಿಕೊಂಡು ವಿಶ್ಲೇಷಿಸುತ್ತಾ ಸಾಗಿದರು.
ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಅವರ ವಚನ ವಿಭೂತಿ ಆಧುನಿಕ ವಚನ ಸಂಕಲನದ ಬಗ್ಗೆ ಓದುಗರು, ವಿಮರ್ಷಕರು ತೋರಿದ ಅನನ್ಯ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರಂಭದಲ್ಲಿ ಪಂಪ, ಕುಮಾರವ್ಯಾಸ ಹಾಗೆಯೇ ಪ್ರಾಚೀನ ಸಾಹಿತ್ಯದ ಆಳವಾದ ಅಧ್ಯಯನ, ನಂತರ ಜನಸಾಮಾನ್ಯರ ದನಿಯಾದ ವಚನ ಸಾಹಿತ್ಯ ಹಾಗೆಯೇ ಆಧುನಿಕವಾಗಿ ಕುವೆಂಪುರವರ ವಿಶ್ವಮಾನವ ಸಾಹಿತ್ಯ ಇವರ ಪ್ರೇರಕ ಶಕ್ತಿಗಳು .
ಅವರೇ ಹೇಳುವಂತೆ ವಚನ ಸಾಹಿತ್ಯ ಕೇವಲ ಭಕ್ತಿಗೆ ಸೀಮಿತವಾಗದೇ ಅದೊಂದು ಜಾತ್ಯಾತೀತ ಆಂದೋಲನವಾಯಿತು. ಅದು ಸಮಾಜದ ಎಲ್ಲಾ ವರ್ಗದ , ಎಲ್ಲಾ ಜನಾಂಗದ ಮಿಡಿತವಾಗಿತ್ತು. ಬಸವ, ಅಲ್ಲಮ, ಅಕ್ಕ ಮಹದೇವಿಯವರಂತಹ ಶರಣ ಬಂಧುಗಳು ಈ ಉತ್ಕ್ರಾಂತಿಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದರು.
ವಚನ ಸಾಹಿತ್ಯ ನಿಜವಾದ ದೇಶೀಯ ಸಾಹಿತ್ಯ, ತಮಿಳು ನಾಡಿನ ಸಂಗಂ ಸಾಹಿತ್ಯವನ್ನು ಮೀರಿಸುವಂತದ್ದು, ಇದು ಕಾಯಕದಿಂದಲೇ ಬದುಕಿ ಬಾಳಿದ ಸ್ವಾಭಿಮಾನದ ಪ್ರತೀಕ. ಸರ್ವ ಸಮಾನತೆಯ ಸಾಮಾಜಿಕ ಆಂದೋಲನದ ಪ್ರತಿರೂಪ .
ಬಹುಮಟ್ಟಿಗೆ ಸಾಂಸ್ಕೃತಿಕತೆ ಮತ್ತು ವೈಚಾರಿಕತೆ ಸಂಲಗ್ನಗೊಂಡ ಸಾಹಿತ್ಯ, ಮೌಢ್ಯ ವಿರೋಧ ಭಾವನೆ, ಸ್ಪಷ್ಟವಾದ ಜಾತ್ಯಾತೀತ ನಿಲುವು ಇವರ ಪ್ರಮುಖ ಧೋರಣೆಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಪ್ರಾಚೀನ ವಚನ ಸಾಹಿತ್ಯ ಭಕ್ತಿ ಪ್ರಧಾನವಾದದ್ದು ಮತ್ತು ಆಧ್ಯಾತ್ಮಕತೆ ಸಂಯೋಗ, ಹಾಗೆಯೇ ಸಂಸ್ಕೃತಿಯ ಜೊತೆಗೆ ವೈಚಾರಿಕ ನಿಲುವಾದರೆ, ಆಧುನಿಕ ವಚನ ಸಾಹಿತ್ಯ ವರ್ತಮಾನಗಳ ಆಗು ಹೋಗುಗಳ ಕುರಿತಾದದ್ದು, ಸಾಮಾಜಿಕ ಬದಲಾವಣೆಗೆ ಪ್ರಮುಖ ಅಂಶವಗಿದೆ ಎಂಬುದು ಇವರ ದೃಡ ನಿಲುವಾಗಿದೆ.
ಶ್ರೀಯುತರ ದೃಢ ಸಂಕಲ್ಪದ ನಿಲುವು, ಧೋರಣೆಗಳೇ ಅವರ ಮೌಲ್ಯಭರಿತ ಸಾಹಿತ್ಯಕ್ಕೆ ಹೊಳವುಗಳಾಗಿವೆ. ಮಳಲಿ ಗಿಡ್ಡಮ್ಮ, ಕೋಲು ಪದಗಳು, ಜಾನಪದ ವೈಧ್ಯ, ಜಾನಪದ ನಂಬಿಕೆಗಳು-ಜಾನಪದ ಕೃತಿಗಳು; ಕಡಲಕವಿತೆಗಳು, ಹೃದಯ ಗಂಗೆ, ಕರಾವು-ಕವನ ಸಂಕಲನಗಳು; ಯಮಧರ್ಮ, ಲಂಕೇಶ್ವರ-ನಾಟಕಗಳು; ಈಡು-ಕಥಾಸಂಕಲನ; ಕದಂಬ, ವಿಪಕ್ಷೆ-ವಿಮಶರ್ಾ ಕೃತಿಗಳು; ಕವಿಗಳು ಕಂಡ ಕುವೆಂಪು, ವಜ್ರದೀಪ್ತಿ-ಸಂಪಾದಿತ ಕೃತಿಗಳು; ಕುವೆಂಪುರವರ ನಾಟಕ ಸಮೀಕ್ಷೆ, ಚಿತ್ರಾಂಗದಾ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ-ಸಂಶೋಧನಾ ಕೃತಿಗಳು; ಹಾಗೆಯೇ ವಚನ ವಿಭೂತಿ, ವಚನ ವರ್ತಮಾನ-ಆಧುನಿಕ ವಚನ ಸಂಕಲನಗಳು ಹೀಗೆ ಹಲವಾರು ಕೃತಿಗಳನ್ನು ಭುವನೇಶ್ವರಿ ಮಡಿಲಿಗೆ ಸಮಪರ್ಿಸಿದ್ದಾರೆ.
ಚೀನಾದ ಹಾಂಕಾಂಗ್ ನಲ್ಲಿ ನಡೆದ ಮೂರನೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಕುಟ ಇವರನ್ನಲಂಕರಿಸಿರುವುದು ಔಚಿತ್ಯಪೂರ್ಣವಾದುದಾಗಿದೆ , ಹಾಗೂ ಇತ್ತೀಚೆಗೆ ಗಲ್ಫ್ ಕಂಟ್ರೀಸ್ನ ಅಬುದಾಭಿಯಲ್ಲಿ ನಡೆದ ವಿಶ್ವ ಸಾಹಿತ್ಯ ಸಮ್ಮೇಳನದ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದು ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ತಮ್ಮ ಪಾಂಡಿತ್ಯ ಪ್ರತಿಭೆಗಳಿಂದ ಸಮನ್ವಿತವಾದ ವಾಕ್ಪ್ರವಾಹದಿಂದ ನಾಡಿನ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಡಾ|| ಮಳಲಿಯವರ ಸಾಹಿತ್ಯಿಕ ಧೀಮಂತಿಕೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಹೊಯ್ಸಳ ರತ್ನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇವರ ಸಾಹಿತ್ಯ ಚಿಲುಮೆ ಇನ್ನೂ ಹೆಚ್ಚಿನ ಉದ್ಗ್ರಂಥಗಳಿಂದ ನಾಡಿನಾದ್ಯಾಂತ, ದೇಶದಾದ್ಯಂತ ವ್ಯಾಪಿಸಿ ಸಕಾರಾತ್ಮಕ ನೆಗಟ್ಟಿನಲ್ಲಿ ಪಸರಿಸಲೆಂದು ಆಶಿಸುತ್ತೇನೆ.

ವೈಚಾರಿಕ ಮನೋಧರ್ಮಿ ಜ.ಹೊ.ನಾರಾಯಣಸ್ವಾಮಿ- ಕೊಟ್ರೇಶ್ ಎಸ್.ಉಪ್ಪಾರ್
ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು.
ಅಕ್ಷರಶಃ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಂತರ್ಗತಗೊಳಿಸಿಕೊಂಡು, ಕುವೆಂಪುರವರ ಸನ್ಮಾರ್ಗದಲ್ಲಿ ಸಾಗಿ ಸಮಾಜದ ಸಂಪ್ರದಾಯ ಮನಸ್ಸುಗಳನ್ನು ಬಡಿದೆಬ್ಬಿಸಿ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸುವಂತೆ ಪ್ರೇರೇಪಿಸಿದವರು.
ಕಾಲ ನಿಂತ ನೀರಲ್ಲ, ಸದಾ ಚಲನಶೀಲ. ಅಂತೆಯೇ ಸಾಹಿತ್ಯಿಕ ಆಲೋಚನೆಗಳು ಆಧುನಿಕತೆಗೆ ತಕ್ಕಂತೆ ವಿಚಾರಕ್ಕೆ ನಿಲುಕುವಂತೆ ತೆರೆದುಕೊಳ್ಳುತ್ತಾ ಸಾಗಬೇಕು. ಸಾಮಾಜಿಕ ಮೌಢ್ಯ ಸಂಪ್ರದಾಯಗಳ ಘೋರಿಯ ಮೇಲೆ ವೈಚಾರಿಕ ಹೂ ಗಿಡಗಳನ್ನು ಬೆಳೆಸುವ ದಿಸೆಯಲ್ಲಿ ಕಳೆದ ಐದಾರು ದಶಕಗಳಿಂದ ಮೂರ್ಖ ಸಂಪ್ರದಾಯಿಗಳ, ಕೋಮುವಾದಿಗಳ, ಜಾತಿವಾದಿಗಳ ವಿರೋಧಗಳ ನಡುವೆಯೂ ಎದೆಗುಂದದೆ ಮುನ್ನುಗ್ಗಿ ಬಂದ ಧೀಶಕ್ತಿ ಸಾಹಿತ್ಯ ಜ.ಹೊ.ನಾ ಅವರದ್ದು ಎಂದರೆ ಅತಿಶಯೋಕ್ತಿಯಾಗಲಾರದು.
'ಮಾನವ ಕುಲಂ ತಾನೋಂದೇ' ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚಚರ್್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ.
ಜ.ಹೊ.ನಾ ಎಂದೇ ಪ್ರಸಿದ್ಧಿ ಪಡೆದ ನಾರಾಯಣ ಸ್ವಾಮಿಯವರು 1941 ಜುಲೈ 13 ರಂದು ಹಾಸನ ತಾಲ್ಲೂಕಿನ ಜನಿವಾರ ಗ್ರಾಮದ ಶ್ರೀ ಹೊನ್ನಯ್ಯ ಮತ್ತು ಶ್ರೀಮತಿ ತಿಮ್ಮಮ್ಮ ದಂಪತಿಗಳ ಗಭರ್ಾಂಬುದಿಯಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವನ್ನು ಹಾಸನದಲ್ಲಿಯೇ ಪಡೆದ ಇವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದರು. ಅಲ್ಲಿನ ಸಿಟಿ ಕೋ ಆಪರೇಟೀವ್ ಬ್ಯಾಂಕ್ ಲಿ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ, ಹಾಗೂ ಅರ್ಥಮೂವರ್ಸ್ ಲಿಮಿಟೆಡ್ಗಳಲ್ಲಿ ಸೇವೆ ಮಡುತ್ತಲೇ ಬಿ.ಕಾಂ; ಬಿ.ಎಲ್; ಎಂ.ಎ; ಡಿಪ್ಲಾಮೋ ಇನ್ ಡ್ರಾಮಾ ಪದವಿಗಳನ್ನು ಮುಗಿಸಿದರು. ಅನಂತರ ಪುನಃ ತವರಿಗೆ ಹಿಂದಿರುಗಿ 1977 ರಿಂದ ವಕೀಲಿ ವೃತ್ತಿ ನಡೆಸಿ ನಂತರ ಎರಡು ಅವಧಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಕೀರ್ತಿ ಜ.ಹೊ.ನಾ ಅವರದ್ದು.
ಹಾಗೆಯೇ ಇತಿಹಾಸ ಪುಟಗಳನ್ನು ಅವಲೋಕಿಸಿ ಕೊಂಕು, ಅಸಂಬದ್ಧವಾಗಿ ಕಂಡು ಬಂದ ವಿಷಯಗಳನ್ನು ಜಾಲಾಡಿ ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಬುದ್ಧ ಪ್ರಬಂಧಗಳ ರೂಪದಲ್ಲಿ ಸಾಹಿತ್ಯ ನೀಡಿದ್ದಾರೆ. ಎಲ್ಲೋ ಹುದುಗಿದ್ದ ಅಂತರ್ಚಕ್ಷನ್ನು ತೆರೆಸಿದ್ದಾರೆ. ಸಾಮಾಜಿಕ, ಪ್ರಗತಿಪರ ಚಿಂತನೆಗಳೆಡೆಗೆ ಮನ ತೆರೆದುಕೊಳ್ಳುವಂತೆ ಹುರಿದುಂಬಿಸಿದ್ದಾರೆ.
ಹಲವರು ಜ.ಹೊ.ನಾ ಎಡ ಪಂಥೀಯ ಎಂದು ಅಭಿಪ್ರಾಯ ಪಡುವುದುಂಟು, ಆದರೆ ನಾನು ಬಹು ಹತ್ತಿರವಾಗಿ ಗಮನಿಸಿರುವಂತೆ ಅವರು ಯಾವ ಪಂಥಕ್ಕೂ ಮೀಸಲಾಗದೆ ಮಾನವೀಯ ಮೌಲ್ಯಗಳಿಗೆ ಬದ್ಧರಾದರು. ವಿಚಾರವಾದಿಗಳು ಅಂತೆಯೇ ನಿಷ್ಠುರವಾದಿಗಳು. ಜ.ಹೊ.ನಾ ಅವರು ವಿವೇಕಾನಂದರ ಆಚಾರ, ಕುವೆಂಪುರವರ ವಿಚಾರಗಳ ಸಮ್ಮಿಲನವಾಗಿದ್ದಾರೆ.
ಒಂದು ಕಡೆ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ 'ಬ್ರಾಹ್ಮಣರು ಸಾಮಾಜಿಕವಾಗಿ ಜಾತಿವಾದಿಗಳಾದರೆ, ಶೂದ್ರರು ವೈಯಕ್ತಿಕವಾಗಿ ಜಾತಿವಾದಿಗಳು' ಎಂದಿದ್ದಾರೆ. ಅದು ಅಕ್ಷರ ಸಹ ಸತ್ಯ . ತಮ್ಮ ಕೋಮಿನ ಹಿತಕ್ಕಾಗಿ ಬ್ರಾಹ್ಮಣರು ತ್ಯಾಗ ಮಾಡಿದರೆ, ಸ್ವಂತ ಪ್ರತಿಷ್ಠೆಗಾಗಿ ಶೂದ್ರರು ತಮ್ಮ ಜನಾಂಗವನ್ನು ಬಲಿಕೊಡುತ್ತಾರೆ. ಅಧಿಕಾರದ ಆಸೆ ಆಮಿಷಗಳಿಗೆ ಒಳಗಾದ ಜನರು ಎಂಥ ಪ್ರತಿಗಾಮಿ ಕಾರ್ಯಕ್ಕೂ ಇಳಿಯುತ್ತಾರೆ. ಇದನ್ನೇಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ ಈ ಮೇಲಿನ ಎರಡೂ ಅಂಶಗಳನ್ನು ಹೊರತು ಪಡಿಸಿ ಜ.ಹೊ.ನಾ ಸಾಹಿತ್ಯ ನಮ್ಮೆದುರಿಗೆ ನಿಲ್ಲುತ್ತದೆ.
'ಹರಿಯುವ ನದಿಗಳು ಹೇಗೆ ತಮ್ಮ ಹೆಸರು, ಆಕಾರಗಳನ್ನು ಬಿಟ್ಟು ಸಮುದ್ರದಲ್ಲಿ ಸೇರಿ ಹೋಗುತ್ತವೆಯೋ ಹಾಗೆಯೇ ಜ್ಞಾನಿ ನಾಮ ರೂಪಗಳಿಂದ ಬಿಡುಗಡೆ ಪಡೆದು ಪರಾತ್ಪರನಾದ ದಿವ್ಯ ಪುರುಷನನ್ನು ಹೊಂದುತ್ತಾನೆ' ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ಮಾನವ ವೈಶಾಲ್ಯತೆಯಡೆಗೆ ಸಾಗಬೇಕು, ವೈಚಾರಿಕ ಪ್ರಗತಿ ಹೊಂದಬೇಕೆಂಬ ಮಹದಾಶಯ ಜ.ಹೊ.ನಾ ಅವರದ್ದು.
ಇವರು ಈಗಾಗಲೇ 25ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವುಗಳಲ್ಲಿ ನನ್ನ ಅತ್ಯಾಕರ್ಷಣೆ ಮಾಡಿದ ಕೃತಿಗಳು ಮೊದಲನೆಯದು 'ಅಧಮ್ಯ'ವಾದರೆ ಎರಡನೆಯದಾಗಿ 'ವಿವೇಕಾನಂದರು ಮತ್ತು ಕ್ರಾಂತಿಕಾರಕ ವಿಚಾರಗಳು'.
ಪ್ರಕೃತಿಯಿಂದಲೇ ಬರುವ ಇಂಥ ಅಪರೂಪದ ಹೃದಯ ವೈಶಾಲ್ಯತೆಯನ್ನು ಕಳೆದುಕೊಳ್ಳದೆ ಉಳಿಸಿಕೊಂಡು ಬೆಳೆಸಿಕೊಳ್ಳುವುದೇ ಜೀವನದ ಪರಮಗಂತವ್ಯ. ಮನೋಹೃದಯ ವೈಶಲ್ಯತೆಯ ಇಂಥ ಅದ್ಭುತ ಚಿತ್ರಣ ಜಗತ್ತಿನ ಬೇರಾವ ಸಾಹಿತ್ಯದಲ್ಲೂ ಲಭ್ಯವಾಗಿಲ್ಲ ಎನ್ನಬಹುದು. ನಾನು ಓದಿದಂತೆ ಅದಮ್ಯ ಕನ್ನಡ ಸಾಹಿತ್ಯದ ಸರ್ವಶ್ರೇಷ್ಠ ಕೃತಿಯಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯೂ ಓದಲೇ ಬೇಕಾದ ಪುಸ್ತಕ. ಇಲ್ಲಿ ಜ.ಹೊ.ನಾ ಕುವೆಂಪುರವರ ಶಿಷ್ಯರಾದರೂ ಇವರೀರ್ವರಲ್ಲಿನ ಅಜ್ಞಾತ ಶಕ್ತಿ ವಿಶಿಷ್ಠ ಹಾಗೂ ವಿಭಿನ್ನವಾದುದೆನ್ನಿಸಿತು. ಏಕಲವ್ಯನನ್ನು ಕುವೆಂಪು ತಮ್ಮ 'ಬೆರಳ್ಗೆ ಕೊರಳ್' ಕೃತಿಯಲ್ಲಿ ನೋಡಿದ್ದು ಅದ್ಭುತವೆನಿಸಿದ್ದು ನಿಜ. ಅಂತಿಮವಾಗಿ ಏಕಲವ್ಯನ ಉಂಗುಲಿಯ ಬಲಿದಾನ ನಡೆಯುತ್ತದೆ. ಆದರೆ ಜ.ಹೊ.ನಾ ಕುವೆಂಪುರವರಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರಾಕೃತಿಕ ಶಾಂತಿ ಬಯಸಿದ್ದು, ಮನಪರಿವತರ್ಿಸಿದ ಬಗೆ ಅತ್ಯದ್ಭುತ ಹಾಗೂ ಅಮೋಘವಾದುದೆಂದರೆ ಅತಿಶಯೋಕ್ತಿಯಾಗಲಾರದು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಜ.ಹೊ.ನಾ ನೀಡಿದ ಅಪೂರ್ವ ಕೊಡುಗೆ ಎನಿಸುತ್ತದೆ. ಇಲ್ಲಿ ವೈಚಾರಿಕ ಪ್ರವಾಹವೇ ಹರಿದಿದೆ ಎನ್ನಬಹುದು. ಈ ರಚನಾ ಸಂದರ್ಭದಲ್ಲಿ ಸಂಯಮ, ವಿವೇಕಗಳು ಜ.ಹೊ.ನಾ ರನ್ನು ಆವಿರ್ಭವಿಸಿಕೊಂಡು ಅಂತರ್ಮುಖಿ ಚಿಂತನೆ ಹರಿಯಬಿಟ್ಟಿವೆ. ಆದ್ದರಿಂದ ಈ ಕೃತಿ ಓದುಗನ ಹೃದಯದಂತರಾಳಕ್ಕಿಳಿದು ಹೊಸ ಜಗತ್ತಿನ ಚಿತ್ರಣವನ್ನು, ಮಾನವೀಯ ಸಂವೇದನೆಯನ್ನು ಪ್ರಜ್ವಲಿಸುತ್ತದೆ.
ಜಾತಿ, ಧರ್ಮ, ದೇವರುಗಳೆಂಬ ಮೌಢ್ಯದಲ್ಲಿ ಸಿಕ್ಕು ಭಾರತ ನಲುಗುತ್ತಿರುವುದನ್ನು ಜ.ಹೊ.ನಾ ತಮ್ಮ ಅನೇಕ ಕೃತಿಗಳಲ್ಲಿ ವೈಚಾರಿಕವಾಗಿ ಮಂಡಿಸಿದ್ದಾರೆ. ಇವರ ಕೃತಿಗಳನ್ನು ಓದುವಾಗಲೆಲ್ಲಾ ಥಟ್ಟನೇ ನಮ್ಮೆದುರಿಗೆ ಬುದ್ಧ, ವಿವೇಕಾನಂದ, ಮಹಾತ್ಮಾ ಪುಲೆ, ಓಶೋ, ಕುವೆಂಪು, ಪೆರಿಯಾರ್, ಲೋಹಿಯ ಮುಂತಾದವರು ಒಂದು ಕ್ಷಣ ಸುಳಿದು ಹೋಗುತ್ತಾರೆ. ಇವರೆಲ್ಲರಾದಿಯಾಗಿ ಭಾರತದಲ್ಲಿ ವೈಚಾರಿಕ ಕ್ರಾಂತಿಯೇ ಹರಿದಿದೆ. ಆದರೂ ಸಮಾಜ ಸಂಪ್ರದಾಯದ ಹೊಲಸಿನಿಂದ ಮುಕ್ತವಾಗುತ್ತಿಲ್ಲ. ಆದ್ದರಿಂದಲೇ ವಿವೇಕಾನಂದರು ಒಂದು ಕಡೆ ...... ಎಲ್ಲಾ ಮೂಢ ನಂಬಿಕೆಗಳನ್ನು ಧ್ವಂಸ ಮಾಡಿ, ಧರ್ಮಗುರುಗಳು, ಧರ್ಮಗ್ರಂಥಗಳು, ದೇವತೆಗಳು ಯಾರು ಇಲ್ಲ. ದೇವಸ್ಥಾನಗಳನ್ನು, ಪೂಜಾರಿಗಳನ್ನು, ದೇವತೆಗಳನ್ನು, ಅವತಾರಗಳನ್ನು ಕೊನೆಗೆ ದೇವರನ್ನೇ ಧ್ವಂಸ ಮಾಡಿ, ನಾನೇ ದೇವರು. ಬೇರೇನೂ ಇಲ್ಲ ತತ್ತ್ವಜ್ಞಾನಿಗಳೇ ಎದ್ದು ನಿಲ್ಲಿ ಭಯಬೇಡ. ದೇವರ ಬಗ್ಗೆ, ಪ್ರಪಂಚದ ಮೌಢ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಸತ್ಯವೇ ಗೆಲ್ಲುವುದು. ಎಲ್ಲಾ ಮೌಢ್ಯಗಳು ಪೊಳ್ಳು ಕಲ್ಪನೆಗಳು... ದೇವರು ಹುಟ್ಟಿದ್ದು ನನ್ನ ಮನಸ್ಸಿನಲ್ಲಿ.... ನಾನೇ ಅವನನ್ನು ನನ್ನ ಮನಸ್ಸಿನಲ್ಲಿ ಸೃಷ್ಠಿಸಿದೆ. ಎಲ್ಲಾ ಮೂಢನಂಬಿಕೆಗಳನ್ನು ತ್ಯಜಿಸಿ... ಎಂದು ಕರೆ ಕೊಟ್ಟಿದ್ದಾರೆ
ಈ ಕರೆಗೆ ಕಿವಿಕೊಟ್ಟು ಕಾರ್ಯತತ್ಪರರಾದವರು ಮಾತ್ರ ಕೇಲವೆ ಕೆಲವರು. ಕುವೆಂಪುರಾದಿಯಾಗಿ ಲೋಹಿಯಾ, ಲಂಕೇಶ್, ಪೆರಿಯಾರ್, ದೇ. ಜ. ಗೌ, ಜ.ಹೊ. ನಾ, ಸಿ.ಪಿ.ಕೆ, ಭಗವಾನ್ ಮುಂತಾದವರು ನಮ್ಮೆದುರಿಗೆ ನಿಲ್ಲುತ್ತಾರೆ.
ಅದರಲ್ಲು ಜ.ಹೊ.ನಾ ತಮ್ಮ ಬದುಕಿನ ಬಹುಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟು ವೈಚಾರಿಕ ಮನೋಧಮರ್ಿಯಾಗಿ ಬಾಳಿದ್ದಾರೆ. ಇವರ ವಿಚಾರ ಲಹರಿಗಳನ್ನು ಅರಿಯಬೇಕಾದರೆ ಇವರ ಕೃತಿಗಳ ಅಧ್ಯಯನ ಮಾಡಲೇಬೇಕು.
ಒಬ್ಬ ವ್ಯಕ್ತಿಯು ಒಂದು ಮಹಾನ್ ಶಕ್ತಿಯಾಗಿ ರೂಪುಗೊಳ್ಳುವುದಕ್ಕೆ ಅನೇಕ ಚೇತನಗಳ ಸ್ಫೂತರ್ಿ ಆದರ್ಶಗಳು ಸಹಕಾರಿಯಾಗಿರುತ್ತದೆ. ಅಂತಹ ಒಂದು ಸ್ಫೂರ್ತಿ ಕುವೆಂಪುರಾದಿಯಾಗಿ ಅನೇಕರ ಸಹಕಾರ ಜ.ಹೊ.ನಾ ರವರಿಗೆ ಸಿಕ್ಕಿದೆ. ಆದ್ದರಿಂದಲೇ ನಮ್ಮೆದುರಿಗೆ ವೈಚಾರಿಕ ಕ್ರಾಂತಿಯ ಮಹಾನ್ ಶಕ್ತಿಯಾಗಿ ಇವರು ಗೋಚರಿಸುತ್ತಾರೆ. ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ. ಶೋಷಣೆ, ಹಸಿವು, ಭ್ರಷ್ಟಾಚಾರ ಹೀಗೆ ಹಲವಾರು ಸಾಮಾಜಿಕ ಕಂಟಕಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಹರಿತವಾದ ಭಾವಲಹರಿ ಮಿಳಿತಗೊಳಿಸಿದ್ದಾರೆ. ಮಾರ್ಗೋಪಾಯ ಸೂಸಿದ್ದಾರೆ. ಮಾನವತ್ತ್ವದ ನೆಲೆ ಕಂಡುಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಹಾಸನ ಜಿಲ್ಲಾ ಬಿ.ಜಿ.ವಿ.ಎಸ್. ಸಂಸ್ಥಾಪಕ ಅಧ್ಯಕ್ಷರಾಗಿ, ಸಾಕ್ಷರತಾ ಆಂದೋಲನದ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದಶರ್ಿಯಾಗಿ, 'ಸಂವೇದನಾ ಕಲಾವಿದರು' ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಬರಹಗಾರರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜ.ಹೊ.ನಾ ನಾಡಿನಾದ್ಯಾಂತ ಪ್ರಖ್ಯಾತರಾದವರು, ಇವರ ಅನೇಕ ಕೃತಿಗಳು ವಿವಿಧ ವಿಶ್ವವಿದ್ಯಾನಿಲಯಗಳಿಂದ, ಕನ್ನಡ ಪ್ರಾಧಿಕಾರಗಳಿಂದ ಪ್ರಕಟಗೊಂಡಿವೆ, ರೈತ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಇವರು ಅನೇಕ ಸಮಾಜ ಪರ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಾಹಿತ್ಯಗೋಷ್ಠಿ, ಕವಿಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕವಿತೆ ವಾಚಿಸಿದ್ದಾರೆ. ಅದ್ಭುತ ನಟ ಹಾಗೂ ನಾಟಕಕಾರರೂ ಆದ ಇವರು ಸಂಕ್ರಾತಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ 'ಜೇನುಗೂಡು' ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ.
ಜಗದ ತೊಟ್ಟಿಲು-ಕವನ ಸಂಕಲನ ; ಬೆಳಕಿನ ದಾರಿ, ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು, ವೇದ ಕುರಾನ್ ಆಚೆಗೆ, ವಿವೇಕಾನಂದ ಮಾನವತೆಗಾಗಿ ಕಾವಿಯೊಳಗೆ ಕುದಿದ ಕೆಂಡ, ಆವರಣ-ಅನಾವರಣ, ಬ್ರಾಹ್ಮಣ್ಯದ ತಂತ್ರಗಳು, ಸಂಪ್ರದಾಯದ ನೇಣುಗಂಬ, ಚೈತನ್ಯದ ಪೂಜೆ ಮುಂತಾದ ವೈಚಾರಿಕ ಕೃತಿಗಳು ; ನರಬಲಿ,-ನಾಟಕ, ; ಅದಮ್ಯ, ಸಿದ್ಧಾರ್ಥ-ಕಾದಂಬರಿಗಳು ; ಸ್ವಾಮಿ ವಿವೇಕಾನಂದ, ಜಯಪ್ರಕಾಶ ನಾರಾಯಣ, ಭಗತ್ ಸಿಂಗ್, ನಿಷ್ಠನ್ಯಾಯವಾದಿ ಹೆಚ್.ಎಸ್.ಎಂ. ; ಕಾರುಗೋಡಿನ ತೊಟ್ಟಿಮನೆ ಕೆ.ಎಂ. ಚಂದ್ರಶೇಖರ್ ಮುಂತಾದ ಜೀವನ ಚರಿತ್ರೆಗಳು ; ಹರ್ಮನ್ಸೇನ್-ವಾಚಿಕೆ; ಶ್ರೀಕುವೆಂಪು-ಸಂಕೀರ್ಣ; ಭಾರತದ ರೈತ-ಅನುವಾದ; ಬೇಲೂರು ಹಳೆಬೀಡು-ನವಸಾಕ್ಷರಿಗಾಗಿ ಬರೆದ ಬರಹಗಳು ಹೀಗೆ ಅನೇಕ ಬಗೆಯ ಕೃತಿಗಳನ್ನು ಜ.ಹೊ.ನಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ 'ವೇದ ಕುರಾನ್ ಆಚೆಗೆ' ಕೃತಿಗೆ ಡಾ|| ಹೆಚ್. ನರಸಿಂಹಯ್ಯ ದತ್ತಿನಿಧಿ ಪ್ರಶಸ್ತಿ, ಬಂದಿದೆ. ಅಲ್ಲದೇ ಅನಿಕೇತನ ಪ್ರಶಸ್ತಿ, ಹಾಸನ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಹಾಗೂ ಹಲವು ಸಂಘಗಳಿಂದ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ಇವರ ಸಾಹಿತ್ಯಿಕ ಅಹರ್ನಿಶಿ ಸೇವೆಗಾಗಿ ಹಾಸನ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆ ಇವರನ್ನಲಂಕರಿಸಿತ್ತು.
ಮೌಢ್ಯದ ಕಂದಾಚಾರದಲ್ಲಿ ಮುಳುಗಿದ್ದ ಅನೇಕ ಮನಸ್ಸುಗಳನ್ನು ಪರಿವರ್ತನೆ ಮಾಡುತ್ತಾ ಯುವ ಬರಗಾರರಿಗೆ ವೈಚಾರಿಕ ತಳಹದಿ ಹಾಕಿಕೊಟ್ಟು ಮಾರ್ಗದರ್ಶನ ನೀಡುತ್ತಿರುವ ಜ.ಹೊ.ನಾ ಕನ್ನಡದ ಪ್ರತಿಭಾನ್ವಿತ ದಿಗ್ಗಜ ಸಾಹಿತ್ಯ ವಲಯದ ಪ್ರಮುಖರು. ನೂರಾರು ಕವಲು ದಾರಿಗಳು ಜ.ಹೊ. ನಾ. ಎಂಬ ಹೆದ್ದಾರಿಯಲ್ಲಿ ಸೇರಬೇಕಿದೆ.
ಅಕ್ಷರಶಃ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಂತರ್ಗತಗೊಳಿಸಿಕೊಂಡು, ಕುವೆಂಪುರವರ ಸನ್ಮಾರ್ಗದಲ್ಲಿ ಸಾಗಿ ಸಮಾಜದ ಸಂಪ್ರದಾಯ ಮನಸ್ಸುಗಳನ್ನು ಬಡಿದೆಬ್ಬಿಸಿ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸುವಂತೆ ಪ್ರೇರೇಪಿಸಿದವರು.
ಕಾಲ ನಿಂತ ನೀರಲ್ಲ, ಸದಾ ಚಲನಶೀಲ. ಅಂತೆಯೇ ಸಾಹಿತ್ಯಿಕ ಆಲೋಚನೆಗಳು ಆಧುನಿಕತೆಗೆ ತಕ್ಕಂತೆ ವಿಚಾರಕ್ಕೆ ನಿಲುಕುವಂತೆ ತೆರೆದುಕೊಳ್ಳುತ್ತಾ ಸಾಗಬೇಕು. ಸಾಮಾಜಿಕ ಮೌಢ್ಯ ಸಂಪ್ರದಾಯಗಳ ಘೋರಿಯ ಮೇಲೆ ವೈಚಾರಿಕ ಹೂ ಗಿಡಗಳನ್ನು ಬೆಳೆಸುವ ದಿಸೆಯಲ್ಲಿ ಕಳೆದ ಐದಾರು ದಶಕಗಳಿಂದ ಮೂರ್ಖ ಸಂಪ್ರದಾಯಿಗಳ, ಕೋಮುವಾದಿಗಳ, ಜಾತಿವಾದಿಗಳ ವಿರೋಧಗಳ ನಡುವೆಯೂ ಎದೆಗುಂದದೆ ಮುನ್ನುಗ್ಗಿ ಬಂದ ಧೀಶಕ್ತಿ ಸಾಹಿತ್ಯ ಜ.ಹೊ.ನಾ ಅವರದ್ದು ಎಂದರೆ ಅತಿಶಯೋಕ್ತಿಯಾಗಲಾರದು.
'ಮಾನವ ಕುಲಂ ತಾನೋಂದೇ' ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚಚರ್್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ.
ಜ.ಹೊ.ನಾ ಎಂದೇ ಪ್ರಸಿದ್ಧಿ ಪಡೆದ ನಾರಾಯಣ ಸ್ವಾಮಿಯವರು 1941 ಜುಲೈ 13 ರಂದು ಹಾಸನ ತಾಲ್ಲೂಕಿನ ಜನಿವಾರ ಗ್ರಾಮದ ಶ್ರೀ ಹೊನ್ನಯ್ಯ ಮತ್ತು ಶ್ರೀಮತಿ ತಿಮ್ಮಮ್ಮ ದಂಪತಿಗಳ ಗಭರ್ಾಂಬುದಿಯಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವನ್ನು ಹಾಸನದಲ್ಲಿಯೇ ಪಡೆದ ಇವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದರು. ಅಲ್ಲಿನ ಸಿಟಿ ಕೋ ಆಪರೇಟೀವ್ ಬ್ಯಾಂಕ್ ಲಿ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ, ಹಾಗೂ ಅರ್ಥಮೂವರ್ಸ್ ಲಿಮಿಟೆಡ್ಗಳಲ್ಲಿ ಸೇವೆ ಮಡುತ್ತಲೇ ಬಿ.ಕಾಂ; ಬಿ.ಎಲ್; ಎಂ.ಎ; ಡಿಪ್ಲಾಮೋ ಇನ್ ಡ್ರಾಮಾ ಪದವಿಗಳನ್ನು ಮುಗಿಸಿದರು. ಅನಂತರ ಪುನಃ ತವರಿಗೆ ಹಿಂದಿರುಗಿ 1977 ರಿಂದ ವಕೀಲಿ ವೃತ್ತಿ ನಡೆಸಿ ನಂತರ ಎರಡು ಅವಧಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಕೀರ್ತಿ ಜ.ಹೊ.ನಾ ಅವರದ್ದು.
ಹಾಗೆಯೇ ಇತಿಹಾಸ ಪುಟಗಳನ್ನು ಅವಲೋಕಿಸಿ ಕೊಂಕು, ಅಸಂಬದ್ಧವಾಗಿ ಕಂಡು ಬಂದ ವಿಷಯಗಳನ್ನು ಜಾಲಾಡಿ ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಬುದ್ಧ ಪ್ರಬಂಧಗಳ ರೂಪದಲ್ಲಿ ಸಾಹಿತ್ಯ ನೀಡಿದ್ದಾರೆ. ಎಲ್ಲೋ ಹುದುಗಿದ್ದ ಅಂತರ್ಚಕ್ಷನ್ನು ತೆರೆಸಿದ್ದಾರೆ. ಸಾಮಾಜಿಕ, ಪ್ರಗತಿಪರ ಚಿಂತನೆಗಳೆಡೆಗೆ ಮನ ತೆರೆದುಕೊಳ್ಳುವಂತೆ ಹುರಿದುಂಬಿಸಿದ್ದಾರೆ.
ಹಲವರು ಜ.ಹೊ.ನಾ ಎಡ ಪಂಥೀಯ ಎಂದು ಅಭಿಪ್ರಾಯ ಪಡುವುದುಂಟು, ಆದರೆ ನಾನು ಬಹು ಹತ್ತಿರವಾಗಿ ಗಮನಿಸಿರುವಂತೆ ಅವರು ಯಾವ ಪಂಥಕ್ಕೂ ಮೀಸಲಾಗದೆ ಮಾನವೀಯ ಮೌಲ್ಯಗಳಿಗೆ ಬದ್ಧರಾದರು. ವಿಚಾರವಾದಿಗಳು ಅಂತೆಯೇ ನಿಷ್ಠುರವಾದಿಗಳು. ಜ.ಹೊ.ನಾ ಅವರು ವಿವೇಕಾನಂದರ ಆಚಾರ, ಕುವೆಂಪುರವರ ವಿಚಾರಗಳ ಸಮ್ಮಿಲನವಾಗಿದ್ದಾರೆ.
ಒಂದು ಕಡೆ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ 'ಬ್ರಾಹ್ಮಣರು ಸಾಮಾಜಿಕವಾಗಿ ಜಾತಿವಾದಿಗಳಾದರೆ, ಶೂದ್ರರು ವೈಯಕ್ತಿಕವಾಗಿ ಜಾತಿವಾದಿಗಳು' ಎಂದಿದ್ದಾರೆ. ಅದು ಅಕ್ಷರ ಸಹ ಸತ್ಯ . ತಮ್ಮ ಕೋಮಿನ ಹಿತಕ್ಕಾಗಿ ಬ್ರಾಹ್ಮಣರು ತ್ಯಾಗ ಮಾಡಿದರೆ, ಸ್ವಂತ ಪ್ರತಿಷ್ಠೆಗಾಗಿ ಶೂದ್ರರು ತಮ್ಮ ಜನಾಂಗವನ್ನು ಬಲಿಕೊಡುತ್ತಾರೆ. ಅಧಿಕಾರದ ಆಸೆ ಆಮಿಷಗಳಿಗೆ ಒಳಗಾದ ಜನರು ಎಂಥ ಪ್ರತಿಗಾಮಿ ಕಾರ್ಯಕ್ಕೂ ಇಳಿಯುತ್ತಾರೆ. ಇದನ್ನೇಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ ಈ ಮೇಲಿನ ಎರಡೂ ಅಂಶಗಳನ್ನು ಹೊರತು ಪಡಿಸಿ ಜ.ಹೊ.ನಾ ಸಾಹಿತ್ಯ ನಮ್ಮೆದುರಿಗೆ ನಿಲ್ಲುತ್ತದೆ.
'ಹರಿಯುವ ನದಿಗಳು ಹೇಗೆ ತಮ್ಮ ಹೆಸರು, ಆಕಾರಗಳನ್ನು ಬಿಟ್ಟು ಸಮುದ್ರದಲ್ಲಿ ಸೇರಿ ಹೋಗುತ್ತವೆಯೋ ಹಾಗೆಯೇ ಜ್ಞಾನಿ ನಾಮ ರೂಪಗಳಿಂದ ಬಿಡುಗಡೆ ಪಡೆದು ಪರಾತ್ಪರನಾದ ದಿವ್ಯ ಪುರುಷನನ್ನು ಹೊಂದುತ್ತಾನೆ' ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ಮಾನವ ವೈಶಾಲ್ಯತೆಯಡೆಗೆ ಸಾಗಬೇಕು, ವೈಚಾರಿಕ ಪ್ರಗತಿ ಹೊಂದಬೇಕೆಂಬ ಮಹದಾಶಯ ಜ.ಹೊ.ನಾ ಅವರದ್ದು.
ಇವರು ಈಗಾಗಲೇ 25ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವುಗಳಲ್ಲಿ ನನ್ನ ಅತ್ಯಾಕರ್ಷಣೆ ಮಾಡಿದ ಕೃತಿಗಳು ಮೊದಲನೆಯದು 'ಅಧಮ್ಯ'ವಾದರೆ ಎರಡನೆಯದಾಗಿ 'ವಿವೇಕಾನಂದರು ಮತ್ತು ಕ್ರಾಂತಿಕಾರಕ ವಿಚಾರಗಳು'.ಪ್ರಕೃತಿಯಿಂದಲೇ ಬರುವ ಇಂಥ ಅಪರೂಪದ ಹೃದಯ ವೈಶಾಲ್ಯತೆಯನ್ನು ಕಳೆದುಕೊಳ್ಳದೆ ಉಳಿಸಿಕೊಂಡು ಬೆಳೆಸಿಕೊಳ್ಳುವುದೇ ಜೀವನದ ಪರಮಗಂತವ್ಯ. ಮನೋಹೃದಯ ವೈಶಲ್ಯತೆಯ ಇಂಥ ಅದ್ಭುತ ಚಿತ್ರಣ ಜಗತ್ತಿನ ಬೇರಾವ ಸಾಹಿತ್ಯದಲ್ಲೂ ಲಭ್ಯವಾಗಿಲ್ಲ ಎನ್ನಬಹುದು. ನಾನು ಓದಿದಂತೆ ಅದಮ್ಯ ಕನ್ನಡ ಸಾಹಿತ್ಯದ ಸರ್ವಶ್ರೇಷ್ಠ ಕೃತಿಯಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯೂ ಓದಲೇ ಬೇಕಾದ ಪುಸ್ತಕ. ಇಲ್ಲಿ ಜ.ಹೊ.ನಾ ಕುವೆಂಪುರವರ ಶಿಷ್ಯರಾದರೂ ಇವರೀರ್ವರಲ್ಲಿನ ಅಜ್ಞಾತ ಶಕ್ತಿ ವಿಶಿಷ್ಠ ಹಾಗೂ ವಿಭಿನ್ನವಾದುದೆನ್ನಿಸಿತು. ಏಕಲವ್ಯನನ್ನು ಕುವೆಂಪು ತಮ್ಮ 'ಬೆರಳ್ಗೆ ಕೊರಳ್' ಕೃತಿಯಲ್ಲಿ ನೋಡಿದ್ದು ಅದ್ಭುತವೆನಿಸಿದ್ದು ನಿಜ. ಅಂತಿಮವಾಗಿ ಏಕಲವ್ಯನ ಉಂಗುಲಿಯ ಬಲಿದಾನ ನಡೆಯುತ್ತದೆ. ಆದರೆ ಜ.ಹೊ.ನಾ ಕುವೆಂಪುರವರಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರಾಕೃತಿಕ ಶಾಂತಿ ಬಯಸಿದ್ದು, ಮನಪರಿವತರ್ಿಸಿದ ಬಗೆ ಅತ್ಯದ್ಭುತ ಹಾಗೂ ಅಮೋಘವಾದುದೆಂದರೆ ಅತಿಶಯೋಕ್ತಿಯಾಗಲಾರದು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಜ.ಹೊ.ನಾ ನೀಡಿದ ಅಪೂರ್ವ ಕೊಡುಗೆ ಎನಿಸುತ್ತದೆ. ಇಲ್ಲಿ ವೈಚಾರಿಕ ಪ್ರವಾಹವೇ ಹರಿದಿದೆ ಎನ್ನಬಹುದು. ಈ ರಚನಾ ಸಂದರ್ಭದಲ್ಲಿ ಸಂಯಮ, ವಿವೇಕಗಳು ಜ.ಹೊ.ನಾ ರನ್ನು ಆವಿರ್ಭವಿಸಿಕೊಂಡು ಅಂತರ್ಮುಖಿ ಚಿಂತನೆ ಹರಿಯಬಿಟ್ಟಿವೆ. ಆದ್ದರಿಂದ ಈ ಕೃತಿ ಓದುಗನ ಹೃದಯದಂತರಾಳಕ್ಕಿಳಿದು ಹೊಸ ಜಗತ್ತಿನ ಚಿತ್ರಣವನ್ನು, ಮಾನವೀಯ ಸಂವೇದನೆಯನ್ನು ಪ್ರಜ್ವಲಿಸುತ್ತದೆ.
ಜಾತಿ, ಧರ್ಮ, ದೇವರುಗಳೆಂಬ ಮೌಢ್ಯದಲ್ಲಿ ಸಿಕ್ಕು ಭಾರತ ನಲುಗುತ್ತಿರುವುದನ್ನು ಜ.ಹೊ.ನಾ ತಮ್ಮ ಅನೇಕ ಕೃತಿಗಳಲ್ಲಿ ವೈಚಾರಿಕವಾಗಿ ಮಂಡಿಸಿದ್ದಾರೆ. ಇವರ ಕೃತಿಗಳನ್ನು ಓದುವಾಗಲೆಲ್ಲಾ ಥಟ್ಟನೇ ನಮ್ಮೆದುರಿಗೆ ಬುದ್ಧ, ವಿವೇಕಾನಂದ, ಮಹಾತ್ಮಾ ಪುಲೆ, ಓಶೋ, ಕುವೆಂಪು, ಪೆರಿಯಾರ್, ಲೋಹಿಯ ಮುಂತಾದವರು ಒಂದು ಕ್ಷಣ ಸುಳಿದು ಹೋಗುತ್ತಾರೆ. ಇವರೆಲ್ಲರಾದಿಯಾಗಿ ಭಾರತದಲ್ಲಿ ವೈಚಾರಿಕ ಕ್ರಾಂತಿಯೇ ಹರಿದಿದೆ. ಆದರೂ ಸಮಾಜ ಸಂಪ್ರದಾಯದ ಹೊಲಸಿನಿಂದ ಮುಕ್ತವಾಗುತ್ತಿಲ್ಲ. ಆದ್ದರಿಂದಲೇ ವಿವೇಕಾನಂದರು ಒಂದು ಕಡೆ ...... ಎಲ್ಲಾ ಮೂಢ ನಂಬಿಕೆಗಳನ್ನು ಧ್ವಂಸ ಮಾಡಿ, ಧರ್ಮಗುರುಗಳು, ಧರ್ಮಗ್ರಂಥಗಳು, ದೇವತೆಗಳು ಯಾರು ಇಲ್ಲ. ದೇವಸ್ಥಾನಗಳನ್ನು, ಪೂಜಾರಿಗಳನ್ನು, ದೇವತೆಗಳನ್ನು, ಅವತಾರಗಳನ್ನು ಕೊನೆಗೆ ದೇವರನ್ನೇ ಧ್ವಂಸ ಮಾಡಿ, ನಾನೇ ದೇವರು. ಬೇರೇನೂ ಇಲ್ಲ ತತ್ತ್ವಜ್ಞಾನಿಗಳೇ ಎದ್ದು ನಿಲ್ಲಿ ಭಯಬೇಡ. ದೇವರ ಬಗ್ಗೆ, ಪ್ರಪಂಚದ ಮೌಢ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಸತ್ಯವೇ ಗೆಲ್ಲುವುದು. ಎಲ್ಲಾ ಮೌಢ್ಯಗಳು ಪೊಳ್ಳು ಕಲ್ಪನೆಗಳು... ದೇವರು ಹುಟ್ಟಿದ್ದು ನನ್ನ ಮನಸ್ಸಿನಲ್ಲಿ.... ನಾನೇ ಅವನನ್ನು ನನ್ನ ಮನಸ್ಸಿನಲ್ಲಿ ಸೃಷ್ಠಿಸಿದೆ. ಎಲ್ಲಾ ಮೂಢನಂಬಿಕೆಗಳನ್ನು ತ್ಯಜಿಸಿ... ಎಂದು ಕರೆ ಕೊಟ್ಟಿದ್ದಾರೆ
ಈ ಕರೆಗೆ ಕಿವಿಕೊಟ್ಟು ಕಾರ್ಯತತ್ಪರರಾದವರು ಮಾತ್ರ ಕೇಲವೆ ಕೆಲವರು. ಕುವೆಂಪುರಾದಿಯಾಗಿ ಲೋಹಿಯಾ, ಲಂಕೇಶ್, ಪೆರಿಯಾರ್, ದೇ. ಜ. ಗೌ, ಜ.ಹೊ. ನಾ, ಸಿ.ಪಿ.ಕೆ, ಭಗವಾನ್ ಮುಂತಾದವರು ನಮ್ಮೆದುರಿಗೆ ನಿಲ್ಲುತ್ತಾರೆ.
ಅದರಲ್ಲು ಜ.ಹೊ.ನಾ ತಮ್ಮ ಬದುಕಿನ ಬಹುಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟು ವೈಚಾರಿಕ ಮನೋಧಮರ್ಿಯಾಗಿ ಬಾಳಿದ್ದಾರೆ. ಇವರ ವಿಚಾರ ಲಹರಿಗಳನ್ನು ಅರಿಯಬೇಕಾದರೆ ಇವರ ಕೃತಿಗಳ ಅಧ್ಯಯನ ಮಾಡಲೇಬೇಕು.
ಒಬ್ಬ ವ್ಯಕ್ತಿಯು ಒಂದು ಮಹಾನ್ ಶಕ್ತಿಯಾಗಿ ರೂಪುಗೊಳ್ಳುವುದಕ್ಕೆ ಅನೇಕ ಚೇತನಗಳ ಸ್ಫೂತರ್ಿ ಆದರ್ಶಗಳು ಸಹಕಾರಿಯಾಗಿರುತ್ತದೆ. ಅಂತಹ ಒಂದು ಸ್ಫೂರ್ತಿ ಕುವೆಂಪುರಾದಿಯಾಗಿ ಅನೇಕರ ಸಹಕಾರ ಜ.ಹೊ.ನಾ ರವರಿಗೆ ಸಿಕ್ಕಿದೆ. ಆದ್ದರಿಂದಲೇ ನಮ್ಮೆದುರಿಗೆ ವೈಚಾರಿಕ ಕ್ರಾಂತಿಯ ಮಹಾನ್ ಶಕ್ತಿಯಾಗಿ ಇವರು ಗೋಚರಿಸುತ್ತಾರೆ. ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ. ಶೋಷಣೆ, ಹಸಿವು, ಭ್ರಷ್ಟಾಚಾರ ಹೀಗೆ ಹಲವಾರು ಸಾಮಾಜಿಕ ಕಂಟಕಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಹರಿತವಾದ ಭಾವಲಹರಿ ಮಿಳಿತಗೊಳಿಸಿದ್ದಾರೆ. ಮಾರ್ಗೋಪಾಯ ಸೂಸಿದ್ದಾರೆ. ಮಾನವತ್ತ್ವದ ನೆಲೆ ಕಂಡುಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಹಾಸನ ಜಿಲ್ಲಾ ಬಿ.ಜಿ.ವಿ.ಎಸ್. ಸಂಸ್ಥಾಪಕ ಅಧ್ಯಕ್ಷರಾಗಿ, ಸಾಕ್ಷರತಾ ಆಂದೋಲನದ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದಶರ್ಿಯಾಗಿ, 'ಸಂವೇದನಾ ಕಲಾವಿದರು' ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಬರಹಗಾರರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜ.ಹೊ.ನಾ ನಾಡಿನಾದ್ಯಾಂತ ಪ್ರಖ್ಯಾತರಾದವರು, ಇವರ ಅನೇಕ ಕೃತಿಗಳು ವಿವಿಧ ವಿಶ್ವವಿದ್ಯಾನಿಲಯಗಳಿಂದ, ಕನ್ನಡ ಪ್ರಾಧಿಕಾರಗಳಿಂದ ಪ್ರಕಟಗೊಂಡಿವೆ, ರೈತ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಇವರು ಅನೇಕ ಸಮಾಜ ಪರ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಾಹಿತ್ಯಗೋಷ್ಠಿ, ಕವಿಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕವಿತೆ ವಾಚಿಸಿದ್ದಾರೆ. ಅದ್ಭುತ ನಟ ಹಾಗೂ ನಾಟಕಕಾರರೂ ಆದ ಇವರು ಸಂಕ್ರಾತಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ 'ಜೇನುಗೂಡು' ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ.
ಜಗದ ತೊಟ್ಟಿಲು-ಕವನ ಸಂಕಲನ ; ಬೆಳಕಿನ ದಾರಿ, ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು, ವೇದ ಕುರಾನ್ ಆಚೆಗೆ, ವಿವೇಕಾನಂದ ಮಾನವತೆಗಾಗಿ ಕಾವಿಯೊಳಗೆ ಕುದಿದ ಕೆಂಡ, ಆವರಣ-ಅನಾವರಣ, ಬ್ರಾಹ್ಮಣ್ಯದ ತಂತ್ರಗಳು, ಸಂಪ್ರದಾಯದ ನೇಣುಗಂಬ, ಚೈತನ್ಯದ ಪೂಜೆ ಮುಂತಾದ ವೈಚಾರಿಕ ಕೃತಿಗಳು ; ನರಬಲಿ,-ನಾಟಕ, ; ಅದಮ್ಯ, ಸಿದ್ಧಾರ್ಥ-ಕಾದಂಬರಿಗಳು ; ಸ್ವಾಮಿ ವಿವೇಕಾನಂದ, ಜಯಪ್ರಕಾಶ ನಾರಾಯಣ, ಭಗತ್ ಸಿಂಗ್, ನಿಷ್ಠನ್ಯಾಯವಾದಿ ಹೆಚ್.ಎಸ್.ಎಂ. ; ಕಾರುಗೋಡಿನ ತೊಟ್ಟಿಮನೆ ಕೆ.ಎಂ. ಚಂದ್ರಶೇಖರ್ ಮುಂತಾದ ಜೀವನ ಚರಿತ್ರೆಗಳು ; ಹರ್ಮನ್ಸೇನ್-ವಾಚಿಕೆ; ಶ್ರೀಕುವೆಂಪು-ಸಂಕೀರ್ಣ; ಭಾರತದ ರೈತ-ಅನುವಾದ; ಬೇಲೂರು ಹಳೆಬೀಡು-ನವಸಾಕ್ಷರಿಗಾಗಿ ಬರೆದ ಬರಹಗಳು ಹೀಗೆ ಅನೇಕ ಬಗೆಯ ಕೃತಿಗಳನ್ನು ಜ.ಹೊ.ನಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ 'ವೇದ ಕುರಾನ್ ಆಚೆಗೆ' ಕೃತಿಗೆ ಡಾ|| ಹೆಚ್. ನರಸಿಂಹಯ್ಯ ದತ್ತಿನಿಧಿ ಪ್ರಶಸ್ತಿ, ಬಂದಿದೆ. ಅಲ್ಲದೇ ಅನಿಕೇತನ ಪ್ರಶಸ್ತಿ, ಹಾಸನ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಹಾಗೂ ಹಲವು ಸಂಘಗಳಿಂದ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ಇವರ ಸಾಹಿತ್ಯಿಕ ಅಹರ್ನಿಶಿ ಸೇವೆಗಾಗಿ ಹಾಸನ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆ ಇವರನ್ನಲಂಕರಿಸಿತ್ತು.
ಮೌಢ್ಯದ ಕಂದಾಚಾರದಲ್ಲಿ ಮುಳುಗಿದ್ದ ಅನೇಕ ಮನಸ್ಸುಗಳನ್ನು ಪರಿವರ್ತನೆ ಮಾಡುತ್ತಾ ಯುವ ಬರಗಾರರಿಗೆ ವೈಚಾರಿಕ ತಳಹದಿ ಹಾಕಿಕೊಟ್ಟು ಮಾರ್ಗದರ್ಶನ ನೀಡುತ್ತಿರುವ ಜ.ಹೊ.ನಾ ಕನ್ನಡದ ಪ್ರತಿಭಾನ್ವಿತ ದಿಗ್ಗಜ ಸಾಹಿತ್ಯ ವಲಯದ ಪ್ರಮುಖರು. ನೂರಾರು ಕವಲು ದಾರಿಗಳು ಜ.ಹೊ. ನಾ. ಎಂಬ ಹೆದ್ದಾರಿಯಲ್ಲಿ ಸೇರಬೇಕಿದೆ.
ಕೊಟ್ರೇಶ್ ಎಸ್.ಉಪ್ಪಾರ್.ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಜಾನಪದ ಮನೋಧಮರ್ಿ ಹಂಪಾಪುರದ ಲಕ್ಕಪ್ಪಗೌಡರು.
ನೆಲಮೂಲ ಸಂಸ್ಕೃತಿಯ ಬೇರುಗಳನ್ನು ,ಅದರ ರೆಂಬೆ ಕೊಂಬೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಗ್ರಾಮೀಣ ಸಂಸ್ಕೃತಿಯು ಪಸರಿಸುವ ಕಾಯಕದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಜಾನಪದ ಅಧ್ಯಯನ, ಸಂಗ್ರಹ, ವಿಮಶರ್ೆ, ಜನ ಜೀವನದ ಸ್ಥಿತ್ಯಂತರಗಳು, ಬದುಕಿನ ತಲ್ಲಣಗಳನ್ನು ಆಳವಾಗಿ ಚಿಂತಿಸಿ, ಮಂಥಿಸುತ್ತಾ ಬಂದಿರುವ ಜಾನಪದ ಪರಿಚಾರಕ ಯಾರು ಗೊತ್ತೇ? ಅವರೇ ಜಾನಪದ ಮನೋಧಮರ್ಿ ಹಂಪಾಪುರದ ಲಕ್ಕಪ್ಪಗೌಡರು.
ಎಚ್.ಜೆ. ಲಕ್ಕಪ್ಪಗೌಡರು 1939ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಂಪಾಪುರದಲ್ಲಿ ಜನಿಸಿದ ಇವರು ಗ್ರಾಮೀಣ ಬದುಕಿನ ಚಿತ್ರಣಗಳ ಜೊತೆಗೆ ಪರೋಪಕಾರ ಬದುಕಿನ ಸಾರ್ಥಕ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಕನ್ನಡ ನಾಡು ಕಂಡಂತಹ ಪ್ರತಿಭಾನ್ವಿತ ಧೀಮಂತ ವ್ಯಕ್ತಿತ್ವ ಲಕ್ಕಪ್ಪಗೌಡರು. ಕನ್ನಡ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ತಮ್ಮ ಕಾಯಕದ ಮೂಲಕ ಸ್ಮರಣೀಯ ಹೆಜ್ಜೆ ಗುರುತುಗಳನ್ನು ಮೂಡಿಸಿದರು. ಗ್ರಾಮೀಣ ಬದುಕಿನ ಸೊಗಡನ್ನೇ ಸಾಹಿತ್ಯದ ಆಂತರ್ಯವಾಗಿಸಿಕೊಂಡು ಸೃಜನಾತ್ಮಾಕವಾಗಿ ಲೇಖನಿ ಹರಿಯಬಿಟ್ಟು ದಿಟ್ಟ ಬರಹಗಾರರಾಗಿ ಹೊರಹೊಮ್ಮಿದ ಅಧಮ್ಯ ಚೇತನ ಲಕ್ಕಪ್ಪಗೌಡರು. ಹಳ್ಳಿಯ ಸಂಸ್ಕೃತಿ, ಆಚಾರ-ವಿಚಾರ, ಬದುಕು -ಬವಣೆಗಳೇ ಅವರ ಅಂತಸ್ಸತ್ತ್ವಗಳಾಗಿ ರೂಪು ಕಂಡವು. ಇವರ ಬರಹಗಳಲ್ಲಿ ಸಾಕು ಪ್ರಾಣಿಗಳು, ಪಕ್ಷಿಗಳು, ಗಿಡ-ಮರಗಳು, ಗುಡ್ಡ- ಬೆಟ್ಟಗಳು ಸಂದಭರ್ೋಚಿತವಾಗಿ ಪಾತ್ರಗಳಾಗಿ ಕಣ್ತೆರೆದುಕೊಂಡಿವೆ. ಶೂದ್ರ ಜಗತ್ತಿನ ಬದುಕಿನ ಪಾತ್ರ, ಘಟನೆಗಳನ್ನು ಹೆಣೆದ ಇವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಮೈಲುಗಲ್ಲಾಗಿ ನವೀನ ರೀತಿಯಲ್ಲಿ ಸೇರ್ಪಡೆಗೊಂಡವೆಂದು ಹೇಳಬಹುದು.
ಜಾನಪದ ಎಂದರೆ ಮೂಗು ಮುರಿಯುವ ಅನೇಕ ಸಾಹಿತಿಗಳು ನಮ್ನಿಮ್ಮ ಮಧ್ಯೆ ಹಲವರು ಇದ್ದಾರೆ. ಆದರೆ ಕಳೆಗುಂದುತ್ತಿರುವ ಸಮಯದಲ್ಲಿ ಜಾನಪದ ಸಂಗ್ರಹ ಮತ್ತು ಸಂಪಾದನೆಯ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರಂತೆ ಕಾಯರ್ೋನ್ಮುಖರಾಗಿ ಕನ್ನಡ ಜಾನಪದ ಸಾಹಿತ್ಯ ಕಣಜಕ್ಕೆ ಹಸಿವ ನೀಗಿಸಿದರು ಲಕ್ಕಪ್ಪಗೌಡರೆಂದರೆ ಅತಿಶಯೋಕ್ತಿಯಾಗಲಾರದು.
ಗೌಡರು 1971 ರಲ್ಲಿ ಹೊರತಂದ 'ಜನಪದ ಕಥಾವಳಿ' ಹಾಗೂ 1973 ರಲ್ಲಿ ಪ್ರಕಟಿಸಿದ ಒಗಟುಗಳು ಮುಂತಾದ ಕೃತಿಗಳು ಜಾನಪದ ಲೋಕದಲ್ಲಿ ಅದ್ಭುತ ಸಂಚಲನ ಮೂಡಿಸಿದವು. ಆ ಕಾಲ ಘಟ್ಟದಲ್ಲಿ ಬಂದ ಅತ್ಯಾಮೂಲ್ಯ ಜಾನಪದ ಕಥಾ ಸಂಕಲನಗಳಲ್ಲಿ 'ಜನಪದ ಕಥಾವಳಿ' ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಜನಪದ ಮಾತುಗಾರಿಕೆ, ನುಡಿಗಟ್ಟುಗಳು, ಕಾಲಕ್ರಮಣಿಕೆಯ ಘಟನೆಗಳು ಆಕರ್ಷಕವಾಗಿ ಮೂಡಿ ಬಂದಿದೆ. ಪ್ರಸ್ತುತ ಕೃತಿಯು ಓದುಗರಿಗೂ , ವಿದ್ವಾಂಸರಿಗೂ, ವಿಮರ್ಶಕರಿಗೂ, ಅಗತ್ಯವಾಗಿ ಬೇಕಾದ ಕೃತಿಯಾಗಿದ್ದು ಓದುಗನಿಗೆ ಸಂತಸ ನೀಡಿದರೆ, ವಿದ್ವಾಂಸನಿಗೆ ಜ್ಞಾನ ಭಂಡಾರವಾಗಿ ಪರಿಣಮಿಸುತ್ತದೆ. ಸಾಂಸ್ಕೃತಿಕ ಜೀವನದ ಮೇಲೂ ಬೆಳಕು ಬೀರುವುದರಿಂದ ಇದು ಜಾನಪದ ಸಾಹಿತ್ಯಕ್ಕೊಂದು ಆಶಾಕಿರಣವೆನ್ನಬಹುದು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರು 'ಶ್ರೀ ರಾಮಾಯಣ ದರ್ಶನಂ - ಒಂದು ವಿಮರ್ಶನಾರ್ತಕ ಅಧ್ಯಯನ' ಎಂಬ ಬೃಹತ್ ಗ್ರಂಥವನ್ನು ರಚಿಸಿ ಪಿ. ಎಚ್.ಡಿ ಪದವಿ ಪಡೆದಿದ್ದಾರೆ.
ಲಕ್ಕಪ್ಪಗೌಡರು ಸಾಹಿತ್ಯದ ಕೇವಲ ಒಂದು ಮಗ್ಗುಲಿಗೆ ಅಂಟಿಕೊಳ್ಳದೇ ಕಥೆ, ಕಾವ್ಯ, ನಿಬಂಧ, ವಿಮಶರ್ೆ, ಜಾನಪದ ,ಸಂಗ್ರಹ, ಜೀವನ ಚರಿತ್ರೆ ಹೀಗೆ ಹಲವಾರು ಕವಲುಗಳಲ್ಲಿ ಸಾಗಿ ಗುರಿ ಸಾಧಿಸಿದ ಬಹುಮುಖ ಪ್ರತಿಭೆಯ ಸೃಜನಾತ್ಮಕ ಲೇಖಕರಾಗಿದ್ದಾರೆ. ವಸಂತಗೀತ, ಊರ ಮುಂದಿನ ಬಾವಿ- ಕವನ ಸಂಕಲನಗಳು; ದಲಿತಸೂರ್ಯ, ಸಿದ್ಧರಾಮ- ಜೀವನ ಚರಿತ್ರೆಗಳು; ಸಂಗಮ , ಅಂತರಂಗ- ವಿಮಶರ್ಾ ಕೃತಿಗಳು; ಜಾನಪದ ಕಥಾವಳಿ, ಇಬ್ಬನಿ, ಒಗಟು -ಜಾನಪದ ಕೃತಿಗಳು ; ಪದ್ದು-ಹದ್ದು, ಧೀನ ಬಂದು-ಮಕ್ಕಳ ಕೃತಿಗಳು.
ಹೀಗೆ ಲಕ್ಕಪ್ಪಗೌಡರು ಕನ್ನಡ ಸಾಹಿತ್ಯದ ಅತ್ಯಾಮೂಲ್ಯ ಕವಿ, ವಿಮರ್ಶಕ, ಕಥೆಗಾರ, ಸಂಪಾದನಕಾರರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ವಿಶೇಷವಾಗಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಗೌಡರು ಪ್ರಮುಖರಾಗಿದ್ದಾರೆ.
'ನಾಡು-ನುಡಿಯ' ಹಲವಾರು ಸಂಘಟನೆಗಳಲ್ಲಿ ಸದಸ್ಯರಾಗಿ , ಪದಾಧಿಕಾರಿಯಾಗಿ ಹಗಲಿರುಳೆನ್ನದೇ ದಣಿವರಿಯದೇ ದುಡಿದವರು. ನಾಡಿಗೆ, ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸಂಸ್ಕೃತಿ ಸೇವೆ ಅನನ್ಯವಾದದು. ಹಾಗೆಯೇ ಹಲವಾರು ವಿದ್ಯಾಸಂಸ್ಥೆ , ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತಾತ್ಮಕವಾಗಿ ಸಲ್ಲಿಸಿದ ಇವರ ಸೇವೆ ಅನುಕರಣೀಯ ಹಾಗೂ ಅನುಪಮವಾದುದು. ನಾಡಿನಾದ್ಯಾಂತ ಸುತ್ತಿ ಅನೇಕ ಜಾನಪದ ಪ್ರತಿಭೆಗಳನ್ನು ಅನ್ವೇಷಿಸಿ, ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿ , ಮುಖ್ಯ ವಾಹಿನಿಗೆ ತಂದ ಕೀತರ್ಿ ಗೌಡರಿಗೆ ಸಲ್ಲುತ್ತದೆ. ಅವರಿಗೆ ಅವರದೇ ಬೃಹತ್ ಶಿಷ್ಯ ವೃಂದ ಬಳಗ, ಅಭಿಮಾನಿಗಳ ಬಳಗ, ಸ್ನೇಹ ಬಳಗವಿದ್ದು ಜಾನಪದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿವೆ.
ಗೌಡರ ಸಂಪಾದಕತ್ವದಲ್ಲಿ 'ಜಾನಪದ ಗಂಗೋತ್ರಿ' ಹಾಗೂ 'ಜಾನಪದ ಸಮಾಚಾರ' ಎಂಬ ನಿಯತಕಾಲಿಕೆಗಳು ಅದ್ಭುತವಾಗಿ ಮೂಡಿ ಬಂದವು. ವಿದ್ವಾಂಸರಲ್ಲಿ ಬಹುಮುಖ ವ್ಯಕ್ತಿತ್ವ ಗುತರ್ಿಸಿ ಅಂತಹವರ ಪತ್ರಿಕೆಗಾಗಿ ಸಕಾರಾತ್ಮಕವಾಗಿ ದುಡಿಸಿಕೊಂಡರು. ಅಷ್ಟೇ ಗೌರವಯುತವಾಗಿ ನಡೆಸಿಕೊಂಡರು. ಬದಲಾಗುತ್ತಿರುವ ಸಂದರ್ಭಕ್ಕೆ ಹೇಗೆ ಸಾಗಬೇಕೆಂಬುದನ್ನು ಚೆನ್ನಾಗಿ ಅರಿತಿದ್ದ ಲಕ್ಕಪ್ಪಗೌಡರು ಆಧುನಿಕತೆಗೂ ದಕ್ಕೆ ಬಾರದಂತೆ ಪುರಾತನ ಸಂಸ್ಕೃತಿಯ ಪ್ರತೀಕವಾದ ಜಾನಪದವನ್ನು ಸೊಗಸಾಗಿ ಕಟ್ಟಿ ಬೆಳೆಸಿದರು. ಸುಜ್ಞಾನದ ಬೀಜವನ್ನು ಬಿತ್ತಿ ಬೆಳೆದರು.
ಕನ್ನಡ ನಾಡು ನುಡಿಗೆ ತಮ್ಮದೇ ಆದ ಅವಿಸ್ಮರಣೀಯ ಕೊಡುಗೆ ನೀಡಿದ ಲಕ್ಕಪ್ಪಗೌಡರಿಗೆ ದೇವರಾಜ ಬಹದ್ದೂರ್ ಬಹುಮಾನ, ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವುಗಳು ಸಂದಿವೆ ಸದ್ಯ ಮೈಸೂರಿನಲ್ಲಿ ತಮ್ಮ ವಿಶ್ರಾಂತಿ ಜೀವನ ನಡೆಸುತ್ತಿರುವ ಇವರ ಉಸಿರು ಜನಪದವೇ ಆಗಿದೆ.

ಕಾವ್ಯಾನುಭೂತಿಯ ರಂಗಭೂಮಿ ಸಾಧಕ ಸತ್ಯನಾರಾಯಣರಾವ್ ಅಣತಿ
ಕನ್ನಡ ನಾಡಿನ ಬಗ್ಗೆ ಮಹಾಕವಿಯೊಬ್ಬ ಹೇಳಿರುವಂತೆ ಫಲಪುಷ್ಪಯುತವಾದ ಇಲ್ಲಿನ ಅಡವಿ ಸೊಕ್ಕಿದಾನೆಯನ್ನು ಬೆಳಸುತ್ತದೆ, ದೇಮಾತೃಕವೆನಿಸಿದ ಹೊಲ ಗಂಧಶಾಳಿ (ಭತ್ತ)ಯನ್ನು ಬೆಳೆಯುತ್ತದೆ. ಮಾವು, ಮಲ್ಲಿಗೆಗಿದು ತೌರು. ಮುಡಿಯಲು ಮಲ್ಲಿಗೆ, ಮೆಲ್ಲಲು ಮಾವಿನ ಹಣ್ಣು ಇದ್ದ ಮೇಲೆ 'ಸಂಸಾರ ಸಾರಸರ್ವಸ್ವ' ವೆಂಬ ಫಲ ಮತ್ತಾವುದು ಬೇಕು? ಎಂದು ಕೇಳುವಂತಹ ರಸಿಕರು ಕನ್ನಡಿಗರು ಈ ಮನೋಭಾವದಲ್ಲಿ ಬಾಳಿಕೊಂಡು ಬಂದ ಕನ್ನಡಿಗರು ಇಹವನ್ನು ದೂರದೆ ಪರಕ್ಕೆ ದೂರರಾಗದೆ ತುಂಬು ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ.
ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡು ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ, ಆಳ-ವಿಸ್ತಾರಗಳನ್ನು ಸದಾಕಾಲವೂ ಪ್ರತಿಬಿಂಬಿಸುತ್ತಾ, ಮೌಲಿಕ ಸಾಹಿತ್ಯ ಕೃತಿಗಳಿಂದ ಪ್ರಜ್ವಲಿಸುತ್ತಾ ಮುನ್ನುಗ್ಗುತ್ತಿದೆ.
ಪಂಪ ಪೂರ್ವ ಹಾಗೂ ಉತ್ತರಾಧಿಯಾಗಿ ಸಹಸ್ರಾರು ಮಹನೀಯರು ಕನ್ನಡ ಧೀಶಕ್ತಿ ಕಹಳೆ ಮೊಳಗಿಸಿ, ಚಂದನದ ಲೇಪನ ಮಾಡಿ ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದರೆ ನಾಡು,ನುಡಿ, ಸಂಸ್ಕೃತಿ ಹೊಳವ್ಹರಿಸಿದ್ದಾರೆ. ಜಾಗತಿಕ ಭಾಷೆಗಳು ನಮ್ಮತ್ತ ಮುಖ ಮಾಡುವಂತೆ ಮಾಡಿದ್ದಾರೆ.
ಇಂತಹ ಮಹನೀಯರ ಸಾಲಿನಲ್ಲಿ ಅಣತಿಯವರು ಒಬ್ಬರು. ಇವರು ಕ್ರಿ,ಶ.1935 ಡಿಸೆಂಬರ್ 12 ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದ ಎ.ಎನ್. ಮೂತರ್ಿರಾವ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದರು. ಇವರ ಪೂರ್ಣ ಹೆಸರು ಸತ್ಯನಾರಾಯಣರಾವ್ ಅಣತಿ. ಆದರೆ ಸಾಹಿತ್ಯ ಲೋಕದಲ್ಲಿ ಅಣತಿಯೆಂದೇ ಪ್ರಸಿದ್ಧಿ ಪಡೆದು ತಮ್ಮ ಹುಟ್ಟೂರನ್ನು ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದಂತೆ ನೆಲೆಯೂರಿಸಿದ್ದಾರೆ.
ಹುಟ್ಟೂರಾದ ಅಣತಿ, ತಿಪಟೂರು, ಹಾಸನದಲ್ಲಿ ಶಿಕ್ಷಣ ಪಡೆದ ಅಣತಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಕರ್ಾರಿ ಸೇವೆಗೆ ಸೇರಿದರು. ನಂತರ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇವರು ಶಿವಮೊಗ್ಗ ಡಿ.ವಿ.ಎಸ್. ಕಾಲೇಜ್ನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಹೊನ್ನಾವರ ಮತ್ತು ಶಿವಮೊಗ್ಗದಂತಹ ಹಸಿರ ಸೆರಗಿನ ಚುಮು ಚುಮು ವಾತಾವರಣ ಅಣತಿಯವರಲ್ಲಿ ಕಾವ್ಯದ ಬೀಜ ಮೊಳೆಯುವಂತೆ ಮಾಡಿತು. ಕವಿ ಪುಂಗವರ ಬೀಡೆಂದೇ ಕರೆಯಲ್ಪಡುವ ಶಿವಮೊಗ್ಗ ಅಣತಿಯವರ ಸಾಹಿತ್ಯ ಕಾರ್ಯಕ್ಷೇತ್ರವಾಯಿತು. ಇವರು ಕಾವ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ.
ರಮ್ಮಿಯಾಟ-1966, ಹಿಪ್ಪೇಮರ-1974, ಭೂಮಿ ಮತ್ತು ಬದುಕಿನ ಗಂಧ-1989, ಕೃಷ್ಣಾ ಕಣ್ಣಿನ ನೋಟ-1995, ಭೂಮಿ ಹುಣ್ಣಿಮೆ-1996, ತೆರಕೊಂಡ ಆಕಾಶ-2003, ಪಾತ್ರಗಳು ಇರಲಿ ಗೆಳೆಯ-2007, ನೀಲಕುರುಂಜಿ-2009 ಮುಂತಾದ ಕಾವ್ಯ ಕೃತಿಗಳನ್ನು ನೀಡಿದ್ದಾರೆ.
ಕಾವ್ಯದಷ್ಟೇ ಅಣತಿಯವರನ್ನು ರಂಗಭೂಮಿಯೂ ಸೆಳೆದಿತ್ತು. ಶಿವಮೊಗ್ಗವು ರಂಗ ಕರ್ಮಭೂಮಿಯೆಂದೇ ಪ್ರಸಿದ್ಧಿ. ಅಲ್ಲಿನ 'ಯುಗಾಂತರ ರಂಗ' ವೇದಿಕೆಯಿಂದ 1979 ರಲ್ಲಿ ಬರೆದ 'ಚಾವರ್ಾದ' ನಾಟಕದ ಮೂಲಕ ಪ್ರಾರಂಭವಾಗಿ 'ಜೈಸಿದ್ಧ ನಾಯಕ', ತ್ರಿಶಂಕು, ಒಂದು ಆಕೃತಿಯ ಹತ್ಯೆ, ಕತ್ತಲೆ ಬೆಳಕು ಮುಂತಾದ ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದ್ದಾರೆ. ಅದರಲ್ಲೂ ಕಾವ್ಯ ನಾಟಕಗಳಿಗೆ ಅಣತಿಯವರು ಸುಪ್ರಸಿದ್ಧರು. ಇವರನ್ನು ಗೀತ ನಾಟಕಕಾರರೆಂದೆ ಕರೆಯಲಾಗುತ್ತಿದೆ.
ಹಿಂದಿ ಭಾಷೆಗೆ ಅನುವಾದ
ಕನ್ನಡ ಸಾಹಿತಿಗಳ ಕೃತಿಗಳ ಬೇರೆ ಭಾಷೆಗೆ ಭಾಷಾಂತರಗೊಂಡ ಕೆಲವೇ ಕೆಲವರಲ್ಲಿ ಅಣತಿಯವರೂ ಒಬ್ಬರು. ಇವರ ಹಲವು ಉತ್ತಮ ಕವಿತೆಗಳು ಹಾಗೆಯೇ 'ಜೇತವನ' ಎಂಬ ನಾಟಕ ಹಿಂದಿ ಭಾಷೆಗೆ ಭಾಷಾಂತರಗೊಂಡು ಅಲ್ಲಿನ ಓದುಗರ ಮೆಚ್ಚುಗೆ ಗಳಿಸಿವೆ.
'ಸಂಪನ್ಮೂಲ ವ್ಯಕ್ತಿಯಾಗಿ'
ವೃತ್ತಿಯಲ್ಲಿ ಆದರ್ಶ ಅಧ್ಯಾಪಕರಾಗಿದ್ದ ಅಣತಿಯವರು ಉತ್ತಮ ವಾಗ್ಮಿಗಳು. ಕಾವ್ಯ ಹಾಗೂ ರಂಗಭೂಮಿಯ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿಶೇಷ ಪಾಂಡಿತ್ಯ ಸಂಪಾದಿಸಿದ್ದರು. ಹಲವಾರು ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದ್ದಲ್ಲದೆ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಕಾವ್ಯ ನಾಟಕ ರಚನಾ ಶಿಬಿರದ ಸಂನ್ಮೂಲ ವ್ಯಕ್ತಿಯಾಗಿ ಹಾಗೆಯೇ ಮೈಸೂರಿನ ನೀನಾಸಂ ಸಾಹಿತ್ಯ ಅಧ್ಯಯನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಾನವೀಯ ಮೌಲ್ಯ ಸಂವೇದನೆಯ ಕವಿಯಾಗಿ, ಮೂಲ ರಂಗಭೂಮಿ ಕಲಾ ಪೋಷಕರಾಗಿ ಅವಿಸ್ಮರಣೀಯ ಸೇವೆಗೈದ ಅಣತಿಯವರು ಅನೇಕ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಚಚರ್ಾಗೋಷ್ಠಿ, ಸಾಹಿತ್ಯಿಕ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ಸಾಹಿತ್ಯ ಸಂಸ್ಕೃತಿ ಸಂಪುಟ ಪರಂಪರೆ' ಎಂಬ ಬೃಹತ್ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಕೀತರ್ಿ ಇವರದು. ಇವರ ಬದುಕಿನ ಬಹುಭಾಗ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದುದರಿಂದ ಹೆಚ್ಚಾಗಿ ಹಾಸನ ಜನರಿಗೆ ಪರಿಚಯ ಇಲ್ಲದಿದ್ದರೂ ನಾಡಿನಾದ್ಯಾಂತ ಮನೆ ಮಾತಾಗಿದ್ದಾರೆ.
2011 ರಲ್ಲಿ ತವರು ಜಿಲ್ಲೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಪ್ರಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿದ್ದ ಅಣತಿಯವರು ನಾಡಿನ ಗಣ್ಯ ಸಾಹಿತಿಯೂ ಹೌದು. ಸದ್ಯ ಪತ್ನಿ 'ಪ್ರಭಾ' ರವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ಅಣತಿಯವರು ಸದಾ ಕನ್ನಡ ಸಾಹಿತ್ಯದ ಕ್ರಿಯಾಶೀಲ ಹಣತೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)